25 ಲಕ್ಷ ರುಪಾಯಿ ಸಂಬಳದ ಜಾಬ್ ಆಫರ್ ತಿರಸ್ಕರಿಸಿ ಓಲಾ ಚಾಲಕನಾದ ಯುವಕ; ಮೂರೇ ವರ್ಷದಲ್ಲಿ 5 ಕಾರ್‌ಗಳ ಒಡೆಯ
Viral News: ಉದ್ಯೋಗದಲ್ಲಿ ಟಾರ್ಗೆಟ್, ಒತ್ತಡ, ಕಿರಿಕಿರಿಯಿಂದಾಗಿ ಲಕ್ಷ ಗಟ್ಟಲೆ ಸಂಬಳ ಇದ್ದರೂ ಬಿಟ್ಟು ಬಂದವರಿದ್ದಾರೆ. ಇದೀಗ ಯುವಕನೊಬ್ಬ 25 ಲಕ್ಷ ರುಪಾಯಿ ಸಂಬಳದ ಆಫರ್ ಬಿಟ್ಟು ಓಲಾ ಚಾಲಕನಾಗಿದ್ದಾನೆ. ಕಾರ್ಪೋರೇಟ್ ಜೀವನದಿಂದ ದೂರವಾದ ಯುವಕನ ಬಗ್ಗೆ ಸಚಿನ್ ಎಂಬವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಆತನಿಗೆ ಕಾರ್ಪೋರೇಟ್ ಜೀವನದಲ್ಲಿ ಸಮಾಧಾನವಿರಲಿಲ್ಲ. ಹೀಗಾಗಿ ಹಠಾತ್ತನೆ ಆ ಕೆಲಸದ ಆಫರ್ ಬಿಟ್ಟು, ಓಲಾ ಟ್ಯಾಕ್ಸಿ ಚಾಲಕನಾಗಲು ನಿರ್ಧರಿಸಿದ್ದಾನೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
ಇಂಟರ್‌ನೆಟ್ ಚಿತ್ರ -
ನವದೆಹಲಿ, ಮೇ 31: ಇತ್ತೀಚೆಗೆ ಒತ್ತಡದಿಂದ ಬೇಸೆತ್ತು ಕೆಲಸ ತೊರೆದವರು ಅನೇಕ ಮಂದಿ ಇದ್ದಾರೆ. ಉದ್ಯೋಗದಲ್ಲಿನ ಟಾರ್ಗೆಟ್, ಒತ್ತಡ, ಕಿರಿಕಿರಿಯಿಂದಾಗಿ ಲಕ್ಷ ಗಟ್ಟಲೆ ರುಪಾಯಿ ಸಂಬಳ ಇದ್ದರೂ ಬಿಟ್ಟು ಬಂದವರಿದ್ದಾರೆ. ಇದೀಗ ಯುವಕನೊಬ್ಬ 25 ಲಕ್ಷ ರೂಪಾಯಿ ಸಂಬಳದ ಆಫರ್ ಬಿಟ್ಟು ಓಲಾ ಚಾಲಕನಾಗಿದ್ದಾನೆ. ಕಾರ್ಪೋರೇಟ್ ಜೀವನದಿಂದ ದೂರವಾದ ಯುವಕನ ಬಗ್ಗೆ ಸಚಿನ್ ಎಂಬವರು ಸೋಷಿಯಲ್ ಮೀಡಿಯಾದಲ್ಲಿಬರೆದುಕೊಂಡಿದ್ದಾರೆ. ಆತನಿಗೆ ಕಾರ್ಪೋರೇಟ್ ಜೀವನದಲ್ಲಿ ಸಮಾಧಾನವಿರಲಿಲ್ಲ. ಹೀಗಾಗಿ ಹಠಾತ್ತನೆ ಆ ಕೆಲಸದ ಆಫರ್ ಬಿಟ್ಟು, ಓಲಾ ಟ್ಯಾಕ್ಸಿ ಚಾಲಕನಾಗಲು ನಿರ್ಧರಿಸಿದ್ದಾನೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗುತ್ತಿದೆ.
