ನಾಪತ್ತೆಯಾದ ನಾಯಿ ಬರೋಬ್ಬರಿ 5 ವರ್ಷದ ಬಳಿಕ ಪತ್ತೆ: ಮಹಿಳೆಯ ಭಾವನಾತ್ಮಕ ವಿಡಿಯೊ ವೈರಲ್
ಕ್ಯಾಲಿಫೋರ್ನಿಯಾದಲ್ಲಿ 2021ರಲ್ಲಿ ಕಳೆದುಹೋದ ನಾಯಿ 2025ರಲ್ಲಿ ಇದ್ದಕ್ಕಿದ್ದಂತೆ ಪತ್ತೆಯಾದ ಘಟನೆ ಡೆಟ್ರಾಯಿಟ್‌ನಲ್ಲಿ ನಡೆದಿದೆ. ಚೋಕೊ ಎಂಬ ಹೆಸರಿನ ನಾಯಿಯು ಬರೋಬ್ಬರಿ 5 ವರ್ಷದ ಬಳಿಕ ಪವಾಡ ಸದೃಶ್ಯ ಎಂಬಂತೆ ಪತ್ತೆಯಾಗಿದೆ. ನಾಯಿಗಾಗಿ ನಾನಾ ಕಡೆ ಹುಡುಕಾಟ ನಡೆಸಿದರೂ ಪತ್ತೆಯಾಗದಿದ್ದಾಗ ಮೈಕ್ರೋಚಿಪ್ ಸಹಾಯದಿಂದ ಅದರ ಇರುವಿಕೆ ಕಂಡುಬಂತು. ವಿಮಾನ ನಿಲ್ದಾಣದಲ್ಲಿ ಚೋಕೋ ತನ್ನ ಮಾಲಕಿಯ ಕೈ ಸೇರಿದ್ದು ಈ ಕುರಿತಾದ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ಮಾಲಕಿಯೊಂದಿಗೆ 5 ವರ್ಷದ ಬಳಿಕ ಪತ್ತೆಯಾದ ಶ್ವಾನ -
ವಾಷಿಂಗ್ಟನ್, ಡಿ. 10: ಇತ್ತೀಚೆಗೆ ಶ್ವಾನ ಸಾಕುವುದನ್ನು ಬಹುತೇಕರು ಇಷ್ಟಪಡುತ್ತಾರೆ. ತಮ್ಮ ಪ್ರೀತಿಯ ನಾಯಿಯನ್ನು ಮನೆ ಮಕ್ಕಳಂತೆ ಸಾಕುತ್ತಾರೆ. ಶಾಂಪಿಗ್, ವಾಕಿಂಗ್, ಪ್ರವಾಸಕ್ಕೆಂದು ಹೋದಾಗ ನಾಯಿಯನ್ನು ಕರೆದುಕೊಂಡು ಹೋದ ಸಂದರ್ಭದಲ್ಲಿ ಅವು ತಪ್ಪಿಸಿಕೊಂಡು ಹೋಗುವುದೂ ಇದೆ. 2021ರಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಕಳೆದುಹೋದ ನಾಯಿ 2025ರಲ್ಲಿ ಇದ್ದಕ್ಕಿದ್ದಂತೆ ಪತ್ತೆಯಾದ ಘಟನೆ ಡೆಟ್ರಾಯಿಟ್‌ನಲ್ಲಿ ನಡೆದಿದೆ. ಚೋಕೊ (Choco) ಎಂಬ ಹೆಸರಿನ ನಾಯಿಯು ಬರೋಬ್ಬರಿ 5 ವರ್ಷದ ಬಳಿಕ ಪವಾಡ ಸದೃಶ್ಯ ಎಂಬಂತೆ ಪತ್ತೆಯಾಗಿದೆ. ನಾಯಿಗಾಗಿ ನಾನಾ ಕಡೆ ಹುಡುಕಾಟ ನಡೆಸಿದರೂ ಅದು ಪತ್ತೆಯಾಗದಿದ್ದಾಗ ಮೈಕ್ರೋಚಿಪ್ ಸಹಾಯದಿಂದ ಅದನ್ನು ಪತ್ತೆ ಹಚ್ಚಲಾಗಿದೆ. ವಿಮಾನ ನಿಲ್ದಾಣದಲ್ಲಿ ಚೋಕೋ ತನ್ನ ಮಾಲಕಿಯ ಕೈ ಸೇರಿದ್ದು ಈ ಕುರಿತಾದ ವಿಡಿಯೊ ವೈರಲ್ (Viral Video) ಆಗಿದೆ.
