Viral News: ಹೊರಗೆ ಸಿಗು ನೋಡ್ಕೊಳ್ತೇನೆ... ತನ್ನ ವಿರುದ್ಧ ತೀರ್ಪು ನೀಡಿದ ಜಡ್ಜ್‌ಗೆ ಕಟಕಟೆಯಲ್ಲೇ ನಿಂತು ಕಿಡಿಗೇಡಿಯ ಬೆದರಿಕೆ
ಚೆಕ್ ಬೌನ್ಸ್ (Cheque bounce) ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಿ ಆರೋಪಿಯನ್ನು ದೋಷಿ ಎಂದು ತೀರ್ಮಾನಿಸಿ ನ್ಯಾಯಾಲಯ ತೀರ್ಪು ನೀಡಿದ್ದಕ್ಕೆ ಕುಪಿತಗೊಂಡ ಶಿಕ್ಷೆಗೊಳಗಾದ ವ್ಯಕ್ತಿ ನ್ಯಾಯಾಧೀಶರಿಗೆ ನ್ಯಾಯಾಲಯದ ಆವರಣದಲ್ಲೇ ಬೆದರಿಕೆ (abuse and threat case) ಹಾಕಿರುವ ಘಟನೆ ನಡೆದಿದೆ. ಏಪ್ರಿಲ್ 2ರಂದು ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ನ್ಯಾಯಾಲಯದ (Delhi Court) ನ್ಯಾಯಾಧೀಶರು ತೀರ್ಪು ನೀಡಿದ ಮೇಲೆ ಈ ಘಟನೆ ನಡೆದಿದೆ.


ನವದೆಹಲಿ: ಚೆಕ್ ಬೌನ್ಸ್ (cheque bounce) ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಿ ಆರೋಪಿಯನ್ನು ದೋಷಿ ಎಂದು ತೀರ್ಮಾನಿಸಿ ನ್ಯಾಯಾಲಯ ತೀರ್ಪು ನೀಡಿದ್ದಕ್ಕೆ ಕುಪಿತಗೊಂಡ ಶಿಕ್ಷೆಗೊಳಗಾದ ವ್ಯಕ್ತಿ ನ್ಯಾಯಾಧೀಶರಿಗೆ ನ್ಯಾಯಾಲಯದ ಆವರಣದಲ್ಲೇ ಬೆದರಿಕೆ (abuse and threat case) ಹಾಕಿರುವ ಘಟನೆ ನಡೆದಿದೆ. ಏಪ್ರಿಲ್ 2ರಂದು ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ನ್ಯಾಯಾಲಯದ (Delhi court) ನ್ಯಾಯಾಧೀಶರು ತೀರ್ಪು ನೀಡಿದ ಮೇಲೆ ಈ ಘಟನೆ ನಡೆದಿದೆ. ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಶಿವಾಂಗಿ ಮಂಗ್ಲಾ ಅವರಿಗೆ ಆರೋಪಿಯು ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ನ್ಯಾಯಾಧೀಶರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಿದ ದೆಹಲಿ ನ್ಯಾಯಾಲಯದ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಶಿವಾಂಗಿ ಮಂಗ್ಲಾ ಅವರು ನೆಗೋಷಿಯೇಬಲ್ ಇನ್ಸ್ ಟ್ರುಮೆಂಟ್ಸ್ ಆಕ್ಟ್ ಪ್ರಕಾರ ಚೆಕ್ ಬೌನ್ಸ್ ಗೆ ಸಂಬಂಧಿಸಿ ಸೆಕ್ಷನ್ 138ರ ಅಡಿಯಲ್ಲಿ ಆರೋಪಿಯನ್ನು ದೋಷಿ ಎಂದು ಘೋಷಿಸಿದರು. ಬಳಿಕ ಆರೋಪಿಗೆ ಕ್ರಿಮಿನಲ್ ಪ್ರಕ್ರಿಯ ಸಂಹಿತೆಯ (CrPC) ಸೆಕ್ಷನ್ 437A ಅಡಿಯಲ್ಲಿ ಜಾಮೀನು ಬಾಂಡ್‌ಗಳನ್ನು ಒದಗಿಸುವಂತೆ ನಿರ್ದೇಶಿಸಿದರು.
