ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಟ್ರಾಫಿಕ್ ದಂಡ ತಪ್ಪಿಸಲು ಪ್ಯಾಂಟ್ ಬೆಲ್ಟ್ ಅನ್ನೇ ಸೀಟ್ ಬೆಲ್ಟ್ ಆಗಿ ಬಳಸಿದ ಪಾಕಿಸ್ತಾನದ ಚಾಲಕ!

Viral Video: ಇಲ್ಲೊಬ್ಬ ಟ್ರಾಫಿಕ್ ದಂಡದಿಂದ ತಪ್ಪಿಸಲು ಮಾಡಿರುವ ಪ್ಲ್ಯಾನ್‌ ಎಲ್ಲರನ್ನು ದಂಗಾಗಿಸಿದೆ. ಪಾಕಿಸ್ತಾನದ ವ್ಯಕ್ತಿಯೊಬ್ಬ ಟ್ರಾಫಿಕ್ ದಂಡದಿಂದ ತಪ್ಪಿಸಿಕೊಳ್ಳಲು ತನ್ನ ಪ್ಯಾಂಟ್ ಬೆಲ್ಟ್ ಅನ್ನೇ ಸೀಟ್ ಬೆಲ್ಟ್ ಆಗಿ ಬಳಸಿದ್ದಾನೆ.‌ ಈತನ ಉಪಾಯ ನೋಡಿ ನೆಟ್ಟಿಗರು ಶಾಕ್ ಆಗಿದ್ದು, ವಿಡಿಯೊ ವೈರಲ್ ಆಗಿದೆ.

ಪ್ಯಾಂಟ್ ಬೆಲ್ಟ್ ಅನ್ನು ಸೀಟ್ ಬೆಲ್ಟ್‌ನಂತೆ ಧರಿಸಿದ ವ್ಯಕ್ತಿ!

ಪ್ಯಾಂಟ್ ಬೆಲ್ಟ್ ಅನ್ನು ಸೀಟ್ ಬೆಲ್ಟ್ ಆಗಿ ಧರಿಸಿದ ವ್ಯಕ್ತಿ -

Profile
Pushpa Kumari Feb 16, 2026 7:35 PM

ಇಸ್ಲಾಮಾಬಾದ್, ಫೆ. 16: ಇತ್ತೀಚೆಗೆ ಟ್ರಾಫಿಕ್ ನಿಯಮಗಳನ್ಮು ಕಟ್ಟುನಿಟ್ಟಾಗಿ ಜಾರಿಗೆ ತಂದರೂ ಪಾಲನೆ ಮಾಡಲಾಗುತ್ತಿಲ್ಲ. ಸಿಗ್ನಲ್ ಜಂಪ್, ಪರವಾನಗಿ ಇಲ್ಲದಿರುವುದು, ಅತಿ ವೇಗ, ಮದ್ಯಪಾನ ಮಾಡಿ ಚಾಲನೆ ಮಾಡುವವರ ವಿರುದ್ಧ ದಂಡ ಹಾಗೂ ವಾಹನ ಜಪ್ತಿಯಂತಹ ಕಠಿಣ ಕ್ರಮ ಜಾರಿಗೊಳಿಸಲಾಗುತ್ತದೆ. ಆದರೆ ಇಲ್ಲೊಬ್ಬ ಟ್ರಾಫಿಕ್ ದಂಡದಿಂದ ತಪ್ಪಿಸಲು ಮಾಡಿರುವ ಉಪಾಯ ಎಲ್ಲರನ್ನು ದಂಗಾಗಿಸಿದೆ. ಪಾಕಿಸ್ತಾನದ ವ್ಯಕ್ತಿಯೊಬ್ಬ ಟ್ರಾಫಿಕ್ ದಂಡದಿಂದ ತಪ್ಪಿಸಿಕೊಳ್ಳಲು ತನ್ನ ಪ್ಯಾಂಟ್ ಬೆಲ್ಟ್ ಅನ್ನೇ ಸೀಟ್ ಬೆಲ್ಟ್ ಆಗಿ ಬಳಸಿದ್ದಾನೆ.‌ ಈತನ ಉಪಾಯ ನೋಡಿ ನೆಟ್ಟಿಗರು ಶಾಕ್ ಆಗಿದ್ದು, ವಿಡಿಯೊ ವೈರಲ್ ಆಗಿದೆ.