ಪೆಟ್ರೀಷಿಯಾ 2016ರಲ್ಲಿ ಚೋಕೊ ಎಂಬ ಹೆಸರಿನ ಕಂದು ಬಣ್ಣದ ಗಂಡು ನಾಯಿಯನ್ನು ಕ್ಯಾಲಿಫೋರ್ನಿಯಾದ ಆಂಟೆಲೋಪ್‌ನಿಂದ ದತ್ತು ಪಡೆದಿದ್ದರು. ಅದನ್ನು ಅವರ ಕುಟುಂಬದಲ್ಲಿ ಬಹಳ ಪ್ರೀತಿಯಿಂದ ಮಗುವಿನಂತೆ ಸಾಕಲಾಗುತ್ತಿತ್ತು. 2021ರ ಮೇಯಲ್ಲಿ ಚೋಕೊ ಇದ್ದಕ್ಕಿದ್ದಂತೆ ಕಣ್ಮರೆಯಾಯಿತು. ಪೆಟ್ರೀಷಿಯಾ ಅದಕ್ಕಾಗಿ ಎಲ್ಲ ಕಡೆ ಹುಡುಕಾಟ ನಡೆಸಿದರೂ ಪತ್ತೆಯಾಗಲೇ ಇಲ್ಲ.ಚೋಕೊದ ಬೆಲ್ಟ್‌ನಲ್ಲಿ ಮೈಕ್ರೋಚಿಪ್ ಅಳವಡಿಸಿದ್ದ ಕಾರಣ ಎಂದಾದರು ಒಂದು ದಿನ ಅದು ತನ್ನ ಕೈ ಸೇರುತ್ತದೆ ಎಂಬ ಭರವಸೆ ಪೆಟ್ರೀಷಿಯಾ ಅವರಲ್ಲಿತ್ತು. ಸುಮಾರು ಐದು ವರ್ಷಗಳಾಗಿದ್ದರೂ ಶ್ವಾನದ ಸುಳಿವೇ ಸಿಕ್ಕಿರಲಿಲ್ಲ. ಕಾಣೆಯಾದ ಸುಮಾರು 1,645 ದಿನಗಳ ನಂತರ, ಚೋಕೊ ಸುಳಿವು ಮೈಕ್ರೋಚಿಪ್‌ನಲ್ಲಿ ಪತ್ತೆಯಾಗಿದೆ. ಆದರೆ ಅದು ಕ್ಯಾಲಿಫೋರ್ನಿಯಾ ಸುತ್ತಮುತ್ತ ಇರಲಿಲ್ಲ. ಬದಲಾಗಿ ದೂರದ ಡೆಟ್ರಾಯಿಟ್‌ನಲ್ಲಿತ್ತು.
ವಿಡಿಯೊ ನೋಡಿ:
ಚೋಕೊನನ್ನು ಮರಳಿ ಪಡೆಯುವುದು ಹೇಗೆಂದು ತಿಳಿಯದೆ, ಪೆಟ್ರೀಷಿಯಾ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ನೆಟ್ಟಿಗರಲ್ಲಿ ಸಲಹೆ ಕೇಳಿದರು. ಆಗ ಕ್ಯಾಲಿಫೋರ್ನಿಯಾ ಮೂಲದ ಪ್ರಾಣಿ ಕಲ್ಯಾಣ ಸಂಸ್ಥೆ ಹೆಲ್ಪಿಂಗ್ ಪಾವ್ಸ್ ಆ್ಯಂಡ್ ಕ್ಲಾಸ್ ಸಹಾಯ ಮಾಡುವ ಭರವಸೆ ನೀಡಿತು. ಈ ಸಂಸ್ಥೆಯು ವಿವಿಧ ಆಯಾಮದಲ್ಲಿ ಶ್ವಾನಕ್ಕಾಗಿ ಹುಡುಕಾಟ ನಡೆಸಿತು. ಈ ವೇಳೆ ದಾನಿಯೊಬ್ಬರು ಚೊಕೊವನ್ನು ಸಾಕುತ್ತಿದ್ದದ್ದು ಗೊತ್ತಾಯಿತು.
ಸರ್ಕಾರಿ ಕಚೇರಿ ಎದುರಲ್ಲಿ "ಲಂಚ ಬೇಡ" ಬೋರ್ಡ್ ಹಾಕಿದ ದಕ್ಷ ಅಧಿಕಾರಿ
2025ರ ನವೆಂಬರ್ ಕೊನೆಯಲ್ಲಿ ಮಿಚಿಗನ್‌ನ ಲಿಂಕನ್ ಪಾರ್ಕ್‌ನಲ್ಲಿರುವ ಸಿಬ್ಬಂದಿಯೊಬ್ಬರು ತಮ್ಮ ಮನೆಯ ಬೇಲಿಗೆ ಚೋಕೊವನ್ನು ಕಟ್ಟಿ ಹಾಕಿದ್ದರು. ನಾಯಿಯನ್ನು ಕಂಡಿದ್ದ ಸಂಸ್ಥೆಯವರು ಅದನ್ನು ಇಷ್ಟು ದಿನ ಸಾಕಿದವರನ್ನು ಭೇಟಿಯಾಗಿದ್ದಾರೆ. ಸಂಸ್ಥೆಯವರು ಆ ವ್ಯಕ್ತಿಗೆ ಎಲ್ಲ ವಿಚಾರ ಮನವರಿಕೆ ಮಾಡಿ ಚೋಕೊವನ್ನು ವಿಮಾನ ನಿಲ್ದಾಣಕ್ಕೆ ಕರೆ ತಂದಿದ್ದಾರೆ.
ವಿಮಾನದಲ್ಲಿ ಸದೀರ್ಘ ಪ್ರಯಾಣ ಕೈಗೊಂಡ ನಂತರ ಚೋಕೊ ಅಂತಿಮವಾಗಿ ಡಿಸೆಂಬರ್ 3ರಂದು ಕ್ಯಾಲಿಫೋರ್ನಿಯಾ ತಲುಪಿದೆ. ಅದು ತನ್ನ ಮಾಲಕಿಯ ಕೈ ಸೇರಿರುವ ಭಾವನಾತ್ಮಕ ದೃಶ್ಯ ಸದ್ಯ ನೆಟ್ಟಿಗರ ಗಮನ ಸೆಳೆಯುತ್ತಿದೆ.