ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Fact Check: ಬಿಜೆಪಿ ಗೆಲುವಿನ ಬಳಿಕ ಪಶ್ಚಿಮ ಬಂಗಾಳದಿಂದ ಪಲಾಯನ ಮಾಡುತ್ತಿರುವ ವಲಸಿಗರು ! ವೈರಲ್‌ ವಿಡಿಯೊದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ವಲಸಿಗರು ಬಾಂಗ್ಲಾದೇಶಕ್ಕೆ ಪಲಾಯನ ಮಾಡುತ್ತಿದ್ದಾರೆ ಎನ್ನುವ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದರ ಸತ್ಯಾಸತ್ಯತೆ ಪರಿಶೀಲನೆ ವೇಳೆ ಇದೊಂದು ಸುಳ್ಳು ವರದಿ ಎನ್ನುವುದು ದೃಢಪಟ್ಟಿದೆ. ಹಾಗಾದರೆ ಈ ವಿಡಿಯೋದಲ್ಲಿ ಏನಿದೆ, ಇದರ ಅಸಲಿಯತ್ತೇನು ಎಂಬುದರ ಕುರಿತು ಇಲ್ಲಿದೆ ಮಾಹಿತಿ.

ವಿಡಿಯೋ ವೈರಲ್: ಪಶ್ಚಿಮ ಬಂಗಾಳದಿಂದ ವಲಸಿಗರು ಪಲಾಯನ

ಸಂಗ್ರಹ ಚಿತ್ರ -

ನವದೆಹಲಿ: ಬಿಜೆಪಿ (BJP) ಗೆಲುವಿನ ಬಳಿಕ ಪಶ್ಚಿಮ ಬಂಗಾಳದಲ್ಲಿದ್ದ (west bengal) ವಲಸಿಗರು (migrants) ಬಾಂಗ್ಲಾದೇಶಕ್ಕೆ (Bangladesh) ಪಲಾಯನ ಮಾಡುತ್ತಿದ್ದಾರೆ ಎನ್ನುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral video) ಆಗಿದೆ. ಇದರ ಸತ್ಯ ಪರಿಶೀಲನೆ ವೇಳೆ ಇದು ಹಳೆಯ ವಿಡಿಯೋ ಎಂಬುದು ಮಾಧ್ಯಮವೊಂದು ನಡೆಸಿರುವ ತನಿಖಾ ವರದಿಯಲ್ಲಿ ಬೆಳಕಿಗೆ ಬಂದಿದೆ. ಹಳೆಯ ವಿಡಿಯೋವನ್ನು ಈಗಿನ ವಿಡಿಯೋ ಎಂದು ಹೇಳಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡಲಾಗಿದೆ. ಇದಕ್ಕೆ ಸಾಕಷ್ಟು ಮಂದಿ ನೆಟ್ಟಿಗರು ಕಾಮೆಂಟ್ ಕೂಡ ಮಾಡಿದ್ದಾರೆ.

ಪಶ್ಚಿಮ ಬಂಗಾಳದ ವಿಧಾನ ಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಭರ್ಜರಿ ಗೆಲುವು ದಾಖಲಿಸಿತ್ತು. ಇದರ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಇದರಲ್ಲಿ ಅಕ್ರಮ ವಲಸಿಗರು ಬಾಂಗ್ಲಾದೇಶಕ್ಕೆ ಪಲಾಯನ ಮಾಡುತ್ತಿರುವುದನ್ನು ತೋರಿಸಲಾಗಿದೆ.

ಸತತ 7 ಗಂಟೆಗಳ ಕಾರ್ಯಾಚರಣೆ: ಕಲ್ಲುಗಳ ನಡುವೆ ಸಿಲುಕಿದ್ದ ಬಾಲಕನ ರಕ್ಷಣೆ

ಈ ವಿಡಿಯೋದಲ್ಲಿ ನೂರಾರು ಮಂದಿ ಚೀಲಗಳನ್ನು ಹಿಡಿದುಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗುವುದನ್ನು ತೋರಿಸಲಾಗಿದೆ. ಇದರಲ್ಲಿ ಕೆಲವರು ಕುರ್ತಾ, ಪೈಜಾಮ ಧರಿಸಿ ತಲೆಗೆ ಟೋಪಿ ಹಾಕಿಕೊಂಡಿದ್ದರು. ಇದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದು, ಇದರಲ್ಲಿ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿಯ ಗೆದ್ದ ಬಳಿಕ ಮುಸ್ಲಿಂ ಸಮುದಾಯದ ವಲಸಿಗರು ಈಗ ತಾಯ್ನಾಡಿಗೆ ಮರಳುತ್ತಿದ್ದಾರೆ ಎಂದು ಬರೆಯಲಾಗಿದೆ. ಈ ವಿಡಿಯೋ ಹೂಗ್ಲಿಯ ಪುನಿಯನ್‌ನದ್ದು ಎಂದು ಹೇಳಲಾಗಿದೆ.



