ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Viral Video: ನಡು ರಸ್ತೆಯಲ್ಲಿ ಹಣದ ಸುರಿಮಳೆ; 500ರ ನೋಟು ಹೆಕ್ಕಲು ಜನ ಸಾಗರ! ವಿಡಿಯೊ ಇದೆ

ವಾರಣಾಸಿಯಿಂದ ದೆಹಲಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಭವೇಶ್ ಎಂಬ ಉದ್ಯಮಿಯೊಬ್ಬರ ಬ್ಯಾಗ್‍ನಲ್ಲಿದ್ದ ಹಣ ಚೆಲ್ಲಾಪಿಲ್ಲಿಯಾಗಿ ರಸ್ತೆಯಲ್ಲಿ ಬಿದ್ದಿದ್ದು, ಅದನ್ನು ಸಂಗ್ರಹಿಸಲು ಜನರು ನಡು ರಸ್ತೆಯಲ್ಲಿ ಓಡಾಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಇದು ದರೋಡೆ ಪ್ರಕರಣವೋ ಅಥವಾ ನಿರ್ಲಕ್ಷ್ಯದಿಂದಾಗಿ ಹಣ ಸೋರಿಕೆಯಾಗಿದೆಯೋ ಎಂಬುದರ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ.

ನಡು ರಸ್ತೆಯಲ್ಲಿ ಹಣದ ಸುರಿಮಳೆ; 500ರ ನೋಟು ಹೆಕ್ಕಲು ಜನ ಸಾಗರ!

Profile pavithra May 17, 2025 2:25 PM

ಲಖನೌ: ಹಣವೆಂದರೆ ಎಲ್ಲರ ಕಣ್ಣು ಅರಳುತ್ತದೆ. ಹೌದು ಈಗ ಹಣವಿಲ್ಲದೇ ಯಾವುದೇ ಕೆಲಸ ಕೂಡ ಆಗಲ್ಲ.ಎಷ್ಟೇ ದುಡಿದ್ರೂ ಕೂಡ ಈಗ ಹಣ ಸಿಗುವುದು ಕಷ್ಟ. ಹೀಗಿರುವಾಗ ದಾರಿಯಲ್ಲಿ ಅನಾಯಾಸವಾಗಿ ಹಣ ನಿಮ್ಮ ಮುಂದೆ ಸಿಕ್ಕರೆ ಖುಷಿಗೆ ಪಾರವೇ ಇಲ್ಲದ ಹಾಗೇ ಆಗುತ್ತದೆ ಅಲ್ವಾ...? ಹೌದು ಕೌಶಂಬಿ ಜಿಲ್ಲೆಯ ಹೆದ್ದಾರಿಯಲ್ಲಿ ಇಂತದ್ದೇ ಒಂದು ಘಟನೆ ನಡೆದಿದೆ. ನೂರಾರು ರೂ. 500 ನೋಟುಗಳು ರಸ್ತೆಯಲ್ಲಿ ಹಾರಿದೆ. ಇದನ್ನು ಕಂಡು ಖುಷಿಯಾದ ಜನರು ಸಾಧ್ಯವಾದಷ್ಟು ನೋಟುಗಳನ್ನು ಸಂಗ್ರಹಿಸಲು ಎದ್ದೋ ಬಿದ್ದೋ ಓಡಾಡಿದ್ದಾರಂತೆ. ಕೆಲವರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹಣ ಸಂಗ್ರಹಿಸುವಲ್ಲಿ ತೊಡಗಿದ್ದಾರೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದ್ದು, ಪ್ರತ್ಯಕ್ಷದರ್ಶಿಗಳು ಈ ದೃಶ್ಯವನ್ನು "ಹಣದ ಮಳೆ" ಎಂದು ಬಣ್ಣಿಸಿದ್ದಾರೆ.

ಪೊಲೀಸರ ಪ್ರಾಥಮಿಕ ತನಿಖೆಯ ಮಾಹಿತಿ ಪ್ರಕಾರ, ವಾರಣಾಸಿಯಿಂದ ದೆಹಲಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಭವೇಶ್ ಎಂಬ ಉದ್ಯಮಿ ರಸ್ತೆಬದಿಯ ಡಾಬಾದಲ್ಲಿ ಊಟಕ್ಕೆ ಬಸ್‌ನಿಂದ ಇಳಿದಾಗ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಆಗ ದುಷ್ಕರ್ಮಿಗಳು ಅವನ ಬಳಿ ಇದ್ದ ಬ್ಯಾಗ್ ಅನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. ಅದರಲ್ಲಿ 8-10 ಲಕ್ಷ ರೂ. ಇದೆ ಎಂದು ಆತ ಹೇಳಿಕೊಂಡಿದ್ದಾನೆ.ಈ ಘಟನೆಯ ವೇಳೆ ಸ್ವಲ್ಪ ಹಣ ರಸ್ತೆಯ ಮೇಲೆ ಬಿದ್ದಿದ್ದರಿಂದ ಜನರು ಅದನ್ನು ಸಂಗ್ರಹಿಸಲು ಮುಂದಾದಾಗ ಕಾಲ್ತುಳಿತ ಉಂಟಾಯಿತಂತೆ.ಇದು ಪ್ರಿಪ್ಲ್ಯಾನ್‍ ದರೋಡೆಯೋ ಅಥವಾ ಅಜಾಗರೂಕತೆಯಿಂದ ಸಂಭವಿಸಿದ ಆಕಸ್ಮಿಕ ಘಟನೆಯೋ ಎಂದು ನಿರ್ಧರಿಸಲು ಪೊಲೀಸರು ತನಿಖೆ ನಡೆಸಿದ್ದಾರೆ.

