ಸಮುದ್ರ ಅಲೆಗಳ ಮಧ್ಯೆ ಮಗು ಸಿಲುಕಿಕೊಂಡರೂ ರೀಲ್ಸ್ ಮಾಡೋದ್ರಲ್ಲಿ ಪೋಷಕರು ಬ್ಯುಸಿ! ವಿಡಿಯೊ ವೈರಲ್
Viral Video: ಸೋಷಿಯಲ್ ಮೀಡಿಯಾದಲ್ಲಿ ಲೈಕ್, ವೀವ್ಸ್‌ಗಾಗಿ ಅಪಾಯಕಾರಿ ರೀಲ್ಸ್ ಮಾಡಲೂ ಕೆಲವರು ಹೇಸುವುದಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಸೋಷಿಯಲ್ ಮೀಡಿಯಾದಲ್ಲಿ ಆಘಾತಕಾರಿ ವಿಡಿಯೊವೊಂದು ವೈರಲ್ ಆಗುತ್ತಿದೆ. ಕಡಲ ತೀರದಲ್ಲಿ ಪೋಷಕರು ಮಗುವನ್ನು ಒಬ್ಬಂಟಿಯಾಗಿ ಬಿಟ್ಟು ರೀಲ್ಸ್‌ನಲ್ಲಿ ಮಗ್ನರಾಗಿದ್ದಾರೆ. ಸಮುದ್ರದ ಅಲೆಗೆ ಸಿಲುಕಿ ಮಗು ಅಪಾಯದಲ್ಲಿದಾಗ ಅಪರಿಚಿತ ವ್ಯಕ್ತಿಯೊರ್ವರು ರಕ್ಷಿಸಿದ್ದಾರೆ.
ಕಡಲತೀರದಲ್ಲಿ ಮಗುವನ್ನು ನಿರ್ಲಕ್ಷಿಸಿ ರೀಲ್ಸ್ ಚಿತ್ರೀಕರಣದಲ್ಲಿ ಮುಳುಗಿದ ಪೋಷಕರು -
ನವದೆಹಲಿ, ಅ. 21: ಕೈಯಲ್ಲೊಂದು ಮೊಬೈಲ್ ಇದ್ದರೆ ಸಾಕು, ಜನ ಪ್ರಪಂಚವನ್ನೇ ಮರೆತು ಬಿಡುತ್ತಾರೆ. ಅಷ್ಟರ ಮಟ್ಟಿಗೆ ಕೆಲವರು ಮೊಬೈಲ್ ಮೇಲೆ ಅವಲಂಬಿತರಾಗಿದ್ದಾರೆ. ಅದರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ಲೈಕ್, ವೀವ್ಸ್‌ಗಾಗಿ ಅಪಾಯಕಾರಿ ರೀಲ್ಸ್‌ನಲ್ಲೂ ಆಸಕ್ತಿ ತೋರುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಸೋಷಿಯಲ್ ಮೀಡಿಯಾದಲ್ಲಿ ಆಘಾತಕಾರಿ ವಿಡಿಯೊವೊಂದು ಭಾರಿ (Viral News) ವೈರಲ್ ಆಗುತ್ತಿದೆ. ಕಡಲ ತೀರದಲ್ಲಿ ಪೋಷಕರು ಮಗುವನ್ನು ಒಬ್ಬಂಟಿಯಾಗಿ ಬಿಟ್ಟು ರೀಲ್ಸ್‌ನಲ್ಲಿ ಮಗ್ನರಾಗಿದ್ದರು. ಸಮುದ್ರದ ಅಲೆಗೆ ಸಿಲುಕಿ ಮಗು ಅಪಾಯದಲ್ಲಿದಾಗ ಅಪರಿಚಿತ ವ್ಯಕ್ತಿಯೊರ್ವರು ರಕ್ಷಿಸಿದ್ದಾರೆ.
