ನದಿಯಲ್ಲಿ ತೇಲಿಕೊಂಡು ಬಂದಿದ್ದು ದೊಡ್ಡ ಮೀನುಗಳಲ್ಲ ಅಡುಗೆ ಅನಿಲದ ಸಿಲಿಂಡರ್‌ಗಳು! ವಿಡಿಯೊ ನೋಡಿ
ನದಿ ನೀರಿನಲ್ಲಿ ಅಡುಗೆ ಅನಿಲದ ಸಿಲಿಂಡರ್ ಗಳು ಹರಿದು ಬಂದರೆ ಹೇಗಿರಬಹುದು... ಎಂದಾದರೂ ಯೋಚಿಸಿದ್ದೀರಾ ? ಆದರೆ ಈ ಘಟನೆ ಈಗ ಮಹಾರಾಷ್ಟ್ರದಲ್ಲಿ ನಡೆದಿದೆ. ಭಾರಿ ಮಳೆಯಿಂದಾಗಿ ಹೆಚ್ ಪಿಸಿಎಲ್ ಸ್ಥಾವರದೊಳಗೆ ಪ್ರವಾಹ ನೀರು ನುಗ್ಗಿದ್ದು ಸುಮಾರು 3,000 ಗ್ಯಾಸ್ ಸಿಲಿಂಡರ್‌ಗಳನ್ನು ನದಿಯಲ್ಲಿ ಹೊತ್ತೊಯ್ದಿದೆ. ಇದರ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಸಂಗ್ರಹ ಚಿತ್ರ -
ಮಹಾರಾಷ್ಟ್ರ: ಪ್ರವಾಹದ ನೀರಿನಲ್ಲಿ (flood water) ಸಿಲಿಂಡರ್ (Gas Cylinders)ಗಳು ತೇಲಿ ಬಂದ ಘಟನೆ ಮಹಾರಾಷ್ಟ್ರದಲ್ಲಿ (Maharastra) ನಡೆದಿದೆ. ಭಾರಿ ಮಳೆಗೆ ಹೆಚ್ ಪಿಸಿಎಲ್ (HPCL) ಸ್ಥಾವರದೊಳಗೆ ನೀರು ನುಗ್ಗಿದ್ದು, ಸುಮಾರು 3,000 ಗ್ಯಾಸ್ ಸಿಲಿಂಡರ್‌ಗಳು ನದಿಯಲ್ಲಿ ತೇಲಿ ಹೋಗಿದೆ. ಇದನ್ನು ಈಗ ಸಂಗ್ರಹಿಸುವ ಜವಾಬ್ದಾರಿ ಅಧಿಕಾರಿಗಳ ಹೆಗಲಿಗೆ ಬಿದ್ದಿದ್ದು, ಅನಿಲ ಸಿಲಿಂಡರ್ ಸಿಕ್ಕರೆ ತಕ್ಷಣ ಅವುಗಳನ್ನು ಅಧಿಕಾರಿಗಳಿಗೆ ಅಥವಾ ಕಂಪನಿಗೆ ಹಸ್ತಾಂತರಿಸುವಂತೆ ನಾಗರಿಕರಲ್ಲಿ ಅವರು ಮನವಿ ಮಾಡುತ್ತಿದ್ದಾರೆ. ನದಿ ನೀರಿನ ಪ್ರವಾಹದಲ್ಲಿ ಸಿಲಿಂಡರ್ ಗಳು ತೇಲಿ ಹೋಗುತ್ತಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral Video) ಆಗಿವೆ.
