ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಕ್ಯಾಬ್ ಚಾಲಕನಿಗೆ ಹಿಗ್ಗಾಮುಗ್ಗಾ ತಳಿಸಿದ ಪ್ರಯಾಣಿಕ; ಶಾಕಿಂಗ್‌ ವಿಡಿಯೋ ವೈರಲ್

ಕ್ಯಾಬ್ ಚಾಲಕನೊಬ್ಬನ ಮೇಲೆ ವ್ಯಕ್ತಿಯೊಬ್ಬರು ಇದ್ದಕ್ಕಿದ್ದಂತೆ ಹಲ್ಲೆ ನಡೆಸಿ, ಅವರ ವಾಹನಕ್ಕೆ ಹಾನಿ ಮಾಡಿದ್ದ ಘಟನೆ ಮಹಾರಾಷ್ಟ್ರದ ಲೋನಾವಾಲದಲ್ಲಿ ನಡೆದಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.. ವಿಡಿಯೋದಲ್ಲಿ ಲೋನಾವಾಲದಲ್ಲಿ ಪ್ರಯಾಣಿಕನೊಬ್ಬ ಕ್ಯಾಬ್ ಚಾಲಕನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದ ದೃಶ್ಯಗಳನ್ನು ಕಾಣಬಹುದು

ಕ್ಯಾಬ್ ಚಾಲಕನ ಮೇಲೆ ಹಲ್ಲೆ ಮಾಡಿದ ಪ್ರಯಾಣಿಕ: ವಿಡಿಯೋ ವೈರಲ್

ವೈರಲ್ ವಿಡಿಯೊ -

Profile
Pushpa Kumari Nov 17, 2025 9:01 PM

ನವದೆಹಲಿ: ಇತ್ತೀಚಿನ ದಿನದಲ್ಲಿ ಬೇರೆ ಸ್ಥಳಗಳಿಗೆ ತೆರಳಲು ಬಹುತೇಕ ಜನರು ಆನ್ಲೈನ್ ಬುಕ್ಕಿಂಗ್ ಆ್ಯಪ್ ಬಳಸಿ ಕ್ಯಾಬ್ ಅನ್ನು ಬುಕ್ ಮಾಡುವ ಪ್ರಮಾಣ ಹೆಚ್ಚಾಗಿದೆ. ಇಂತಹ ಆ್ಯಪ್ ಗಳು ದೂರದ ಸ್ಥಳಗಳಿಗೆ ತೆರಳುವ ಪ್ರಯಾಣಿಕರಿಗೆ ಬಹಳ ಅನುಕೂಲಕರವಾಗಿದೆ. ಅದರ ಜೊತೆಗೆ ಕ್ಯಾಬ್ ಚಾಲಕರಿಗೂ ಕೆಲಸದ ಜೊತೆಗೆ ಆದಾಯ ಸಹ ಸಿಗುತ್ತಿದೆ. ಕೆಲವು ಕ್ಯಾಬ್ ಚಾಲಕರು ಸಮಯಕ್ಕೆ ಸರಿಯಾಗಿ ಬಾರದೆ ಬಳಿಕ ಪ್ರಯಾಣಿಕರಿಗೆ ಕೋಪ ಉಂಟಾಗಿ ಅವರಿಬ್ಬರ ನಡುವೆ ವಾಗ್ವಾದ ಏರ್ಪಟ್ಟ ಅನೇಕ ವಿಡಿಯೋ ಆಗಾಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತದೆ. ಅಂತೆಯೇ ಕ್ಯಾಬ್ ಚಾಲಕನೊಬ್ಬನ (Cab Driver) ಮೇಲೆ ವ್ಯಕ್ತಿಯೊಬ್ಬರು ಇದ್ದಕ್ಕಿದ್ದಂತೆ ಹಲ್ಲೆ ನಡೆಸಿ, ಅವರ ವಾಹನಕ್ಕೆ ಹಾನಿ ಮಾಡಿದ್ದ ಘಟನೆ ಮಹಾರಾಷ್ಟ್ರದ ಲೋನಾವಾಲದಲ್ಲಿ (Maharashtra’s Lonavala) ನಡೆದಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ.

ವೈರಲ್ ಆದ ವಿಡಿಯೋದಲ್ಲಿ ಲೋನಾವಾಲದಲ್ಲಿ ಪ್ರಯಾಣಿಕನೊಬ್ಬ ಕ್ಯಾಬ್ ಚಾಲಕನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದ ದೃಶ್ಯಗಳನ್ನು ಕಾಣಬಹುದು. ಎಂದಿನಂತೆ ಉಬರ್ ಕ್ಯಾಬ್ ಚಾಲಕ ತನ್ನ ಪ್ರಯಾಣಿಕನಿಗಾಗಿ ಪಿಕಪ್ ಮಾಡುವ ಸ್ಥಳಕ್ಕೆ ಬಂದಿದ್ದಾರೆ. ಆಗ ವ್ಯಕ್ತಿಯೂ ಏಕಾ ಏಕಿ ಆತನ ಕಾರನ್ನು ಧ್ವಂಸಗೊಳಿಸಲು ಮುಂದಾಗಿದ್ದಾನೆ. ಈ ದೃಶ್ಯಗಳು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದ್ದು ಈ ವಿಡಿಯೋ ಕಂಡು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೈರಲ್ ವಿಡಿಯೊ ಇಲ್ಲಿದೆ



