ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ತರಗತಿಯಲ್ಲಿ ಕುಳಿತು ಅಶ್ಲೀಲ ವಿಡಿಯೋ ನೋಡಿದ ಈ ಶಿಕ್ಷಕ; ಮುಂದೇನಾಯ್ತು ಗೊತ್ತಾ..?

ರಷ್ಯಾದ ಶಿಕ್ಷಕರೊಬ್ಬರು ಪ್ರಾಜೆಕ್ಟರ್‌ನಲ್ಲಿ ಆಕಸ್ಮಿಕವಾಗಿ ಪೋರ್ನ್ ವಿಡಿಯೊವನ್ನು ಪ್ಲೇ ಮಾಡಿದ್ದಾರೆ. ತಕ್ಷಣ ಇಡೀ ಶಾಲೆಯಲ್ಲಿ ಗದ್ದಲ ಉಂಟಾಗಿದೆ. ಈ ವಿಷಯ ಇದೀಗ ಹೆತ್ತವರಿಗೆ ತಲುಪಿದ್ದು, ವಿದ್ಯಾರ್ಥಿಗಳ ಪೋಷಕರು ಆತನನ್ನು ಶಿಕ್ಷಕ ಹುದ್ದೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಹಾಗಾದ್ರೆ ಅಷ್ಟಕ್ಕೂ ಆ ತರಗತಿಯಲ್ಲಿ ಆಗಿದ್ದೇನು...? ಆ ಶಿಕ್ಷಕನ ತಪ್ಪಿಗೆ ಶಾಲಾ ಮಂಡಳಿ ಕೊಟ್ಟ ಉತ್ತರವೇನು...? ಈ ಸ್ಟೋರಿಯ ಸಂಪೂರ್ಣ ಡಿಟೇಲ್ಸ್ ಇಲ್ಲಿದೆ

ತರಗತಿಯ ಪ್ರೊಜೆಕ್ಟರ್‌ನಲ್ಲಿ ಪ್ಲೇ ಆಯ್ತು ಪೋರ್ನ್ ವಿಡಿಯೊ...!

ತರಗತಿಯಲ್ಲಿ ಪೋರ್ನ್ ವಿಡಿಯೋ ನೋಡಿದ ಶಿಕ್ಷಕ

Profile Sushmitha Jain Mar 13, 2025 12:04 PM

ಮಾಸ್ಕೋ: ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರ ಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ. ಮಕ್ಕಳಿಗೆ ಮೊದಲ ಗುರು ಯಾರು ಎನ್ನುವ ಪ್ರಶ್ನೆಗೆ ಥಟ್ ಅಂತ ತಾಯಿ ಅಂತ ಹೇಳುತ್ತೇವೆ. ತಾಯಿ ನಂತರದ ಸ್ಥಾನವನ್ನು ಯಾವಾಗಲೂ ಶಿಕ್ಷಕನಿಗೆ ನಾವು ನೀಡುತ್ತೇವೆ. ಮಕ್ಕಳಿಗೆ ಅಕ್ಷರದ ಜ್ಞಾನವನ್ನ ನೀಡುವ ಶಿಕ್ಷಕನನ್ನು ಅತ್ಯಂತ ಗೌರವದಿಂದ ಕಾಣುತ್ತೇವೆ. ಆದರೆ ಇಲ್ಲೊಬ್ಬ ಶಿಕ್ಷಕ ಮಕ್ಕಳಿಗೆ ತರಗತಿಯಲ್ಲಿ ನೀಡಿದ ಜ್ಞಾನವನ್ನು ನೀವು ಕೇಳಿದ್ರೆ ಮಕ್ಕಳಿಗೆ ಶಾಲೆಗೆ ಕಳುಹಿಸುವ ಮುನ್ನ ಹತ್ತು ಬಾರಿ ಯೋಚನೆ ಮಾಡಬಹುದು. ಶಿಕ್ಷಕನೊಬ್ಬ ತರಗತಿ ಸಮಯದಲ್ಲಿ ಪೋರ್ನ್ ವಿಡಿಯೋ ನೋಡುವ ಮೂಲಕ ವಿದ್ಯಾರ್ಥಿಗಳ ಹೆತ್ತವರಿಂದ ಚೀಮಾರಿ ಹಾಕಿಸಿಕೊಂಡಿದ್ದಾನೆ. ಇದೀಗ ಈ ಸುದ್ದಿ ಎಲ್ಲೆಡೆ ವೈರಲ್‌(Viral News)ಆಗ್ತಿದೆ

