ಪ್ರಾಣವನ್ನೇ ಪಣಕ್ಕಿಟ್ಟು ಬಾವಿಗೆ ಬಿದ್ದ ಸಿಂಹವನ್ನು ರಕ್ಷಿಸಿದ ಅರಣ್ಯಾಧಿಕಾರಿಗಳು; ರೋಚಕ ಕಾರ್ಯಾಚರಣೆಯ ವಿಡಿಯೊ ವೈರಲ್
Viral Video: ಗುಜರಾತ್‌ನಲ್ಲಿ ಬೇಟೆಯಾಡುತ್ತಿದ್ದ ಊರ ಬಳಿಗೆ ಬಂದ ಸಿಂಹ ಆಕಸ್ಮಿಕವಾಗಿ ಬಾವಿಗೆ ಬಿದ್ದಿದೆ. ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಸಿಂಹವನ್ನು ಅರಣ್ಯಾಧಿಕಾರಿಗಳು ತಮ್ಮ ಜೀವವನನು ಒತ್ತೆ ಇಟ್ಟು ರಕ್ಷಿಸಿದ್ದಾರೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಬಾವಿಗೆ ಬಿದ್ದು ಸಾವಿನಿಂದ ಪಾರಾದ ಸಿಂಹ -
ಗಾಂಧಿನಗರ, ಏ. 14: ಗುಜರಾತ್‌ನಲ್ಲಿ ಅಪರೂಪದ ಘಟನೆಯೊಂದು ಬೆಳಕಿಗೆ ಬಂದಿದೆ. ಬೇಟೆಯಾಡುತ್ತ ಕಾಡಿನಿಂದ ನಾಡಿಗೆ ಬಂದ ಸಿಂಹ ಆಕಸ್ಮಿಕವಾಗಿ ಬಾವಿಗೆ ಬಿದ್ದಿದೆ. ಹೀಗೆ ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಸಿಂಹವನ್ನು ಅರಣ್ಯಾಧಿಕಾರಿಗಳು ತಮ್ಮ ಜೀವವನ್ನೇ ಪಣಕ್ಕಿಟ್ಟು ರಕ್ಷಿಸಿದ್ದಾರೆ. ಸದ್ಯ ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದೆ.
ಗುಜರಾತ್‌ನ ಉನಾ ತಾಲೂಕಿನ ನವಬಂದರ್ ಬಳಿ ಈ ಘಟನೆ ನಡೆದಿದೆ. ಸಿಂಹವೊಂದು ಆಕಸ್ಮಿಕವಾಗಿ ನೀರು ತುಂಬಿದ ಬಾವಿಗೆ ಬಿದ್ದಿತ್ತು. ಬಳಿಕ ಅರಣ್ಯ ಅಧಿಕಾರಿಗಳು ತ್ವರಿತ ಸಮಯ ಪ್ರಜ್ಞೆ ಮತ್ತು ಧೈರ್ಯದಿಂದ ಹಗ್ಗಗಳನ್ನು ಬಳಸಿ ಸಿಂಹವನ್ನು ರಕ್ಷಿಸಿದ್ದಾರೆ. ಸಿಂಹವನ್ನು ಪಂಜರದಲ್ಲಿ ಇರಿಸಿ ಜಸಂಧರ್ ಪ್ರಾಣಿ ರಕ್ಷಣಾ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.
ವಿಡಿಯೊ ನೋಡಿ:
A wild chase turned into a rescue mission in Gujarat.
— Harsh Sanghavi (@sanghaviharsh) April 13, 2026
Near the forested stretch of Navabandar in Una taluka, a majestic lion, likely in search of prey, accidentally fell into an open farm well.
What followed was a race against time.
With swift coordination and remarkable… pic.twitter.com/Ssj7if76Hz
ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ದೃಶ್ಯ ಸುಮಾರು 4,318 ವೀಕ್ಷಣೆಗಳನ್ನು ಗಳಿಸಿದೆ. ರಕ್ಷಣಾ ಕಾರ್ಯಾಚರಣೆಯ ವಿಡಿಯೊವನ್ನು ಗುಜರಾತ್ ಉಪಮುಖ್ಯಮಂತ್ರಿ ಹರ್ಷ್ ಸಾಂಘವಿ ಕೂಡ ಶೇರ್ ಮಾಡಿಕೊಂಡಿದ್ದಾರೆ.
ನಿದ್ರೆಯಲ್ಲೂ 'ರೀಲ್ಸ್' ಸ್ಕ್ರಾಲ್' ಮಾಡುವ ಪುಟ್ಟ ಬಾಲಕಿ; ಪೋಷಕರ ಆತಂಕ!
ಅನೇಕರು ಬಾವಿಯ ಸುತ್ತುವರಿದು ಸಿಂಹವನ್ನು ನೀರಿನಿಂದ ರಕ್ಷಿಸಲು ಹಗ್ಗವನ್ನು ಎಳೆಯುವುದನ್ನು ಕಾಣಬಹುದು. ಸಿಂಹವನ್ನು ಯಾವುದೇ ಹಾನಿಯಾಗದಂತೆ ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸಿಂಹ ಈಗ ಸುರಕ್ಷಿತವಾಗಿದ್ದು, ಜಸಂಧರ್ ಪ್ರಾಣಿ ಸಂರಕ್ಷಣಾ ಕೇಂದ್ರದ ನಿಗಾದಲ್ಲಿದೆ.