ದೇವಸ್ಥಾನದ ಬಳಿ ಬಂದ ಮೊಸಳೆಗೆ ವಿಶೇಷ ಪೂಜೆ ಸಲ್ಲಿಸಿ ಅಭಿಷೇಕ ಮಾಡಿದ ಅರ್ಚಕ: ಅಚ್ಚರಿಯ ವಿಡಿಯೊ ಇಲ್ಲಿದೆ
Viral Video: ತೆಲಂಗಾಣದ ಬೀಚುಪಲ್ಲಿಯ ಕೃಷ್ಣಾ ನದಿ ಘಾಟ್‌ಗೆ ಆಗಮಿಸಿದ ಮೊಸಳೆಯನ್ನು ಕಂಡು ಅರ್ಚಕರೊಬ್ಬರು ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ, ಅಭಿಷೇಕ ಮಾಡಿದ್ದಾರೆ. ಅಲ್ಲಿದ್ದ ಭಕ್ತರು ಗಾಬರಿಗೊಂಡಿದ್ದರೂ ಅರ್ಚಕ ಅನಿಲ್ ಶರ್ಮಾ ಎಂಬವರು ಧೈರ್ಯದಿಂದ ಮೊಸಳೆಯ ಬಳಿಗೆ ಬಂದು ಧಾರ್ಮಿಕ ವಿಧಿಗಳನ್ನು ಆರಂಭಿಸಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ತೆಲಂಗಾಣದಲ್ಲಿ ಮೊಸಳೆಗೆ ಪೂಜೆ ಸಲ್ಲಿಸಿದ ಅರ್ಚಕ -
ಹೈದರಾಬಾದ್, ಆ. 11: ಸಾಮಾನ್ಯವಾಗಿ ದೈತ್ಯಾಕಾರದ ಮೊಸಳೆಯನ್ನು ಕಂಡಾಗ ಜನ ಭಯ ಭೀತರಾಗಿ ಓಡುವುದನ್ನು ನೀವು ನೋಡಿರಬಹುದು. ಆದರೆ ತೆಲಂಗಾಣದ ಬೀಚುಪಲ್ಲಿಯ ಕೃಷ್ಣಾ ನದಿ ಘಾಟ್‌ಗೆ ಮೊಸಳೆ ಬಂದಿರುವುದನ್ನು ಕಂಡು ಅರ್ಚಕರೊಬ್ಬರು ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ, ಅಭಿಷೇಕ ಮಾಡಿದ್ದಾರೆ. ಅಲ್ಲಿದ್ದ ಭಕ್ತರು ಗಾಬರಿಗೊಂಡಿದ್ದರೂ, ಅರ್ಚಕ ಅನಿಲ್ ಶರ್ಮಾ ಧೈರ್ಯದಿಂದ ಮೊಸಳೆಯ ಬಳಿಗೆ ಬಂದು ಧಾರ್ಮಿಕ ವಿಧಿಗಳನ್ನು ಮಾಡಲು ಪ್ರಾರಂಭಿಸಿದರು. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದೆ
ತೆಲಂಗಾಣದ ಬೀಚುಪಲ್ಲಿ ಪುಷ್ಕರ್ ಘಾಟ್‌ನಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಮಧ್ಯಾಹ್ನ ಈ ಘಟನೆ ಸಂಭವಿಸಿದೆ. ರಜಾದಿನವಾಗಿದ್ದರಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಸೇರಿದ್ದರು. ದೇವಾಲಯದಲ್ಲಿ ಪೂಜೆಯ ನಂತರ ಭಕ್ತರು ನದಿಯ ಬಳಿ ಸಮಯ ಕಳೆಯುತ್ತಿದ್ದಾಗ ಮೊಸಳೆವೊಂದು ಇದ್ದಕ್ಕಿದ್ದಂತೆ ಕಂಡು ಬಂತು.
ವಿಡಿಯೊ ನೋಡಿ:
A priest in Telangana's Beechupalli performed puja to a crocodile that came onto the bank of Krishna River. Later, forest officials released the reptile into the river..#crocodile #telangana pic.twitter.com/9f9akG24ca
— Arun Sandilya (@arunsandilya) August 9, 2026
ಮೊಸಳೆಯನ್ನು ಕಂಡ ಭಕ್ತರು ಗಾಬರಿಗೆ ಒಳಗಾದರು. ಬಳಿಕ ಆ ಮೊಸಳೆ ಸಮೀಪದ ಕಟ್ಟಡವೊಂದರ ಒಳಗೆ ಪ್ರವೇಶಿಸಿತು. ಅನೇಕರು ಗಾಬರಿಗೊಂಡಿದ್ದರೂ ಅರ್ಚಕ ಅನಿಲ್ ಶರ್ಮಾ ಮೊಸಳೆಯ ಬಳಿಗೆ ಬಂದು ಧಾರ್ಮಿಕ ವಿಧಿ ನೆರವೇರಿಸಲು ಪ್ರಾರಂಭಿಸಿದರು. ವೈರಲ್ ಆದ ವಿಡಿಯೊದಲ್ಲಿ ಅರ್ಚಕರು ಮೊಸಳೆ ಮುಂದೆ ಕುಳಿತು ಮಂತ್ರಗಳನ್ನು ಪಠಿಸುತ್ತಿರುವುದನ್ನು ಮತ್ತು ಅಭಿಷೇಕ ಸೇರಿ ಪೂಜಾ ವಿಧಿವಿಧಾನ ನರವೇರಿಸುತ್ತಿರುವುದನ್ನು ತೋರಿಸಲಾಗಿದೆ.
ನೆರೆಮನೆಯ ಯುವಕನಿಂದನೇ ಕಿರುಕುಳ; ಕಣ್ಣೀರು ಹಾಕಿದ ಅಪ್ರಾಪ್ತ ಬಾಲಕಿ
ಮೊಸಳೆಯ ಮುಂದೆಯೇ ದೈರ್ಯದಿಂದ ಕುಳಿತ ಅರ್ಚಕ ಅನಿಲ್ ಶರ್ಮಾ ನಮಸ್ಕರಿಸಿ, ಅಭಿಷೇಕ ಹಾಗೂ ಪೂಜೆ ನೆರವೇರಿಸಿದ್ದಾರೆ. ''ಮೊಸಳೆಯನ್ನು ವರುಣನ ವಾಹನ ಎಂದು ಪರಿಗಣಿಸಲಾಗುತ್ತದೆ. ಉತ್ತಮ ಮಳೆಯಾಗಿ ನಾಡು ಅಭಿವೃದ್ಧಿಯಾಗಲಿ ಎಂಬ ಉದ್ದೇಶದಿಂದ ನಾನು ಈ ಪೂಜೆ ಸಲ್ಲಿಸಿದೆ" ಎಂದು ಅರ್ಚಕ ಅನಿಲ್ ಶರ್ಮಾ ತಿಳಿಸಿದ್ದಾರೆ.
ಘಟನೆಯ ನಂತರ, ಪೊಲೀಸರು ಮೊಸಳೆ ಇರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮೊಸಳೆ ಸೆರೆಹಿಡಿಯುವಲ್ಲಿ ಯಶಸ್ವಿಯಾದರು. ಮೊಸಳೆಯನ್ನು ಹಗ್ಗ ಬಳಸಿ ಸುರಕ್ಷಿತವಾಗಿ ಹಿಡಿದು ನಂತರ ಕೃಷ್ಣಾ ನದಿಗೆ ಬಿಡಲಾಯಿತು.