ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ತಿಂಗಳಲ್ಲಿ 1 ವಾರ ಮಾತ್ರ ಕೆಲಸ- ಸಂಬಳ ಮಾತ್ರ ಲಕ್ಷ... ಲಕ್ಷ! ಆದ್ರೂ ಇತನಿಗೆ ಸಮಾಧಾನವೇ ಇಲ್ವಂತೆ; ಏನಿದು ವೈರಲ್‌ ಫೋಸ್ಟ್‌?

ಇಲ್ಲೊಬ್ಬ ವ್ಯಕ್ತಿ ತಿಂಗಳಲ್ಲಿ 1 ವಾರ ಮಾತ್ರ ಕೆಲಸ ಮಾಡಿ ಲಕ್ಷಾಂತರ ರೂಪಾಯಿ ಸಂಬಳ ಗಳಿಸಿದ್ರೂ ಕೂಡ ಆತನಿಗೆ ತೃಪ್ತಿಯಾಗಿಲ್ಲವಂತೆ. ಈ ಬಗ್ಗೆ ಆತ ತನ್ನ ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ ಹೇಳಿಕೊಂಡಿದ್ದು ಈ ಸುದ್ದಿ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral News) ಆಗಿದೆ.

ಲಕ್ಷ ಲಕ್ಷ ಸಂಬಳ ಎಣಿಸಿದ್ರೂ ಈತನಿಗೆ ನೆಮ್ಮದಿ ಇಲ್ವಂತೆ; ಯಾರೀತ....?

Profile pavithra May 9, 2025 2:55 PM

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಉದ್ಯೋಗ ಕ್ಷೇತ್ರದಲ್ಲಿ ಸ್ಪರ್ಧೆ ಎಷ್ಟು ಹೆಚ್ಚಾಗಿದೆಯೆಂದರೆ, ಎಷ್ಟೇ ದೊಡ್ಡ ಡಿಗ್ರಿ ಪಡೆದ್ರೂ, ಅನೇಕ ಮಂದಿಗೆ ಕೆಲಸನೇ ಸಿಗುತ್ತಿಲ್ಲ. ದಿನಕ್ಕೆ ಒಂಬತ್ತರಿಂದ ಹತ್ತು ಗಂಟೆಗಳ ಕಾಲ ಕೆಲಸ ಮಾಡಿದ್ರು, ಜನರಿಗೆ ಕೂಡಲೇ ಬಡ್ತಿ ಸಿಗುವುದಿಲ್ಲ. ಅಂತಹದರಲ್ಲಿ ಇಲ್ಲೊಬ್ಬ ವ್ಯಕ್ತಿ ತಿಂಗಳಲ್ಲಿ 1 ವಾರ ಮಾತ್ರ ಕೆಲಸ ಮಾಡುವ ಮೂಲಕ ಲಕ್ಷಾಂತರ ಸಂಬಳವನ್ನು ಗಳಿಸಿದ್ರೂ ಕೂಡ ಆತನಿಗೆ ಸಮಾಧಾನವೇ ಇಲ್ಲವಂತೆ. ಈ ಬಗ್ಗೆ ಆತ ತನ್ನ ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ ಹೇಳಿಕೊಂಡಿದ್ದು ಇದೀಗ ಸಿಕ್ಕಾಪಟ್ಟೆ ವೈರಲ್(Viral News) ಆಗಿದೆ.