ಇತ್ತೀಚೆಗೆ ಕಾರ್ಪೋರೇಟ್ ಕೆಲಸದಲ್ಲಿ ಹಲವು ದೂರುಗಳು ಕೇಳಿ ಬರುತ್ತಲೇ ಇರುತ್ತವೆ. ಹೀಗಾಗಿ ಇಲ್ಲಿನ ಸಹವಾಸವೇ ಸಾಕೆಂದು ಸಣ್ಣ ಪುಟ್ಟ ಉದ್ಯೋಗದಲ್ಲಿ ತೊಡಗಿಕೊಂಡವರು ಇದ್ದಾರೆ. ಇಲ್ಲಿ ಲಕ್ಷ ಲಕ್ಷ ಸಂಬಳದ ಪ್ಯಾಕೇಜ್‌ಗಳು ಇದ್ದರೂ ಕೆಲವರು ಇದನ್ನು ನಿರಾಕರಿಸುವುದು ದೊಡ್ಡ ಸಾಹಸವೇ ಸರಿ.
ರೀಲ್ಸ್‌ಗಾಗಿ ಮೊಸಳೆಯ ಬಾಲ ಹಿಡಿಯಲು ಯತ್ನಿಸಿದ ಯುವಕ: ವಿಡಿಯೊ ವೈರಲ್
ಅದೇ ರೀತಿ ಇಲ್ಲೊಬ್ಬ ಎಂಬಿಎ ಪದವೀಧರ ತನಗೆ ಸಿಕ್ಕಿದ್ದ 25 ಲಕ್ಷ ರುಪಾಯಿ ಸಂಬಳದ ಆಫರ್ ಅನ್ನೇ ತಿರಸ್ಕರಿಸಿ ಓಲಾ ಚಾಲಕನಾಗಿ ಕಾರ್ಯ ನಿರ್ವಹಿಸಲು ಮುಂದಾಗಿದ್ದಾನೆ. ಕಷ್ಟಪಟ್ಟು ಕೆಲಸ ಮಾಡಿದ ಪರಿಣಾಮ ಈಗ ಆತ 5 ಕಾರುಗಳ ಮಾಲಕನಾಗಿ ಯಶಸ್ವಿ ಉದ್ಯಮಿಯಾಗಿ ಬೆಳೆದ ಇವರ ಕಥೆ ಎಲ್ಲರಿಗೂ ಸ್ಪೂರ್ತಿ ಎನಿಸಿಕೊಂಡಿದೆ. ಶಶಿ ಸಚಿನ್ ಈ ಘಟನೆ ಹಂಚಿಕೊಂಡಿದ್ದು, ʼʼಯುವಕನು ಟೈರ್-2 ಕಾಲೇಜಿನಿಂದ MBA ಮುಗಿಸಿದ್ದು, ಕೈಯಲ್ಲಿ 25 LPA ಕೆಲಸದ ಆಫರ್ ಇತ್ತು. ಆದರೆ ಅವರು ಇದರಲ್ಲಿ ತೃಪ್ತರಾಗಿರಲಿಲ್ಲ. ಒಂದು ದಿನ ಹಠಾತ್ತನೆ ಆ ಕೆಲಸದ ಆಫರ್ ಬಿಟ್ಟು, ಓಲಾ ಟ್ಯಾಕ್ಸಿ ಚಾಲಕನಾಗಲು ನಿರ್ಧರಿಸಿದರುʼʼ ಎಂದು ಸಚಿನ್ ಬರೆದುಕೊಂಡಿದ್ದಾರೆ.
ಯುವಕನ ಈ ಹಠಾತ್ ನಿರ್ಧಾರಕ್ಕೆ ಕುಟುಂಬಸ್ಥರು, ತೀವ್ರ ವಿರೋಧ ವ್ಯಕ್ತ ಪಡಿಸಿದರು. ಆದರೆ ಸಮಾಜದ ಮಾತುಗಳಿಗೆ ಕಿವಿಗೊಡದ ಆ ಯುವಕ, ಕಠಿಣ ಪರಿಶ್ರಮದಿಂದ ಇಂದು ದೊಡ್ಡ ಉದ್ಯಮಿಯಾಗಿದ್ದಾನೆ. ಆತ ಕೇವಲ ಚಾಲಕನಾಗಿ ಉಳಿಯದೆ, ಪ್ರಸ್ತುತ ಓಲಾ ಅಡಿಯಲ್ಲಿ 5 ಕಾರುಗಳನ್ನು ಓಡಿಸುತ್ತಿದ್ದು, ತಿಂಗಳಿಗೆ ಸುಮಾರು 1.5 ಲಕ್ಷ ರುಪಾಯಿ ಗಳಿಸುತ್ತಿದ್ದಾನೆ. ಈ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.