ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಏರ್‌ಪೋರ್ಟ್‌ನಲ್ಲಿ 'ತೇರಿ ಮಿಟ್ಟಿ' ಹಾಡಿಗೆ ಕೊಳಲು ನುಡಿಸಿದ ಮೆಹಬೂಬ್; ಭದ್ರತಾ ಸಿಬ್ಬಂದಿ ಮಾಡಿದ್ದೇನು?

ಸೂಫಿ-ಬಾಲಿವುಡ್ ಫ್ಯೂಷನ್ ಬ್ಯಾಂಡ್ 'ಜೈಪುರಿ ಬ್ರದರ್ಸ್'ನ ಮುಖ್ಯಸ್ಥ ಮೆಹಬೂಬ್ ʼತೇರಿ ಮಿಟ್ಟಿʼ ಹಾಡಿಗೆ ಅದ್ಭುತವಾಗಿ ಕೊಳಲು ನುಡಿಸಿದ್ದಾರೆ. ರಾಯ್‌ಪುರ ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿಯ ಕೋರಿಕೆಯ ಮೇರೆಗೆ ಭದ್ರತಾ ತಪಾಸಣೆಯ ವೇಳೆ ಕೇಸರಿ ಚಿತ್ರದ ʼತೇರಿ ಮಿಟ್ಟಿʼ ಹಾಡಿಗೆ ಕೊಳಲು ಪ್ರದರ್ಶನ ನೀಡಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಏರ್‌ಪೋರ್ಟ್‌ನಲ್ಲಿ ಕೊಳಲು ವಾದನದ ಕಲರವ; ವಿಡಿಯೊ ನೋಡಿ

Profile pavithra May 5, 2025 7:31 PM

ರಾಜಸ್ಥಾನ ಮೂಲದ ಕಲಾವಿದರೊಬ್ಬರು ರಾಯ್‌ಪುರ ವಿಮಾನ ನಿಲ್ದಾಣದಲ್ಲಿ 2019ರ ʼಕೇಸರಿʼ ಚಿತ್ರದ ಬಿ ಪ್ರಾಕ್ ಅವರ ʼತೇರಿ ಮಿಟ್ಟಿʼ ಹಾಡಿನ ಮನಮೋಹಕ ಕೊಳಲು ಪ್ರದರ್ಶನ ನೀಡಿದ್ದು, ಇದನ್ನು ಕೇಳಿದ ಎಲ್ಲರೂ ಮಂತ್ರಮುಗ್ಧರಾಗಿದ್ದಾರೆ. ಸೂಫಿ-ಬಾಲಿವುಡ್ ಫ್ಯೂಷನ್ ಬ್ಯಾಂಡ್ 'ಜೈಪುರಿ ಬ್ರದರ್ಸ್'ನ ಮುಖ್ಯಸ್ಥ ಮೆಹಬೂಬ್, ವಿಮಾನ ನಿಲ್ದಾಣದ ಸಿಬ್ಬಂದಿಯ ಕೋರಿಕೆಯ ಮೇರೆಗೆ ಭದ್ರತಾ ತಪಾಸಣೆಯ ಸಮಯದಲ್ಲಿ ಕೊಳಲು ಪ್ರದರ್ಶನ ನೀಡಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ವೈರಲ್ ಆದ ವಿಡಿಯೊದಲ್ಲಿ ಮೆಹಬೂಬ್ ʼತೇರಿ ಮಿಟ್ಟಿʼ ಹಾಡಿಗೆ ಅದ್ಭುತವಾಗಿ ಕೊಳಲು ನುಡಿಸುವುದು ಸೆರೆಯಾಗಿದೆ. ಬ್ಯಾಂಡ್ ತಮ್ಮ ಅಧಿಕೃತ ಸೋಶಿಯಲ್ ಮಿಡಿಯಾ ಹ್ಯಾಂಡಲ್‍ನಲ್ಲಿ ಈ ಸಂಗೀತ ಪ್ರದರ್ಶನದ ವಿಡಿಯೊವನ್ನು ಪೋಸ್ಟ್ ಮಾಡಿದೆ. ಈ ವಿಡಿಯೊ ಹಂಚಿಕೊಂಡಾಗಿನಿಂದ 44 ಮಿಲಿಯನ್ ವ್ಯೂವ್ಸ್‌ ಗಳಿಸಿದೆ ಮತ್ತು ನೆಟ್ಟಿಗರಿಂದ ನೂರಾರು ಪ್ರತಿಕ್ರಿಯೆಗಳನ್ನು ಪಡೆದಿದೆ. ನೆಟ್ಟಿಗರು ಕೊಳಲುವಾದಕನ ಅಸಾಧಾರಣ ಪ್ರತಿಭೆಯನ್ನು ಹೊಗಳಿದ್ದಾರೆ.