ಈ ತೀರ್ಪಿನಿಂದ ಕೋಪಗೊಂಡ ಅಪರಾಧಿ ನ್ಯಾಯಾಧೀಶರ ಮೇಲೆ ವಸ್ತುವೊಂದನ್ನು ಎಸೆಯಲು ಪ್ರಯತ್ನಿಸಿದ್ದಾನೆ. ಬಳಿಕ ನೀನು ಯಾರು? ಹೊರಗೆ ನನಗೆ ಸಿಗು ಹೇಗೆ ಜೀವಂತವಾಗಿ ಮನೆಗೆ ಹೋಗುತ್ತೀಯಾ ನೋಡೋಣ ಎಂದು ಬೆದರಿಕೆ ಒಡ್ಡಿದ್ದಾನೆ. ಅಲ್ಲದೇ ಆತ ತನ್ನ ವಕೀಲರಿಗೆ ತೀರ್ಪನ್ನು ತಮ್ಮ ಪರವಾಗಿ ಬದಲಾಯಿಸಲು "ಏನು ಬೇಕಾದರೂ ಮಾಡಿ" ಎಂದು ಹೇಳಿದ್ದಾನೆ.
ಇದರಿಂದ ಆಕ್ರೋಶಗೊಂಡ ನ್ಯಾಯಮೂರ್ತಿ ಮಂಗ್ಲಾ ಅವರು ತಮ್ಮ ಆದೇಶದಲ್ಲಿ ಆರೋಪಿ ಮತ್ತು ಆತನ ವಕೀಲರಾದ ಅತುಲ್ ಕುಮಾರ್ ತಮ್ಮನ್ನು ಬೆದರಿಸಿದರಲ್ಲದೆ ತಮ್ಮ ಹುದ್ದೆಗೆ ರಾಜೀನಾಮೆ ನೀಡುವಂತೆ ಒತ್ತಡ ಹೇರಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಅವರು ಪದೇ ಪದೇ ಬೆದರಿಕೆ ಹಾಕಿದರೂ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಸೂಕ್ತ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: Murder Case: ಬೆಂಗಳೂರಿನ ಬೀದಿಯಲ್ಲಿ ಮರ್ಡರ್, ತಡರಾತ್ರಿ ದುಷ್ಕರ್ಮಿಗಳಿಂದ ವ್ಯಕ್ತಿಯ ಕೊಚ್ಚಿ ಕೊಲೆ
ನ್ಯಾಯಾಧೀಶರಿಗೆ ಬೆದರಿಕೆ ಮತ್ತು ಕಿರುಕುಳ ನೀಡಿದ್ದಕ್ಕಾಗಿ ದೆಹಲಿಯ ರಾಷ್ಟ್ರೀಯ ಮಹಿಳಾ ಆಯೋಗ ಆರೋಪಿಯ ವಿರುದ್ಧ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯದ ಆದೇಶದಲ್ಲಿ ತಿಳಿಸಲಾಗಿದೆ. ನ್ಯಾಯಾಧೀಶರು ಅಪರಾಧಿಯ ವಕೀಲರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಇದರಲ್ಲಿ ಅವರ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದು ವಿಚಾರಣೆಗಾಗಿ ಅವರನ್ನು ದೆಹಲಿ ಹೈಕೋರ್ಟ್‌ಗೆ ಹೋಗುವಂತೆ ತಿಳಿಸಲಾಗಿದೆ. ತಮ್ಮ ನಡವಳಿಕೆ ಬಗ್ಗೆ ಲಿಖಿತವಾಗಿ ಪ್ರತಿಕ್ರಿಯೆಯನ್ನು ನ್ಯಾಯಾಲಯಕ್ಕೆ ಮುಂದಿನ ವಿಚಾರಣೆಯ ಮೊದಲು ಸಲ್ಲಿಸುವಂತೆ ಸೂಚಿಸಲಾಗಿದೆ.