ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಗುವಿನ ಚಿಕಿತ್ಸೆಯ ಸಾಲ ಮತ್ತು ಕೌಟುಂಬಿಕ ಕಲಹ: ಮನನೊಂದು ಆತ್ಮಹತ್ಯಗೆ ಶರಣಾದ 28 ವರ್ಷದ ಟೆಕ್ಕಿ

ನೋಯ್ಡಾದಲ್ಲಿ 28 ವರ್ಷದ ಟೆಕ್ಕಿ ಸಂಭಾವ್ ಜೈನ್ ಬಹುಮಹಡಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಮೊಬೈಲ್‌ನಲ್ಲಿ ಪತ್ತೆಯಾದ ವಿಡಿಯೋದಲ್ಲಿ ಆರ್ಥಿಕ ಒತ್ತಡದ ಬಗ್ಗೆ ಉಲ್ಲೇಖಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಗನ ಆರೋಗ್ಯ ಸಮಸ್ಯೆ, ಸಾಲದ ಹೊರೆ ಹಾಗೂ ವೈವಾಹಿಕ ಕಲಹದಿಂದ ಅವರು ಒತ್ತಡದಲ್ಲಿದ್ದರು ಎನ್ನಲಾಗಿದೆ. ಅವರ ಸಾವಿನ ಬಳಿಕ ಜೀವನಾಂಶ ಮತ್ತು ವಿಚ್ಛೇದನ ಕಾನೂನುಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ತೀವ್ರಗೊಂಡಿದೆ.

28 ವರ್ಷದ ಟೆಕ್ಕಿ ಸಾವು: ಜೀವನಾಂಶ, ವಿಚ್ಛೇದನ ಕಾನೂನುಗಳ ಬಗ್ಗೆ ಚರ್ಚೆ

ಸಂಭಾವ್ ಜೈನ್ -

Profile
Sushmitha Jain Oct 6, 2026 9:21 AM

ನೋಯ್ಡಾ, ಅಕ್ಟೋಬರ್ 5: ನೋಯ್ಡಾದಲ್ಲಿ 28 ವರ್ಷದ ಟೆಕ್ಕಿ (28-year-old techie) ಸಂಭಾವ್ ಜೈನ್ (Sambhav Jain) ಬಹುಮಹಡಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಭಾನುವಾರ ನಡೆದ ಈ ಘಟನೆ ಬಳಿಕ ಅವರ ಮೊಬೈಲ್ (mobile phone) ಪರಿಶೀಲಿಸಿದ ಪೊಲೀಸರಿಗೆ ವಿಡಿಯೋ (video)ವೊಂದು ಪತ್ತೆಯಾಗಿದ್ದು, ತೀವ್ರ ಆರ್ಥಿಕ ಒತ್ತಡ (financial stress)ದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಗನ ಆರೋಗ್ಯ ಸಮಸ್ಯೆ, ಸಾಲದ ಹೊರೆ ಹಾಗೂ ವೈವಾಹಿಕ ಕಲಹದಿಂದ ಸಂಭಾವ್ ಜೈನ್ ಒತ್ತಡದಲ್ಲಿದ್ದರು ಎನ್ನಲಾಗಿದೆ. ಆತ್ಮಹತ್ಯೆಗೂ ಮುನ್ನ ಅವರು ತಮ್ಮ ತಂದೆಗೆ ಸಂದೇಶ ಕಳುಹಿಸಿ, ತಮ್ಮ ಮೇಲಿನ ಆರ್ಥಿಕ ಹೊಣೆಗಾರಿಕೆಗಳನ್ನು ಇನ್ನು ಮುಂದೆ ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದರು. ಆದರೆ ತಮ್ಮ ಸಾವಿಗೆ ಯಾರನ್ನೂ ಹೊಣೆಗಾರರನ್ನಾಗಿ ಮಾಡಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಈ ಮಧ್ಯೆ ಸಂಭಾವ್ ಸಾವಿನ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವಿಚ್ಛೇದನ ಮತ್ತು ಜೀವನಾಂಶ (Alimony) ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಈ ಪ್ರಕರಣವನ್ನು ಭಾರತದ ವೈವಾಹಿಕ ಕಾನೂನುಗಳೊಂದಿಗೆ ಜೋಡಿಸಿ ಪ್ರಶ್ನೆಗಳನ್ನು ಎತ್ತಿದ್ದಾರೆ. ಮತ್ತೊಂದೆಡೆ, ಜೀವನಾಂಶ ವ್ಯವಸ್ಥೆಯಲ್ಲಿ ಬದಲಾವಣೆ ಅಗತ್ಯವಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

‘ಹಿಂದುತ್ವದ ಹೆಸರಿನಲ್ಲಿ ಧಾರ್ಮಿಕ ವಿಭಜನೆ’;RSS, VHP ವಿರುದ್ಧ ದಿಗ್ವಿಜಯ್ ಸಿಂಗ್ ಆರೋಪ

ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ₹3 ಕೋಟಿ ಜೀವನಾಂಶದ ಮಾಹಿತಿ ಸುಳ್ಳು ಎಂದು ಪೊಲೀಸರು ಹೇಳಿದ್ದು, ಪೊಲೀಸರ ಪ್ರಕಾರ, ವಿಚ್ಛೇದನ ಪರಿಹಾರ ಮೊತ್ತ ₹15 ಲಕ್ಷ ರೂ. ಆಗಿದ್ದು, ಈಗಾಗಲೇ ಸಂಭಾವ್ ಆ ಮೊತ್ತದಲ್ಲಿ ₹7.5 ಲಕ್ಷವನ್ನು ನೀಡಿದ್ದಾರೆ ಎನ್ನಲಾಗಿದೆ.

ಇನ್ನು ಈ ಪ್ರಕರಣವನ್ನು 2024ರಲ್ಲಿ ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ ಅತುಲ್ ಸುಭಾಷ್ ಅವರ ಪ್ರಕರಣಕ್ಕೂ ಕೆಲವರು ಹೋಲಿಸಿದ್ದಾರೆ. ಅತುಲ್ ಸುಭಾಷ್ ಅವರ ಪ್ರಕರಣದ ಬಳಿಕ ವೈವಾಹಿಕ ಕಾನೂನು, ಜೀವನಾಂಶ ಮತ್ತು ಕಾನೂನು ವ್ಯವಸ್ಥೆಯಲ್ಲಿನ ಒತ್ತಡದ ಕುರಿತು ದೇಶಾದ್ಯಂತ ಚರ್ಚೆ ನಡೆದಿತ್ತು.

ಸಂಭಾವ್ ಜೈನ್ ಸುಮಾರು 140 ಕೆಜಿ ತೂಕ ಹೊಂದಿದ್ದು, ದೇಹದ ಕುರಿತ ಅಸಮಾಧಾನ ಹಾಗೂ ಆರೋಗ್ಯದ ಬಗ್ಗೆ ಆತಂಕದಿಂದ ಬಳಲುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಕಟ್ಟಡ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದು, ಘಟನೆಯ ಸಂದರ್ಭದಲ್ಲಿ ಸ್ಥಳದಲ್ಲಿದ್ದವರನ್ನು ವಿಚಾರಣೆ ನಡೆಸುತ್ತಿದ್ದಾರೆ.