ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮುಂಬೈ ವಿಮಾನ ನಿಲ್ದಾಣದಲ್ಲಿ 10 ಗಂಟೆ ಕಳೆದ ಪಾಕಿಸ್ತಾನಿ‌ ಮಹಿಳೆ: ಅನುಮಾನ ವ್ಯಕ್ತಪಡಿಸಿದ ನೆಟ್ಟಿಗರು

Viral Video: ಪಾಕಿಸ್ತಾನಿ ಮಹಿಳೆಯೊಬ್ಬರು ಮುಂಬೈ ವಿಮಾನ ನಿಲ್ದಾಣದಲ್ಲಿ ಹಲವು ಗಂಟೆಗಳ ಕಾಲ ವಿಶ್ರಾಂತಿ ಪಡೆದ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಲಂಡನ್‌ನಿಂದ ನೇಪಾಳಕ್ಕೆ ಪ್ರಯಾಣ ಮಾಡುತ್ತಿದ್ದ ವಂಜಿಪಾ ಎಂಬ ಮಹಿಳೆ ಭಾರತದ ಭದ್ರತಾ ಸಿಬ್ಬಂದಿಯ ಬಗ್ಗೆ ಮೆಚ್ಚುಗೆ ಕೂಡ ವ್ಯಕ್ತ ಪಡಿಸಿದ್ದಾರೆ.

ಮುಂಬೈ ವಿಮಾನ ನಿಲ್ದಾಣದಲ್ಲಿ 10 ಗಂಟೆ ಸಮಯ ಕಳೆದ ಪಾಕಿಸ್ತಾನಿ‌ ಮಹಿಳೆ

ಮುಂಬೈ ವಿಮಾನ ನಿಲ್ದಾಣದಲ್ಲಿ ಸಮಯ ಕಳೆದ ಪಾಕಿಸ್ತಾನಿ‌ ಮಹಿಳೆ -

Profile
Pushpa Kumari Apr 14, 2026 11:35 PM

ಮುಂಬೈ, ಏ. 14: ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡುವ ವಿದೇಶಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಪಾಕಿಸ್ತಾನಿ ಮಹಿಳೆಯೊಬ್ಬರು ಮುಂಬೈ ವಿಮಾನ ನಿಲ್ದಾಣದಲ್ಲಿ ಹಲವು ಗಂಟೆಗಳ ಕಾಲ ವಿಶ್ರಾಂತಿ ಪಡೆದ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ (Viral News) ಮಾಡಿ ಕೊಂಡಿದ್ದಾರೆ. ಲಂಡನ್‌ನಿಂದ ನೇಪಾಳಕ್ಕೆ ಪ್ರಯಾಣ ಮಾಡುತ್ತಿದ್ದ ವಂಜಿಪಾ ಎಂಬ ಮಹಿಳೆ ಭಾರತದ ಭದ್ರತಾ ಸಿಬ್ಬಂದಿಯ ಬಗ್ಗೆ ಮೆಚ್ಚುಗೆ ಕೂಡ ವ್ಯಕ್ತ ಪಡಿಸಿದ್ದಾರೆ.

ಪಾಕಿಸ್ತಾನ ಪಾಸ್‌ಪೋರ್ಟ್ ಇಟ್ಟುಕೊಂಡು ಭಾರತದ ಮೂಲಕ ಪ್ರಯಾಣಿಸುವುದು ಎಂದರೆ ಯಾರಿಗಾದರೂ ಆತಂಕ ಸಹಜವಾಗಿರುತ್ತದೆ. ವಂಜಿಪಾ ಲಂಡನ್‌ನಿಂದ ನೇಪಾಳಕ್ಕೆ ಮುಂಬೈ ಮೂಲಕ ಪ್ರಯಾಣಿಸುತ್ತಿದ್ದರು. ಆದರೆ ಮುಂಬೈಯಲ್ಲಿ 10 ಗಂಟೆಗಳ ಕಾಲ ಲೇ ಓವರ್ (Layover) ಇತ್ತು. ವೀಸಾ ಇಲ್ಲದೆ ವಿಮಾನ ನಿಲ್ದಾಣದಿಂದ ಹೊರಡಲು ಅವಕಾಶವಿಲ್ಲದ ಕಾರಣ ಅವರು ಸುಮಾರು 10 ಗಂಟೆಗಳ ಕಾಲ ಅಂತಾರಾರಾಷ್ಟ್ರೀಯ ಟರ್ಮಿನಲ್ ಒಳಗೆ ಇದ್ದರು.

