ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ರಾವಲ್ಪಿಂಡಿಯಲ್ಲಿ ಪ್ರತಿಭಟನೆ: ಕೆಎಫ್‌ಸಿ ಮಳಿಗೆ ಮೇಲೆ ದಾಳಿ

ಗಾಜಾ ಮೇಲೆ ಇಸ್ರೇಲ್ ನಡೆಸಿರುವ ದಾಳಿಗೆ ಪ್ರತಿಯಾಗಿ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಪ್ರತಿಭಟನೆ ಆಯೋಜಿಸಲಾಗಿತ್ತು. ಈ ವೇಳೆ ಗ್ರಾಹಕರಿಂದ ತುಂಬಿದ್ದ ಕೆಎಫ್‌ಸಿ ಮೇಲೆ ಪ್ರತಿಭಟನಾಕಾರರ ಗುಂಪೊಂದು ಭಾನುವಾರ ದಾಳಿ ನಡೆಸಿದೆ. ರಾವಲ್ಪಿಂಡಿ ಮಿಲಿಟರಿ ಗ್ಯಾರಿಸನ್ ಪಟ್ಟಣದಲ್ಲಿರುವ ಸದ್ದಾರ್ ಪ್ರದೇಶದ ಕೆಎಫ್‌ಸಿ ಔಟ್‌ಲೆಟ್ ಮೇಲೆ ದಾಳಿ ನಡೆಸಿರುವ ಪ್ರತಿಭಟನಾಕಾರರು ಅಲ್ಲಿನ ಸೊತ್ತುಗಳನ್ನು ಧ್ವಂಸಗೊಳಿಸಿದ್ದಾರೆ. ಅಲ್ಲಿದ್ದ ಗ್ರಾಹಕರಿಗೂ ಅವರು ಕಿರುಕುಳ ನೀಡಿದ್ದಾರೆ.

ಇಸ್ರೇಲ್ ವಿರುದ್ಧ ಆಕ್ರೋಶ: ಕೆಎಫ್‌ಸಿ ಮೇಲೆ ದಾಳಿ

ಇಸ್ಲಾಮಾಬಾದ್‌: ಗಾಜಾ ಮೇಲೆ ಇಸ್ರೇಲ್ ನಡೆಸಿರುವ ದಾಳಿಗೆ (Anti-Israel Protest) ಪ್ರತಿಯಾಗಿ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ (Rawalpindi) ಗ್ರಾಹಕರಿಂದ ತುಂಬಿದ್ದ ಕೆಎಫ್‌ಸಿ (KFC outlet) ಮೇಲೆ ಪ್ರತಿಭಟನಾಕಾರರ ಗುಂಪೊಂದು (Mob Attack) ಭಾನುವಾರ (ಏ. 13) ದಾಳಿ ನಡೆಸಿದೆ. ರಾವಲ್ಪಿಂಡಿ ಮಿಲಿಟರಿ ಗ್ಯಾರಿಸನ್ ಪಟ್ಟಣದಲ್ಲಿರುವ ಸದ್ದಾರ್ ಪ್ರದೇಶದ ಕೆಎಫ್‌ಸಿ ಔಟ್‌ಲೆಟ್ ಮೇಲೆ ದಾಳಿ ನಡೆಸಿರುವ ಪ್ರತಿಭಟನಾಕಾರರು ಅಲ್ಲಿನ ಸೊತ್ತುಗಳನ್ನು ಧ್ವಂಸಗೊಳಿಸಿದ್ದಾರೆ. ಅಲ್ಲಿದ್ದ ಗ್ರಾಹಕರಿಗೂ ಕಿರುಕುಳ ನೀಡಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ದುಷ್ಕರ್ಮಿಗಳನ್ನು ಸಿಸಿಟಿವಿ ದೃಶ್ಯಗಳಿಂದ ಪತ್ತೆ ಮಾಡಲಾಗಿದ್ದು, ಕೂಡಲೇ ಬಂಧಿಸುವುದಾಗಿ ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಇಸ್ರೇಲ್ ವಿರೋಧಿ ಪ್ರತಿಭಟನಾಕಾರರು ರಾವಲ್ಪಿಂಡಿಯಲ್ಲಿ ಕೆಎಫ್‌ಸಿ ಔಟ್‌ಲೆಟ್ ಅನ್ನು ಧ್ವಂಸಗೊಳಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿವೆ. ದುಷ್ಕರ್ಮಿಗಳ ವಿರುದ್ಧ ತ್ವರಿತ ಕ್ರಮ ಕೈಗೊಳ್ಳುವುದಾಗಿ ಸ್ಥಳೀಯ ಪೊಲೀಸರು ಭರವಸೆ ನೀಡಿದ್ದಾರೆ.