ಮಹಾರಾಷ್ಟ್ರದ ರಾಯಗಢದಲ್ಲಿ ಭಾರೀ ಮಳೆಯಿಂದಾಗಿ ಹೆಚ್ ಪಿಸಿಎಲ್ ನ ಪಾತಾಳಗಂಗಾ ಎಲ್ ಪಿಜಿ ಬಾಟ್ಲಿಂಗ್ ಸ್ಥಾವರದೊಳಗೆ ನೀರು ತುಂಬಿದ್ದು, ಸುಮಾರು 3,000 ಗ್ಯಾಸ್ ಸಿಲಿಂಡರ್‌ಗಳು ಪಾತಾಳಗಂಗಾ ನದಿಯಲ್ಲಿ ತೇಲಿ ಹೋಗಿದೆ. ಧಾರಾಕಾರ ಮಳೆಗೆ ಸ್ಥಾವರದ ರಕ್ಷಣಾ ಗೋಡೆ ಕುಸಿದಿದ್ದರಿಂದ ಪ್ರವಾಹದ ನೀರು ನೇರವಾಗಿ ಆವರಣದೊಳಗೆ ನುಗ್ಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಲೂನ್, ಹೂವುಗಳಿಂದ ರೈಲು ಬೋಗಿಯ ಅಲಂಕಾರ; ಹನಿಮೂನ್ ಸ್ಪಾಟ್‌ನಂತೆ ಬದಲಾದ ಎಸಿ ಕ್ಯಾಬಿನ್
ನದಿಯಲ್ಲಿ ಸಿಲಿಂಡರ್‌ಗಳು ತೇಲಿ ಹೋಗುತ್ತಿರುವುದನ್ನು ನೋಡಿ ಆಶ್ಚರ್ಯಚಕಿತರಾದ ಜನರು ಇದರ ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ನದಿ ನೀರಿನಲ್ಲಿ ಅಡುಗೆ ಅನಿಲ ಸೇರಿರುವ ಸಾಧ್ಯತೆ ಇದೆ ಎಂದು ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.
Hundreds of LPG Gas cylinders got washed away in Floods and people are looting them.
— Woke Eminent (@WokePandemic) July 8, 2026
This looks so bizzare pic.twitter.com/bk41ElgmAy
ಈ ಕುರಿತು ಮಾಹಿತಿ ನೀಡಿರುವ ರಾಯಗಡ್ ಕಲೆಕ್ಟರ್ ಕಿಶನ್ ಜಾವ್ಲೆ, ಪಾತಾಳಗಂಗಾ ನದಿಯಲ್ಲಿ ಅಥವಾ ಹತ್ತಿರದ ಪ್ರದೇಶಗಳಲ್ಲಿ ಗ್ಯಾಸ್ ಸಿಲಿಂಡರ್‌ಗಳು ಕಂಡು ಬಂದರೆ ಅವುಗಳನ್ನು ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಹಸ್ತಾಂತರಿಸಿ. ಅವುಗಳನ್ನು ನೇರವಾಗಿ ಹೆಚ್ ಪಿಸಿಎಲ್ ಕಂಪೆನಿ, ಯಾವುದೇ ಹತ್ತಿರದ ಹೆಚ್ ಪಿಸಿಎಲ್ ಡೀಲರ್, ಖಲಾಪುರ ತಹಶೀಲ್ದಾರ್ ಕಚೇರಿ ಅಥವಾ ಉಪ-ವಿಭಾಗೀಯ ಅಧಿಕಾರಿ ಕಚೇರಿಗೆ ನೀಡುವಂತೆ ಅವರು ಮನವಿ ಮಾಡಿದ್ದಾರೆ.
ಸುರಕ್ಷತಾ ಕಾರಣಗಳಿಗಾಗಿ ಈ ಸಿಲಿಂಡರ್‌ಗಳನ್ನು ತಮ್ಮ ಮನೆಗಳಲ್ಲಿ ಇಡದಂತೆ ತಿಳಿಸಿರುವ ಅವರು ತಕ್ಷಣವೇ ಕಂಪನಿಗೆ ಹಸ್ತಾಂತರಿಸಿ. ನದಿಯಲ್ಲಿ ತೇಲಿ ಹೋಗಿರುವ ಸಿಲಿಂಡರ್‌ಗಳಲ್ಲಿ ಅನಿಲವಿದೆಯೇ ಅಥವಾ ಅವು ಸುರಕ್ಷಿತ ಸ್ಥಿತಿಯಲ್ಲಿವೆಯೇ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ಹೀಗಾಗಿ ಅವುಗಳನ್ನು ಬಳಸುವುದು ಅಪಾಯಕಾರಿ ಎಂದು ತಿಳಿಸಿದ್ದಾರೆ.
ಕಳೆದ ಒಂದು ವಾರದಿಂದ ಮಹಾರಾಷ್ಟ್ರದ ಭಾರಿ ಮಳೆಯಾಗುತ್ತಿದ್ದು, ಸಾಕಷ್ಟು ಹಾನಿಯನ್ನು ಉಂಟು ಮಾಡಿದೆ. ಹಲವಾರು ಪ್ರದೇಶಗಳಲ್ಲಿ ನದಿ ನೀರು ಉಕ್ಕಿ ಹರಿದು ಪ್ರವಾಹ ಪರಿಸ್ಥಿತಿ ಉಂಟಾಗಿದೆ.