Viral News: ಕುರ್ಕುರೆ ಕೊಡದ ತಾಯಿ-ಸಹೋದರಿ; ಪೊಲೀಸರಿಗೆ ದೂರು ನೀಡಿದ ಬಾಲಕ
Mother refused to give Kurkure: ತಾಯಿ ಹಾಗೂ ಸಹೋದರಿಯು ಕುರ್ಕುರೆ ನೀಡದ್ದಕ್ಕೆ 8 ವರ್ಷದ ಬಾಲಕನೊಬ್ಬ ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದಾನೆ. ಚಿಪ್ಸ್ ಪ್ಯಾಕೆಟ್ ಖರೀದಿಸಲು 20 ರೂ. ಕೇಳಿದ್ದಕ್ಕೆ ತನ್ನನ್ನು ಥಳಿಸಲಾಗಿದೆ ಎಂದು ಆರೋಪಿಸಿದ್ದಾನೆ. ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯಲ್ಲಿ ಘಟನೆ ನಡೆದಿದೆ.

-

ಭೋಪಾಲ್: ಎಂಟು ವರ್ಷದ ಬಾಲಕನೊಬ್ಬ ಪೊಲೀಸ್ (Police) ತುರ್ತು ಸಂಖ್ಯೆ 112ಕ್ಕೆ ಕರೆ ಮಾಡಿ ತನ್ನ ತಾಯಿ ಮತ್ತು ಸಹೋದರಿ ಥಳಿಸಿದ್ದಾರೆ ಎಂದು ದೂರು ನೀಡಿದ್ದಾನೆ. ಚಿಪ್ಸ್ ಪ್ಯಾಕೆಟ್ ಖರೀದಿಸಲು 20 ರೂ. ಕೇಳಿದ್ದಕ್ಕೆ ತನ್ನನ್ನು ಥಳಿಸಲಾಗಿದೆ ಎಂದು ಪೊಲೀಸರಲ್ಲಿ ಆರೋಪಿಸಿರುವ ಘಟನೆ ಮಧ್ಯ ಪ್ರದೇಶದ (Madhya Pradesh) ಸಿಂಗ್ರೌಲಿ ಜಿಲ್ಲೆಯಲ್ಲಿ ನಡೆದಿದೆ. ಬಾಲಕ ದೂರು ನೀಡಿರುವ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral News) ಆಗಿದೆ.
ಬಾಲಕ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸ್ ಅಧಿಕಾರಿ ಅವನಿಗೆ ನಿಧಾನವಾಗಿ ವಿವರಿಸಿದ್ದಾರೆ. ವರದಿಯ ಪ್ರಕಾರ, ಈ ಘಟನೆ ಕೊತ್ವಾಲಿ ಪೊಲೀಸ್ ಠಾಣೆಯ ಖುತಾರ್ ಹೊರಠಾಣೆ ವ್ಯಾಪ್ತಿಯ ಚಿತರ್‌ವೈ ಕಲಾ ಗ್ರಾಮದಲ್ಲಿ ನಡೆದಿದೆ. ಬಾಲಕ ಕುರ್ಕುರೆ ಪ್ಯಾಕೆಟ್ ಖರೀದಿಸಲು 20 ರೂ. ಕೇಳಿದಾಗ, ತಾಯಿ ಮತ್ತು ಸಹೋದರಿ ಕೋಪಗೊಂಡು ಅವನನ್ನು ಹೊಡೆಯಲು ಪ್ರಾರಂಭಿಸಿದರು ಎಂದು ಆರೋಪಿಸಲಾಗಿದೆ. ಬಾಲಕನು ಸಹಾಯಕ್ಕಾಗಿ ಪೊಲೀಸರಿಗೆ ಕರೆ ಮಾಡಿದ್ದಾನೆ.
