Viral Video: 'ವಂದೇ ಮಾತರಂ’ ಹಾಡಿದ ಮೇಘಾಲಯದ ಹುಡುಗಿಯರು; ದೇಶಭಕ್ತಿಯ ಹಾಡಿಗೆ ನೆಟ್ಟಿಗರು ಫಿದಾ
ಮೇಘಾಲಯದ ಯುವತಿಯರ ಗುಂಪು ವಂದೇ ಮಾತರಂ (ಮಾ ತುಜೆ ಸಲಾಮ್) ಹಾಡುವ ಮೂಲಕ ಸೋಶಿಯಲ್ ಮೀಡಿಯಾದ ನೆಟ್ಟಿಗರನ್ನು ಆಕರ್ಷಿಸಿದೆ. ಈ ದೇಶಭಕ್ತಿ ಗೀತೆಯ ಹಾಡು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಾಂಪ್ರದಾಯಿಕ ಕಂದು ಬಣ್ಣದ ಉಡುಪನ್ನು ಧರಿಸಿ ಅವರು ನೀಡಿದ ಈ ಪ್ರದರ್ಶನವು ಫುಟ್‍ಬಾಲ್ ಅಭಿಮಾನಿಗಳಿಂದ ತುಂಬಿದ ಕ್ರೀಡಾಂಗಣದಲ್ಲಿ ದೇಶಭಕ್ತಿಯ ಅಲೆಯನ್ನು ಹರಡಿತು.


ಶಿಲ್ಲಾಂಗ್: ವಂದೇ ಮಾತರಂ... ಹಾಡು ಕೇಳಿದಾಗ ಪ್ರತಿಯೊಬ್ಬ ಭಾರತೀಯನ ಕಿವಿ ನಿಮಿರುತ್ತದೆ. ಮೈ ಮನಸ್ಸಿನಲ್ಲಿ ದೇಶಭಕ್ತಿಯು ತುಂಬಿ ತುಳುತ್ತದೆ. ಈ ಹಾಡಿಗೆ ಇರುವ ಶಕ್ತಿಯೇ ಅಂತಹದ್ದು! ಮೇಘಾಲಯದ ಯುವತಿಯರ ಗುಂಪು ವಂದೇ ಮಾತರಂ (ಮಾ ತುಜೆ ಸಲಾಮ್) ಹಾಡುವ ಮೂಲಕ ಸೋಶಿಯಲ್ ಮೀಡಿಯಾದ ನೆಟ್ಟಿಗರನ್ನು ಆಕರ್ಷಿಸಿದ್ದಾರೆ. ಈ ದೇಶಭಕ್ತಿ ಗೀತೆಯ ಹಾಡು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ. ಈ ಯುವ ಗಾಯಕರು ಶಿಲ್ಲಾಂಗ್ ಜೆಎನ್ ಕ್ರೀಡಾಂಗಣದಲ್ಲಿ (ಪೊಲೊ ಗ್ರೌಂಡ್) ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎಎಫ್‍ಸಿ ಏಷ್ಯನ್ ಕಪ್ ಪಂದ್ಯದಲ್ಲಿ ತಮ್ಮ ಹಾಡಿನ ಮೂಲಕ ದೇಶಭಕ್ತಿಯನ್ನು ಉತ್ತೇಜಿಸಿದ್ದಾರೆ. ಸಾಂಪ್ರದಾಯಿಕ ಕಂದು ಬಣ್ಣದ ಉಡುಪನ್ನು ಧರಿಸಿ ಅವರು ನೀಡಿದ ಈ ಪ್ರದರ್ಶನವು ಫುಟ್‍ಬಾಲ್ ಅಭಿಮಾನಿಗಳಿಂದ ತುಂಬಿದ ಕ್ರೀಡಾಂಗಣದಲ್ಲಿ ದೇಶಭಕ್ತಿಯ ಅಲೆಯನ್ನು ಹರಡಿದ್ದಾರೆ.
