ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಈ ಶತಮಾನದ ಮಾದರಿ ಗಂಡ; ಪತ್ನಿಯನ್ನು ಆಕೆಯ ಪ್ರೇಮಿಗೆ ಕೊಟ್ಟು ಮದುವೆ ಮಾಡಿಸಿದ ಪತಿ

ವ್ಯಕ್ತಿಯೊಬ್ಬ ತನ್ನ 45 ವರ್ಷದ ಹೆಂಡತಿಯನ್ನು ಆಕೆಯ 21 ವರ್ಷದ ಗೆಳೆಯನೊಂದಿಗೆ ಗ್ರಾಮಸ್ಥರ ಮುಂದೆ ಮದುವೆ ಮಾಡಿಸಿದ ಘಟನೆ ಹಿರಾನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಘಘರ್ಜನಿ ಗ್ರಾಮದಲ್ಲಿ ನಡೆದಿದೆ. ಇದರ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿದೆ.

45ವರ್ಷದ ಹೆಂಡ್ತಿಯನ್ನು 21 ವರ್ಷದ ಪ್ರೇಮಿಗೆ ಕೊಟ್ಟು ಮದುವೆ ಮಾಡಿಸಿದ ಗಂಡ!

Profile pavithra Jun 21, 2025 3:31 PM

ರಾಂಚಿ: ವಿವಾಹೇತರ ಸಂಬಂಧಗಳಿಂದಾಗಿ ಗಂಡ ಹೆಂಡತಿ ಬೇರೆಯಾಗುವ ಅನೇಕ ಘಟನೆಗಳನ್ನು ನಾವು ನೋಡುತ್ತಿರುತ್ತೇವೆ. ಅದೂ ಅಲ್ಲದೇ ಇತ್ತೀಚೆಗೆ, ಪ್ರಿಯಕರನ ಜೊತೆ ಓಡಿಹೋದ ಪತ್ನಿಯನ್ನು ಪತಿಯೊಬ್ಬ ಅವಳ ಇಚ್ಛೆಯಂತೆ ಬದುಕಲಿ ಬಿಡಿ ಎಂದು ಹೇಳಿದ ಪ್ರಕರಣ ಕೂಡ ವೈರಲ್‌ ಆಗಿತ್ತು. ಇದೀಗ ಪತಿಯೊಬ್ಬ ವಿವಾಹೇತರ ಸಂಬಂಧ ಹೊಂದಿದ್ದ ತನ್ನ ಹೆಂಡತಿಗೆ ಆಕೆಯ ಪ್ರಿಯಕರನ ಜೊತೆಗೆ ಮದುವೆ ಮಾಡಿಸಿದ್ದಾನೆ. ಅವನು ಎಲ್ಲಾ ಗ್ರಾಮಸ್ಥರ ಮುಂದೆ ಎರಡು ಮಕ್ಕಳ ತಾಯಿಯಾಗಿದ್ದ 45 ವರ್ಷದ ತನ್ನ ಹೆಂಡತಿಗೆ ಆಕೆಯ 21 ವರ್ಷದ ಗೆಳೆಯನೊಂದಿಗೆ ಮದುವೆ ಮಾಡಿಸಿದ್ದಾನೆ. ಹಿರಾನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಘಘರ್ಜನಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ (Viral Video) ಆಗಿದೆ.

