Viral Video: ಕ್ಲಾಸ್‌ನಲ್ಲಿ ಕುಳಿತೇ ಹೆಡ್ ಮಸಾಜ್ ಮಾಡ್ತಾ ರಿಲ್ಯಾಕ್ಸ್ ಮೂಡ್‌ನಲ್ಲಿ ಟೀಚರ್! ವಿಡಿಯೊ ನೋಡಿ
ಉತ್ತರ ಪ್ರದೇಶದ ಬುಲಂದ್‌ಶಹರ್‌ನ ಮುಂಡಖೇಡದ ಪ್ರಾಥಮಿಕ ಶಾಲೆಯಲ್ಲಿ ಸಂಗೀತಾ ಮಿಶ್ರಾ ಎಂಬ ಶಿಕ್ಷಕಿ ತರಗತಿಯಲ್ಲಿ ವಿದ್ಯಾರ್ಥಿಗಳ ಮುಂದೆ ಮೊಬೈಲ್ ಫೋನ್‌ನಲ್ಲಿ ಶಾಸ್ತ್ರೀಯ ಹಾಡುಗಳನ್ನು ಕೇಳುತ್ತಾ ತಲೆಗೆ ಮಸಾಜ್ ಮಾಡುತ್ತಾ ಕೂದಲಿಗೆ ಎಣ್ಣೆ ಹಚ್ಚಿಕೊಂಡಿದ್ದಾಳೆ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿದೆ. ಈ ಘಟನೆಯ ನಂತರ ಶಿಕ್ಷಕಿಯನ್ನು ಅಮಾನತುಗೊಳಿಸಲಾಗಿದೆ.


ಲಖನೌ: ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ತರಗತಿಯ ವೇಳೆ ಬೇಜವಾಬ್ದಾರಿಯಿಂದ ವರ್ತಿಸಿದ ವಿಡಿಯೊಗಳು ಈ ಹಿಂದೆ ಸೋಶಿಯಲ್ ಮಿಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇದೀಗ ಉತ್ತರ ಪ್ರದೇಶದ ಬುಲಂದ್‌ಶಹರ್‌ನ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯೊಬ್ಬಳು ವಿದ್ಯಾರ್ಥಿಗಳ ಮುಂದೆ ತರಗತಿಯಲ್ಲಿ ಮೊಬೈಲ್ ಫೋನ್‌ನಲ್ಲಿ ಶಾಸ್ತ್ರೀಯ ಹಾಡುಗಳನ್ನು ಕೇಳುತ್ತಾ ತಲೆಗೆ ಮಸಾಜ್ ಮಾಡುತ್ತಾ ಕೂದಲಿಗೆ ಎಣ್ಣೆ ಹಚ್ಚಿಕೊಂಡಿದ್ದಾಳೆ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿದೆ. ಅಲ್ಲದೇ ಈ ಶಿಕ್ಷಕಿಯ ಪೋಷಕರೊಂದಿಗೆ ಅನುಚಿತವಾಗಿ ವರ್ತಿಸಿ ಕೋಲಿನಿಂದ ಹೊಡೆದ ಆರೋಪವೂ ಇದೆ. ಈ ಘಟನೆಯ ನಂತರ ಶಿಕ್ಷಕಿಯನ್ನು ಅಮಾನತುಗೊಳಿಸಲಾಗಿದೆ.
ವಿಡಿಯೊದಲ್ಲಿರುವ ಶಿಕ್ಷಕಿಯನ್ನು ಸಂಗೀತಾ ಮಿಶ್ರಾ ಎಂದು ಗುರುತಿಸಲಾಗಿದ್ದು, ವಿಡಿಯೊದಲ್ಲಿ ಈಕೆ ತರಗತಿಯ ವೇಳೆ ಮಕ್ಕಳಿಗೆ ಕ್ಲಾಸ್‍ಗಳನ್ನು ಮಾಡುವ ಬದಲು ತನ್ನ ತಲೆಗೆ ಎಣ್ಣೆ ಮಸಾಜ್ ಮಾಡಿಕೊಂಡಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನಸೆಳೆದು ವೈರಲ್ ಆಗಿದ್ದು, ಮುಂಡಖೇಡದ ಪ್ರಾಥಮಿಕ ಶಾಲೆಯ ಶಿಕ್ಷಕಿಯ ವಿರುದ್ಧ ಟೀಕೆಗಳು ಕೇಳಿಬಂದಿವೆ.
