ಬಾವಿಗೆ ಬಿದ್ದ ಶ್ವಾನಗಳ ಜೀವ ಉಳಿಸಲು 60 ಅಡಿ ಆಳಕ್ಕೆ ಧುಮುಕಿದ ರಕ್ಷಣಾ ತಂಡದ ಸದಸ್ಯರು; ಕಾರ್ಯಾಚರಣೆ ವಿಡಿಯೊ ನೋಡಿ
Viral Video: ಮಹಾರಾಷ್ಟ್ರದ ಜಾಲ್ನಾ ಜಿಲ್ಲೆಯಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ಸುಮಾರು 60 ಅಡಿ ಆಳದ ಬಾವಿಗೆ ಎರಡು ನಾಯಿಗಳು ಬಿದ್ದಿದ್ದು, ಪ್ರಾಣ ಉಳಿಸಿಕೊಳ್ಳಲು ಹರ ಸಾಹಸ ಪಡುತ್ತಿದ್ದವು. ರಕ್ಷಣಾ ತಂಡವು ಸುಮಾರು 90 ಕಿಲೋ ಮೀಟರ್ ಪ್ರಯಾಣಿಸಿ ಮೂಕ ಪ್ರಾಣಿಗಳ ಜೀವ ಉಳಿಸಿದೆ.
ಮಹಾರಾಷ್ಟ್ರದಲ್ಲಿ 60 ಅಡಿ ಆಳದ ಬಾವಿಗೆ ಬಿದ್ದ ಶ್ವಾನಗಳ ರಕ್ಷಣೆ -
ಮುಂಬೈ, ಸೆ. 11: ಮಹಾರಾಷ್ಟ್ರದ ಜಾಲ್ನಾ ಜಿಲ್ಲೆಯಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ಸುಮಾರು 60 ಅಡಿ ಆಳದ ಬಾವಿಗೆ ಎರಡು ನಾಯಿಗಳು ಬಿದ್ದಿದ್ದು ಪ್ರಾಣ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದವು. ಈ ಕಾರ್ಯಾಚರಣೆಗಾಗಿ ರಕ್ಷಣಾ ತಂಡವು ಸುಮಾರು 90 ಕಿಲೋ ಮೀಟರ್ ಪ್ರಯಾಣಿಸಿ ಮೂಕ ಪ್ರಾಣಿಗಳ ಜೀವ ಉಳಿಸಿದೆ. ಜಾಲ್ನಾದ ಜಾಮವಾಡಿ ಗ್ರಾಮದಲ್ಲಿರುವ ಸುಮಾರು 60 ಅಡಿ ಆಳದ ತೆರೆದ ಬಾವಿಗೆ ಎರಡು ನಾಯಿಗಳು ಆಟವಾಡುತ್ತಾ ಆಕಸ್ಮಿಕವಾಗಿ ಬಿದ್ದಿದ್ದವು. ಸದ್ಯ ಈ ಕಾರ್ಯಾಚರಣೆ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದೆ.
ಆಳವಾದ ಬಾವಿಯಲ್ಲಿ ನಾಯಿಗಳ ಸತತ ಕೂಗು ಕೇಳಿ ಗ್ರಾಮಸ್ಥರು ಕಂಗಾಲಾಗಿದ್ದರು. ಅಲ್ಲಿ ಜಮಾಯಿಸಿದ ಗ್ರಾಮಸ್ಥರಿಗೆ ಆಳವಾದ ಬಾವಿಯಿಂದ ನಾಯಿಗಳನ್ನು ತಕ್ಷಣವೇ ರಕ್ಷಿಸುವುದು ಸವಾಲಾಗಿ ಪರಿಣಮಿಸಿತ್ತು. ಬಾವಿಯೊಳಗಿನ ಅಪಾಯಕಾರಿ ಪರಿಸ್ಥಿತಿಯಿಂದಾಗಿ ಸ್ಥಳೀಯರಿಗೆ ರಕ್ಷಣೆ ಸಾಧ್ಯ ವಾಗದಿದ್ದಾಗ, ಈ ವಿಷಯವನ್ನು ಜಿಲ್ಲಾಧಿಕಾರಿ ಗಮನಕ್ಕೆ ತರಲಾಯಿತು.