ವೈರಲ್ ಆಗಿರುವ ವಿಡಿಯೊದಲ್ಲಿ ಕೆಲವು ವ್ಯಕ್ತಿಗಳು ಗ್ರಾಹಕರನ್ನು ನಿಂದಿಸುತ್ತಿರುವುದು, ಕೆಎಫ್‌ಸಿ ಔಟ್‌ಲೆಟ್ ಅನ್ನು ಧ್ವಂಸಗೊಳಿಸುತ್ತಿರುವುದು ಕಾಣಬಹುದು. ಗ್ರಾಹಕರನ್ನು ಕೆಎಫ್‌ಸಿ ಔಟ್‌ಲೆಟ್ ನಿಂದ ಹೊರಹೋಗಲು ಹೇಳುತ್ತಿರುವ ಪ್ರತಿಭಟನಾಕಾರರಿಗೆ ಹೆದರಿ ಜನರು ಸ್ಥಳದಿಂದ ಓಡಿ ಹೋಗುತ್ತಿರುವುದು ಕೂಡ ವಿಡಿಯೊದಲ್ಲಿ ಸೆರೆಯಾಗಿದೆ. ಪ್ರತಿಭಟನಾಕಾರರು ಪಾಲಿಸ್ಟೈನ್‌ನ ಧ್ವಜವನ್ನು ಹಿಡಿದುಕೊಂಡು ಬಂದು ಗಲಾಟೆ ಮಾಡಿದ್ದಾರೆ.



ಏಪ್ರಿಲ್ 13ರಂದು ರಾತ್ರಿ 8.30ರ ಸುಮಾರಿಗೆ 10ರಿಂದ 12 ಮಂದಿ ಶಸ್ತ್ರಸಜ್ಜಿತರಾಗಿ ರೆಸ್ಟೋರೆಂಟ್ ಆವರಣಕ್ಕೆ ನುಗ್ಗಿ ಗ್ರಾಹಕರಿಗೆ ಕಿರುಕುಳ ನೀಡಿದ್ದಾರೆ. ಘೋಷಣೆಗಳನ್ನು ಕೂಗಿ ಎಲ್ಲರನ್ನೂ ಬೆದರಿಸಿದ್ದಾರೆ. ನಾವು ಅವರನ್ನು ತಡೆಯಲು ಪ್ರಯತ್ನಿಸಿದಾಗ ಅವರು ನಮ್ಮನ್ನು ನಿಂದಿಸಿದ್ದಾರೆ. ಅಲ್ಲದೇ ನಮ್ಮನ್ನು ಕೊಲ್ಲುವುದಾಗಿ ಬೆದರಿಕೆ ಕೂಡ ಹಾಕಿದ್ದಾರೆ ಎಂದು ಕೆಎಫ್‌ಸಿ ಸದ್ದಾರ್ ಶಾಖೆಯ ವ್ಯವಸ್ಥಾಪಕರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.



ಪ್ರತಿಭಟನೆಗೆ ಕಾರಣ

ಗಾಜಾ ಮೇಲೆ ಇಸ್ರೇಲ್ ದಾಳಿಯನ್ನು ಖಂಡಿಸಿ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಇತರ ಕೆಲವು ಪ್ರದೇಶಗಳಲ್ಲಿ ಕೆಎಫ್‌ಸಿ ಮತ್ತು ಇತರ ಅಮೆರಿಕ ಬ್ರ್ಯಾಂಡ್‌ಗಳನ್ನು ಬಹಿಷ್ಕರಿಸಲಾಗುತ್ತಿದೆ. ಇತ್ತೀಚಿಗೆ ಪಾಕಿಸ್ತಾನದ ಕರಾಚಿಯ ರಕ್ಷಣಾ ವಸತಿ ಪ್ರಾಧಿಕಾರದಲ್ಲಿ ಕೂಡ ಜಾಗತಿಕ ಫಾಸ್ಟ್ ಫುಡ್ ಎನಿಸಿಕೊಂಡಿರುವ ಕೆಎಫ್‌ಸಿ ಮೇಲೆ ಕೋಪಗೊಂಡ ಗುಂಪೊಂದು ದಾಳಿ ಮಾಡಿತು.

ಬಾಂಗ್ಲಾದೇಶದಲ್ಲೂ ಇದೇ ರೀತಿಯ ಘಟನೆ ನಡೆದಿದ್ದು, ಇಸ್ರೇಲ್ ಜತೆ ನಂಟು ಹೊಂದಿರುವ ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳಾದ ಬಾಟಾ, ಕೆಎಫ್‌ಸಿ, ಪಿಜ್ಜಾ ಹಟ್ ಮತ್ತು ಪೂಮಾ ಮಳಿಗೆಗಳನ್ನು ಧ್ವಂಸಗೊಳಿಸಿ, ದರೋಡೆ ಮಾಡಲಾಯಿತು.