ವಿಡಿಯೊ ನೋಡಿ:

ಈ ಪ್ರವಾಸದ ಮೊದಲು, ಅವರು ಆತಂಕಕ್ಕೊಳಗಾಗಿದ್ದರು. ಯಾವುದೇ ಸಾಮಾನ್ಯ ವ್ಯಕ್ತಿಯಂತೆ, ಭಾರತ ಮತ್ತು ಪಾಕಿಸ್ತಾನ ಉತ್ತಮ ಭಾಂದವ್ಯ ಹೊಂದಿಲ್ಲದ ಕಾರಣ ವಿಮಾನ ಹತ್ತಲು ಹೆದರುತ್ತಿದ್ದೆ ಎಂದು ಅವರು ಹೇಳಿದ್ದಾರೆ‌. ಕೊನೆಗೂ ಮುಂಬೈಗೆ ಬಂದಿಳಿದಿದ್ದು ಭದ್ರತಾ ತಪಾಸಣೆಗಳು ಸರಾಗವಾಗಿ ನಡೆದವು ಮತ್ತು ಯಾವುದೇ ತೊಂದರೆ ಎದುರಾಗಲಿಲ್ಲ ಎಂದು ಹೇಳಿದ್ದಾರೆ.

ಮುಸ್ಲಿಂ ಪತ್ರಕರ್ತನ ಮನೆ ನೆಲಸಮ; ತನ್ನ ಭೂಮಿಯನ್ನೇ ಗಿಫ್ಟ್‌ ಕೊಟ್ಟ ಹಿಂದೂ ವ್ಯಕ್ತಿ!

ವಿಮಾನ ನಿಲ್ದಾಣದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಅವರಿಗೆ ವಾಟ್ಸ್‌ಆ್ಯಪ್‌ ಸಂದೇಶವೊಂದು ಬಂದಿತ್ತು. ಈ ಬಗ್ಗೆ ಅವರು ವಿವರಿಸಿದ್ದಾರೆ. ʼʼನಿಮ್ಮ ಲಗೇಜ್‌ನಲ್ಲಿ ಅನುಮಾನಾಸ್ಪದ ವಸ್ತುವಿದೆ ಎಂಬ ಆ ಸಂದೇಶ ನೋಡಿ ಅವರು ಬೆಚ್ಚಿ ಬಿದ್ದಿದ್ದರು. ಚೆಕ್-ಇನ್ ಮಾಡಿದ ಬಳಿಕ ಲಗೇಜ್‌ನಿಂದ ನನ್ನ ಪವರ್ ಬ್ಯಾಂಕ್ ತೆಗೆಯಲು ಹೇಳಿದರು. ಅಲ್ಲಿನ ಸಿಬ್ಬಂದಿ ಸ್ನೇಹದಿಂದ ವರ್ತಿಸಿದರುʼʼ ಎಂದಿದ್ದಾರೆ. ಅದಾದ ನಂತರ ಅವರು ಉಪಾಹಾರ ಸೇವಿಸಿ ನೇಪಾಳಕ್ಕೆ ಪ್ರಯಾಣ ಮುಂದುವರಿಸಿದರು. ಈ ದೃಶ್ಯ ನೋಡಿದ ನೆಟ್ಟಿಗರು ನಾನಾ ಬಗೆಯ ಕಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು "ನಮ್ಮ ನಡುವೆ ಏನೇ ದ್ವೇಷ ಇದ್ದರೂ ಅತಿಥಿಗಳನ್ನು ಗೌರವಿಸುವುದು ನಮಗೆ ತಿಳಿದಿದೆ"ಎಂದು ಬರೆದಿದ್ದಾರೆ.