ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ರೀಲ್ಸ್‌ ಕ್ರೇಜ್‌; 2 ರೈಲ್ವೆ ಹಳಿಗಳ ನಡುವೆ ಓಡಿದ ಯುವತಿ: ಕಿಡಿಕಾರಿದ ನೆಟ್ಟಿಗರು

ಇತ್ತೀಚೆಗೆ ದೆಹಲಿಯ ಫಿಟ್‌ನೆಸ್‌ ಇನ್‌ಫ್ಲುಯೆನ್ಸರ್‌ ಎಂದು ಗುರುತಿಸಲ್ಪಟ್ಟ ಪಿಕು ಸಿಂಗ್, ಶತಾಬ್ಧಿ ಎಕ್ಸ್‌ಪ್ರೆಸ್‌ ರೈಲಿನ ಜತೆಗೆ ಓಡಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ. ನೆಟ್ಟಿಗರು ಈಕೆಯ ನಡೆಯನ್ನು ಖಂಡಿಸಿದ್ದಾರೆ.

ರೀಲ್ಸ್‌ಗಾಗಿ ರೈಲ್ವೆ ಹಳಿಯ ಮೇಲೆ ಓಡಿದ ಯುವತಿ

Profile pavithra Apr 16, 2025 8:33 PM

ʼಸುಲ್ತಾನ್ʼ ಚಿತ್ರದಲ್ಲಿ ನಟ ಸಲ್ಮಾನ್ ಖಾನ್ ವೇಗವಾಗಿ ಚಲಿಸುವ ರೈಲಿನ ಪಕ್ಕದಲ್ಲಿ ಓಡುವ ದೃಶ್ಯವೊಂದು ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಆದರೆ ಇದು ರಿಯಲ್ ಲೈಫ್‍ನಲ್ಲಿ ಮಾಡುವುದು ಬಹಳ ಅಪಾಯಕಾರಿ. ಆದರೆ ಜನರು ಸೋಶಿಯಲ್ ಮೀಡಿಯಾಗಳಲ್ಲಿ ರೀಲ್ಸ್ ತಯಾರಿಸಲು ಇಂತಹ ಅಪಾಯಕಾರಿ ಕೃತ್ಯಕ್ಕೂ ಮುಂದಾಗುತ್ತಿದ್ದಾರೆ. ಇತ್ತೀಚೆಗೆ ದೆಹಲಿಯ ಮಹಿಳೆಯೊಬ್ಬಳು ಇಂತಹ ಸಾಹಸಕ್ಕೆ ಕೈಹಾಕಿದ್ದು, ಶತಾಬ್ಧಿ ಎಕ್ಸ್‌ಪ್ರೆಸ್‌ ರೈಲಿನ ಜತೆಗೆ ಓಡಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಸೋಶಿಯಲ್ ಮೀಡಿಯಾದಲ್ಲಿ 18.3 ಸಾವಿರ ಅನುಯಾಯಿಗಳನ್ನು ಹೊಂದಿರುವ ಪಿಕು ಸಿಂಗ್, ಶತಾಬ್ದಿ ಎಕ್ಸ್‌ಪ್ರೆಸ್‌ ನವದೆಹಲಿಯಿಂದ ಕಲ್ಕಾ ಮೂಲಕ ಹಾದುಹೋಗುವಾಗ ಎರಡು ರೈಲ್ವೆ ಹಳಿಗಳ ನಡುವೆ ಓಡುತ್ತಾ ರೀಲ್ ಅನ್ನು ಶೂಟ್ ಮಾಡಿದ್ದಾಳೆ. ಅವಳ ಈ ಸ್ಟಂಟ್‍ನ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಸಿರು ಟಾಪ್ ಮತ್ತು ಕಪ್ಪು ಸೈಕ್ಲಿಂಗ್ ಶಾರ್ಟ್ಸ್ ಧರಿಸಿದ ಅವಳು ಪ್ರಯಾಣಿಕರ ರೈಲಿನ ಪಕ್ಕದಲ್ಲಿ ಸ್ಪೀಡಾಗಿ ಓಡುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.