ಈ ವ್ಯಕ್ತಿ ತಿಳಿಸಿರುವಂತೆ ಆತ ಪ್ರತಿವರ್ಷ 68 ಲಕ್ಷ ರೂಗಳನ್ನು ಗಳಿಸುತ್ತಾನಂತೆ. ಆದರೆ ಆಶ್ಚರ್ಯಕರವೆಂದರೆ ಆತ ಪ್ರತಿ ತಿಂಗಳು ಕೇವಲ ಒಂದು ವಾರ ಮಾತ್ರ ಕೆಲಸ ಮಾಡುತ್ತಾನಂತೆ. ಉಳಿದ ಸಮಯದಲ್ಲಿ, ಅವನು ಟಿವಿ ಕಾರ್ಯಕ್ರಮಗಳನ್ನು ನೋಡುವುದು, ಡ್ರೈವಿಂಗ್ ಮಾಡುವುದು ಅಥವಾ ಪಾಡ್‌ಕಾಸ್ಟ್‌ಗಳನ್ನು ಕೇಳುವುದರಲ್ಲಿ ಕಳೆಯುತ್ತಾನಂತೆ.ಇನ್ನೂ ಒಂದು ವಿಶೇಷ ಸಂಗತಿ ಏನೆಂದರೆ, ಅವನು ಈ ಕೆಲಸವನ್ನು ಶುರುಮಾಡಿದಾಗ ಅವನು ಈ ಕ್ಷೇತ್ರದಲ್ಲಿ ಯಾವುದೇ ಪದವಿ ಅಥವಾ ವಿಶೇಷ ಶಿಕ್ಷಣವನ್ನು ಪಡೆದಿರಲಿಲ್ಲವಂತೆ. ಹಾಗಾಗಿ ಶುರುವಿನಲ್ಲಿ ಅವನು ತುಂಬಾ ಕಷ್ಟಪಟ್ಟು ಕೆಲಸ ಮಾಡಬೇಕಾಗಿತ್ತಂತೆ. ಆದರೆ ಈಗ ಆ ಕೆಲಸವನ್ನು ಲೀಲಾಜಾಲವಾಗಿ ಯಾವುದೇ ತಪ್ಪಿಲ್ಲದೇ ಮಾಡಿ ಮುಗಿಸುತ್ತಾನಂತೆ.

ಇಷ್ಟು ಹಣ ಗಳಿಸಿದ್ರೂ ಆತನಿಗೆ ಸಮಾಧಾನವಿಲ್ಲವಂತೆ! ಹಾಗಂತ ಕಂಪನಿಯ ಬಗ್ಗೆ ಯಾವುದೇ ದೂರುಗಳಿಲ್ಲವಂತೆ. ಆತ ಉತ್ತಮ ಕೆಲಸಗಾರ ಮತ್ತು ತನ್ನ ಗ್ರಾಹಕರೊಂದಿಗೆ ಉತ್ತಮ ಸಂಬಂಧ ಕೂಡ ಹೊಂದಿದ್ದಾನಂತೆ. ಆತ ಎಲ್ಲವನ್ನೂ ಸಮಯಕ್ಕೆ ಸರಿಯಾಗಿ ಮಾಡುತ್ತಾನಂತೆ. ಆತ ಸಾಕಷ್ಟು ಅಧ್ಯಯನ ಮಾಡುತ್ತಾನಂತೆ. ವರ್ಷಕ್ಕೆ 200 ಪುಸ್ತಕಗಳನ್ನು ಓದುತ್ತಾನಂತೆ. ಆದರೂ ಆತನಿಗೆ ಬೇಸರ ಕಾಡುತ್ತಿದೆಯಂತೆ.

ಈ ಸುದ್ದಿಯನ್ನೂ ಓದಿ:‌Viral Video: 8 ವರ್ಷದ ಬಾಲಕನ ಮೇಲೆ ದಾಳಿ ಮಾಡಿದ ರೇಬಿಸ್ ಸೋಂಕಿತ ಬೀದಿ ಶ್ವಾನ; ವಿಡಿಯೊ ವೈರಲ್

ಅವನ ಪೋಸ್ಟ್ ವೈರಲ್ ಆದ ಕೂಡಲೇ, ಈ ಪೋಸ್ಟ್‌ಗೆ ಅನೇಕ ಜನರು ಕಾಮೆಂಟ್ ಮಾಡಿದ್ದಾರೆ. ವ್ಯಕ್ತಿಯ ಅಂತಹ ಆರಾಮದಾಯಕ ಕೆಲಸದ ಬಗ್ಗೆ ಕೇಳಿ ನೆಟ್ಟಿಗರಿಗೆ ಆಶ್ಚರ್ಯವಾಗಿದೆ. ಒಬ್ಬರು, 'ಇದು ಯಾವ ಕೆಲಸ?' ಎಂದು ಕೇಳಿದ್ದಾರೆ. ಇನ್ನೊಬ್ಬರು, 'ನೀವು ಮತ್ತೊಂದು ಕೆಲಸವನ್ನು ಮಾಡಬೇಕು’ ಎಂದು ಸಲಹೆ ನೀಡಿದ್ದಾರೆ. ಇನ್ನೊಬ್ಬರು, “ ನೀವು ನಿಮ್ಮ ಸಮಯ ಮತ್ತು ಸಂಬಳವನ್ನು ಸರಿಯಾಗಿ ಬಳಸಿಕೊಳ್ಳಿ” ಎಂದು ಹೇಳಿದ್ದಾರೆ.