ಈ ರೋಮಾಂಚನಕಾರಿ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡು ಸಿಕ್ಕಾಪಟ್ಟೆ ವೈರಲ್ ಆಗಿದೆ. ಇವರ ಹಾಡು ಕೇಳಿ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ನಾಗಾಲ್ಯಾಂಡ್‍ನ ಪ್ರವಾಸೋದ್ಯಮ ಮತ್ತು ಉನ್ನತ ಶಿಕ್ಷಣ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ ಅವರು ಕೂಡ ಈ ದೇಶಭಕ್ತಿ ಹಾಡಿಗೆ ತಲೆದೂಗಿ ವಿಡಿಯೊವನ್ನು ಹಂಚಿಕೊಂಡಿದ್ದಾರೆ.
ಮೇಘಾಲಯದ ಯುವತಿಯರ ದೇಶಭಕ್ತಿಯ ಹಾಡು ಇಲ್ಲಿದೆ ನೋಡಿ:
ಕೆಎಚ್ಎಂಐಎಚ್ ಕ್ರಿಯೇಟಿವ್ ಸೊಸೈಟಿಯು ಹುಡುಗಿಯರು ಈ ಸಮಯದಲ್ಲಿ ಒಂದಲ್ಲ, ಎರಡು ಹಾಡುಗಳ ಪ್ರದರ್ಶನ ನೀಡಿದ್ದರು. ರಿ ಲುಮ್ (ಥ್ವೇ ಕಿ ದೋಹ್ನುದ್) ಮತ್ತು ವಂದೇ ಮಾತರಂ (ಮಾ ತುಜೆ ಸಲಾಮ್) ಹಾಡುಗಳನ್ನು ಹಾಡಿದ್ದಾರೆ. ಅವರ ಎರಡನೆಯ ಹಾಡು ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಸುದ್ದಿಯನ್ನೂ ಓದಿ:Viral Video: ತನ್ನ ಕಾರಿಗೆ ತಾನೇ ಬೆಂಕಿ ಹಚ್ಚಿ ಅದರೊಳಗೆ ಕುಳಿತ ಭೂಪ! ಈತನ ಹುಚ್ಚಾಟದ ವಿಡಿಯೊ ಇಲ್ಲಿದೆ
ನೆಟ್ಟಿಗರು ಈ ವಿಡಿಯೊಕ್ಕೆ ಕಾಮೆಂಟ್ ವಿಭಾಗದಲ್ಲಿ ಪ್ರೀತಿ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. "ಅದ್ಭುತ! ಪ್ರತಿಯೊಂದೂ ಅನನ್ಯವಾಗಿದೆ. ಒಟ್ಟಾರೆ ಇದು ಒಂದು ಅದ್ಭುತ ಸಾಮರಸ್ಯ! ಎಂದಿಗೂ ಮಿಂಚುತ್ತೀರಿ ಮತ್ತು ಸಾಧಿಸುತ್ತಲೇ ಇರಿ" ಎಂದು ಒಬ್ಬರು ಹಾರೈಸಿದ್ದಾರೆ. ಇನ್ನೊಬ್ಬರು "ದೇಶಭಕ್ತಿಯ ಬಗ್ಗೆ ಅಚಲ ಉತ್ಸಾಹ ವ್ಯಕ್ತವಾಗಿದೆ" ಎಂದು ಬರೆದಿದ್ದಾರೆ. ಕೆಲವರು ಈ ಗಾಯಕರಿಗೆ ಹೆಚ್ಚಿನ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಲು ಅವಕಾಶ ನೀಡುವಂತೆ ಸಲಹೆ ನೀಡಿದ್ದಾರೆ. ಇನ್ನು ಹಲವರು ಐಪಿಎಲ್ 2025ರ ಫಿನಾಲೆಯಲ್ಲಿ ಅವರಿಗೆ ಅವಕಾಶ ನೀಡುವಂತೆ ಬಿಸಿಸಿಐಗೆ ಮನವಿ ಮಾಡಿದ್ದಾರೆ.