ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ್​ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Viral Video: 8 ವರ್ಷದ ಬಾಲಕನ ಮೇಲೆ ದಾಳಿ ಮಾಡಿದ ರೇಬಿಸ್ ಸೋಂಕಿತ ಬೀದಿ ಶ್ವಾನ; ವಿಡಿಯೊ ವೈರಲ್

Rabies infected street dog attacks: ರೇಬಿಸ್ ಪೀಡಿತ ಬೀದಿ ನಾಯಿಯೊಂದು 8 ವರ್ಷದ ಬಾಲಕನೊಬ್ಬನ ಮೇಲೆ ದಾಳಿ ನಡೆಸಿ ಆತನ ಮೇಲಿನ ತುಟಿಗಳನ್ನು ಕಚ್ಚಿ ಹರಿದ ಪರಿಣಾಮ ಬಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಮೀರತ್‍ನಲ್ಲಿ ನಡೆದಿದೆ. ಈ ಭಯಾನಕ ದಾಳಿಯು ಈ ಪ್ರದೇಶದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿ, ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಬಾಲಕನ ಮೇಲೆ ರೇಬಿಸ್ ಪೀಡಿತ ಬೀದಿ ಶ್ವಾನದ ಭೀಕರ ದಾಳಿ!

Profile pavithra May 7, 2025 4:58 PM

ಲಖನೌ: ರೇಬಿಸ್ ಪೀಡಿತ ಬೀದಿ ನಾಯಿಯೊಂದು 8 ವರ್ಷದ ಬಾಲಕನೊಬ್ಬನ ಮೇಲೆ ದಾಳಿ ನಡೆಸಿದ ಪರಿಣಾಮ ಬಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಮೀರತ್‍ನಲ್ಲಿ ನಡೆದಿದೆ. ಈ ಭಯಾನಕ ದಾಳಿಯು ಈ ಪ್ರದೇಶದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಹಾಗೂ ನಾಯಿ ಬಾಲಕನ ಮೇಲಿನ ತುಟಿಯನ್ನು ಕಚ್ಚಿದ ಪೋಟೊವೊಂದು ಸೋಶಿಯಲ್ ಮೀಡಿಯಾದಲ್ಲಿ(Viral Video) ಕಾಣಿಸಿಕೊಂಡಿದೆ.

ದೌರಾಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ರುಹಾಸಾ ಗ್ರಾಮದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಮನೆಯ ಹೊರಗೆ ಆಟವಾಡುತ್ತಿದ್ದ 8 ವರ್ಷದ ಬಾಲಕನ ಮೇಲೆ ಬೀದಿ ನಾಯಿ ದಾಳಿ ಮಾಡಿದೆ. ಬಾಲಕನನ್ನು ಅನಾಸ್ ಎಂದು ಗುರುತಿಸಲಾಗಿದ್ದು, ಇದ್ದಕ್ಕಿದ್ದಂತೆ ನಾಯಿ ಅವನ ಮೇಲೆ ದಾಳಿ ಮಾಡಿ ಅವನ ಮೇಲಿನ ತುಟಿಯನ್ನು ಕಚ್ಚಿ ಹರಿದಿದ್ದ ಕಾರಣ ಅವನ ಸ್ಥಿತಿ ಗಂಭೀರವಾಗಿದೆ. ದಾಳಿಯ ನಂತರ, ಗಾಯಗೊಂಡ ಬಾಲಕನನ್ನು ದೆಹಲಿಯ ಆಸ್ಪತ್ರೆಗೆ ಕಳುಹಿಸಲಾಗಿದೆ. ಅಲ್ಲಿ ಅವನು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾನೆ. ಅದು ರೇಬಿಸ್ ಪೀಡಿತ ನಾಯಿ ಎನ್ನಲಾಗಿದೆ.

ವಿಡಿಯೊ ಇಲ್ಲಿದೆ ನೋಡಿ...



ಈ ಭಯಾನಕ ದಾಳಿಯನ್ನು ಅಲ್ಲಿ ಅಳವಿಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಭಯಾನಕ ಘಟನೆಯು ಗ್ರಾಮಸ್ಥರಲ್ಲಿ ಆಕ್ರೋಶ ಮತ್ತು ಭಯವನ್ನು ಹುಟ್ಟುಹಾಕಿದೆ. ಹಾಗಾಗಿ ಇತರರಿಗೆ ಹಾನಿಯಾಗಬಾರದೆಂದು ಅವರು ನಾಯಿಯನ್ನು ಹಿಡಿದು ಕೊಂದಿದ್ದಾರೆ ಎಂದು ವರದಿಯಾಗಿದೆ. ಈ ಭಯಾನಕ ಘಟನೆ ಬೆಳಕಿಗೆ ಬಂದ ನಂತರ, ಮಕ್ಕಳು ಮತ್ತು ಇತರ ನಿವಾಸಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸಲು ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ʼಇದು ತೇಲುವ ಹೋಟೆಲ್ʼ- ಇಲ್ಲಿ ಒಂದು ರಾತ್ರಿ ಕಳೆಯಲು ಪಾವತಿಸಬೇಕು ಬರೋಬ್ಬರಿ 59 ಲಕ್ಷ ರೂ.!

ನಾಯಿಗಳು ಮನುಷ್ಯರ ಮೇಲೆ ದಾಳಿ ನಡೆದ ವಿಡಿಯೊ ವೈರಲ್ ಆಗಿದ್ದು ಇದೇ ಮೊದಲಲ್ಲ. ಈ ಹಿಂದೆ ನಾಯಿ ದಾಳಿಯಿಂದ ಅನೇಕ ಜನರು ಗಂಭೀರವಾಗಿ ಗಾಯಗೊಂಡ ಅನೇಕ ಘಟನೆಗಳು ಬೆಳಕಿಗೆ ಬಂದಿವೆ. ಇತ್ತೀಚೆಗಷ್ಟೇ ಗ್ರೇಟರ್ ನೋಯ್ಡಾ ಪಶ್ಚಿಮದಲ್ಲಿ ನಡೆದ ಘಟನೆಯಲ್ಲಿ, ಸಾಕು ನಾಯಿ ದಾಳಿ ಮಾಡಿದ ಪರಿಣಾಮ ಮಹಿಳೆಯೊಬ್ಬರು 20 ಅಡಿ ಎತ್ತರದಿಂದ ಬಿದ್ದಿದ್ದಳು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಘಟನೆಯು ಐಷಾರಾಮಿ ಕಾಲೋನಿಯಲ್ಲಿ ಸಂಭವಿಸಿದೆ ಎಂದು ವರದಿಯಾಗಿದೆ ಮತ್ತು ಅಂತಹ ಎತ್ತರದಿಂದ ಬಿದ್ದ ನಂತರ ಮಹಿಳೆಯ ಬೆನ್ನುಹುರಿಗೆ ಗಂಭೀರ ಗಾಯಗಳಾಗಿವೆ. ಈ ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸಿ ನಾಯಿ ಮಾಲೀಕರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದರು.