Palaash-Smriti Mandhana: ತೆನು ಲೇಕೆ ಸಾಂಗ್‌ಗೆ ಮಸ್ತ್ ಸ್ಟೆಪ್ ಹಾಕಿದ ಪಲಾಶ್- ಸ್ಮೃತಿ ಮಂಧಾನ; ವಿಡಿಯೋ ಸಖತ್ ವೈರಲ್
Smriti Mandhana Wedding : ಕ್ರಿಕೆಟ್ ತಾರೆ ಸ್ಮೃತಿ ಮಂಧಾನ ವಿವಾಹದಲ್ಲಿ ಸಂಭ್ರಮದಲ್ಲಿದ್ದಾರೆ. ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಅವರ ಮಂಧಾನ ಇಂದು (ಭಾನುವಾರ ನ. 23) ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಪಲಾಶ್ ಹಾಗೂ ಸ್ಮೃತಿ ಮಂಧಾನ ಅವರ ಮೆಹಂದಿ, ಅರಿಶಿಣ ಶಾಸ್ತ್ರದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.
ಸ್ಮೃತಿ ಹಾಗೂ ಪಲಾಶ್ ವಿವಾಹ -
ಮುಂಬೈ: ಕ್ರಿಕೆಟ್ ತಾರೆ ಸ್ಮೃತಿ ಮಂಧಾನ (Smriti Mandhana) ವಿವಾಹದಲ್ಲಿ ಸಂಭ್ರಮದಲ್ಲಿದ್ದಾರೆ. ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಅವರ (Palaash-Smriti Mandhana) ಮಂಧಾನ ಇಂದು (ಭಾನುವಾರ ನ. 23) ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಪಲಾಶ್ ಹಾಗೂ ಸ್ಮೃತಿ ಮಂಧಾನ ಅವರ ಮೆಹಂದಿ, ಅರಿಶಿಣ ಶಾಸ್ತ್ರದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ (Viral Video) ವೈರಲ್ ಆಗಿದ್ದವು. ಭಾರತೀಯ ಕ್ರಿಕೆಟ್ ಟೀಂ ವನಿತೆಯರು ಸ್ಮೃತಿ ಮದುವೆಯಲ್ಲಿ ಸಖತ್ ಹೆಜ್ಜೆ ಹಾಕಿ ಮಿಂಚಿದ್ದರು. ಇದೀಗ ವಧು- ವರರ ನೃತ್ಯ ಕಾರ್ಯಕ್ರಮ ವೈರಲ್ ಆಗಿದೆ.
ಸ್ಮೃತಿ ಮತ್ತು ಪಲಾಶ್ ಮಸ್ತ್ ಡ್ಯಾನ್ಸ್ ಮಾಡಿರುವ ವಿಡಿಯೋವೊಂದು ವೈರಲ್ ಆಗಿದೆ. ಪಲಾಶ್ ಅವರ ಕುತ್ತಿಗೆಗೆ ಸ್ಮೃತಿ ಹಾರ ಹಾಕುವುದನ್ನುವೀಡಿಯೊದಲ್ಲಿ ಕಾಣಬಹುದು. ವೀಡಿಯೊಗಳಲ್ಲಿ ಸ್ಮೃತಿ ಮತ್ತು ಪಲಾಶ್ 'ಸಲಾಮ್-ಎ-ಇಷ್ಕ್' ಚಿತ್ರದ 'ತೆನು ಲೆ ಕೆ ಮೈ ಜವಾಂಗಾ' ಹಾಡಿಗೆ ನೃತ್ಯ ಮಾಡುತ್ತಿದ್ದಾರೆ. ಪ್ರದರ್ಶನದ ಸಮಯದಲ್ಲಿ, ಜೋಡಿ ತಮ್ಮ ನೃತ್ಯವನ್ನು ಪ್ರಾರಂಭಿಸುವ ಮೊದಲು ಸ್ಮೃತಿ ಪಲಾಶ್ ಅವರ ಕುತ್ತಿಗೆಗೆ ಹಾರವನ್ನು ಹಾಕಿದರು. ಮತ್ತೊಂದು ವೀಡಿಯೊದಲ್ಲಿ ಪಲಾಶ್ 'ಗುಲಾಬಿ ಆಂಖೇ' ಎಂಬ ಐಕಾನಿಕ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
Smriti Mandhana and Palash muchhal dancing together ❤️ pic.twitter.com/cIFvv3WkCl
— JosD92 (@JosD92official) November 22, 2025
ಸಂಗೀತ ರಾತ್ರಿಗೂ ಮುನ್ನ, ಮೆಹಂದಿ ಸಮಾರಂಭದ ಹಲವಾರು ಚಿತ್ರಗಳು ವೈರಲ್ ಆಗಿದ್ದವು. ಸ್ಮೃತಿ ಸಾಂಪ್ರದಾಯಿಕ ನೇರಳೆ ಉಡುಪನ್ನು ಧರಿಸಿದ್ದರೆ, ಪಲಾಶ್ ಈ ಕಾರ್ಯಕ್ರಮಕ್ಕಾಗಿ ಕಸೂತಿ ಮಾಡಿದ ಜಾಕೆಟ್ ಹೊಂದಿರುವ ಕ್ರೀಮ್ ಕುರ್ತಾವನ್ನು ಹಾಕಿಕೊಂಡಿದ್ದರು. ಕನ್ನಡದ ಶ್ರೇಯಾಂಕಾ ಪಾಟೀಲ್ ಸೇರಿದಂತೆ ಹಲವು ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರು ಮೆಹಂದಿ ಶಾಸ್ತ್ರದ ವೇಳೆ ಡ್ಯಾನ್ಸ್ ಮಾಡಿ ಮಿಂಚಿದ್ದಾರೆ.
ಸ್ಪೆಷಲ್ ವಿಡಿಯೊ ಮೂಲಕ ಪಾಲಶ್ ಮುಚ್ಚಲ್ ಜತೆಗಿನ ನಿಶ್ಚಿತಾರ್ಥ ಘೋಷಿಸಿದ ಸ್ಮೃತಿ ಮಂಧಾನ
ಇತ್ತೀಚೆಗೆ, ಸ್ಮೃತಿಯನ್ನು ಪಲಾಶ್ ಮುಚ್ಚಲ್ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣಕ್ಕೆ ಕರೆದೊಯ್ದು ಲವ್ ಪ್ರಪೋಸ್ ಮಾಡಿದರು. ಪಲಾಶ್ ಮುಚ್ಚಲ್ ಸ್ಮೃತಿಯ ಬೆರಳಿಗೆ ವಜ್ರದ ಉಂಗುರವನ್ನು ಹಾಕಿದರು. ಈ ವಿಡಿಯೋವನ್ನು ಪಲಾಶ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಸ್ಮೃತಿ ಮಂಧಾನ ಮತ್ತು ಪಲಾಶ್ ಮುಚ್ಚಲ್ ನಡುವೆ ಪ್ರೀತಿ 2019 ರಲ್ಲಿ ಪ್ರಾರಂಭವಾಗಿತ್ತು. ಆದರೆ ಈ ಸ್ಟಾರ್ ಜೋಡಿ ತಮ್ಮ ಪ್ರೇಮಕಥೆಯನ್ನು ಎಲ್ಲಿಯೂ ಬಹಿರಂಗಪಡಿಸಿರಲಿಲ್ಲ. ಆದರೆ, ಇಬ್ಬರು ಪ್ರೇಮ ಸಂಬಂಧವು 2024 ರಲ್ಲಿ ಬಹಿರಂಗ ಪಡಿಸಿದ್ದರು. ಇದೀಗ ಸಪ್ತಪದಿ ತುಳಿಯಲು ಜೋಡಿ ಸಜ್ಜಾಗಿದೆ.