Seema Haider: ಪಾಕಿಸ್ತಾನದಿಂದ ಭಾರತಕ್ಕೆ ಓಡಿಬಂದಿದ್ದ ಸೀಮಾ ಹೈದರ್ ಮಗಳಿಗೆ 'ಭಾರತಿ ಮೀನಾ' ಎಂದು ನಾಮಕರಣ
Seema Haider: ಪ್ರೀತಿಸಿದ ಯುವಕನಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ಮಾರ್ಚ್ 8 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಗ್ರೇಟರ್ ನೋಯ್ಡಾದ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿರುವ ಅವರು ಮತ್ತು ಮಗು ಆರೋಗ್ಯವಾಗಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಮಗಳಿಗೆ ಹಿಂದೂ ಸಂಪ್ರದಾಯಗಳನ್ನು ಅನುಸರಿಸಿ ನಾಮಕರಣವನ್ನೂ ಮಾಡಿದ್ದಾರೆ. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.


ನವದೆಹಲಿ: ಪ್ರೀತಿಸಿದ ಯುವಕನಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದ ಪಾಕಿಸ್ತಾನಿ ಮಹಿಳೆ (Pakistani woman ) ಸೀಮಾ ಹೈದರ್ (Seema Haider) ಮಾರ್ಚ್ 8 ರಂದು ಹೆಣ್ಣು ಮಗುವಿಗೆ (Seema Haider daughter) ಜನ್ಮ ನೀಡಿದ್ದಾರೆ. ಗ್ರೇಟರ್ ನೋಯ್ಡಾದ (Greater Noida) ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿರುವ ಅವರು ಮತ್ತು ಮಗು ಆರೋಗ್ಯವಾಗಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಮಗಳಿಗೆ ಹಿಂದೂ ಸಂಪ್ರದಾಯಗಳನ್ನು ಅನುಸರಿಸಿ ನಾಮಕರಣವನ್ನೂ ಮಾಡಿದ್ದಾರೆ. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ರಬುಪುರ ಗ್ರಾಮದಲ್ಲಿ ನಡೆದ ಸೀಮಾ ಹೈದರ್ ಮತ್ತು ಸಚಿನ್ ಮಗಳ ನಾಮಕರಣದಲ್ಲಿ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಎಪಿ ಸಿಂಗ್ ಕೂಡ ಪಾಲ್ಗೊಂಡಿದ್ದರು.
ಸೀಮಾ ಮತ್ತು ಸಚಿನ್ ತಮ್ಮ ಮಗಳಿಗೆ ಭಾರತಿ ಮೀನಾ ಎಂದು ಹೆಸರಿಟ್ಟಿದ್ದಾರೆ. ಶ್ರೀಕೃಷ್ಣನ ಭಕ್ತೆ ಮೀರಾ ಬಾಯಿ ಅವರಿಂದ ಪ್ರೇರಿತರಾಗಿ ತಮ್ಮ ಮಗಳಿಗೆ ಮೀರಾ ಅಥವಾ "ಮೀರು" ಎಂಬ ಇನ್ನೊಂದು ಹೆಸರನ್ನು ಇರಿಸಿದ್ದೇನೆ ಎಂದು ಸೀಮಾ ಹೇಳಿಕೊಂಡಿದ್ದಾರೆ. ತಮಗೆ ಹೆಣ್ಣು ಮಗು ಬೇಕೆಂಬ ಬಯಕೆಯಿತ್ತು. ಹೆಣ್ಣು ಮಗುವಾದರೆ ಮೀರಾ ಎಂದೇ ಹೆಸರಿಡಬೇಕು ಎಂದು ಬಯಸುತ್ತಿದ್ದೆ ಎಂಬುದಾಗಿ ಅವರು ತಿಳಿಸಿದ್ದಾರೆ.
सीमा हैदर ने बेटी का नाम रखा ‘भारती मीणा’#SeemaHaidar | Bharti Meena | #BhartiMeena pic.twitter.com/Cv65HXTG9i
— News24 (@news24tvchannel) April 8, 2025
ಕುಟುಂಬದವರು, ಸ್ನೇಹಿತರು ಮತ್ತು ಪುರೋಹಿತರು ಮಗಳಿಗೆ ಭಾರತಿ ಎಂಬ ಹೆಸರನ್ನು ಸೂಚಿಸಿದರು. ಇದರ ಅರ್ಥ ಸುಂದರವಾಗಿದ್ದು, ನಮ್ಮ ದೇಶದ ಹೆಸರೂ ಆಗಿದೆ ಎಂದು ಅವರು ಹೇಳಿದರು.
