ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿಕಲಚೇತನರ ಶೌಚಾಲಯ ದುರ್ಬಳಕೆ: ವೀಲ್ಚೇರ್ 25 ನಿಮಿಷ ಹೊರಗೆ ಕಾದ ಮಹಿಳೆ
Kempegowda International Airport: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಕಲಚೇತನರಿಗಾಗಿ ಮೀಸಲಿರುವ ವಿಶೇಷ ಶೌಚಾಲಯವನ್ನು ಇತರರು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕುರಿತು ಪ್ರಯಾಣಿಕರೊಬ್ಬರು ಹಂಚಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ವಿಮಾನ ನಿಲ್ದಾಣದಲ್ಲಿ ವಿಕಲಚೇತನರಿಗೆ ಮೀಸಲಾಗಿರುವ ಶೌಚಾಲಯದ ದುರ್ಬಳಕೆ -
ಬೆಂಗಳೂರು, ನ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport) ವಿಕಲಚೇತನರು ಮತ್ತು ವಿಶೇಷ ಚೇತನರಿಗಾಗಿ (Non-disabled) ಮೀಸಲಿರಿಸಲಾದ ಶೌಚಾಲಯವನ್ನು ಇತರ ಪ್ರಯಾಣಿಕರು ಅನಧಿಕೃತವಾಗಿ ಬಳಸುತ್ತಿರುವ ಕುರಿತು ಪ್ರಯಾಣಿಕರೊಬ್ಬರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸದ್ಯ ಈ ವಿಡಿಯೋ ವ್ಯಾಪಕವಾಗಿ ವೈರಲ್ ಆಗುತ್ತಿದೆ. "ನನ್ನೊಂದಿಗೆ ಈ ರೀತಿ ನಡೆಯುತ್ತಿರುವುದು ಇದು ಮೂರನೇ ಬಾರಿ" ಎಂದು ಮಹಿಳೆಯೊಬ್ಬರು ತಮ್ಮ ಪೋಸ್ಟ್ನಲ್ಲಿ ಬೇಸರ ತೋಡಿಕೊಂಡಿದ್ದಾರೆ.
ವಿಮಾನ ನಿಲ್ದಾಣದಂತಹ ಅಂತಾರಾಷ್ಟ್ರೀಯ ಮಟ್ಟದ ಸಾರ್ವಜನಿಕ ಸ್ಥಳಗಳಲ್ಲಿ ವಿಕಲಚೇತನರಿಗೆ ಸುಗಮ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಲಾಗಿರುತ್ತದೆ. ಆದರೆ, ಸಾಮಾನ್ಯ ಶೌಚಾಲಯಗಳು ಲಭ್ಯವಿದ್ದರೂ ಸಹ ಕೆಲವು ಪ್ರಯಾಣಿಕರು ವಿಶೇಷ ಚೇತನರ ಶೌಚಾಲಯಗಳನ್ನು ಬಳಸುತ್ತಿರುವುದರಿಂದ, ನಿಜವಾಗಿಯೂ ಅಗತ್ಯವಿರುವವರು ಹೊರಗೆ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ದೂರಿದ್ದಾರೆ.
ವಿಡಿಯೋ ನೋಡಿ
This shameful non-disabled person occupied Accessible Toilet @BLRAirport for over 25 minutes, enjoying a leisurely bath etc. while I waited helplessly. This is the third time I faced such ordeal @ #Airports How insensitive & shameless one can be? Accessible Toilet aren't luxury https://t.co/oi7r5vxLuu
— Mridu R. Goel (@mridu_goel) November 12, 2026
ವೈರಲ್ ವಿಡಿಯೋದಲ್ಲಿ ಏನಿದೆ?
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ, ವಿಕಲಚೇತನರಿಗಾಗಿ ಮೀಸಲಿರುವ ಶೌಚಾಲಯದ ಬಾಗಿಲು ಒಳಗಿನಿಂದ ಲಾಕ್ ಆಗಿರುವುದನ್ನು ಮತ್ತು ಅದರೊಳಗಿಂದ ಸಾಮಾನ್ಯ ಪ್ರಯಾಣಿಕರು ಹೊರಬರುವುದನ್ನು ಸೆರೆಹಿಡಿಯಲಾಗಿದೆ. ವಿಡಿಯೋದಲ್ಲಿ, ವೀಲ್ ಚೇರ್ ಮೇಲೆ ಕುಳಿತಿದ್ದ ಮಹಿಳೆಯೊಬ್ಬರು ನೀವು ಹೀಗೆ ಈ ಶೌಚಾಲಯವನ್ನು ಬಳಸಬೇಡಿ, ಇದು ನಮಗೆ ಎಂದು ಮೀಸಲಿಟ್ಟಿರುವ ಶೌಚಾಲಯ ಎಂದು ಹೇಳಿದ್ದಾರೆ. ಈ ಹಿಂದೆಯೂ ಎರಡು ಬಾರಿ ಇದೇ ರೀತಿಯ ಅನುಭವವಾಗಿದ್ದು, ವಿಮಾನ ನಿಲ್ದಾಣದ ಆಡಳಿತ ಮಂಡಳಿಯು ಈ ಬಗ್ಗೆ ಕಟ್ಟುನಿಟ್ಟಿನ ನಿಗಾ ವಹಿಸಬೇಕು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
KIA: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ದಿ ಫಿಲ್ಟರ್ ಕಾಫಿ
ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ವಿಕಲಚೇತನರಿಗೆ ಮೀಸಲಾದ ಸೌಲಭ್ಯಗಳನ್ನು ಇತರರು ಬಳಸುವುದು ನಾಗರಿಕ ಪ್ರಜ್ಞೆಯ ಕೊರತೆಯನ್ನು ತೋರಿಸುತ್ತದೆ ಎಂದು ಹಲವರು ಟೀಕಿಸಿದ್ದು, ವಿಮಾನ ನಿಲ್ದಾಣದ ಸಿಬ್ಬಂದಿ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ವೀಡಿಯೊಗೆ ಪ್ರತಿಕ್ರಿಯಿಸಿದ ಬಿಎಲ್ಆರ್ ವಿಮಾನ ನಿಲ್ದಾಣ
ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಬಿಎಲ್ಆರ್ ವಿಮಾನ ನಿಲ್ದಾಣವು, "ನಮಸ್ಕಾರ @mridu_goel, ನಮ್ಮೊಂದಿಗೆ ಸಂಪರ್ಕ ಸಾಧಿಸಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಪ್ರತಿಕ್ರಿಯೆ ಮೌಲ್ಯಯುತವಾಗಿದೆ ಮತ್ತು ಪರಿಶೀಲನೆಗಾಗಿ ಸಂಬಂಧಪಟ್ಟ ತಂಡದೊಂದಿಗೆ ಹಂಚಿಕೊಳ್ಳಲಾಗಿದೆ. ದಯವಿಟ್ಟು ನಿಮ್ಮ ಸಂಪರ್ಕ ವಿವರಗಳು ಮತ್ತು ನಿಖರವಾದ ಸ್ಥಳವನ್ನು ಡಿಎಂ ಮೂಲಕ ಹಂಚಿಕೊಳ್ಳಿ ಇದರಿಂದ ನಮ್ಮ ತಂಡವು ನಿಮ್ಮೊಂದಿಗೆ ಸಂಪರ್ಕ ಸಾಧಿಸಬಹುದು." ಎಂದು ಹೇಳಿದೆ.