''ಗಣತಿಯಲ್ಲಿ ನನ್ನ ಹೆಸರೂ ಸೇರಿಸಿ'': ಸಭಾಂಗಣಕ್ಕೆ ಎಂಟ್ರಿ ಕೊಟ್ಟು ಸೆನ್ಸಸ್ ತರಬೇತಿ ಆಲಿಸಿದ ಮಂಗಣ್ಣ! ವಿಡಿಯೊ ನೋಡಿ
Viral Video: ಗುಜರಾತ್‌ನಲ್ಲಿ ನಡೆದ ಜನಗಣತಿ 2026ರ ಸಿದ್ಧತೆಗಳಿಗಾಗಿ ತರಬೇತಿಯೊಂದನ್ನು ಆಯೋಜಿಸಲಾಗಿತ್ತು. ಈ ಕಾರ್ಯಾಗಾರದ ಅವಧಿಯಲ್ಲಿ ಮಂಗವೊಂದು ಆಕಸ್ಮಿಕವಾಗಿ ಸಭಾಂಗಣಕ್ಕೆ ಎಂಟ್ರಿ ಕೊಟ್ಟಿದೆ. ತರಬೇತಿಯಲ್ಲಿ ಭಾಗವಹಿಸಿದ ಶಿಕ್ಷಕರು ಹಾಗೂ ಅಧಿಕಾರಿಗಳು ಇದ್ಯಾರಪ್ಪಾ ಹೊಸ ಜನ ಎಂದು ನಿಬ್ಬೆರಗಾಗಿ ನೋಡಿದ್ದಾರೆ.
ಗುಜರಾತ್‌ನಲ್ಲಿ ನಡೆದ ಜನಗಣತಿ ಕಾರ್ಯಾಗಾರಕ್ಕೆ ಎಂಟ್ರಿ ಕೊಟ್ಟ ಕೋತಿ -
ಗಾಂಧಿನಗರ, ಮೇ 22: ಜನಗಣತಿ ಅಂದಾಗ ಮನೆಯಲ್ಲಿ ಕುಟುಂಬದ ಲೆಕ್ಕ, ಮಾಹಿತಿಯನ್ನು ತೆಗೆದುಕೊಳ್ಳುವುದು ಸಾಮಾನ್ಯ. ಆದರೆ ತಮಾಷೆ ಎಂದರೆ ಇಲ್ಲೊಂದು ಕೋತಿ ಜನಗಣತಿಯ ತರಬೇತಿ ನಡೆಯುತ್ತಿದ್ದ ಹಾಲ್‌ಗೆ ಎಂಟ್ರಿ ಕೊಟ್ಟು ತನ್ನನ್ನೂ ಸೇರಿಸಿ ಎಂಬಂತೆ ಕೂತಿದೆ. ಸದ್ಯ ಈ ದೃಶ್ಯ ಭಾರಿ ಸದ್ದು ಮಾಡುತ್ತಿದೆ. ಶಿಕ್ಷಕರು ಹಾಗೂ ಅಧಿಕಾರಿಗಳು ನೆರೆದಿದ್ದ ತರಬೇತಿ ಕೇಂದ್ರದಲ್ಲಿ ಒಮ್ಮೆಲೇ ಅತಿಥಿಯಾಗಿ ಎಂಟ್ರಿಕೊಟ್ಟ ಕೋತಿ ನಗುವಿನ ಅಲೆಯನ್ನೇ ಎಬ್ಬಿಸಿದೆ. ಅಲ್ಲಿ ನೆರೆದಿದ್ದ ಜನರು ಕೋತಿಯ ಕುಚೆಷ್ಟೇ ಕಂಡು ಬಿದ್ದು ಬಿದ್ದು (Viral News) ನಕ್ಕಿದ್ದಾರೆ.