ಹಣವನ್ನು ಹೆಕ್ಕಲು ಮುಗಿಬಿದ್ದ ಜನರ ವಿಡಿಯೊ ಇಲ್ಲಿದೆ ನೋಡಿ...



ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ಕೂಡಲೇ ವೈರಲ್ ಆಗಿದ್ದು, ಚೆಲ್ಲಾಪಿಲ್ಲಿಯಾಗಿದ್ದ ನೋಟುಗಳನ್ನು ಸಂಗ್ರಹಿಸಲು ರಸ್ತೆಯಲ್ಲಿ ನೂರಾರು ಜನರು ಪರದಾಡುವುದು ಸೆರೆಯಾಗಿದೆ. ಜನರು ಗಾಳಿಗೆ ಹಾರುತ್ತಿರುವ ನೋಟುಗಳನ್ನು ಹಿಡಿಯಲು ಹಲವಾರು ಕಡೆ ಓಡಾಡಿದ್ದಾರೆ. ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ಉದ್ಯಮಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ ಇದು ದರೋಡೆ ಪ್ರಕರಣವೋ ಅಥವಾ ನಿರ್ಲಕ್ಷ್ಯದಿಂದಾಗಿ ಹಣ ಸೋರಿಕೆಯಾಗಿದೆಯೋ ಎಂಬುದನ್ನು ಇನ್ನೂ ದೃಢಪಡಿಸಿಲ್ಲ. ತನಿಖೆಯ ಭಾಗವಾಗಿ ಅಧಿಕಾರಿಗಳು ಡಾಬಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ.

ದರೋಡೆ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ವರದಿಯಾಗುತ್ತಿದ್ದು, ಇತ್ತೀಚೆಗಷ್ಟೇ ವರದಿಯಾದ ಕಳ್ಳತನ ಪ್ರಕರಣವೊಂದರಲ್ಲಿ ಬೆಂಗಳೂರಿನಲ್ಲಿ 46 ವರ್ಷದ ಚಾರ್ಟರ್ಡ್ ಅಕೌಂಟೆಂಟ್ ತನ್ನ ನಂಬಿಕಸ್ಥ ಕಾರು ಚಾಲಕನಿಗೆ 1.51 ಕೋಟಿ ರೂಪಾಯಿಗಳಿದ್ದ ಬ್ಯಾಗ್‍ ಅನ್ನು ನೀಡಿ ಕಾರಿನಲ್ಲಿ ಇಡಲು ಹೇಳಿದ್ದು, ನಂತರ ಡ್ರೈವರ್‌ ಅದನ್ನು ತೆಗೆದುಕೊಂಡು ಪರಾರಿಯಾಗಿದ್ದನು. ಕೊನೆಗೆ ಆತ ಆ ಹಣವನ್ನು ಕುಟುಂಬದವರಿಗಾಗಿ ಖರ್ಚುಮಾಡಿ ಅದರಲ್ಲಿನ ಸ್ವಲ್ಪ ಹಣವನ್ನು ದೇವಸ್ಥಾನಕ್ಕೆ ದೇಣಿಗೆ ನೀಡಿರುವುದಾಗಿ ಪೊಲೀಸ್ ವಿಚಾರಣೆಯ ವೇಳೆ ಬಾಯ್ಬಿಟ್ಟಿದ್ದನು.

ಈ ಸುದ್ದಿಯನ್ನೂ ಓದಿ:‌Viral Video: ಡಿಜೆ ಹಾಡಿನ ವಿಚಾರಕ್ಕೆ ಜಗಳ; ಕ್ಷಣಾರ್ಧದಲ್ಲಿ ರಣರಂಗವಾದ ಮದುವೆ ಮನೆ-ವಿಡಿಯೊ ವೈರಲ್!

ವರದಿ ಪ್ರಕಾರ, ಬೆಂಗಳೂರಿನ ಕೋದಂಡರಾಮಪುರದ ನಿವಾಸಿ 46 ವರ್ಷದ ಚಾರ್ಟರ್ಡ್ ಅಕೌಂಟೆಂಟ್ ಒಬ್ಬರ ಬಳಿ ಕಳೆದ 10 ವರ್ಷಗಳಿಂದ ಕಾರ್‌ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ರಾಜೇಶ್ ಬಿಎನ್ ಎಂಬಾತ ಇಂತಹ ಕೃತ್ಯ ಎಸಗಿದ್ದನು ಎನ್ನಲಾಗಿತ್ತು.