ಎರಡು ರೈಲ್ವೆ ಹಳಿಗಳ ನಡುವೆ ಓಡಿದ ಯುವತಿಯ ವಿಡಿಯೊ ಇಲ್ಲಿದೆ ನೋಡಿ...

ಸಿಂಗ್ ತನ್ನ ರನ್ನಿಂಗ್ ರೀಲ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಂತೆ, ನೆಟ್ಟಿಗರು ಈ ಅಪಾಯಕಾರಿ ಸ್ಟಂಟ್ ಅನ್ನು ಖಂಡಿಸಿದ್ದಾರೆ. ಇದು ಜೀವಕ್ಕೆ ಅಪಾಯಕಾರಿ ಎಂದು ಹೇಳಿದ್ದಾರೆ. “ನೀವು ಸಾಯುತ್ತೀರಿ, ವ್ಯೂವ್ಸ್‌ಗಾಗಿ ಇಂತಹ ಕೆಲಸಗಳನ್ನು ಮಾಡಬೇಡಿ" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಅವರ ಸ್ಟಂಟ್‍ನಲ್ಲಿ ಒಳಗೊಂಡಿರುವ ಅಪಾಯವನ್ನು ಎತ್ತಿ ತೋರಿಸಿದ್ದಾರೆ. ಕೆಲವು ನೆಟ್ಟಿಗರು ಅವಳ ಓಟ ಮತ್ತು ಫಿಟ್‌ನೆಸ್‌ ಅನ್ನು ಹೊಗಳಿದ್ದಾರೆ. ಅವರು ಇದನ್ನು "ಉತ್ತಮ ಪ್ರಯತ್ನ" ಎಂದು ಕರೆದಿದ್ದಾರೆ ಮತ್ತು ಮತ್ತೆ ಅಂತಹ ಕೃತ್ಯಗಳಲ್ಲಿ ತೊಡಗದಂತೆ ಕೇಳಿಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ:‌Viral Video: ಬೀದಿ ಶ್ವಾನವನ್ನು ಕಟ್ಟಿಹಾಕಿ ಹೊಡೆದು ಕೊಂದ ವ್ಯಕ್ತಿ; ಹೃದಯ ವಿದ್ರಾವಕ ವಿಡಿಯೊ ವೈರಲ್

ಇದೇ ರೀತಿಯಲ್ಲಿ ರೈಲಿನೊಂದಿಗೆ ಅಪಾಯಕಾರಿ ಸ್ಟಂಟ್‍ ಮಾಡಿದ ಘಟನೆ ನಡೆದಿದ್ದು ಇದು ಮೊದಲಲ್ಲ. ಈ ಹಿಂದೆ ಇನ್‌ಸ್ಟಾಗ್ರಾಮ್‌ ರೀಲ್‍ಗಾಗಿ ಅಪಾಯಕಾರಿ ಸ್ಟಂಟ್ ಮಾಡುವಾಗ ಚಲಿಸುತ್ತಿದ್ದ ರೈಲಿನಿಂದ ಜಾರಿ ಬಿದ್ದು ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ಪ್ರಾಣಾಪಾಯದಿಂದ ಪಾರಾಗಿದ್ದನು. ಕಾಸ್ಗಂಜ್-ಕಾನ್ಪುರ ರೈಲಿನಲ್ಲಿ ಈ ಘಟನೆ ನಡೆದಿತ್ತು. ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಈ ಘಟನೆಯ ವಿಡಿಯೊ ವೈರಲ್ ಆಗಿತ್ತು. ವಿಡಿಯೊ ನೋಡಿದ ಅನೇಕ ನೆಟ್ಟಿಗರು ವ್ಯಕ್ತಿಯ ಅಜಾಗರೂಕ ನಡವಳಿಕೆಯನ್ನು ಟೀಕಿಸಿದ್ದರು ಮತ್ತು ಅಂತಹ ಮಾರಣಾಂತಿಕ ಸಾಹಸಗಳ ವಿರುದ್ಧ ಎಚ್ಚರಿಕೆ ನೀಡಿದ್ದರು.