ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗ ಸಿಕ್ಕರೂ ನಿಲ್ಲದ ಕಣ್ಣೀರು: ಬೆಂಗಳೂರಿಗೆ ಬಂದ 23 ವರ್ಷದ ಯುವತಿಗೆ ಕಾಡುವ ಆತಂಕವೇನು?

Viral News: ಬೆಂಗಳೂರಿನಲ್ಲಿ ತನ್ನ ಕನಸಿನ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡ 23 ವರ್ಷದ ಯುವತಿಯೊಬ್ಬಳು ತನ್ನ ಯಶಸ್ಸಿಗೆ ಖುಷಿ ಪಡುವ ಬದಲಿಗೆ ದಿನ ನಿತ್ಯ ಕಣ್ಣೀರು ಹಾಕುತ್ತಿದ್ದಾಳೆ. ಕೆಲಸಕ್ಕೆ ಸೇರುವ ಮುನ್ನ ಬೆಂಗಳೂರಿನ ವಾತಾವರಣ ಬಹಳಷ್ಟು ಇಷ್ಟವಾಗಿತ್ತು, ಆದರೆ ಕಚೇರಿಗೆ ಹೋಗಲು ಆರಂಭಿಸಿದಾಗಿನಿಂದ ಮಾನಸಿಕ ಒತ್ತಡ ಉಂಟಾಗುತ್ತಿದೆ. ಮನೆಯವರ ನೆನಪು ತನ್ನನ್ನು ಬಿಟ್ಟು ಬಿಡದೆ ಕಾಡುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾಳೆ..ರೆಡ್ಡೆಟ್ ನಲ್ಲಿ ಈ ವಿಚಾರ ಶೇರ್ ಮಾಡಿಕೊಂಡಿದ್ದಾಳೆ.

ಕನಸಿಕ ಉದ್ಯೋಗ ಸಿಕ್ಕರೂ ನೆಮ್ಮದಿ ಇಲ್ಲ ಎಂದು ಆತಂಕ ವ್ಯಕ್ತಪಡಿಸಿದ ಯುವತಿ! ​

ಉದ್ಯೋಗ ಸಿಕ್ಕರೂ ನೆಮ್ಮದಿ ಇಲ್ಲ ಎಂದು ಆತಂಕ ವ್ಯಕ್ತಪಡಿಸಿದ ಯುವತಿ -

Profile
Pushpa Kumari Jun 25, 2026 7:08 PM

ಬೆಂಗಳೂರು,ಜೂ.25: ಇತ್ತೀಚೆಗೆ ಶಿಕ್ಷಣ ಪಡೆದ ಹೆಚ್ಚಿನ ಯುವಕ- ಯುವತಿಯರು ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಗಿಟ್ಟಿಸಿ ಕೊಳ್ಳಬೇಕು ಎಂಬ ಕನಸನ್ನು ಹೊಂದಿರುತ್ತಾರೆ. ಹೀಗಾಗಿ ವಿದೇಶ ದಲ್ಲಿ, ಬೆಂಗಳೂರು, ಮುಂಬೈನಂತಹ ಪ್ರದೇಶದಲ್ಲಿ ಸಿಗುವ ಕೆಲಸವನ್ನೇ ಆಯ್ದುಕೊಳ್ಳುತ್ತಾರೆ. ಆದರೆ ಬೆಂಗಳೂರಿನಲ್ಲಿ ತನ್ನ ಕನಸಿನ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡ 23 ವರ್ಷದ ಯುವತಿಯೊಬ್ಬಳು ತನ್ನ ಯಶಸ್ಸಿಗೆ ಖುಷಿ ಪಡುವ ಬದಲಿಗೆ ದಿನ ನಿತ್ಯ ಕಣ್ಣೀರು ಹಾಕುತ್ತಿದ್ದಾಳೆ. ಕೆಲಸಕ್ಕೆ ಸೇರುವ ಮುನ್ನ ಬೆಂಗಳೂರಿನ ವಾತಾವರಣ ಬಹಳಷ್ಟು ಇಷ್ಟವಾಗಿತ್ತು, ಆದರೆ ಕಚೇರಿಗೆ ಹೋಗಲು ಆರಂಭಿಸಿದಾಗಿನಿಂದ ಮಾನಸಿಕ ಒತ್ತಡ ಉಂಟಾಗುತ್ತಿದೆ. ಮನೆಯವರ ನೆನಪು ತನ್ನನ್ನು ಬಿಟ್ಟು ಬಿಡದೆ ಕಾಡುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾಳೆ. ರೆಡ್ಡೆಟ್ ನಲ್ಲಿ ಈ ವಿಚಾರ ಶೇರ್ (Viral News) ಮಾಡಿಕೊಂಡಿದ್ದಾಳೆ.

