ಅಪಘಾತದ ನಂತರವೂ ತಾಳ್ಮೆಯಿಂದ ವರ್ತಿಸಿದ ಬೆಂಗಳೂರಿನ ಕಾರು ಚಾಲಕ: ಮಾನವೀಯತೆ ಇತರರಿಗೂ ಮಾದರಿ ಎಂದ ನೆಟ್ಟಿಗರು
Viral Video: ಇತ್ತೀಚೆಗೆ ಬೆಂಗಳೂರಿನಲ್ಲಿ ಅಪಘಾತವೊಂದು ನಡೆದಿದ್ದು, ಅದಾದ ಬಳಿಕ ಅಪಘಾತಕ್ಕೀಡಾ ಕಾರು ಚಾಲಕ ತೋರಿಸಿದ ತಾಳ್ಮೆಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಸ್ಕೂಟರ್ ಸವಾರನೊಬ್ಬ ಪಾದಚಾರಿ ಮಾರ್ಗದಲ್ಲಿ ಸವಾರಿ ಮಾಡಿ ಕಾರಿಗೆ ಡಿಕ್ಕಿ ಹೊಡೆದಿದ್ದ. ಅದಾಗ್ಯೂ ಚಾಲಕನು ಇದಕ್ಕೆ ಕೋಪದಿಂದ ಪ್ರತಿಕ್ರಿಯೆ ನೀಡುವ ಬದಲು ತಾಳ್ಮೆಯಿಂದಲೇ ವರ್ತಿಸಿ ಮಾನವೀಯತೆ ಮೆರೆದಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಪಘಾತ ನಂತರವೂ ತಾಳ್ಮೆಯಿಂದ ವರ್ತಿಸಿದ ಕಾರು ಚಾಲಕ -
ಬೆಂಗಳೂರು, ಮಾ. 22: ಇತ್ತೀಚೆಗೆ ರಸ್ತೆ ಸುರಕ್ಷತೆ ನಿಯಮಗಳನ್ನು ಎಷ್ಟೇ ಕಟ್ಟುನಿಟ್ಟಾಗಿ ಜಾರಿಗೆ ತಂದರೂ ಉಲ್ಲಂಘಿಸುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ ರಸ್ತೆ ಮಧ್ಯೆಯೇ ಗಲಾಟೆ, ವಾಗ್ವಾದಗಳು ನಡೆಯುವುದು ಸಾಮಾನ್ಯ ಎಂಬಂತಾಗಿದೆ. ಆದರೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಘಟನೆ ಹಲವರಿಗೆ ಅಚ್ಚರಿ ತಂದಿದೆ. ಅಪಘಾತದ ಬಳಿಕ ಕಾರು ಮಾಲಕ ತೋರಿಸಿದ ತಾಳ್ಮೆಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಸ್ಕೂಟರ್ ಸವಾರನೊಬ್ಬ ಪಾದಚಾರಿ ಮಾರ್ಗದಲ್ಲಿ ಸವಾರಿ ಮಾಡಿ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಅದಾಗ್ಯೂ ಕಾರು ಮಾಲಕ ಇದಕ್ಕೆ ಕೋಪದಿಂದ ಪ್ರತಿಕ್ರಿಯೆ ನೀಡುವ ಬದಲು ತಾಳ್ಮೆಯಿಂದಲೇ ವರ್ತಿಸಿ ಮಾನವೀಯತೆ ಮೆರೆದಿದ್ದಾರೆ. ಎಲ್ಲರ ಮನವನ್ನು ಗೆದ್ದಿರುವ ಇವರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದೆ.
ಬೆಂಗಳೂರಿನಲ್ಲಿ ಯಾವುದೇ ಸಣ್ಣ ಪುಟ್ಟ ಅಪಘಾತವಾದ ಬಳಿಕ ಚಾಲಕರ ಕಿರುಚಾಟ, ಜಗಳ ಸಾಮಾನ್ಯ ಎಂಬಂತಾಗಿದೆ. ಆದರೆ ಈ ಕಾರು ಮಾಲಕ ಮಾತ್ರ ಅಪಘಾತ ಎಸಗಿದ ಸವಾರನ ಜತೆ ತಾಳ್ಮೆಯಿಂದ ಮಾತನಾಡಿಸಿ ಏಟಾಗಿದೆಯೇ ಎಂದು ಪರಿಶೀಲಿಸಿದರು.