ಕಡಲ ತೀರದಲ್ಲಿ ಪೋಷಕರು ತಮ್ಮ ಪಾಡಿಗೆ ತಾವು ರೀಲ್ಸ್ ಮಾಡುತ್ತಾ ಬ್ಯುಸಿ ಆಗಿದ್ದರು. ಆದರೆ ಅವರ ಪುಟ್ಟ ಮಗುವೊಂದು ಸಮುದ್ರದಲ್ಲಿ ಏಕಾಂಗಿಯಾಗಿ ನಿಂತಿತ್ತು. ಸಮುದ್ರದಲ್ಲಿ ಅಲೆಗಳು ಅಪ್ಪಳಿಸಿ ಮಗು ಅಲೆಗಳ ಹೊಡೆತಕ್ಕೆ ಸಿಲುಕುತಿದ್ದಂತೆ ಸಮಯಕ್ಕೆ ಸರಿಯಾಗಿ ಅಲ್ಲಿದ್ದ ಅಪರಿಚಿತ ವ್ಯಕ್ತಿಯೊಬ್ಬರು ಓಡಿಬಂದು ಮಗುವನ್ನು ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ.
ವಿಡಿಯೊ ನೋಡಿ:
आज Husband के साथ समुन्द्र पर घूमने गई थी जहाँ हमने देखा एक पति पत्नी Reel बनाने में इतने मगन थे अपनी बच्ची को पानी में ही छोड़ दिया। बच्ची समुन्द्र की लहरों में बहने से बच गई एक भय्या ने ध्यान दिया और बचा लिया। क्या अब Reel बाजी लोगों के लिए इतनी जरूरी हो गई है अपने बच्चों... Real news
— 𝗠𝗮𝗿𝗶𝘆𝗮𝗺_𝗠𝗕𝗗 (@Mariyam_MBD) October 19, 2026
ವೈರಲ್ ವಿಡಿಯೊದಲ್ಲಿ ದಂಪತಿ ಕಡಲ ತೀರದಲ್ಲಿ ತಮ್ಮನ್ನು ತಾವು ರೆಕಾರ್ಡ್ ಮಾಡಿಕೊಳ್ಳಲು ಸೆಲ್ಫಿ ಸ್ಟಿಕ್ ಬಳಸುತ್ತಿರುವುದು ಕಂಡುಬಂದಿದೆ. ಅಲೆಗಳು ಅವರ ಚಿಕ್ಕ ಮಗುವಿನ ಬಳಿ ರಭಸದಿಂದ ಬಂದಿವೆ. ನೀರು ಮಗುವಿನತ್ತ ಹರಿದುಬರುತ್ತಿದ್ದಂತೆ, ಮಗು ಅಲೆಗಳ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗುವ ಅಪಾಯ ಎದುರಾಗಿತ್ತು.
ಬ್ಲಿಂಕ್‌ಇಟ್ ಉಚಿತ ಆಂಬ್ಯುಲೆನ್ಸ್ ಸೇವೆಯಿಂದ ಉಳಿಯಿತು ವೃದ್ಧೆಯ ಪ್ರಾಣ
ಇಷ್ಟಾಗಿಯೂ ಪೊಷಕರು ಮಾತ್ರ ವಿಡಿಯೊ ಚಿತ್ರೀಕರಿಸುವುದರಲ್ಲಿಯೇ ಮಗ್ನರಾಗಿದ್ದರು. ಅವರ ಹಿಂದೆ ನಿಂತಿದ್ದ ವ್ಯಕ್ತಿಯೊಬ್ಬರು ಪರಿಸ್ಥಿತಿಯನ್ನು ಗಮನಿಸಿ, ತಕ್ಷಣವೇ ಮಧ್ಯ ಪ್ರವೇಶಿಸಿ ಮಗುವನ್ನು ರಕ್ಷಿಸಿದ್ದಾರೆ.
ಈ ವಿಡಿಯೊ ಆನ್‌ಲೈನ್‌ನಲ್ಲಿ ತೀವ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಮಗುವಿನ ಸುರಕ್ಷತೆಯ ಬಗ್ಗೆ ಪೋಷಕರು ತೋರಿದ ನಿರ್ಲಕ್ಷ್ಯವನ್ನು ಅನೇಕರು ಟೀಕಿಸಿದ್ದಾರೆ. ಪೋಷಕರೇ ಗಮನ ಹರಿಸುತ್ತಿಲ್ಲ ಎಂದರೆ ಏನರ್ಥ? ತಮ್ಮ ಮಕ್ಕಳಿಗಾಗಿ ಪ್ರಾಣವನ್ನೇ ಕೊಡಲು ಸಿದ್ಧರಿರುವ ಇಂದಿನ ಪೋಷಕರ ಜವಾಬ್ದಾರಿ ಇದೆಯೇ? ಎಂದು ಕಿಡಿಕಾರುತ್ತಿದ್ದಾರೆ.