"ಎಲ್ಲರನ್ನೂ ನಿಶ್ಚಲವಾಗಿ ನಿಲ್ಲುವಂತೆ ಮಾಡಿದ ಕ್ಷಣ" ಎಂದು ಒಬ್ಬರು ಕಾಮೆಂಟ್ ಮಾಡಿದರೆ ಇನ್ನೊಬ್ಬರು "ಅವರಿಗೆ ದೊಡ್ಡ ಸೆಲ್ಯೂಟ್" ಎಂದಿದ್ದಾರೆ. ಅದು ವಿಮಾನ ನಿಲ್ದಾಣದಲ್ಲಿ ನಡೆದ ಸಿಹಿಯ ಕ್ಷಣ" ಎಂದು ಮೂರನೆಯವರು ಹೇಳಿದ್ದಾನೆ. "ವಾಹ್..... ತುಂಬಾ ಶಾಂತಿಯುತ ಕೊಳಲು ಸಂಗೀತ" ಎಂದು ಸಂಗೀತ ಪ್ರೇಮಿಯೊಬ್ಬರು ಹೇಳಿದ್ದಾರೆ. "ಯಾವುದೇ ಸಮಯದಲ್ಲಿ ಸಂಗೀತವನ್ನು ನುಡಿಸುವುದನ್ನು ಕೇಳಲು ಸಂತೋಷವಾಗುತ್ತದೆ" ಎಂದು ವೈರಲ್ ವಿಡಿಯೊದ ಕಾಮೆಂಟ್ ವಿಭಾಗದಲ್ಲಿ ಇನ್ನೊಬ್ಬರು ಹಂಚಿಕೊಂಡಿದ್ದಾರೆ.

ವಿಡಿಯೊ ಇಲ್ಲಿದೆ ನೋಡಿ...

ಈ ಹಿಂದೆ ರೈಲಿನಲ್ಲಿ ಮಹಿಳೆಯರ ಗುಂಪು ಸಾಂಪ್ರದಾಯಿಕ ಸಂಗೀತ ವಾದ್ಯಗಳನ್ನು ನುಡಿಸುವುದರ ಜತೆಗೆ ಭಜನೆಗಳನ್ನು ಹಾಡಿತ್ತು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ರೈಲು ಪ್ರಯಾಣಿಕರಿಂದ ತುಂಬಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಈ ಸುದ್ದಿಯನ್ನೂ ಓದಿ:Viral Video: ಮಹಾಕುಂಭಮೇಳ ಗಳಿಕೆಯಿಂದ ಎಸ್‌ಯುವಿ ಕಾರು ಖರೀದಿಸಿದ ಬಾಬಾ; ನೆಟ್ಟಿಗರು ಫುಲ್‌ ಶಾಕ್‌! ವಿಡಿಯೊ ನೋಡಿ

ವೈರಲ್ ಆದ ವಿಡಿಯೊದಲ್ಲಿ ಮಹಿಳೆಯರು ಮೆಟ್ರೋದೊಳಗೆ ಜೋರಾಗಿ ಭಜನೆಗಳನ್ನು ಹಾಡಿದ್ದರು. ಅವರು ಡೋಲಕ್ ಮತ್ತು ಕರ್ತಾಲ್‍ನಂತಹ ವಾದ್ಯಗಳನ್ನು ನುಡಿಸುತ್ತಾ ಭಕ್ತಿಗೀತೆಗಳನ್ನು ಪಠಿಸಿದ್ದರು. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಇದನ್ನು ನೋಡಿ ನೆಟ್ಟಿಗರು ಶಾಕ್‌ ಆಗಿದ್ದರು. ಸಮವಸ್ತ್ರ ಧರಿಸಿದ ಸಿಐಎಸ್ಎಫ್ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಇತರರಿಗೆ ಉಪದ್ರವ ಅಥವಾ ಅನಾನುಕೂಲತೆಯನ್ನು ಉಂಟುಮಾಡಿದ್ದಕ್ಕಾಗಿ ಮಹಿಳೆಯರನ್ನು ಗದರಿಸಿದ್ದರು. ಈ ಘಟನೆಯ ಬಗ್ಗೆ ಯಾವುದೇ ಲಿಖಿತ ದೂರು ನೀಡಿರಲಿಲ್ಲ.