ವಿಡಿಯೊ ನೋಡಿ:
महाराष्ट्र के जालना में 60 फीट गहरे कुएं में गिरे दो कुत्तों को रेस्क्यू टीम ने सुरक्षित बाहर निकाल लिया।
— Asian News Bharat (@Asian_newsBH) September 10, 2026
90 किलोमीटर दूर से पहुंची टीम ने जान जोखिम में डालकर बेजुबानों की जान बचाई।#animalrescue #maharashtra #dogrescue #viralvideo #humanity #asiannewsbharat pic.twitter.com/ky5ctc6isW
ಬಳಿಕ ಜಿಲ್ಲಾಧಿಕಾರಿ ನೆರವಿನಿಂದ ರಕ್ಷಣಾ ತಂಡಕ್ಕೆ ಮಾಹಿತಿ ತಲುಪಿಸಲಾಯಿತು. ತಕ್ಷಣವೇ ಮ್ಯಾನ್‌ವಿತ್‌ಇಂಡಿಸ್ ಫೌಂಡೇಶನ್ ಸಂಸ್ಥೆಗೆ ನಾಯಿಗಳ ಪ್ರಸ್ತುತ ಸ್ಥಿತಿಯ ಫೋಟೊಗಳನ್ನು ಕಳುಹಿಸಿಕೊಡಲಾಯಿತು. ಗಂಭೀರತೆಯನ್ನು ಅರಿತ ಫೌಂಡೇಶನ್ ನಿರ್ದೇಶಕ ಹಾಗೂ ವನ್ಯಜೀವಿ ರಕ್ಷಣಾ ತಂಡವು ಕಾರ್ಯಾಚರಣೆಗೆ ಆಗಮಿಸಿತು.
ಸಿಜೆಪಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಆಸ್ಟ್ರೇಲಿಯಾದಿಂದ ಬಂದ ಬಿ.ಟೆಕ್ ಪದವೀಧರ!
ವನ್ಯಜೀವಿ ರಕ್ಷಕ ತಂಡ ಛತ್ರಪತಿ ಸಂಭಾಜಿನಗರದಿಂದ ಜಾಮವಾಡಿಗೆ 90 ಕಿ.ಮೀ. ದೂರ ಆಗಮಿಸಿದೆ. ಸ್ಥಳಕ್ಕೆ ತಲುಪಿದ ತಂಡವು ಬಾವಿಗೆ ಇಳಿಯಲು ಸರಿಯಾದ ಸ್ಥಿತಿಯನ್ನು ಪರಿಶೀಲಿಸಿದೆ. ಕೂಡಲೇ ತಂಡವು ಅಗತ್ಯ ಸುರಕ್ಷತಾ ಉಪಕರಣಗಳೊಂದಿಗೆ ಕಾರ್ಯಾಚರಣೆಗೆ ಇಳಿದಿದೆ. 60 ಅಡಿ ಆಳದ ಬಾವಿಯೊಳಗೆ ಇಳಿದು, ಭಯಭೀತಗೊಂಡಿದ್ದ ನಾಯಿಗಳನ್ನು ಹಿಡಿಯುವುದು ದೊಡ್ಡ ಸವಾಲಾಗಿತ್ತು. ಆದರೆ ರಕ್ಷಣಾ ಸಿಬ್ಬಂದಿ ಜಾಗರೂಕತೆಯಿಂದ ಕೆಳಗೆ ಇಳಿದು ಎರಡೂ ನಾಯಿಗಳನ್ನು ರಕ್ಷಿಸಿದ್ದಾರೆ. ಅಪಾಯದಂಚಿನಲ್ಲಿದ್ದ ಪ್ರಾಣಿಗಳನ್ನು ರಕ್ಷಿಸಿದ ರಕ್ಷಣಾ ಪಡೆಯ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.