Viral Video: ಸ್ಥಳೀಯರೊಂದಿಗೆ ಕ್ರಿಕೆಟ್ ಆಡಿದ ನಾಗಾ ಸಾಧುಗಳು
ಮೈದಾನವೊಂದರಲ್ಲಿ ಸ್ಥಳೀಯ ಯುವಕರು ಕ್ರಿಕೆಟ್ ಪಂದ್ಯವನ್ನಾಡುತ್ತಿದ್ದ ವೇಳೆ ನಾಗಾ ಸಾಧುಗಳು ಕೂಡ ತಂಡವೊಂದನ್ನು ರಚಿಸಿ ಯುವಕರೊಂದಿಗೆ ಕ್ರಿಕೆಟ್ ಆಡಿ ಗಮನಸೆಳೆದಿದ್ದಾರೆ. ನಾಗಾ ಸಾಧುವೊಬ್ಬರು ಬ್ಯಾಟಿಂಗ್ ಮತ್ತು ಕೀಪಿಂಗ್ ನಡೆಸುತ್ತಿರುವುದನ್ನು ವಿಡಿಯೊದಲ್ಲಿ ಗಮನಿಸಬಹುದು. ಜಿತೇಂದ್ರ ಪ್ರತಾಪ್ ಸಿಂಗ್ ಎಂಬವರು ತಮ್ಮ ಟ್ವಿಟರ್ ಎಕ್ಸ್ ಖಾತೆಯಲ್ಲಿ ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ.
![Viral Video: ಸ್ಥಳೀಯರೊಂದಿಗೆ ಕ್ರಿಕೆಟ್ ಆಡಿದ ನಾಗಾ ಸಾಧುಗಳು](https://cdn-vishwavani-prod.hindverse.com/media/original_images/naga_sadhus_cricket.jpg)
![Profile](https://vishwavani.news/static/img/user.png)
ಪ್ರಯಾಗ್‌ರಾಜ್: ಕ್ರಿಕೆಟ್ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಮಕ್ಕಳಿಂದ ಹಿಡಿದು, ಹಿರಿಯರವರೆಗೆ ಎಲ್ಲರಿಗೂ ಕ್ರಿಕೆಟ್ ಎಂದರೆ ಕ್ರೇಜ್. ಅದರಲ್ಲೂ ಭಾರತೀಯರಿಗೆ ಕ್ರಿಕೆಟ್ ಎಂದರೆ ಒಂದು ಎಮೋಷನ್. ಆಡಲು ಮೈದಾನವೇ ಬೇಕೆಂದಿಲ್ಲ. ಸಣ್ಣದೊಂದು ಗಲ್ಲಿ ಇದ್ದರೂ ಸಾಕು. ಇರುವ ಸೌಕರ್ಯದಲ್ಲೇ ಪಂದ್ಯವನ್ನಾಡುತ್ತಾರೆ. ಇದೀಗ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿಯೂ ಕ್ರಿಕೆಟ್ ಕ್ರೇಜ್ ಕಂಡುಬಂದಿದೆ. ನಾಗಾ ಸಾಧುಗಳು ಇಲ್ಲಿನ ಸ್ಥಳೀಯ ಯುವಕರೊಂದಿಗೆ ಕ್ರಿಕೆಟ್ ಆಡಿದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಮೈದಾನವೊಂದರಲ್ಲಿ ಸ್ಥಳೀಯ ಯುವಕರು ಕ್ರಿಕೆಟ್ ಪಂದ್ಯವನ್ನಾಡುತ್ತಿದ್ದ ವೇಳೆ ನಾಗಾ ಸಾಧುಗಳು ಕೂಡ ತಂಡವೊಂದನ್ನು ರಚಿಸಿ ಯುವಕರೊಂದಿಗೆ ಕ್ರಿಕೆಟ್ ಆಡಿ ಗಮನಸೆಳೆದಿದ್ದಾರೆ. ನಾಗಾ ಸಾಧುವೊಬ್ಬರು ಬ್ಯಾಟಿಂಗ್ ಮತ್ತು ಕೀಪಿಂಗ್ ನಡೆಸುತ್ತಿರುವುದನ್ನು ವಿಡಿಯೊದಲ್ಲಿ ಗಮನಿಸಬಹುದು. ಜಿತೇಂದ್ರ ಪ್ರತಾಪ್ ಸಿಂಗ್ ಎಂಬವರು ತಮ್ಮ ಟ್ವಿಟರ್ ಎಕ್ಸ್ ಖಾತೆಯಲ್ಲಿ ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ.
