ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಎಂಥಾ ಕಾಲ ಬಂತಪ್ಪ! ಫೋನ್ ಕಸಿದುಕೊಂಡ ಶಿಕ್ಷಕಿಗೆ ಚಪ್ಪಲಿಯಿಂದ ಹೊಡೆದ ವಿದ್ಯಾರ್ಥಿನಿ!

ಆಂಧ್ರವಪ್ರದೇಶದ ವಿಶಾಖಪಟ್ಟಣಂನ ಹೊರವಲಯದಲ್ಲಿರುವ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿನಿಯೊಬ್ಬಳು ತನ್ನ ಮೊಬೈಲ್ ಫೋನ್ ಕಸಿದುಕೊಂಡ ಶಿಕ್ಷಕಿಗೆ ಚಪ್ಪಲಿಯಿಂದ ಹೊಡೆದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದ್ದು, ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿನಿಯನ್ನು ಅಮಾನತುಗೊಳಿಸಿದೆ.

ವಿದ್ಯೆ ಕಲಿಸಿದ ಗುರುವಿಗೆ ಚಪ್ಪಲಿಯೇಟು ಕೊಟ್ಟ ವಿದ್ಯಾರ್ಥಿನಿ

Profile pavithra Apr 26, 2025 7:43 PM

ಅಮರಾವತಿ: ಇತ್ತೀಚೆಗೆ ಆಂಧ್ರ ಪ್ರದೇಶದ ವಿಶಾಖಪಟ್ಟಣಂನ ಹೊರವಲಯದಲ್ಲಿರುವ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿನಿಯೊಬ್ಬಳು ತನ್ನ ಮೊಬೈಲ್ ಫೋನ್ ಕಸಿದುಕೊಂಡ ಶಿಕ್ಷಕಿಗೆ ಚಪ್ಪಲಿಯಿಂದ ಹೊಡೆದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದೆ. ಘಟನೆಯ ನಂತರ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿನಿಯನ್ನು ಅಮಾನತುಗೊಳಿಸಿದೆ. ವರದಿ ಪ್ರಕಾರ, ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿ ಫೋನ್‍ನಲ್ಲಿ ಜೋರಾಗಿ ಮಾತನಾಡುತ್ತಿದ್ದಾಗ ಈ ಬಗ್ಗೆ ಶಿಕ್ಷಕಿ ಎಚ್ಚರಿಕೆ ನೀಡಿದಾಗ ಈ ಜಗಳ ಶುರುವಾಗಿದೆ.

ಎಚ್ಚರಿಕೆ ನೀಡಿದರೂ ವಿದ್ಯಾರ್ಥಿನಿ ಮಾತನಾಡುವುದನ್ನು ಮುಂದುವರಿಸಿದಾಗ ಶಿಕ್ಷಕಿ ಕೋಪಗೊಂಡು ವಿದ್ಯಾರ್ಥಿನಿಯ ಸೆಲ್ ಫೋನ್ ಕಸಿದುಕೊಂಡು ಹೋಗಿದ್ದಾಳೆ. ಇದರಿಂದ ಕೋಪಗೊಂಡ ವಿದ್ಯಾರ್ಥಿನಿಯ ಶಿಕ್ಷಕಿಯ ಹಿಂದೆ ಬಂದು ಅವರನ್ನು ಅವಾಚ್ಯವಾಗಿ ನಿಂದಿಸಿದ್ದಾಳೆ. ಅಲ್ಲದೆ ತನ್ನ ಚಪ್ಪಲಿಯನ್ನು ತೆಗೆದು ಇತರ ವಿದ್ಯಾರ್ಥಿಗಳ ಮುಂದೆ ಶಿಕ್ಷಕಿಗೆ ಹೊಡೆದಿದ್ದಾಳೆ. ಇದರಿಂದ ಪರಿಸ್ಥಿತಿ ಹದಗೆಟ್ಟಿದ್ದು ಶಿಕ್ಷಕಿ ವಿದ್ಯಾರ್ಥಿನಿಯ ಮೇಲೆ ಕೈ ಮಾಡಿದ್ದಾಳೆ. ಇಬ್ಬರ ನಡುವೆ ದೊಡ್ಡ ಜಗಳ ನಡೆದು ಇಬ್ಬರು ಪರಿಸ್ಪರರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಅಲ್ಲಿದ್ದ ವಿದ್ಯಾರ್ಥಿಗಳಲ್ಲಿ ಒಬ್ಬರು ಇಡೀ ಘಟನೆಯನ್ನು ರೆಕಾರ್ಡ್ ಮಾಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಘಟನೆಯನ್ನು ಕಂಡು ಶಿಕ್ಷಣ ಸಂಸ್ಥೆಗಳಲ್ಲಿ ಶಿಸ್ತು ಮತ್ತು ಗೌರವದ ಮಟ್ಟ ಕಡಿಮೆಯಾಗುತ್ತಿರುವ ಬಗ್ಗೆ ಅನೇಕರು ಕಳವಳ ವ್ಯಕ್ತಪಡಿಸಿದ್ದಾರೆ. ಹಲವು ನೆಟ್ಟಿಗರು ವಿದ್ಯಾರ್ಥಿನಿಯ ಅಸಭ್ಯ ವರ್ತನೆಯನ್ನು ಖಂಡಿಸಿದ್ದಾರೆ. "ಪ್ರಸ್ತುತ ಶಿಕ್ಷಕರಿಗೆ ಸಣ್ಣ ಸಲಹೆಯೆಂದರೆ ಈ ವಿದ್ಯಾರ್ಥಿಗಳಿಗೆ ಅವರು ಬಯಸಿದ್ದನ್ನು ಮಾಡಲು ಅವಕಾಶ ನೀಡಿ, ಅವರನ್ನು ಸರಿಪಡಿಸಲು ಪ್ರಯತ್ನಿಸಬೇಡಿ. ಅವರು ಇನ್ನು ಮುಂದೆ 90ರ ದಶಕದ ಮಕ್ಕಳಂತೆ ಅಲ್ಲ. ಅವರು ತಪ್ಪು ಹಾದಿಯಲ್ಲಿದ್ದಾರೆ ಎಂದು ಅವರಿಗೆ ಸ್ಪಷ್ಟವಾಗಿ ತಿಳಿದಿದೆ ಮತ್ತು ಸಮಯವು ತಕ್ಕಪಾಠ ಕಲಿಸಿ ಅವರನ್ನು ಮರಳಿ ಕರೆತಂದಾಗ ಅರಿತುಕೊಳ್ಳಲು ಅವರಿಗೆ ಅವಕಾಶ ಮಾಡಿಕೊಡಿ” ಎಂದಿದ್ದಾರೆ.

