ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಫೋಟೊಕ್ಕಾಗಿ ವಿದೇಶಿ ಮಹಿಳೆಯ ದುಂಬಾಲು ಬಿದ್ದ ಭೂಪ; ಕೊನೆಗೆ ಆಕೆ ಬುದ್ಧಿ ಕಲಿಸಿದ್ದು ಹೇಗೆ?

ಕಂಟೆಂಟ್ ಕ್ರಿಯೇಟರ್ ಕಾಸಿಯಾ, ತನ್ನ ಅತಿಥಿ ಗೃಹದಿಂದ ಬೆಟ್ಟದ ಕೆಳಗೆ ನಡೆದುಕೊಂಡು ಹೋಗುತ್ತಿದ್ದಾಗ ವ್ಯಕ್ತಿಯೊಬ್ಬ ಹಿಂಬಾಲಿಸಿದ್ದು, ಇದನ್ನು ಆಕೆ ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ. ಇದು ಈಗ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಚಾರಣ ಮಾಡುತ್ತಿದ್ದ ವಿದೇಶಿ ಮಹಿಳೆಗೆ ಸ್ಥಳೀಯ ವ್ಯಕ್ತಿ ಮಾಡಿದ್ದೇನು?

Profile pavithra May 19, 2025 4:18 PM

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಒಬ್ಬಂಟಿಯಾಗಿ ಚಾರಣ ಮಾಡುತ್ತಿದ್ದ ವಿದೇಶಿ ಮಹಿಳೆಯೊಬ್ಬಳನ್ನು ವ್ಯಕ್ತಿಯೊಬ್ಬ ಹಿಂಬಾಲಿಸಿದ್ದು, ಈ ಘಟನೆಯನ್ನು ಆಕೆ ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ. ಇದು ಈಗ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಕಂಟೆಂಟ್ ಕ್ರಿಯೇಟರ್ ಕಾಸಿಯಾ, ಬೆಟ್ಟದ ಕೆಳಗೆ ನಡೆದುಕೊಂಡು ಹೋಗುತ್ತಿದ್ದಾಗ ಈ ವಿಡಿಯೊವನ್ನು ಚಿತ್ರೀಕರಿಸಿದ್ದು, ಅದರಲ್ಲಿ ಒಬ್ಬ ವ್ಯಕ್ತಿ ಅವಳನ್ನು ಹಿಂಬಾಲಿಸುವುದು ರೆಕಾರ್ಡ್ ಆಗಿದೆ. ಇದನ್ನು ನೋಡಿ ನೆಟ್ಟಿಗರು ಶಾಕ್‌ ಆಗಿದ್ದಾರೆ.

ಕಾಸಿಯಾ ಪೋಸ್ಟ್‌ನಲ್ಲಿ ತಿಳಿಸಿದ ಪ್ರಕಾರ, ಆತ ಆಕೆಯ ಬಳಿ ಬಂದು ಫೋಟೊ ತೆಗೆಯಲು ಕೇಳಿಕೊಂಡಿದ್ದಾನಂತೆ. ಅವನ ಫೋಟೊ ತೆಗೆಯಲು ಕೇಳುತ್ತಿದ್ದಾನೆಂದು ಆಕೆ ಅಂದುಕೊಂಡಿದ್ದಾಳೆ. ಆದರೆ ಅವನು ಆಕೆಯ ಫೋಟೊ ತೆಗೆಯುವುದಾಗಿ ತಿಳಿಸಿದ್ದಾನಂತೆ. ಇದಕ್ಕೆ ಆಕೆ ನಿರಾಕರಿಸಿದ್ದಾಳೆ. ಆದರೆ ಆ ವ್ಯಕ್ತಿ ಅವಳನ್ನು ಕರೆಯುತ್ತಾ ಹಿಂಬಾಲಿಸಲು ಶುರುಮಾಡಿದ್ದಾನೆ.

ವಿಡಿಯೊ ಇಲ್ಲಿದೆ ನೋಡಿ...