सामने आई Seema Haider की बेटी की पहली तस्वीर, VIDEO देख कहेंगे Aww... कितनी क्यूट!#seemahaider pic.twitter.com/8np47TQwyZ
— Kapil Kumar (@KapilKumar77025) March 18, 2025
ಮಗಳು ನಮಗೆ ಮಗನಿಗೆ ಸಮಾನ. ಮನೆಗೆ ಲಕ್ಷ್ಮಿ ದೇವತೆ ಬಂದಿದ್ದಾಳೆ ಎಂದು ಸೀಮಾ ಸಂತೋಷ ವ್ಯಕ್ತಪಡಿಸಿದ್ದಾರೆ. ಸೀಮಾ ಅವರಿಗೆ ಇದು ಐದನೇ ಮಗು. ಆದರೆ ಸಚಿನ್ ಅವರ ಮೊದಲ ಮಗು. ಎಲ್ಲ ಭಾರತೀಯ ಸಂಪ್ರದಾಯಗಳು ತಮಗೆ ಹೊಸತು. ಇದು ತುಂಬಾ ಸುಂದರವಾಗಿವೆ. ಭಾರತದಲ್ಲಿ ಎಲ್ಲವೂ ತುಂಬಾ ಸುಂದರವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಪಬ್ಜಿಯಲ್ಲಿ ಆರಂಭವಾದ ಪ್ರೇಮಕಥೆ ಇದು
ಸೀಮಾ ಮತ್ತು ಸಚಿನ್ ಅವರ ಪ್ರೇಮಕಥೆಯು ಆನ್‌ಲೈನ್‌ನಲ್ಲಿ ಪಬ್ಜಿ ಆಟದ ಮೂಲಕ ಪ್ರಾರಂಭವಾಯಿತು. 2023ರಲ್ಲಿ ವೀಸಾ, ಪಾಸ್‌ಪೋರ್ಟ್ ಇಲ್ಲದೆ ಸೀಮಾ ಅವರು ನೇಪಾಳದ ಮೂಲಕ ಅಕ್ರಮವಾಗಿ ಭಾರತಕ್ಕೆ ಬಂದರು. ರಬುಪುರ ಗ್ರಾಮದಲ್ಲಿ ಸಚಿನ್ ಅವರೊಂದಿಗೆ ವಾಸಿಸಲು ಬಂದ ಸೀಮಾ ಅವರ ಕುರಿತು ಮಾಹಿತಿ ತಿಳಿದಾಗ ಸಚಿನ್ ಮತ್ತು ಸೀಮಾ ಅವರನ್ನು ಬಂಧಿಸಲಾಯಿತು. ಅನಂತರ ನ್ಯಾಯಾಲಯದಿಂದ ಜಾಮೀನು ಪಡೆದು ಇಬ್ಬರೂ ಕಾನೂನುಬದ್ಧವಾಗಿ ವಿವಾಹವಾದರು. ಆದರೂ ಭಾರತಕ್ಕೆ ಸೀಮಾ ಅವರ ಅಕ್ರಮ ಪ್ರವೇಶದ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ.
सीमा हैदर ने बच्ची को जन्म दिया
— News24 (@news24tvchannel) March 18, 2025
◆ सीमा हैदर के वकील एपी सिंह ने जानकारी दी #SeemaHaider | Seema Haider | Advocate AP Singh pic.twitter.com/MyOuaG8HYK
ಮಾಜಿ ಪತಿಯಿಂದ ಬೆದರಿಕೆ
ಸೀಮಾ ಮತ್ತು ಸಚಿನ್ ಇತ್ತೀಚಿಗೆ ಉತ್ತರ ಪ್ರದೇಶ ಮತ್ತು ಕೇಂದ್ರ ಸರ್ಕಾರದಿಂದ ರಕ್ಷಣೆ ಕೇಳಿದ್ದಾರೆ. ಮಾಜಿ ಪತಿ ಗುಲಾಮ್ ಸಚಿನ್ ಮತ್ತು ಅವರ ವಕೀಲ ಎಪಿ ಸಿಂಗ್ ಅವರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಸೀಮಾ ಹೇಳಿದ್ದು,ಆತ ತಮ್ಮ ನವಜಾತ ಶಿಶುವಿನ ಬಗ್ಗೆಯೂ ಕೆಟ್ಟದಾಗಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.