ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ರೀಲ್ಸ್‌ ಶೋಕಿಗಾಗಿ ಸೇತುವೆ ಮೇಲೆ ಆಟೋದಲ್ಲಿ ಸ್ಟಂಟ್‌; ಕೊನೆಗೆ ಆಗಿದ್ದೇನು? ವಿಡಿಯೋ ನೋಡಿ

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಸೇತುವೆಯ ಮೇಲೆ ಆಟೋರಿಕ್ಷಾ ಚಾಲಕನೊಬ್ಬ ಕೇವಲ ಎರಡು ಚಕ್ರಗಳಲ್ಲಿ ತನ್ನ ಆಟೋವನ್ನು ಚಲಾಯಿಸುತ್ತಾ ಸ್ಟಂಟ್ ಮಾಡಿದ್ದಾನೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದ್ದು, ಪೊಲೀಸರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಸಿಕ್ಕಾಪಟ್ಟೆ ವೈರಲ್‌ ಆಯ್ತು ಆಟೋ ಡ್ರೈವರ್‌ನ ಈ ಸ್ಟಂಟ್‌ ವಿಡಿಯೊ!

-

Profile pavithra May 30, 2025 6:26 PM

ಭೋಪಾಲ್: ಈಗಂತೂ ರೀಲ್ಸ್‌ ಕ್ರೇಜ್‌ ಹೆಚ್ಚಾಗಿದೆ. ರೈಲಿನ ಹಳಿಗಳ ನಡುವೆ ನಿಂತು ಸ್ಟಂಟ್ಸ್‌ ಮಾಡುವುದು, ಹೆದ್ದಾರಿಯಲ್ಲಿ ಬೈಕ್‌ ಮೇಲೆ ನಿಂತು ಸ್ಟಂಟ್ಸ್‌ ಮಾಡುವುದು ಹೀಗೆ ಒಂದಾ....ಎರಡಾ.... ಸೋಶಿಯಲ್‌ ಮೀಡಿಯಾ ತೆರೆದರೆ ದಿನಕ್ಕೆ ನೂರಾರು ಇಂತಹ ವಿಡಿಯೊಗಳು ಸಿಗುತ್ತವೆ. ಇತ್ತೀಚೆಗೆ ಇಂತಹದೊಂದು ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದ್ದು, ಸೇತುವೆಯ ಮೇಲೆ ಆಟೋರಿಕ್ಷಾ ಚಾಲಕನೊಬ್ಬ ಕೇವಲ ಎರಡು ಚಕ್ರಗಳಲ್ಲಿ ತನ್ನ ಆಟೋವನ್ನು ಚಲಾಯಿಸುತ್ತಾ ಸ್ಟಂಟ್ ಮಾಡಿದ್ದಾನೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral News) ಆಗಿದೆ.

ಝಾನ್ಸಿ ರಸ್ತೆ ಪೊಲೀಸ್ ಠಾಣೆ ವ್ಯಾಪ್ತಿಯ ಹರಿಶಂಕರ್ ಪುರಂ ಕಾಲೋನಿಯ ಬಳಿ, ಹೊಸದಾಗಿ ನಿರ್ಮಿಸಲಾದ ನೀಡಮ್ ಆರ್‌ಒಬಿ ಸೇತುವೆಯ ಬಳಿ ಈ ಘಟನೆ ನಡೆದಿದೆ. ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಆಟೋ ಚಾಲಕ ಮಾಡಿದ ಈ ಸ್ಟಂಟ್ಸ್‌, ಇತರ ಪ್ರಯಾಣಿಕರಿಗೆ ತೊಂದರೆಯನ್ನುಂಟು ಮಾಡಿದೆ. ಅದು ಅಲ್ಲದೇ, ಆಟೋ ಚಾಲಕ ಇಂತಹ ಅಪಾಯಕಾರಿ ಕೃತ್ಯದಲ್ಲಿ ತೊಡಗಿದ್ದಾಗ ಆಟೋದೊಳಗೆ ಕುಳಿತಿದ್ದ ಯುವಕ ತಲೆ ಹೊರಗೆ ಹಾಕಿ ನೇತಾಡುತ್ತಾ, ಕೂಗುತ್ತಾ ಆಟೋವನ್ನು ತಟ್ಟುತ್ತಿರುವುದು ವೈರಲ್ ವಿಡಿಯೊದಲ್ಲಿ ಸೆರೆಯಾಗಿದೆ.

ವಿಡಿಯೊ ಇಲ್ಲಿದೆ ನೋಡಿ...



ವೈರಲ್ ಆಗಿರುವ ವಿಡಿಯೋ ಆಧರಿಸಿ, ಸ್ಥಳೀಯ ಪೊಲೀಸರು ಚಾಲಕನ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಶೀಘ್ರದಲ್ಲೇ ಚಾಲಕನನ್ನು ಪತ್ತೆಹಚ್ಚಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:‌Viral Video: ಮದುಮಗ ಧರಿಸಿದ್ದ ದಿರಿಸನ್ನು ಕಂಡು ಈ ಅಜ್ಜಿಯ ರಿಯಾಕ್ಷನ್‌ ನೋಡಿ- ವಿಡಿಯೊ ಇದೆ

ಇಂತಹ ಘಟನೆ ನಡೆದಿದ್ದು ಇದೇ ಮೊದಲಲ್ಲ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ಗ್ವಾಲಿಯರ್ ಐಜಿ ಕಚೇರಿಗೆ ಹೋಗುವ ರಸ್ತೆಯಲ್ಲಿ ಒಂದು ಇ-ರಿಕ್ಷಾ ಮತ್ತು ಒಂದು ಆಟೋರಿಕ್ಷಾ ಎರಡು ಚಕ್ರಗಳಲ್ಲಿ ಒಂದರ ನಂತರ ಒಂದರಂತೆ ಚಲಿಸುತ್ತಿರುವುದು ಕಂಡುಬಂದಿತ್ತು. ಇದನ್ನು ನೋಡುಗನೊಬ್ಬ ತನ್ನ ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದನು. ಈ ವಿಡಿಯೊ ಎಲ್ಲರ ಗಮನಸೆಳೆದು ವೈರಲ್ ಆಗಿತ್ತು. ವಿಡಿಯೊ ವೈರಲ್ ಆದ ನಂತರ, ಪೊಲೀಸರು ಇಬ್ಬರೂ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ವಿಡಿಯೊ ಮೂಲಕ ಪೊಲೀಸರು ಘಟನೆಯಲ್ಲಿ ಭಾಗಿಯಾಗಿರುವ ಚಾಲಕರಿಗಾಗಿ ಹುಡುಕಾಟ ನಡೆಸಿದ್ದರು ಮತ್ತು ರಸ್ತೆಯಲ್ಲಿದ್ದ ಇತರ ಚಾಲಕರಿಂದಲೂ ಮಾಹಿತಿಯನ್ನು ಸಂಗ್ರಹಿಸಿದ್ದರು.