महाकुंभ में बाबा लोग फुर्सत में क्रिकेट खेलते हुए pic.twitter.com/MCHKHFn0h9
— 🇮🇳Jitendra pratap singh🇮🇳 (@jpsin1) February 5, 2025
ಈ ಬಾರಿಯ ಮಹಾ ಕುಂಭಮೇಳ 144 ವರ್ಷಗಳ ಬಳಿಕ ನಡೆಯುತ್ತಿದ್ದು, ಇದನ್ನು ಪರಮ ಪಾವನವೆಂದೇ ಪರಿಗಣಿಸಲಾಗುತ್ತಿದೆ. ನಿರ್ದಿಷ್ಟ ದಿನಗಳಂದು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನವನ್ನು ಕೈಗೊಳ್ಳುವುದರಿಂದ ಅಂತವರ ಪಾಪಗಳೆಲ್ಲ ತೊಳೆದು ಹೋಗಿ ಕರ್ಮ ಸುಧಾರಣೆಯಾಗುತ್ತದೆ ಎಂಬ ನಂಬಿಕೆಯೂ ಇದೆ.
ಕುಂಭಮೇಳದ ಆಚರಣೆಗಳ ಪೈಕಿ ಶಾಹಿಸ್ನಾನಕ್ಕೆ ವಿಶೇಷ ಸ್ಥಾನವಿದೆ. ಸಾಧು, ಸಂತರು ಪುಣ್ಯತಿಥಿಯಂದು ಅಮೃತ ಬಿಂದುವಿನಿಂದ ಸೃಷ್ಟಿಯಾದ ನದಿಗಳಲ್ಲಿ ಮಿಂದೇಳುವ ಪ್ರಕ್ರಿಯೆಯೇ ಶಾಹಿಸ್ನಾನ. ಸಂತರೆಲ್ಲರೂ ನದಿಯಲ್ಲಿ ಮಿಂದೇಳುತ್ತಾರೆ.
ಇದನ್ನೂ ಓದಿ Viral Video: ಜೆಸಿಬಿ ವರ್ಸಸ್ ಗಜರಾಜ- ಬಿಗ್ ಫೈಟಿಂಗ್ ವಿಡಿಯೊ ಭಾರೀ ವೈರಲ್
ಅಘೋರಿಗಳು ಕತ್ತಿ ಝಳಿಪಿಸುತ್ತಾ ಭೋಲೇನಾಥ ಎನ್ನುತ್ತಾ ಮೀಯುತ್ತಾರೆ. ಭಕ್ತರೂ ಶಾಹಿಸ್ನಾನದ ದಿನಗಳಲ್ಲಿ ಕುಂಭಕ್ಕೆ ಆಗಮಿಸಿ, ನದಿಗಳಲ್ಲಿ ಮಿಂದೇಳುತ್ತಾರೆ. ಇದರಿಂದ ಪಾಪಗಳು ಕಳೆಯುತ್ತವೆ ಎಂಬ ನಂಬಿಕೆ. ಮಿಂದವರಿಗೂ, ಅವರ ಪೂರ್ವಜರಿಗೂ ಮುಕ್ತಿ ಸಿಗುತ್ತದೆ ಎಂಬ ಪ್ರತೀತಿ ಇದೆ. ಕುಂಭ ನಡೆವ ಸಂಪೂರ್ಣ ಅವಧಿಯಲ್ಲಿ ಹಲವು ಪುಣ್ಯತಿಥಿಗಳಂದು ಶಾಹಿ ಸ್ನಾನವನ್ನು ನಡೆಯುತ್ತದೆ.