ಮಾಹಿತಿ ಪ್ರಕಾರ, ದಂಪತಿ ತಮ್ಮ ಇಬ್ಬರು ಮಕ್ಕಳೊಂದಿಗೆ ಜಾರ್ಖಂಡ್‌ನ ಪಕುರ್ ಜಿಲ್ಲೆಯ ಘಘರ್ಜನಿ ಗ್ರಾಮದಲ್ಲಿ ವಾಸವಾಗಿದ್ದರು. ಆದರೆ, ಮಹಿಳೆ ಕಳೆದ ಕೆಲವು ವರ್ಷಗಳಿಂದ 21 ವರ್ಷದ ವ್ಯಕ್ತಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಳು. ಈ ಸಂಬಂಧ ಅವಳ ಗಂಡ ಹಾಗೂ ಗ್ರಾಮಸ್ಥರ ಗಮನಕ್ಕೆ ಬಂದಿದೆ. ಕೊನೆಗೆ ಇದು, ಗ್ರಾಮದ ಜನರ ಸಮ್ಮುಖದಲ್ಲಿ ಪಂಚಾಯ್ತಿ ನಡೆದು ಈ ವಿಷಯ ಬಹಿರಂಗವಾಯಿತು. ಈ ಸಂದರ್ಭದಲ್ಲಿ, ಮಹಿಳೆಯ ಗಂಡ ಸಂಪ್ರದಾಯದ ಪ್ರಕಾರ, ಅವನು ಆಕೆಯ ಹಣೆಯ ಮೇಲಿನ ಸಿಂಧೂರವನ್ನು ಒರೆಸಿ, ಆಕೆಯ ಕೈಯಲ್ಲಿದ್ದ ಬಳೆಗಳನ್ನು ತೆಗೆದು ವಿಚ್ಛೇದನ ನೀಡಿರುವುದಾಗಿ ಘೋಷಿಸಿದ್ದಾನೆ. ನಂತರ, ಅದೇ ವೇದಿಕೆಯಲ್ಲಿ, ಅವನು ತನ್ನ ಹೆಂಡತಿಯನ್ನು ಅವಳ ಪ್ರಿಯಕರನಿಗೆ ಕೊಟ್ಟು ಮದುವೆ ಮಾಡಿಸಿದ್ದಾನೆ.

ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೊಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಲಾಗಿದ್ದು, ವೈರಲ್ ಆಗಿವೆ. ಪ್ರೀತಿ ಮತ್ತು ಪರಸ್ಪರ ಗೌರವಕ್ಕಾಗಿ ಈ ದಿಟ್ಟ ನಿಲುವು ತೆಗೆದುಕೊಳ್ಳಲಾಗಿದೆ ಎಂದು ಹಲವರು ಹೊಗಳಿದರೆ, ಇನ್ನು ಕೆಲವರು ಇದು ವಿವಾಹ ಮತ್ತು ಕುಟುಂಬ ಮೌಲ್ಯಗಳ ಸಾಂಪ್ರದಾಯಿಕ ಮಾನದಂಡಗಳಿಗೆ ಧಕ್ಕೆ ತರುತ್ತಿದೆ ಎಂದು ಟೀಕಿಸಿದ್ದಾರೆ. ಮತ್ತೊಬ್ಬರು "ಇದು ಪ್ರೀತಿಯಾಗಿರಬಹುದು, ಆದರೆ ಇದು ನಮ್ಮ ಮಕ್ಕಳಿಗೆ ಯಾವ ಸಂದೇಶವನ್ನು ನೀಡುತ್ತದೆ?" ಎಂದು ಬರೆದಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಮೆಟ್ರೋದೊಳಗೆ ಹಾವಿದೆ ಎಂಬ ವದಂತಿ- ಬೆದರಿದ ಮಹಿಳೆಯರ ರಂಪಾಟವನ್ನೊಮ್ಮೆ ನೋಡಿ

ಇದೇ ರೀತಿಯ ಘಟನೆ ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಅರವಿಂದ್ ಎಂಬ ವ್ಯಕ್ತಿ ತನ್ನ ಹೆಂಡತಿ ಬೇರೊಬ್ಬಳನ್ನು ಪ್ರೀತಿಸುತ್ತಿದ್ದಾಳೆ ಎಂದು ತಿಳಿದ ನಂತರ ಗಲಾಟೆ ಮಾಡುವ ಬದಲು, ಸ್ಥಳೀಯ ದೇವಾಲಯದಲ್ಲಿ ಆಕೆಯ ಪ್ರೇಮಿಯೊಂದಿಗೆ ಅವಳಿಗೆ ಮದುವೆ ಮಾಡಿಸಿದ್ದಾನೆ.