ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಫ್ಲೈಓವರ್‌ನಿಂದ ಉರುಳಿದ ಕಾರು- ಯುವತಿ ಪ್ರಾಣಾಪಾಯದಿಂದ ಪಾರು; ಬೆಚ್ಚಿಬೀಳಿಸುವ ವಿಡಿಯೊ ವೈರಲ್!

ವೇಗವಾಗಿ ಬಂದ ಕಾರೊಂದು ಫ್ಲೈಓವರ್ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಕೆಳ ರಸ್ತೆಗೆ ಬಿದ್ದಿದೆ. ಆ ವೇಳೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯ ಮೇಲೆ ಸೈನ್‍ಬೋರ್ಡ್‌ ಬೀಳುವುದರಲ್ಲಿತ್ತು, ಅಷ್ಟರಲ್ಲಿ ಆಕೆ ತಪ್ಪಿಸಿಕೊಂಡ ಪರಿಣಾಮ ಸಾವಿನ ದವಡೆಯಿಂದ ಪಾರಾಗಿದ್ದಾಳೆ.ಈ ವಿಡಿಯೊ ಈಗ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಪಟ್ಟೆ ವೈರಲ್‌(Viral Video)ಆಗಿದೆ.

ಫ್ಲೈಓವರ್‌ನಿಂದ ಉರುಳಿದ ಕಾರು- ಪವಾಡ ಸದೃಶವಾಗಿ ಪಾರಾದ ಯುವತಿ!

Profile pavithra Apr 26, 2025 3:29 PM

ನವದೆಹಲಿ: ಅತಿವೇಗ ಅಪಘಾತಕ್ಕೆ ಕಾರಣ ಎಂದು ತಿಳಿದರೂ ಹೆಚ್ಚಿನ ಚಾಲಕರು ವೇಗವಾಗಿ ವಾಹನವನ್ನು ಚಲಾಯಿಸಿಕೊಂಡು ಹೋಗಿ ತಮ್ಮ ಜೀವದ ಜೊತೆಗೆ ಇತರರ ಜೀವವನ್ನು ಆಪತ್ತಿಗೆ ನೂಕುತ್ತಾರೆ. ಇದೀಗ ಅಂತಹದೊಂದು ಘಟನೆ ಇತ್ತೀಚೆಗೆ ಸೋಶಿಯಲ್ ಮಿಡಿಯಾದಲ್ಲಿ ಕಾಣಿಸಿಕೊಂಡಿದೆ. ವೇಗವಾಗಿ ಬಂದ ಕಾರೊಂದು ಫ್ಲೈಓವರ್ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಕೆಳ ರಸ್ತೆಗೆ ಬಿದ್ದಿದೆ. ಆ ವೇಳೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯ ಮೇಲೆ ಸೈನ್‍ಬೋರ್ಡ್‌ ಬೀಳುವುದರಲ್ಲಿತ್ತು, ಅಷ್ಟರಲ್ಲಿ ಆಕೆ ತಪ್ಪಿಸಿಕೊಂಡ ಪರಿಣಾಮ ಸಾವಿನ ದವಡೆಯಿಂದ ಪಾರಾಗಿದ್ದಾಳೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿದೆ.

ವೈರಲ್ ಆದ ವಿಡಿಯೊದಲ್ಲಿ, ಯುವತಿ ಜನನಿಬಿಡ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಕಾರು ಫ್ಲೈಓವರ್‌ನ ತಡೆಗೋಡೆಗೆ ಹೊಡೆದು ಹಾರಿ ಬಂದು ಕೆಳಗಿನ ರಸ್ತೆಗೆ ಬಂದು ಬಿದ್ದಿದೆ. ಇತ್ತ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯುವತಿ ಮೇಲಿನಿಂದ ದೊಡ್ಡ ಸೈನ್ ಬೋರ್ಡ್ ಬೀಳುತ್ತಿರುವುದನ್ನು ನೋಡಿ ಆಕೆ ತಕ್ಷಣ ಅದರಿಂದ ತಪ್ಪಿಸಿಕೊಂಡಿದ್ದಾಳೆ. ಅದೃಷ್ಟವಶಾತ್ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಭೀಕರ ಅಪಘಾತದ ವಿಡಿಯೊ ನೋಡಿ...

ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅನೇಕ ನೆಟ್ಟಿಗರು ಇದನ್ನು "ಪವಾಡ" ಎಂದು ಕರೆದಿದ್ದಾರೆ. ಈ ವಿಡಿಯೊ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ 2.6 ಕೋಟಿಗೂ ಹೆಚ್ಚು ವ್ಯೂವ್ಸ್‌ ಗಳಿಸಿದೆ ಮತ್ತು ನೆಟ್ಟಿಗರಿಂದ ಪ್ರತಿಕ್ರಿಯೆಗಳ ಅಲೆಯನ್ನು ಹುಟ್ಟುಹಾಕಿದೆ. "ಯುವತಿ ಕೇವಲ ಒಂದು ಸೆಕೆಂಡಿನಿಂದ ಬದುಕುಳಿದಿದ್ದಾಳೆ" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು "ನಾವು ಭಾರತೀಯರು ಕಾರುಗಳನ್ನು ಹಾರಿಸುವ ಚೀನಾದೊಂದಿಗಿನ ಸ್ಪರ್ಧೆಯನ್ನು ತಪ್ಪು ರೀತಿಯಲ್ಲಿ ತೆಗೆದುಕೊಂಡಿದ್ದೇವೆ" ಎಂದು ಬರೆದಿದ್ದಾರೆ. ಈ ನಡುವೆ ಕೆಲವರು ಯುವತಿಯ ತ್ವರಿತ ಚಿಂತನೆಯನ್ನು ಹೊಗಳಿದ್ದಾರೆ. ಮತ್ತೊಬ್ಬರು "ದೇವರು ಈ ಯುವತಿಯ ಮೇಲೆ ಕರುಣೆ ತೋರಿಸಿದ್ದಾನೆ. ಅದೃಷ್ಟವಶಾತ್ ಆಕೆ ಬದುಕುಳಿದಿದ್ದಾಳೆ.” ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಆನೆಯ ಮರಿಯ ಈ ಕ್ಯೂಟ್‌ ವಿಡಿಯೊ ಎಷ್ಟು ನೋಡಿದ್ರೂ ಸಾಲಲ್ಲ! ನೀವೂ ನೋಡಿ ಖುಷಿ ಪಡಿ

ಅಪಘಾತದಲ್ಲಿ ಯುವತಿಯೊಬ್ಬಳು ಪವಾಡವೆಂಬಂತೆ ಪಾರಾದ ಘಟನೆ ಈ ಹಿಂದೆ ಕೂಡ ನಡೆದಿತ್ತು. ನೋಯ್ಡಾದ ಸೆಕ್ಟರ್ 25 ರ ಬಳಿಯ ಫ್ಲೈಓವರ್ ರಸ್ತೆಯಲ್ಲಿ ನಡೆದ ಘಟನೆಯಲ್ಲಿ ಸ್ಕೂಟರ್ ಬಿಡುತ್ತಿದ್ದ ಯುವತಿಯೊಬ್ಬಳು ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದರೂ ಕೂಡ ಆಕೆ ಸಾವಿನಿಂದ ಪಾರಾಗಿದ್ದಾಳೆ. ಘಟನೆಯ ನಂತರ ಪೊಲೀಸರು ಮತ್ತು ತುರ್ತು ಸೇವೆಗಳು ಸೇರಿದಂತೆ ಸ್ಥಳೀಯ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದಾರೆ. ನಂತರ ಇಬ್ಬರು ವ್ಯಕ್ತಿಗಳು ತಕ್ಷಣ ಅವಳ ಸಹಾಯಕ್ಕೆ ಧಾವಿಸಿ, ಅವಳನ್ನು ರಕ್ಷಿಸಿದ್ದಾರೆ. ನಂತರ ಆಕೆಯನ್ನು ವೈದ್ಯಕೀಯ ಸಹಾಯಕ್ಕಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರು. ಇದರಲ್ಲಿ ಕೂಡ ಯುವತಿ ಯಾವುದೇ ಗಾಯಗಳಾಗದೆ ಅಪಾಯದಿಂದ ಪಾರಾಗಿದ್ದಳು.