ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಈ ಒಂದು ಶೂ ಬೆಲೆ ಬರೋಬ್ಬರಿ 10 ಲಕ್ಷ ರೂಪಾಯಿ; ಲಕ್‌ ಬದಲಾಗಿ ಉದ್ಯಮಿಯಾದ ಚಮ್ಮಾರನ ಕಥೆ ಇದು!

ಈ ವ್ಯಕ್ತಿಯ ಹೆಸರು ರಾಮ್ ಚೇತ್.‌ ಮೂಲತಃ ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿ ಚಪ್ಪಲಿ ಹೊಲಿಯುವ ಕೆಲಸ ಮಾಡಿಕೊಂಡಿದ್ದ ಈತನ ಅಂಗಡಿಗೆ ಕಾಂಗ್ರೆಸ್‌ ಸಂಸದ, ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಆಗಮಿಸಿದ್ದರು. ಅಲ್ಲಿಂದ ರಾಮ್‌ ಚೇತ್‌ ಅವರ ಲಕ್‌ ಸಂಪೂರ್ಣ ಬದಲಾಯಿತು. ರಾಹುಲ್‌ ಹೊಲಿದ ಚಪ್ಪಲಿಯನ್ನು ಕೊಳ್ಳಲು ಜನರು ಲಕ್ಷಾಂತರ ರೂಪಾಯಿ ನೀಡಲು ಸಿದ್ದರಿದ್ದಾರೆ ಎಂದು ಸ್ವತಃ ರಾಮ್‌ ಚೇತ್‌ ಹೇಳಿದ್ದಾರೆ. ಈ ವ್ಯಕ್ತಿಯ ಸಾಧನೆ ಕುರಿತು ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ರಾಹುಲ್‌ ಗಾಂಧಿ ವಿಸಿಟ್‌ ಬಳಿಕ ಈ ಚಮ್ಮಾರನ ಲಕ್‌ ಚೇಂಜ್‌!

ರಾಮ್ ಚೇತ್

Profile Sushmitha Jain Mar 13, 2025 4:45 PM

ಬೆಂಗಳೂರು: ಆ ಒಂದು ದಿನದವರೆಗೆ ಸಾಮಾನ್ಯ ವ್ಯಕ್ತಿಯಂತಿದ್ದ ಚಪ್ಪಲಿ ಹೊಲೆಯುವ ವ್ಯಕ್ತಿ, ಒಬ್ಬ ಪ್ರಭಾವಿಯನ್ನು ಭೇಟಿಯಾದ ನಂತರ ಸಂಪೂರ್ಣವಾಗಿ ಬದಲಾದ. ಏಕಾಏಕಿ ಊರಿನಲ್ಲಿ ಆತನ ಮರ್ಯಾದೆ ಹೆಚ್ಚಿತು. ಆತನ ಬಳಿ ಚಪ್ಪಲಿ ಕೊಂಡುಕೊಳ್ಳುವವರ ಸಂಖ್ಯೆ ಏರಿಕೆಯಾಯಿತು. ಈಗ ನೋಡಿದರೆ, ಆ ವ್ಯಕ್ತಿ ತನ್ನದೇ ಹೆಸರಿನ ಹೊಸ ಬ್ರ್ಯಾಂಡ್‌ ಆರಂಭಿಸುವ ಆಲೋಚನೆ ಮಾಡಿದ್ದಾನೆ(Viral News). ಈ ವ್ಯಕ್ತಿಯ ಹೆಸರು ರಾಮ್ ಚೇತ್.‌ ಮೂಲತಃ ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿ ಚಪ್ಪಲಿ ಹೊಲಿಯುವ ಕೆಲಸ ಮಾಡಿಕೊಂಡಿದ್ದ ಈತನ ಅಂಗಡಿಗೆ ಕಾಂಗ್ರೆಸ್‌ ಸಂಸದ, ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಆಗಮಿಸಿದ್ದರು. ಅಲ್ಲಿಂದ ರಾಮ್‌ ಚೇತ್‌ ಅವರ ಲಕ್‌ ಸಂಪೂರ್ಣ ಬದಲಾಯಿತು. ರಾಹುಲ್‌ ಗಾಂಧಿ ಕೇವಲ ಕೂತು ಮಾತನಾಡಿ ಹೋಗಿದ್ದರೆ ಪರವಾಗಿರಲಿಲ್ಲ. ರಾಮ್‌ ಚೇತ್‌ ಅವರ ಜೊತೆ ಕುಳಿತು ಒಂದು ಚಪ್ಪಲಿ ಹೊಲಿಯಲೂ ಸಹಾಯ ಮಾಡಿದ್ದರು. ರಾಹುಲ್‌ ಒಲಿದ ಚಪ್ಪಲಿಯನ್ನು ಕೊಳ್ಳಲು ಜನರು ಲಕ್ಷಾಂತರ ರೂಪಾಯಿ ನೀಡಲು ಸಿದ್ದರಿದ್ದಾರೆ ಎಂದು ಸ್ವತಃ ರಾಮ್‌ ಚೇತ್‌ ಹೇಳಿದ್ದಾರೆ.