"ದಯವಿಟ್ಟು ಅಂತಹ ವಿದ್ಯಾರ್ಥಿಗಳಿಗೆ ಕಲಿಯಲು ಅವಕಾಶ ನೀಡಬೇಡಿ. ಟಿಸಿ ನೀಡುವ ಮೂಲಕ ಆಕೆಯನ್ನು ಕಾಲೇಜಿನಿಂದ ಹೊರಹಾಕಲು ಅಥವಾ ವಜಾಗೊಳಿಸಲು ನಾನು ವಿನಂತಿಸುತ್ತೇನೆ" ಎಂದು ಮತ್ತೊಬ್ಬರು ಪೋಸ್ಟ್ ಮಾಡಿದ್ದಾರೆ. "ವಿದ್ಯಾರ್ಥಿಯು ತನ್ನ ನೀಚ ಕೆಲಸಕ್ಕಾಗಿ ಕಠಿಣ ಪರಿಣಾಮಗಳನ್ನು ಎದುರಿಸಬೇಕು" ಎಂದು ಮತ್ತೊಬ್ಬರು ಹೇಳಿದ್ದಾರೆ. "ಇದು ದುರದೃಷ್ಟಕರ. ಇದು ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳು ಕುಸಿಯುತ್ತಿರುವ ಸ್ಪಷ್ಟ ಸಂಕೇತ. ಶಾಲೆ / ಕಾಲೇಜು ಸಿಬ್ಬಂದಿಗೆ ಕಲಿಸಲು ಯಾವುದೇ ಭದ್ರತೆ ಇಲ್ಲ" ಎಂದು ಮತ್ತೊಂದು ಕಾಮೆಂಟ್‍ನಲ್ಲಿ ಬರೆಯಲಾಗಿದೆ.

ಈ ಸುದ್ದಿಯನ್ನೂ ಓದಿ:Viral Video: ಫ್ಲೈಓವರ್‌ನಿಂದ ಉರುಳಿದ ಕಾರು- ಯುವತಿ ಪ್ರಾಣಾಪಾಯದಿಂದ ಪಾರು; ಬೆಚ್ಚಿಬೀಳಿಸುವ ವಿಡಿಯೊ ವೈರಲ್!

ಘಟನೆಯ ಬಗ್ಗೆ ಶಿಕ್ಷಕರು ಅಥವಾ ಕಾಲೇಜು ಆಡಳಿತ ಮಂಡಳಿಯಿಂದ ಯಾವುದೇ ಔಪಚಾರಿಕ ದೂರು ಬಂದಿಲ್ಲ ಎಂಬುದಾಗಿ ಭೀಮಿಲಿ ಪೊಲೀಸರು ತಿಳಿಸಿದ್ದಾರೆ. ಈ ನಡುವೆ ಕಾಲೇಜು ಆಡಳಿತವು ವಿದ್ಯಾರ್ಥಿನಿಯ ದುರ್ವರ್ತನೆಗಾಗಿ ಆಕೆಯನ್ನು ಕಾಲೇಜಿನಿಂದ ಅಮಾನತುಗೊಳಿಸಿದೆ ಎಂದು ವರದಿಯಾಗಿದೆ.