ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಕ್ಲಾಸ್‌ ರೂಂನಲ್ಲಿ ಗಡದ್ದಾಗಿ ನಿದ್ದೆ ಮಾಡಿದ ಮೇಷ್ಟ್ರು; ಕಿಡಿಕಾರಿದ ನೆಟ್ಟಿಗರು

ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಶಾಲೆಯೊಂದರಲ್ಲಿ ಪಾಠ ಮಾಡಬೇಕಿದ್ದ ಶಿಕ್ಷಕನೊಬ್ಬ ವಿದ್ಯಾರ್ಥಿಗಳ ಮುಂದೆ ನಿದ್ರೆ ಮಾಡಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯಕ್ಕೆ ಶಿಕ್ಷಕನನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿದೆ.

ಮರಾಠಿ ಶಾಲೆಗಳು ಮುಚ್ಚಲು ಇದೇ ಕಾರಣವಂತೆ; ಏನಿದು ವೈರಲ್‌ ಸ್ಟೋರಿ?

Profile pavithra Jun 23, 2025 4:45 PM

ಮುಂಬೈ: ಮಹಾರಾಷ್ಟ್ರದ ಜಲ್ನಾ ಜಿಲ್ಲಾ ಪಂಚಾಯಿತಿ ಶಾಲೆಯಲ್ಲಿ ತರಗತಿ ನಡೆಯುತ್ತಿರುವ ಸಮಯದಲ್ಲಿ ಶಿಕ್ಷಕನೊಬ್ಬ ವಿದ್ಯಾರ್ಥಿಗಳ ಮುಂದೆ ನಿದ್ರೆ ಮಾಡಿದ್ದಾನೆ. ಶಿಕ್ಷಕ ಆರಾಮವಾಗಿ ಕುರ್ಚಿಯ ಮೇಲೆ ಕುಳಿತು ಮೇಜಿನ ಮೇಲೆ ಕಾಲುಗಳನ್ನು ಇರಿಸಿ ನಿದ್ರೆ ಮಾಡಿದ್ದ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ (Viral Vidoe) ಆಗಿ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ಅಘಾತಕಾರಿ ಘಟನೆ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಜಾಫ್ರಾಬಾದ್ ತಹಸಿಲ್‌ನ ಗಡೇಗಾವನ್ ಗ್ರಾಮದಲ್ಲಿ ನಡೆದಿದೆ.

ವೈರಲ್ ಆಗಿರುವ ವಿಡಿಯೊದಲ್ಲಿ, ಶಿಕ್ಷಕನು ಮೇಜಿನ ಮೇಲೆ ತನ್ನ ಕಾಲುಗಳನ್ನು ಇರಿಸಿ ಗೊರಕೆ ಹೊಡೆಯುತ್ತಿರುವುದು ಕಂಡುಬಂದಿದೆ. ವಿಡಿಯೊ ರೆಕಾರ್ಡ್ ಮಾಡುತ್ತಿರುವ ವ್ಯಕ್ತಿಯು ಕ್ಯಾಮೆರಾವನ್ನು ವಿದ್ಯಾರ್ಥಿಗಳ ಕಡೆಗೆ ತಿರುಗಿಸಿ, "ಶಿಕ್ಷಕರು ಎಷ್ಟು ಸಮಯದಿಂದ ಮಲಗಿದ್ದರು" ಎಂದು ವಿದ್ಯಾರ್ಥಿಯನ್ನು ಕೇಳಿದ್ದಾನೆ. ಅದಕ್ಕೆ ವಿದ್ಯಾರ್ಥಿಯೊಬ್ಬ "ಅರ್ಧ ಗಂಟೆ" ಎಂದು ಉತ್ತರಿಸಿದ್ದಾನೆ.

ವಿಡಿಯೊ ಇಲ್ಲಿದೆ ನೋಡಿ...



ಬ್ಲಾಕ್ ಶಿಕ್ಷಣ ಅಧಿಕಾರಿ ಸತೀಶ್ ಶಿಂಧೆ ಘಟನೆಯ ಬಗ್ಗೆ ಮಾತನಾಡಿದ್ದಾರೆ. ಈ ಕೃತ್ಯದ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಮತ್ತು ಈ ವಿಷಯದ ಬಗ್ಗೆ ಜಲ್ನಾ ಜಿಲ್ಲಾ ಶಿಕ್ಷಣ ಅಧಿಕಾರಿಗೆ ವರದಿ ಮಾಡುವುದಾಗಿ ಅವರು ಹೇಳಿದ್ದಾರೆ. ಸದ್ಯಕ್ಕೆ ಶಿಕ್ಷಕನನ್ನು ಹಿಡಿದು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿದೆ.

ಈ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆದ ಕೂಡಲೇ ಅನೇಕ ಜನರು ಇದಕ್ಕೆ ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ದೇಶದ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ನೆಟ್ಟಿಗರೊಬ್ಬರು ಕಾಮೆಂಟ್‌ ಮಾಡಿ "ಅದಕ್ಕಾಗಿಯೇ ಮರಾಠಿ ಶಾಲೆಗಳು ಮುಚ್ಚುತ್ತಿವೆ" ಎಂದು ಹೇಳಿದರೆ, ಇನ್ನೊಬ್ಬರು ಈ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಬೈಕ್‌ನಿಂದ ಬಿದ್ದ ದಂಪತಿಗೆ ಸಹಾಯ ಮಾಡಲು ಬಂದು ಚಿನ್ನಾಭರಣ ದೋಚಿದ ಕಳ್ಳರು!

ಇದೇ ರೀತಿಯ ಘಟನೆಗಳು ಈ ಹಿಂದೆ ನಡೆದಿದ್ದು, ಅದರ ವಿಡಿಯೊಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ಇತ್ತೀಚೆಗಷ್ಟೇ ಆಗ್ರಾದಲ್ಲಿನ ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬಳು ತರಗತಿಯಲ್ಲಿ ನಿದ್ರಿಸುತ್ತಿರುವುದನ್ನು ಮತ್ತು ವಿದ್ಯಾರ್ಥಿಗಳು ಅವರಿಗೆ ಗಾಳಿ ಹಾಕುತ್ತಿರುವುದನ್ನು ತೋರಿಸುವ ವಿಡಿಯೊ ವೈರಲ್ ಆಗಿತ್ತು. ಹಾಗೇ ಬಿಹಾರದ ಸಹರ್ಸಾ ಶಾಲೆಯ ಮತ್ತೊಂದು ವೈರಲ್ ವಿಡಿಯೊದಲ್ಲಿ, ಒಬ್ಬರಲ್ಲ, ಮೂವರು ಶಿಕ್ಷಕರು ತರಗತಿಯಲ್ಲಿ ವಿದ್ಯಾರ್ಥಿಗಳ ಬೆಂಚುಗಳ ಮೇಲೆ ಮಲಗಿರುವುದು ಕಂಡುಬಂದಿತ್ತು.