ವಿಡಿಯೊ ನೋಡಿ:
One Man’s Patience vs Another’s Recklessness: A Tale From Bengaluru Roads
— Karnataka Portfolio (@karnatakaportf) March 21, 2026
Driving on the footpath and colliding with a car, yet the car owner remains completely calm this says a lot about character. While many people would immediately lose their temper in such a situation, this… pic.twitter.com/vh8eFzdyA4
ಸ್ಕೂಟರ್ ಸವಾರನೊಬ್ಬ ರಸ್ತೆ ನಿಯಮಗಳನ್ನು ಉಲ್ಲಂಘಿಸಿ ಪಾದಚಾರಿ ಮಾರ್ಗದಲ್ಲಿ ಪ್ರಯಾಣಿಸಿದ್ದಾನೆ. ಈ ವೇಳೆ ನಿಯಂತ್ರಣ ಕಳೆದುಕೊಂಡು ಪಕ್ಕದಲ್ಲಿ ಚಲಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಜನನಿಬಿಡ ನಗರ ರಸ್ತೆಗಳಲ್ಲಿ ಇಂತಹ ಘಟನೆ ನಡೆದು ಜಗಳಕ್ಕೆ ಕಾರಣವಾಗುತ್ತದೆ. ಆದರೆ ಇಲ್ಲಿ ಕಾರು ಮಾಲಕ ತಾಳ್ಮೆಯಿಂದ ವರ್ತಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ರಣರಂಗವಾದ ಸಾಮೂಹಿಕ ವಿವಾಹ ಸಮಾರಂಭ- ಕೇವಲ ಚಿಪ್ಸ್ ಪ್ಯಾಕೇಟ್‌ಗಾಗಿ ಕಿತ್ತಾಟ!
ಕ್ಲಿಪ್‌ನಲ್ಲಿ ಸ್ಕೂಟರ್ ಸವಾರನೊಬ್ಬ ಪಾದಚಾರಿ ಮಾರ್ಗದಲ್ಲಿ ಅಕ್ರಮವಾಗಿ ಸವಾರಿ ಮಾಡಿ ನಂತರ ಕಾರಿಗೆ ಡಿಕ್ಕಿ ಹೊಡೆಯುವುದು ಕಂಡು ಬಂದಿದೆ. ಆದಾಗ್ಯೂ, ಕಾರು ಮಾಲಕ ಕೋಪದಿಂದ ಪ್ರತಿಕ್ರಿಯಿಸುವ ಬದಲು ತಾಳ್ಮೆಯಿಂದ ವರ್ತಿಸಿದ್ದಾರೆ. ಸವಾರನಿಗೆ ಏಟಾಗಿದೆಯೇ ಎಂದು ವಿಚಾರಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಈ ವಿಡಿಯೊ 220,000ಕ್ಕೂ ಹೆಚ್ಚು ವೀಕ್ಷಣೆ ಗಳಿಸಿದೆ. ಬಳಕೆದಾರರು ಚಾಲಕನ ತಾಳ್ಮೆ ಸಹಾನುಭೂತಿಯನ್ನು ಶ್ಲಾಘಿಸಿದ್ದಾರೆ. ಇಂತಹ ತಾಳ್ಮೆಯನ್ನು ನೋಡುವುದು ಎಷ್ಟು ಅಪರೂಪ ಎಂದು ಹಲವರು ಈ ಬಗ್ಗೆ ಕಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು ಈ ಮನುಷ್ಯನ ತಾಳ್ಮೆಗೆ ಪ್ರಶಸ್ತಿ ನೀಡಿ ಎಂದು ಬರೆದಿದ್ದಾರೆ.