ದಂಡ ತಪ್ಪಿಸುವ ಸಲುವಾಗಿ ವ್ಯಕ್ತಿಯೊಬ್ಬ ಮುರಿದ ಕಾರ್ ಸೀಟ್ ಬೆಲ್ಟ್‌ಗೆ ಬದಲಾಗಿ ತನ್ನ ಪ್ಯಾಂಟ್ ಬೆಲ್ಟ್ ಬಳಿಸಿದ್ದಾನೆ. ಪಾಕಿಸ್ತಾನದ ರಸ್ತೆಯೊಂದರಲ್ಲಿ ಈ ಘಟನೆ ನಡೆದಿದೆ. ಚಾಲಕನ ಸ್ನೇಹಿತನು ಸೀಟ್ ಬೆಲ್ಟ್ ಹಾಕಿಕೊಳ್ಳಿ, ಇಲ್ಲದಿದ್ದರೆ ಪೊಲೀಸರು ಭಾರಿ ದಂಡ ವಿಧಿಸುತ್ತಾರೆ ಎಂದು ಎಚ್ಚರಿಕೆ ನೀಡುತ್ತಾನೆ. ಆಗ ಆ ಚಾಲಕ ನಗುತ್ತ ನಾನು ಈಗಾಗಲೇ ಬೆಲ್ಟ್ ಹಾಕಿಕೊಂಡಿದ್ದೇನೆ ಎಂದು ಹೇಳಿದ್ದಾನೆ.

ವಿಡಿಯೋ ನೋಡಿ:

ಆದಾಗ್ಯೂ, ಅದನ್ನು ತೋರಿಸಲು ಆತನ ಸ್ನೇಹಿತ ಕೇಳಿದಾಗ, ಪರಿಸ್ಥಿತಿ ಅನಿರೀಕ್ಷಿತ ತಿರುವು ಪಡೆಯಿತು. ಚಾಲಕ ಕಾರ್ ಸೀಟ್ ಬೆಲ್ಟ್ ಬದಲಿಗೆ ತನ್ನ ಪ್ಯಾಂಟ್ ಬೆಲ್ಟ್ ಅನ್ನು ಎದೆಯ ಮೇಲೆ ಕಟ್ಟಿಕೊಂಡಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಆತ ಕಾರ್ ಸೀಟ್ ಬೆಲ್ಟ್ ಹಾಳಾಗಿದ್ದ ಕಾರಣ ತನ್ನ ಪ್ಯಾಂಟ್‌ನಿಂದ ಬೆಲ್ಟ್ ಕಿತ್ತು, ಅದನ್ನು ಎದೆಯ ಮೇಲೆ ಅಡ್ಡಲಾಗಿ ಕಟ್ಟಿಕೊಂಡಿದ್ದ.

ರೀಲ್ಸ್‌ಗಾಗಿ ಇದೆಂಥ ಹುಚ್ಚಾಟ? ಚಲಿಸುವ ಟ್ರಕ್‌ ಕೆಳಗೆ ಬೈಕ್‌ ಓಡಿಸಿದ ಯುವಕ

ತನ್ನ ವಾಹನದಲ್ಲಿದ್ದ ಮೂಲ ಸೀಟ್ ಬೆಲ್ಟ್ ಕೆಲಸ ಮಾಡುತ್ತಿಲ್ಲ ಎಂದು ವರದಿಯಾದ ಕಾರಣ, ದಂಡದಿಂದ ತಪ್ಪಿಸಿಕೊಳ್ಳಲು ಅವನು ತನ್ನದೇ ಆದ ಬೆಲ್ಟ್ ಅನ್ನು ತೆಗೆದು ಅಡ್ಡಲಾಗಿ ಧರಿಸಿದ್ದಾನೆ. ಇನ್ನೂ ಅಚ್ಚರಿಯ ಸಂಗತಿ ಏನು ಅಂದರೆ ಕ್ಯಾಮರಾವನ್ನು ನೋಡಿ ನಗುತ್ತಾ, ಪಾಕಿಸ್ತಾನವೇ ಇಂತಹ ಉಪಾಯಗಳ ಮೇಲೆ ನಡೆಯುತ್ತಿರುವಾಗ ನಾನು ನಡೆಸಬಾರದೇ? ಎಂದು ಪ್ರಶ್ನಿಸಿದ್ದಾನೆ.

ಈ ವಿಡಿಯೋ 'ಓನ್ಲಿ ಇನ್ ಪಾಕಿಸ್ತಾನ್' ಎಂಬ ಕ್ಯಾಪ್ಶನ್‌ನೊಂದಿಗೆ ವೈರಲ್ ಆಗಿದೆ. ಹಲವು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಈ ವಿಡಿಯೊ ಕಾಣಿಸಿಕೊಂಡಿದ್ದು, ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವು ವೀಕ್ಷಕರು ಈ ಕೃತ್ಯವನ್ನು ತಮಾಷೆಯೆಂದು ಕರೆದರೆ, ಹಲವರು ಇಂತಹ ದರಶ್ಯ ಪಾಕಿಸ್ತಾನದಲ್ಲಿ ಮಾತ್ರ ಕಂಡು ಬರುತ್ತದೆ ಎಂದಿದ್ದಾರೆ. ಅನೇಕರು ಇದನ್ನು ಬೇಜವಾಬ್ದಾರಿ ಮತ್ತು ಅಸುರಕ್ಷಿತ ನಡೆ ಎಂದು ಟೀಕಿಸಿದ್ದಾರೆ.