ನವೆಂಬರ್ 15 ರಂದು ಸಂಜೆ 7:45 ರ ಸುಮಾರಿಗೆ ಈ ಘಟನೆ ನಡೆದಿದೆ. ವರದಿಯೊಂದರ ಪ್ರಕಾರ ಚಾಲಕನು ಹತ್ತಿರದಲ್ಲೇ ಊಟ ಮಾಡಲು ತೆರಳಿದ್ದು ಸ್ವಲ್ಪ ತಡವಾಗಿ ಬಂದಿದ್ದಾನೆ. ಅದನ್ನು ಆತನೇ ಹೇಳಿ ಪ್ರಯಾಣಿಕನನ್ನು ಕನ್ವೆನ್ಸ್ ಮಾಡಲು ಸಹ ಮುಂದಾಗಿದ್ದಾನೆ. ಆದರೆ ಪ್ರಯಾಣಿಕ ಸೋನ್ಯಾ ಗುಪ್ತಾ (Sonya Gupta) ಮಾತ್ರ ಚಾಲಕನಿಗೆ ಪದೇ ಪದೇ ಕಪಾಳಮೋಕ್ಷ ಮಾಡುತ್ತಾನೆ. ಮತ್ತು ಕ್ಯಾಬ್‌ನ ಹಿಂಭಾಗ ಮತ್ತು ಮುಂಭಾಗದ ವಿಂಡ್‌ಶೀಲ್ಡ್‌ಗಳನ್ನು ಪುಡಿಮಾಡಲು ಕಲ್ಲನ್ನು ಬಳಸುವುದನ್ನು ವೈರಲ್ ವಿಡಿಯೋದಲ್ಲಿ ಕಾಣಬಹುದು.

ಇದನ್ನು ಓದಿ:Viral Photo: ಸೂರ್ಯನನ್ನೇ ಹಾದು ಹೋದ ಸ್ಕೈಡೈವರ್‌- ಅಪರೂಪದ ಕ್ಷಣ ಕ್ಯಾಮರಾದಲ್ಲಿ ಸೆರೆ!

ಈ ಬಗ್ಗೆ ಪೊಲೀಸರು ಕೂಡ ತನಿಖೆ ನಡೆಸುತ್ತಿದ್ದಾರೆ. ಪೊಲೀಸ್ ವರದಿಗಳ ಪ್ರಕಾರ, ಚಾಲಕ ಆನ್‌ ಲೈನ್ ಕ್ಯಾಬ್ ಅಪ್ಲಿಕೇಶನ್ ಮೂಲಕ ಬುಕ್ ಮಾಡಿದ್ದ ಸ್ಥಳಕ್ಕೆ ತೆರಳಿದ್ದಾನೆ. ಆತ ಸ್ವಲ್ಪ ತಡವಾಗಿ ಬಂದಿದ್ದು ಈ ಬಗ್ಗೆ ವಿನಂತಿಯನ್ನು ಮಾಡಿದ್ದಾನೆ. ಆದರೆ ಪ್ರಯಾಣಿಕನಾದ ಸೋನ್ಯಾ ಗುಪ್ತಾ ಎಂಬ ವ್ಯಕ್ತಿ ಅವನನ್ನು ಹೊಡೆಯಲು ಮುಂದಾಗುತ್ತಾನೆ. ಚಾಲಕ ಭಯದಿಂದ ಬೇಡಿಕೊಂಡರು ಪ್ರಯಾಣಿಕ ಮಾತ್ರ ಆತನನ್ನು ಮನ ಬಂದಂತೆ ತಳಿಸಿದ್ದು ತಿಳಿದು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಹಿಂಸಾಚಾರದ ವಿಡಿಯೋಗೆ ನೆಟ್ಟಿಗರು ತರತರದ ಕಾಮೆಂಟ್ ಹಾಕಿದ್ದಾರೆ. ಅನೇಕ ಬಳಕೆ ದಾರರು ಕಠಿಣ ಕ್ರಮ ಕೈಗೊಳ್ಳ ಬೇಕೆಂದು ಒತ್ತಾಯಿಸಿದ್ದಾರೆ. ಲೋನಾವಾಲ ಗ್ರಾಮೀಣ ಪೊಲೀಸ್‌ನ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ದಿನೇಶ್ ಟೇಡ್ ಅವರು ಈ ಸಂಬಂಧ ಪಟ್ಟ ಆರೋಪಿಯನ್ನು ಬಂಧನ ಮಾಡಿದ್ದಾಗಿ ದೃಢಪಡಿಸಿದ್ದಾರೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಕೂಡ ಹೇಳಿದ್ದಾರೆ.