ಶಿಕ್ಷಕರ 'ವಿದ್ಯೆ' ಎಂಬ ಅರಿವನ್ನು ನೀಡುವ ಮೂಲಕ ವಿದ್ಯಾರ್ಥಿಗಳನ್ನು ಜ್ಞಾನದಾಹಿಗಳನ್ನಾಗಿಸಿ ಆ ಮೂಲಕ ಅವರು ಭವಿಷ್ಯದಲ್ಲಿ ತಮ್ಮ ನೆಚ್ಚಿನ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಭದ್ರ ಬುನಾದಿಯೊಂದನ್ನು ಹಾಕಿಕೊಡುತ್ತಾರೆ. ಆದರೆ ಶಿಕ್ಷಕರೊಬ್ಬರು ಪ್ರಾಜೆಕ್ಟರ್‌ನಲ್ಲಿ ಆಕಸ್ಮಿಕವಾಗಿ ಪೋರ್ನ್ ವಿಡಿಯೊವನ್ನು ಪ್ಲೇ ಮಾಡಿದ್ದಾರೆ. ತಕ್ಷಣ ಇಡೀ ಶಾಲೆಯಲ್ಲಿ ಗದ್ದಲ ಉಂಟಾಗಿದೆ. ಈ ವಿಷಯ ಇದೀಗ ಹೆತ್ತವರಿಗೆ ತಲುಪಿದ್ದು, ವಿದ್ಯಾರ್ಥಿಗಳ ಪೋಷಕರು ಆತನನ್ನು ಶಿಕ್ಷಕ ಹುದ್ದೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಆದರೆ ಶಾಲಾ ಆಡಳಿತ ಮಂಡಳಿ ಈ ಪ್ರಕರಣವನ್ನು ಗಣನೆಗೆ ತೆಗೆದುಕೊಳ್ಳದೇ ಬೇಜಾವಬ್ದಾರಿ ಮೆರೆದಿದ್ದು, ಅಷ್ಟೇ ಅಲ್ಲದೇ ಈ ಕೃತ್ಯ ವೆಸಗಿದ ಶಿಕ್ಷಕನ ಪರ ಬ್ಯಾಟ್ ಬೀಸಿದೆ. ಹಾಗೇ ಈ ಘಟನೆ ಆಕಸ್ಮಿಕವಾಗಿ ನಡೆದಿದ್ದು, ಅವರನ್ನು ಕೆಲಸದಿಂದ ತೆಗೆದು ಹಾಕಲು ಸಾಧ್ಯವಿಲ್ಲ ಎಂದು ರಜೀಫ್ ನುರ್ಗಾಲೀವ್ ತಪ್ಪನ್ನು ಸಮರ್ಥಿಸಿಕೊಂಡಿದೆ.

