#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Viral Video: ಅರೇ! ಇದೇನಿದು? ಚಾಕೊಲೇಟ್ ಜತೆ ಉಪ್ಪು, ಖಾರ, ಸಾಸ್ ಕಾಂಬಿನೇಷನ್‌; ವಿಲಕ್ಷಣ ಖಾದ್ಯ ವೈರಲ್

ಪ್ರತಿಷ್ಠಿತ ಫುಡ್‌ ಡೆಲಿವರಿ ಸಂಸ್ಥೆಗಳಲ್ಲೊಂದಾದ ಸ್ವಿಗ್ಗಿ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೊ‌ವನ್ನು ಹಂಚಿಕೊಂಡಿದ್ದು, ಇದರಲ್ಲಿ ಅಸಂಪ್ರದಾಯಿಕ ಕಾಂಬಿನೇಷನ್‌ನಲ್ಲಿ ಚಾಕೊಲೇಟ್ ಸವಿಯುವ ದೃಶ್ಯ ಕಂಡು ಬಂದಿದೆ. ವಿಡಿಯೊದಲ್ಲಿ ಡೈರಿಮಿಲ್ಕ್ ಚಾಕೊಲೇಟ್ ಅನ್ನು ಉಪ್ಪು, ಖಾರದ ಜತೆ ಸೇರಿಸುವ ದೃಶ್ಯ, 5 ಸ್ಟಾರ್ ಚಾಕಲೇಟ್ ಅನ್ನು ಟೊಮೆಟೊ ಕೆಚಪ್‌ನೊಂದಿಗೆ ಮಿಕ್ಸ್ ಮಾಡುವ ದೃಶ್ಯವಿದೆ.

ಚಾಕೊಲೇಟ್ ಜತೆ ನೀವು ಕಲ್ಪಿಸಿಯೂ ಇರದ ಡಿಶ್‌ ! ಇಲ್ಲಿದೆ ವೈರಲ್ ವಿಡಿಯೊ

Viral Video Of Bizarre Recipes

Profile Pushpa Kumari Feb 10, 2025 5:08 PM

ನವದೆಹಲಿ: ವಿಲಕ್ಷಣ ಕಾಂಬಿನೇಷನ್‌ನ ಖಾದ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಆಗೊಮ್ಮೆ ಈಗೊಮ್ಮೆ ವೈರಲ್ ಆಗುತ್ತವೆ. ಈ ವಿಭಿನ್ನ ರೀತಿಯ ಆಹಾರ ಖಾದ್ಯಗಳು ಕೆಲವರಿಗೆ ವಿಚಿತ್ರ ಅನಿಸಿದರೆ ಇನ್ನು ಕೆಲವರು ಈ ಕಣ್ಣಲ್ಲಿ ಇನ್ನೇನೇನ್ ನೋಡ್ಬೇಕಪ್ಪಾ ಎಂದು ಉದ್ಘರಿಸುವಂತೆ ಮಾಡುತ್ತವೆ. ಇದೀಗ ಇಂತದ್ದೇ ವಿಡಿಯೊವೊಂದು ಫುಲ್ ವೈರಲ್ ಆಗಿದೆ. ಸಾಮಾನ್ಯವಾಗಿ ಐಸ್ ಕ್ರೀಮ್, ಡ್ರೈ ಫ್ರೂಟ್ಸ್ ಜತೆ ಚಾಕಲೇಟ್ ಸವಿಯುವುದು ಕಾಮನ್. ಆದರೆ ಅದೇ ಚಾಕೊಲೇಟ್ ಅನ್ನು ಖಾರದ ಪುಡಿಯೊಂದಿಗೆ ಅಥವಾ ಸಾಸ್ ಜತೆ ಕೊಟ್ಟರೆ ಹೇಗಿರುತ್ತದೆ? ಸದ್ಯ ಇಂತಹದ್ದೊಂದು ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ನೆಟ್ಟಿಗರು ಅರೇ! ಇದೇನಪ್ಪಾ ವಿಚಿತ್ರ ಎಂದು ಉತ್ತರಿಸಿದ್ದಾರೆ (Viral Video). ಸದ್ಯ ಇದು ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ

ಪ್ರತಿಷ್ಠಿತ ಆನ್‌ಲೈನ್‌ ಡೆಲಿವರಿ ಸಂಸ್ಥೆಗಳಲ್ಲೊಂದಾದ ಸ್ವಿಗ್ಗಿ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಬಗ್ಗೆ ವಿಡಿಯೊ‌ ಹಂಚಿಕೊಂಡಿದೆ. ಅಸಂಪ್ರದಾಯಿಕ ಕಾಂಬಿನೇಷನ್‌ನಲ್ಲಿ ಚಾಕೊಲೇಟ್ ಸವಿಯುವ ದೃಶ್ಯ ಬಹಳಷ್ಟು ವೈರಲ್ ಆಗಿದೆ. ವಿಡಿಯೊದಲ್ಲಿ ಡೈರಿಮಿಲ್ಕ್ ಚಾಕೊಲೇಟ್ ಅನ್ನು ಉಪ್ಪು, ಖಾರದ ಜತೆ ಸೇರಿಸುವ ದೃಶ್ಯ, 5 ಸ್ಟಾರ್ ಚಾಕೊಲೇಟ್ ಅನ್ನು ಟೊಮೆಟೊ ಕೆಚಪ್ ಜತೆ ಮಿಕ್ಸ್ ಮಾಡುವ ದೃಶ್ಯವಿದೆ.

ಸಾಮಾನ್ಯವಾಗಿ ಮ್ಯಾಗಿ ಮೇಲೆ ಚೀಸ್ ಅನ್ನು ಸೇರಿಸುತ್ತೇವೆ. ಇಲ್ಲಿ ಕಿಟ್ ಕ್ಯಾಟ್ ಅನ್ನು ಮ್ಯಾಗಿ ಜತೆ ಮಿಕ್ಸ್ ಮಾಡುವುದನ್ನು ವಿಡಿಯೊದಲ್ಲಿ ನೋಡಬಹುದು. ಹಾಗೆಯೇ ಚಾಕೊಲೇಟ್‌ನೊಂದಿಗೆ ಟೂತ್ ಪೇಸ್ಟ್ ಬಳಕೆ, ಚಾಕೊಲೇಟ್‌ ಜತೆ ಸೂಪ್ ಬಳಕೆ ಇತ್ಯಾದಿ ವಿಲಕ್ಷಣ ಖಾದ್ಯ ಹಂಚಿ ಕೊಂಡಿದ್ದು., ನಿಮ್ಮ ಚಾಕೊಲೇಟ್‌ ಲವರ್ಸ್‌ಗೆ ಶೇರ್ ಮಾಡಿ ಎನ್ನುವ ಶೀರ್ಷಿಕೆ ನೀಡಲಾಗಿದೆ.

ಸ್ವಿಗ್ಗಿ ಕಂಪನಿಯ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿನ ಈ ವಿಡಿಯೊ ವೈರಲ್ ಆಗಿದ್ದು ಇದನ್ನು ಚಾಕೊಲೇಟ್‌ ದಿನದ ಸ್ಪೆಷಲ್ ಎಂದೇ ಹೇಳಲಾಗುತ್ತಿದೆ. 1.2 ಮಿಲಿಯನ್‌ಗೂ ಅಧಿಕ ಮಂದಿ ವಿಡಿಯೊ ವೀಕ್ಷಿಸಿದ್ದು ಬಳಕೆದಾರರು ವಿಡಿಯೊ ಕುರಿತು ಮಿಶ್ರ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ:Viral Video: ಸ್ಥಳೀಯರೊಂದಿಗೆ ಕ್ರಿಕೆಟ್‌ ಆಡಿದ ನಾಗಾ ಸಾಧುಗಳು

ಒಂದಷ್ಟು ಮಂದಿ ತಮಾಷೆಯ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ. ಕೆಲವು ನೆಟ್ಟಿಗರು ಈ ಖಾದ್ಯವನ್ನು ಇಷ್ಟಪಟ್ಟಿಲ್ಲ. ಕೆಲವರು‌ ಅಸಹ್ಯವಾಗಿದೆ. ಈ ಕಾಂಬಿನೇಶನ್ ಚೆನ್ನಾಗಿಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬರು ಚಾಕೊಲೇಟ್‌ ಪ್ರಿಯರು ಈ ವಿಡಿಯೊ ನೋಡಲೇಬೇಡಿ ಎಂದು ಕಾಮೆಂಟ್ ಹಾಕಿದ್ದಾರೆ. ಕೆಲವರು ಈ ಪ್ರಯತ್ನದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರೆ, ಇನ್ನು ಕೆಲವರಿಗೆ ಈ ಪ್ರಯತ್ನ ಇಷ್ಟವಾಗಿಲ್ಲ.