ಇದನ್ನೂ ಓದಿ: Viral Video: ಕೊಳೆತ ಕೋಳಿ ಮಾಂಸ, ಹೊಲಸು ಅಡುಗೆ ಮನೆ: ಇದು ಕೆಎಫ್‌ಸಿ ಔಟ್‌ಲೆಟ್‌ನ ಚಿತ್ರಣ
ಆತನ ದೂರನ್ನು ಫೋನ್‌ನಲ್ಲಿ ಕೇಳಿ ಕರ್ತವ್ಯದಲ್ಲಿದ್ದ ಪೊಲೀಸರು ಸಹ ಆಶ್ಚರ್ಯಚಕಿತರಾದರು. ಬಾಲಕ ಫೋನ್‌ನಲ್ಲಿ ಅಳಲು ಪ್ರಾರಂಭಿಸಿದಾಗ, ಪೊಲೀಸರು ಅವನನ್ನು ಪ್ರೀತಿಯಿಂದ ಸಮಾಧಾನಪಡಿಸಿದರು ಮತ್ತು ಅವನನ್ನು ಸಂಪರ್ಕಿಸುವ ಭರವಸೆ ನೀಡಿದರು.
ದೂರು ಸ್ವೀಕರಿಸಿದ ಕೂಡಲೇ 112 ಡಯಲ್ ಪೊಲೀಸ್ ಸಿಬ್ಬಂದಿ ಉಮೇಶ್ ವಿಶ್ವಕರ್ಮ ಸ್ಥಳಕ್ಕೆ ಧಾವಿಸಿದರು. ಅವರು ಬಾಲಕ ಮತ್ತು ಅವನ ತಾಯಿಗೆ ಕರೆ ಮಾಡಿ, ಅವರಿಗೆ ಸಲಹೆ ನೀಡಿ, ಮಗುವನ್ನು ಹೊಡೆಯದಂತೆ ತಾಯಿಗೆ ಸೂಚಿಸಿದರು. ಅಷ್ಟೇ ಅಲ್ಲ, ಬಾಲಕನಿಗೆ ಕುರ್ಕುರೆಯನ್ನೂ ಖರೀದಿಸಿ ತಂದು ಕೊಟ್ಟಿದ್ದಾರೆ. ಇದರ ಫೋಟೊ ವೈರಲ್ ಆಗಿದೆ.
ಇದನ್ನೂ ಓದಿ: Viral Video: ಪೊಲೀಸರ ಮುಂದೆಯೇ ಆಸ್ಪತ್ರೆಯಲ್ಲಿ ರೋಗಿಗಳ ಮೇಲೆ ದಾಳಿ; ಬೆಚ್ಚಿ ಬೀಳಿಸುವ ವಿಡಿಯೊ ವೈರಲ್
ವಿಮಾನಚಕ್ರದ ಬಳಿ ಕುಳಿತು ದೆಹಲಿಗೆ ಬಂದಿದ್ದ ಅಫ್ಘನ್ ಬಾಲಕ
ಅಫ್ಘಾನಿಸ್ತಾನದ 13 ವರ್ಷದ ಬಾಲಕನೊಬ್ಬ ಕಾಬೂಲ್‌ನಿಂದ ದೆಹಲಿಗೆ ವಿಮಾನದ ಚಕ್ರದ ಬಳಿ ಅಡಗಿಕೊಂಡು ಪ್ರಯಾಣಿಸಿ ಸುರಕ್ಷಿತವಾಗಿ ಇಳಿದ ಘಟನೆ ಕೆಲವು ದಿನಗಳ ಹಿಂದೆ ನಡೆದಿತ್ತು. ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ಬೆಳಕಿಗೆ ಬಂದಿತ್ತು. ಏರ್‌ಬಸ್ ಎ340 ವಿಮಾನ ಕಾಬೂಲ್‌ನಿಂದ ಬೆಳಗ್ಗೆ 8:46ಕ್ಕೆ ಹೊರಟು ದೆಹಲಿಯ ಟರ್ಮಿನಲ್ 3ರಲ್ಲಿ 10:20ಕ್ಕೆ ಇಳಿಯಿತು. ಪ್ರಯಾಣಿಕರು ಏರಿದ ನಂತರ ಅವನು ಚಕ್ರದ ಬಳಿ ಅಡಗಿಕೊಂಡಿದ್ದ. 94 ನಿಮಿಷಗಳ ಪ್ರಯಾಣದಲ್ಲಿ ಅವನು ಬದುಕುಳಿದಿರುವುದು ಎಲ್ಲರಿಗೂ ಅಚ್ಚರಿ ತಂದಿತ್ತು.