ರಷ್ಯಾದ ನೆಫ್ಟೆಕಾಮ್ಸ್ಕ್ ನಗರದ ಸ್ಕೂಲ್ ತರಗತಿಯ ಪ್ರೊಜೆಕ್ಟರ್‌ನಲ್ಲಿ ಅಶ್ಲೀಲ ವಿಡಿಯೊ ಪ್ಲೇ

ಹೌದು ಈ ಘಟನೆ ರಷ್ಯಾದ ನೆಫ್ಟೆಕಾಮ್ಸ್ಕ್ ನಗರದ ಬಳಿಯ ತಾಶ್ಕಿನೋವೊ ಗ್ರಾಮದ ಶಾಲೆಯೊಂದರಲ್ಲಿ ನಡೆದಿದ್ದು, ರಜೀಫ್ ನುರ್ಗಾಲೀವ್ ಎಂಬ ಭೌತಶಾಸ್ತ್ರದ ಶಿಕ್ಷಕ ತಮ್ಮ ಲ್ಯಾಪ್‌ಟಾಪ್‌ನಲ್ಲಿ ಪೋರ್ನ್ ವಿಡಿಯೊಗಳನ್ನು ವೀಕ್ಷಿಸುತ್ತಿದ್ದರು. ಆದರೆ ತನ್ನ ಲ್ಯಾಪ್‌ಟಾಪ್‌ ತರಗತಿಯ ಪ್ರೊಜೆಕ್ಟರ್‌ ಗೆ ಕನೆಕ್ಟ್ ಆಗಿದೆ ಎಂಬುದನ್ನು ಮರೆತಿದ್ದು, ಈ ವೇಳೆ ತಪ್ಪಾಗಿ ತರಗತಿಯ ಪ್ರೊಜೆಕ್ಟರ್‌ನಲ್ಲಿ ವಿಡಿಯೋ ಪ್ಲೇ ಆಗತೊಡಗಿದೆ. ಇದನ್ನು ಗಮನಿಸಿದ ವಿದ್ಯಾರ್ಥಿಗಳು ರೆಕಾರ್ಡ್ ಮಾಡಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಅಲ್ಲದೇ ತಮ್ಮ ಪೋಷಕರ ಬಳಿ ಈ ಕುರಿತು ಪ್ರಶ್ನೆ ಮಾಡಿದ್ದು, ಅವರನ್ನು ಮುಜುಗರಕ್ಕೆ ಹೀಡು ಮಾಡಿದೆ. ಸದ್ಯ ಶಾಲೆಯಲ್ಲಿ ನಡೆದ ಈ ಘಟನೆಯಿಂದಾಗಿ ಇದೀಗ ದೊಡ್ಡ ವಿವಾದ ಉಂಟಾಗಿದ್ದು, ರಜೀಫ್ ನುರ್ಗಾಲೀವ್ ಮಾಡಿದ ಸೋಷಿಯಲ್ ಎಡವಟ್ಟು ಸೋಷಿಯಲ್ ಮೀಡಿಯಾದಲ್ಲೂ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಈ ಸುದ್ದಿಯನ್ನೂ ಓದಿ: Viral Video: ಇಫ್ತಾರ್‌ ಕೂಟದ ವೇಳೆ ಪಾಕ್‌ನಲ್ಲಿ ನಡೀತು ಘನಘೋರ ದುರಂತ! ಶಾಕಿಂಗ್‌ ವಿಡಿಯೊ ಫುಲ್‌ ವೈರಲ್‌

ಇನ್ನು ವಿದ್ಯಾರ್ಥಿಗಳ ಪೋಷಕರು ಸಹ ಶಿಕ್ಷಕ ಕೆವಿನ್ ವೆಲ್ಚೆಲ್ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿ, ಅವರನ್ನು ಶಾಲೆಯಿಂದ ವಜಾಗೊಳಿಸುವಂತೆ ಆಗ್ರಹಿಸಿದ್ದು, ಈ ಘಟನೆ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಲೇಬೇಕು' ಎಂದಿದ್ದಾರೆ.

ಆದರೆ ಈ ಕುರಿತು ಹೆಚ್ಚಾಗಿ ತಲೆ ಕೆಡಿಸಿಕೊಳ್ಳದ ಶಿಕ್ಷಣ ಸಂಸ್ಥೆ, ಆಕಸ್ಮಿಕವಾಗಿ ಈ ಘಟನೆ ನಡೆದಿದ್ದು, ರಜೀಫ್ ನುರ್ಗಾಲೀವ್ ಓರ್ವ ಉತ್ತಮ ಶಿಕ್ಷಕ. ಇಲ್ಲಿಯವರೆಗೆ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ್ದಾರೆ. ಅವರಿಗೆ ಈ ವೃತ್ತಿಯ ಮೇಲೆ ಶ್ರದ್ಧೆ-ಭಕ್ತಿ, ನಿಷ್ಥೆ ಎಲ್ಲಾ ಇದೆ, ಎಲ್ಲಾಕ್ಕಿಂತ ಅವರಿಗೆ ವಿದ್ಯಾರ್ಥಿಗಳೆಂದರೆ ಅಚ್ಚುಮೆಚ್ಚು, ಈ ತಪ್ಪನ್ನು ದೊಡ್ಡ ಅಪರಾಧ ಎಂಬಂತೆ ಬಿಂಬಿಸುವುದು ಬೇಡ ಎಂದು ಹೇಳಿದೆ.

ಇನ್ನು ಮತ್ತೊಂದೆಡೆ ಪೋರ್ನ್ ವೀಕ್ಷಿಸಿದ ಶಿಕ್ಷಕ, ತಾನು ವಿಡೀಯೋ ನೋಡಿದ್ದು ಸತ್ಯ ಆದರೆ, ಅದು ಉದ್ದೇಶಪೂರ್ವಕವಲ್ಲ, ನನಗೆ ತಿಳಿಯದೇ ಆಗಿರುವುದು... ನಾನು ಗೂಗಲ್ ಮಾಡುವಾಗ ಏಕಾಗಿ ಈ ವೆಬ್ಸೈಟ್ ತೆರೆದು ಪೋರ್ನ್ ವಿಡೀಯೋ ಪ್ರಸಾರವಾಯಿತು ಎಂದಿದ್ದಾರೆ.