ಗುಜರಾತ್‌ನಲ್ಲಿ ನಡೆದ ಜನಗಣತಿ 2026ರ ಸಿದ್ಧತೆಗಾಗಿ ತರಬೇತಿಯೊಂದನ್ನು ಆಯೋಜಿಸಲಾಗಿತ್ತು. ಈ ಕಾರ್ಯಾಗಾರದ ಅವಧಿಯಲ್ಲಿ ಮಂಗವೊಂದು ಆಕಸ್ಮಿಕವಾಗಿ ಸಭಾಂಗಣಕ್ಕೆ ಆಗಮಿಸಿದೆ. ಇದನ್ನು ತರಬೇತಿ ಪಡೆಯುತ್ತಿದ್ದ ಶಿಕ್ಷಕರು ಹಾಗೂ ಅಧಿಕಾರಿಗಳು ಾಚ್ಚರಿಯಿಂದ ನೋಡಿದ್ದಾರೆ.
ವಿಡಿಯೊ ನೋಡಿ:
Watch | Monkey Disrupts Govt Staff Training Workshop for Census 2026 in Gujarat pic.twitter.com/dlKz1gcxe0
— DeshGujarat (@DeshGujarat) May 22, 2026
ಗಂಭೀರವಾಗಿ ತರಬೇತಿ ಪಡೆಯುತ್ತಿದ್ದ ಶಿಕ್ಷಕರ ಮಧ್ಯೆ ಕೋತಿಯೊಂದು ಅತ್ಯಂತ ಶಾಂತವಾಗಿ ಪ್ರವೇಶಿಸಿದೆ. ಕುರ್ಚಿಯ ಹೆಡ್‌ರೆಸ್ಟ್ ಮೇಲೆ ಕೋತಿ ಸುಮ್ಮನೆ ಕುಳಿತಿರುವುದನ್ನು ಕಾಣಬಹುದು. ಆರಾಮವಾಗಿ ಕುರ್ಚಿಯಲ್ಲಿ ಕುತು ತರಬೇತಿ ತನಗೂ ಮುಖ್ಯ ಎಂಬಂತೆ ಆಲಿಸುತ್ತಾ ಕೂತಿದೆ. ಕೋತಿಯನ್ನು ಕೆರಳಿಸಬಾರದು ಎಂಬ ಕಾರಣಕ್ಕೆ ಅಲ್ಲಿದ್ದ ಮಹಿಳೆ ಯಾವುದೇ ಚಲನವಲನವಿಲ್ಲದೆ ಸ್ತಬ್ಧರಾಗಿ ಕುಳಿತಿದ್ದರು.
ಪಾಕಿಸ್ತಾನಿ ಮದುವೆಯಲ್ಲಿ ಧುರಂಧರ್ ಸಿನಿಮಾದ ಹವಾ; ಭರ್ಜರಿ ಸೆಪ್ಟ್ ಹಾಕಿದ ಯುವಕರು
ಹಾಲ್‌ನಲ್ಲಿ ಗಂಭೀರ ವಾತಾವರಣದ ನಡುವೆ ಮೈಕ್‌ನಲ್ಲಿ ಮಾತನಾಡುತ್ತಿದ್ದ ಅಧಿಕಾರಿಯೊಬ್ಬರು ತಮಾಷೆ ಮಾಡಿದ್ದಾರೆ. "ನಾವು ಮನೆ ಮನೆಗೆ ಹೋಗಿ ಜನಗಣತಿ ಮಾಡುವಾಗ ಇಂತಹ ಪ್ರಾಣಿಗಳು ಮಧ್ಯೆ ಬರಬಹುದುʼʼ ಎಂದು ಹಾಸ್ಯ ಮಾಡಿದ್ದಾರೆ. ವಿಡಿಯೊ ವೈರಲ್ ಆಗುತ್ತಿದ್ದಂತೆ ಹಲವು ಬಳಕೆದಾರರು ಅಧಿಕಾರಿಗಳ ಶಾಂತ ಪ್ರತಿಕ್ರಿಯೆಯನ್ನು ಶ್ಲಾಘಿಸಿದ್ದಾರೆ. ಕೆಲವರು ಮಂಗ ಹಾಜರಾತಿಯನ್ನು ಗುರುತಿಸಲು ಬಂದಿರುವುದಾಗಿ ತಮಾಷೆ ಮಾಡಿದರೆ, ಜನಗಣತಿ ತರಬೇತಿಯಲ್ಲಿ ಭಾಗವಹಿಸಿಸಲು ಕೋತಿ ಪ್ರೆಸೆಂಟೇಶನ್ ಆಲಿಸುತ್ತಿದೆ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.