ತನ್ನ ಕನಸಿನ ಕೆಲಸಕ್ಕಾಗಿ ಬೆಂಗಳೂರಿಗೆ ತೆರಳಿದ 23 ವರ್ಷದ ಯುವತಿಯೂ ತನಗೆ ದಯೆಯುಳ್ಳ ಸಹೋದ್ಯೋಗಿಗಳು, ಉತ್ತಮ ಆಹಾರ ಮತ್ತು ಹೆಚ್ಚಿನ ಸಂಬಳವು ಸಿಕ್ಕರೂ ಪ್ರತಿ ಗಂಟೆಗೂ ಬೀಳುವ ಕಣ್ಣೀರನ್ನು ಇನ್ನೂ ನಿಲ್ಲಿಸಲ್ಲೂ ಸಾಧ್ಯವಾಗಿಲ್ಲ ಎಂದು ಯುವತಿ ಬೇಸರ ಹೊರಹಾಕಿದ್ದಾಳೆ. ತನ್ನ ಸುತ್ತ ಎಲ್ಲವೂ ಚೆನ್ನಾಗಿ ನಡೆಯುತ್ತಿದ್ದರೂ, ಸೇರಿದಾಗಿನಿಂದ ತಾನು ಭಾವನಾತ್ಮಕ ವಾಗಿ ತೋಳಲಾಟ ಅನುಭವಿಸುತ್ತಿದ್ದೇನೆ.ದಿನ ನಿತ್ಯ ಮನೆಯವರ ನೆನಪು ನನಗೆ ಕಾಡುತ್ತಿದೆ.

Viral Video: ಫ್ರಾನ್ಸ್‌ನಲ್ಲಿ ಮಹಿಳೆಯರ ಸುರಕ್ಷತೆ ಆದ್ಯತೆ; ಮುಂಜಾನೆ 4:30ಕ್ಕೆ ಒಬ್ಬಂಟಿಯಾಗಿ ಬೀದಿಯಲ್ಲಿ ಓಡಾಡಿದ ಭಾರತೀಯ ಮಹಿಳೆ

ತಾನು ಯಾವಾಗಲೂ ಇಂತಹ ಕಂಪನಿಯಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿದ್ದೆ. ಅದೇ ರೀತಿ ಬಯಸಿದ ಕಂಪನಿಗೆ ಸೇರಿಕೊಂಡೆ ಮತ್ತು ಕೇಳಿದ್ದಕ್ಕಿಂತ ಎರಡು ಪಟ್ಟು ಸಂಬಳ ಪ್ಯಾಕೇಜ್ ಪಡೆದೆ ವಾಸ್ತವವಾಗಿ, ಅವರು ನಗರದಲ್ಲಿ ತಮ್ಮ ಮೊದಲ ಕೆಲವು ದಿನಗಳನ್ನು ಆನಂದಿಸಿದರು. ಆದರೆ ಕಚೇರಿಗೆ ಹೋಗಲು ಪ್ರಾರಂಭಿಸಿದ ನಂತರ ವಿಷಯಗಳು ಬದಲಾದವು. ಅವರು ಪ್ಯಾನಿಕ್ ಅಟ್ಯಾಕ್‌ಗಳನ್ನು ಹೊಂದಲು ಪ್ರಾರಂಭಿಸಿದರು. ಆಗಾಗ್ಗೆ ಖಿನ್ನತೆಗೆ ಒಳಗಾಗುತ್ತಿದ್ದರು.

ಕಚೇರಿಯ ಶೌಚಾಲಯದಲ್ಲಿ ಕುಳಿತು ಪೋಷಕರಿಗೆ ಮತ್ತು ಕರೆ ಮಾಡಿ ಅಳುತ್ತಿದ್ದೇನೆ. ತನ್ನ ಪರಿಸ್ಥಿತಿಯನ್ನು ಕಂಡು ಆಕೆಯ ತಂದೆ "ಕೆಲಸ ಬಿಟ್ಟು ವಾಪಸ್ ಮನೆಗೆ ಬಂದುಬಿಡು" ಎಂದು ಹೇಳಿ ದ್ದಾರೆ. ಸದ್ಯ ಯುವತಿ "ನಾನು ಅನಾರೋಗ್ಯದ ರಜೆ ತೆಗೆದುಕೊಳ್ಳಬೇಕೇ? ಅಥವಾ ಕೆಲಸ ಬಿಟ್ಟು ಊರಿಗೆ ಮರಳಬೇಕೇ? ಎಂದು ನೆಟ್ಟಿಗರಲ್ಲಿ ಸಲಹೆ ಕೇಳಿದ್ದಾಳೆ.

​ಈ ಬಗ್ಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು ಬಳಕೆದಾರರೊಬ್ಬರು ಹೊಸ ವಾತಾವರಣಕ್ಕೆ ಹೊಂದಿ ಕೊಳ್ಳುವಾಗ ಆಗುವ ಮಾನಸಿಕ ಒತ್ತಡವೇ ಇದಕ್ಕೆ ಕಾರಣ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಹೊಸ ಸ್ನೇಹಿತರನ್ನು ಮಾತನಾಡಿಸಿ, ಸ್ವಲ್ಪ ದಿನ ಕಳೆದ ಬಳಿಕ ಸರಿಹೊಂದಬಹುದು ಎಂದು ಸಲಹೆ ನೀಡಿದ್ದಾರೆ.