ಇದರಿಂದ ಹತಾಶಳಾದ, ಕಾಸಿಯಾ ತನ್ನ ಕ್ಯಾಮೆರಾವನ್ನು ತೆಗೆದುಕೊಂಡು ಘಟನೆಯನ್ನು ರೆಕಾರ್ಡ್ ಮಾಡಲು ಶುರು ಮಾಡಿದ್ದಾಳೆ. ತನಗೆ ಫೋಟೊ ತೆಗೆಸಿಕೊಳ್ಳಲು ಇಷ್ಟವಿಲ್ಲ. ತನ್ನನ್ನು ಹಿಂಬಾಲಿಸುವುದನ್ನು ನಿಲ್ಲಿಸು ಎಂದು ಆಕೆ ಆತನಿಗೆ ಕೂಗಿ ಹೇಳಿದ್ದಾಳೆ. ಅವಳು ಈ ಘಟನೆಯನ್ನು ರೆಕಾರ್ಡ್ ಮಾಡಲು ಶುರು ಮಾಡಿದ ನಂತರ ಆ ವ್ಯಕ್ತಿ ಅವಳನ್ನು ಹಿಂಬಾಲಿಸುವುದನ್ನು ನಿಲ್ಲಿಸಿದ್ದಾನೆ ಈ ವಿಚಾರವನ್ನು ಆಕೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾಳೆ.

ಕಾಡಿನಲ್ಲಿ ತನ್ನನ್ನು ಹಿಂಬಾಲಿಸಿದ ಒಬ್ಬ ವ್ಯಕ್ತಿಯಿಂದಾಗಿ ತಾನು ಭಯಬಿದ್ದರೂ ಭಾರತದಲ್ಲಿ ತನ್ನ ಸಮಯವನ್ನು ಕಳೆಯುವುದನ್ನು ನಿಲ್ಲಿಸುವುದಿಲ್ಲ. ಪುರುಷರಾದವರು ಏನು ಮಾಡಬಾರದು ಎಂಬ ಬಗ್ಗೆ ಜಾಗೃತಿ ಮೂಡಿಸುವುದು ತನ್ನ ಉದ್ದೇಶ ಎಂಬುದಾಗಿ ಆಕೆ ತಿಳಿಸಿದ್ದಾಳೆ.

ದೇಶದಲ್ಲಿ ಪ್ರತಿದಿನ ಹುಡುಗಿಯರ ಮೇಲೆ ನಡೆಯುವ ದೌರ್ಜನ್ಯದ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ಹಿಂದೆ ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿ ಒಬ್ಬ ದುಷ್ಕರ್ಮಿ ರಾತ್ರಿಯಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಹುಡುಗಿಯೊಬ್ಬಳನ್ನು ಕೀಟಲೆ ಮಾಡಿದ್ದನು. ಈ ಘಟನೆ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಈ ಸುದ್ದಿಯನ್ನೂ ಓದಿ:‌Viral Video: ನಡು ರಸ್ತೆಯಲ್ಲಿ ಹಣದ ಸುರಿಮಳೆ; 500ರ ನೋಟು ಹೆಕ್ಕಲು ಜನ ಸಾಗರ! ವಿಡಿಯೊ ಇದೆ

ವಿಡಿಯೊದಲ್ಲಿ ಇಬ್ಬರು ಯುವತಿಯರು ತಡರಾತ್ರಿ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಒಬ್ಬ ವ್ಯಕ್ತಿ ಹಿಂಬಾಲಿಸಿದ್ದಾನೆ. ನಂತರ ಆತ ಅವರ ಕಡೆಗೆ ವೇಗವಾಗಿ ಓಡಿ ಬಂದು ಒಬ್ಬ ಯುವತಿಯನ್ನು ಹಿಡಿದು ಲೈಂಗಿಕ ಕಿರುಕುಳ ನೀಡಿದ್ದಾನೆ. ಇದರಿಂದ ಭಯಭೀತರಾದ ಇಬ್ಬರು ಯುವತಿಯರು ಕಿರುಚಲು ಶುರು ಮಾಡಿದ್ದಾರೆ. ನಂತರ ಆ ವ್ಯಕ್ತಿ ಅಲ್ಲಿಂದ ಓಡಿಹೋಗಿದ್ದಾನೆ. ಈ ಇಡೀ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ಪೊಲೀಸ್ ಪ್ರಕರಣ ದಾಖಲಾಗಿತ್ತು.