ಈ ಸುದ್ದಿಯನ್ನು ಓದಿ: Viral News: ತರಗತಿಯಲ್ಲಿ ಕುಳಿತು ಅಶ್ಲೀಲ ವಿಡಿಯೋ ನೋಡಿದ ಈ ಶಿಕ್ಷಕ; ಮುಂದೇನಾಯ್ತು ಗೊತ್ತಾ..?

“ಕೆಲವರು ಬಂದು ರಾಹುಲ್‌ ಗಾಂಧಿ ಹೊಲಿದ ಶೋಗೆ ಹತ್ತು ಲಕ್ಷ ರೂಪಾಯಿ, ಐದು ಲಕ್ಷ ರೂಪಾಯಿ ಕೊಡುತ್ತೇನೆ ಎಂದು ಹೇಳಿದ್ದಾರೆ. ಆದರೆ ಆ ಶೂಗಳನ್ನು ನಾನು ಯಾರಿಗೂ ಮಾರದಿರಲು ನಿರ್ಧರಿಸಿದ್ದೇನೆ” ಎಂದು ರಾಮ್‌ ಚೇತ್‌ ಹೇಳಿದ್ದಾರೆ. ಸದ್ಯಕ್ಕೆ ನನ್ನ ಅಂಗಡಿಗೆ ಬರುತ್ತಿರುವ ಜನರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ. ಈ ಹಿಂದೆ ನನ್ನನ್ನು ನೋಡುತ್ತಲೂ ಇರದ ಜನರು ಈಗ ಮರ್ಯಾದೆ ನೀಡಿ ಮಾತನಾಡುತ್ತಿದ್ದಾರೆ ಎಂದ ಅವರು, ತಮ್ಮದೇ ಆದ ಹೊಸ ಬ್ರ್ಯಾಂಡ್‌ ಪ್ರಾರಂಭಿಸುವ ಕುರಿತು ಚಿಂತನೆ ನಡೆಸಿದ್ದಾರೆ.

ಕೆಲ ದಿನಗಳ ಹಿಂದೆ ಕಾಂಗ್ರೆಸ್‌ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಮಾಡಲಾದ ಟ್ವೀಟ್‌ ಪ್ರಕಾರ ರಾಮ್‌ ಚೇತ್‌ ಅವರು ಹೊಸ ಬ್ರ್ಯಾಂಡ್‌ ಅರಂಭಿಸಿದ್ದಾರೆ. “ರಾಹುಲ್‌ ಗಾಂಧಿ ಅವರು ಶೂ ಹೊಲಿಯುವ ರಾಮ್‌ ಚೇತ್‌ ಅವರನ್ನು ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿ ಭೇಟಿಯಾಗಿದ್ದರು. ಅವರ ಕೆಲಸವನ್ನು ನೋಡಿ ಅವರಿಗಾಗಿ ಶೂ ಹೊಲಿಯುವ ಹೊಸ ಯಂತ್ರವನ್ನು ನೀಡಲಾಗಿದೆ. ಈಗ ರಾಮ್‌ ಅವರು ಹೊಸ ಬ್ರ್ಯಾಂಡ್‌ ಒಂದನ್ನು ತೆರೆದಿದ್ದು, ಇದಕ್ಕೆ ʼರಾಮ್‌ಚೇತ್‌ ಮೋಚಿʼ ಎಂಬ ಹೆಸರು ನೀಡಲಾಗಿದೆ” ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

ಶೂ ಬಿಸಿನೆಸ್‌ ಯಾವ ರೀತಿ ಮಾಡಬೇಕು ಎಂಬ ಕುರಿತು ಮುಂಬೈನಲ್ಲಿ ಉದ್ಯಮ ನಡೆಸುತ್ತಿರುವ ಚಮಾರ್‌ ಸ್ಟುಡಿಯೋ ಸಂಸ್ಥಾಪಕ ಸುಧೀರ್‌ ರಾಜ್‌ಭರ್‌ ಅವರು ರಾಮ್‌ ಚೇತ್‌ಗೆ ತರಬೇತಿ ನೀಡಿದ್ದಾರೆ. ಇನ್ನು ಮುಂದೆ ರಾಮ್‌ ಚೇತ್‌ ಅವರು ಕೇವಲ ಶೂ ಹೊಲೆಯುವ ಕಾರ್ಮಿಕರಾಗಿ ಉಳಿದಲ್ಲ, ಬದಲಾಗಿ ಶೂಗಳನ್ನು ಉತ್ಪಾದಿಸುವ ಉದ್ಯಮಿಯಾಗಿ ತಮ್ಮ ಹೊಸ ಗುರುತನ್ನು ಸೃಷ್ಟಿಸಿದ್ದಾರೆ.