ಒಂದು ವಿಡಿಯೋ ಪಶ್ಚಿಮ ಬಂಗಾಳದ ಹೂಗ್ಲಿಯ ದದ್‌ಪುರದ ಪುಯಿನಾನ್‌ನಲ್ಲಿ ನಡೆದ ವಿಶ್ವದ ಅತಿದೊಡ್ಡ ಇಸ್ಲಾಮಿಕ್ ಸಭೆಗಳಲ್ಲಿ ಒಂದಾಗಿರುವ ಬಿಸ್ವಾ ಇಜ್ತೆಮಾನದ್ದು ಎನ್ನಲಾಗಿದೆ. ವಿಶ್ವದಾದ್ಯಂತ ವಾಸವಾಗಿರುವ 5 ರಿಂದ 10 ಮಿಲಿಯನ್ ಜನರು ಪಾಲ್ಗೊಳ್ಳುತ್ತಾರೆ. ಈ ವಿಡಿಯೋವನ್ನು ಜನವರಿ 3ರಂದು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿತ್ತು. ಬಿಜೆಪಿ ಗೆಲುವಿನ ಬಳಿಕ ಇದನ್ನೇ ಪಶ್ಚಿಮ ಬಂಗಾಳದಿಂದ ಪಲಾಯನ ಮಾಡುವ ಬಾಂಗ್ಲಾದೇಶಿ ವಲಸಿಗರು ಎಂದು ಹೇಳಿ ವಿಡಿಯೋ ಹಂಚಿಕೊಳ್ಳಲಾಗಿದೆ.

ವ್ಯಾಪಕವಾಗಿ ಹಂಚಿಕೊಂಡಿರುವ ಇನ್ನೊಂದು ವಿಡಿಯೋದಲ್ಲಿ ಪಶ್ಚಿಮ ಬಂಗಾಳದ ರೈಲ್ವೆ ನಿಲ್ದಾಣಗಳಲ್ಲಿ ಜನಸಂದಣಿ ಇರುವುದನ್ನು ತೋರಿಸಲಾಗಿದೆ. ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕ ವಲಸಿಗರು ಬಾಂಗ್ಲಾದೇಶಕ್ಕೆ ಪಲಾಯನ ಮಾಡಲು ಪ್ರಾರಂಭಿಸಿದರು ಎಂದು ಹೇಳಲಾಗಿದೆ.



ಇದು 2025ರ ನವೆಂಬರ್ 30ರಂದು ಲಾಂಚ್ ಕ್ಯಾಪ್ಚರ್ ಎಂಬ ಬಾಂಗ್ಲಾದೇಶದ ಫೇಸ್‌ಬುಕ್ ಖಾತೆಯಿಂದ ಹಂಚಿಕೊಳ್ಳಲಾಗಿತ್ತು. ಚಾರ್ಮೊನೈ ಮಹ್ಫಿಲ್ ನಂತರ ನೂರಾರು ಆರಾಧಕರು ದೋಣಿ ಹತ್ತುತ್ತಿರುವುದಾಗಿ ಹೇಳಲಾಗಿದೆ. ಮತ್ತೊಂದು ವಿಡಿಯೋದಲ್ಲಿ ಬಾಂಗ್ಲಾದೇಶದ ಚಾರ್ಮೊನೈನಲ್ಲಿರುವ ಪ್ರಮುಖ ಇಸ್ಲಾಮಿಕ್ ಶಿಕ್ಷಣ ಸಂಸ್ಥೆಯಾದ ರಶೀದಿಯಾ ಕಾಮಿಲ್ ಮದರಸಾ ಬಳಿಯ ಅಲ್-ಕರೀಮ್ ಜಾಮ್ ಮಸೀದಿಯ ಸುತ್ತಮುತ್ತಲಿನ ಪ್ರದೇಶವನ್ನು ತೋರಿಸಲಾಗಿದೆ.

ಐಪಿಎಲ್‌ನಲ್ಲಿ ಮತ್ತೆ ವಿವಾದದ ಹೊಗೆ; ವಿಮಾನದಲ್ಲಿ ದಮ್ಮು ಎಳೆದ ಚಾಹಲ್

ಬಾಂಗ್ಲಾದೇಶದ ಪ್ರಸಿದ್ಧ ಮತ್ತು ಜನಪ್ರಿಯ ಸ್ಥಳವಾಗಿರುವ ಚಾರ್ಮೊನೈ ದರ್ಬಾರ್ ಶರೀಫ್ ಅಲ್ಲಿ ನಡೆಯುವ ಚಾರ್ಮೊನೈ ಮಹ್ಫಿಲ್‌ನಲ್ಲಿ ಪ್ರತಿ ವರ್ಷ ಸಾವಿರಾರು ಭಕ್ತರು ಭಾಗವಹಿಸುತ್ತಾರೆ. ಆದ್ದರಿಂದ ಈ ವಿಡಿಯೋ ಭಾರತದ್ದಲ್ಲ. ಬಾಂಗ್ಲಾದೇಶದ್ದು ಎನ್ನಲಾಗಿದೆ.