ವಿಡಿಯೊ ಇಲ್ಲಿದೆ ನೋಡಿ...
#उत्तरप्रदेश
— Abhimanyu Singh Journalist (@Abhimanyu1305) July 20, 2025
प्रिंसिपल मैडम कौन से तेल से चंपी कर रही हैं??🤔
👉🏾 लाउडस्पीकर में क्लासिकल सांग का आनंद लेते हुए। सिंगार दानी से तेल निकाल कर सर में डाल-डाल कर मानसिक टेंशन दूर कर रही हैं।
👉🏾 सहायक अध्यापक द्वारा वीडियो बनाये जाने पर छात्र छात्राएं मुस्कुराते हुए इशारा कर रहे… pic.twitter.com/UW68wHqfhS
ಅಲ್ಲದೇ ಪೋಷಕರು ಶಾಲೆಗೆ ಬಂದು ದೂರು ನೀಡಿದ್ದಕ್ಕೆ ಶಿಕ್ಷಕಿ ಅವರನ್ನು ನಿಂದಿಸಿ ಕೋಲಿನಿಂದ ಹೊಡೆದಿದ್ದಾಳೆ ಎಂದು ವರದಿಯಾಗಿದೆ. ಈ ಬಗ್ಗೆ ಪೋಷಕರು ಆರೋಪ ಮಾಡಿದ ಹಿನ್ನೆಲೆಯಲ್ಲಿ ಈ ಘಟನೆಯ ಬಗ್ಗೆ ಗಂಭೀರವಾಗಿ ಪರಿಗಣಿಸಿದ ಶಿಕ್ಷಣ ಅಧಿಕಾರಿ ತಕ್ಷಣ ಕ್ರಮ ಕೈಗೊಂಡು ಶಿಕ್ಷಕಿಯನ್ನು ಅಮಾನತುಗೊಳಿಸಿದ್ದಾರೆ ಮತ್ತು ತನಿಖೆಗೆ ಆದೇಶಿಸಿದ್ದಾರೆ.
ಅಲ್ಲದೇ ಈ ಶಿಕ್ಷಕಿ ಗೈರು ಹಾಜರಾಗಿದ್ದರೂ ಕೂಡ ಹಾಜರಾತಿ ರಿಜಿಸ್ಟರ್‌ನಲ್ಲಿ ಗೈರುಹಾಜರಾಗಿದ್ದಾಗ ಮಾಡಿದ್ದ ಟಿಪ್ಪಣಿಗಳನ್ನು ತಿದ್ದುಪಡಿ ಮಾಡಿದ್ದಾಳೆ ಎಂದು ತನಿಖೆಯಿಂದ ತಿಳಿದುಬಂದಿದೆ. ಅಮಾನತುಗೊಂಡ ನಂತರ, ಶಿಕ್ಷಕಿ ಸಂಗೀತ ಮಿಶ್ರಾ ಅವಳನ್ನು ಖುರ್ಜಾ ಪ್ರದೇಶದ ಜಮಾಲ್ಪುರ ಪ್ರಾಥಮಿಕ ಶಾಲೆಗೆ ವರ್ಗಾಯಿಸಲಾಗಿದೆ.
ಈ ಸುದ್ದಿಯನ್ನೂ ಓಧಿ:Viral Video: ಸ್ಕೂಟರ್‌ಗೆ ಅಡ್ಡ ಬಂದ ಬೀದಿ ಶ್ವಾನ ಉಳಿಸಲು ಹೋಗಿ ಜೀವ ಕಳೆದುಕೊಂಡ ಅಪ್ರಾಪ್ತ ಬಾಲಕ
ತರಗತಿಯಲ್ಲಿ ಶಿಕ್ಷಕರು ಈ ರೀತಿ ಬೇಜವಾಬ್ದಾರಿತನದಿಂದ ವರ್ತಿಸಿದ ಘಟನೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ಮಹಾರಾಷ್ಟ್ರದ ಜಲ್ನಾ ಜಿಲ್ಲಾ ಪಂಚಾಯಿತಿ ಶಾಲೆಯಲ್ಲಿ ತರಗತಿಯ ಸಮಯದಲ್ಲಿ ಶಿಕ್ಷಕನೊಬ್ಬ ವಿದ್ಯಾರ್ಥಿಗಳ ಮುಂದೆ ನಿದ್ದೆ ಮಾಡುತ್ತಿರುವ ದೃಶ್ಯ ಕಂಡುಬಂದಿತ್ತು. ಶಿಕ್ಷಕ ಕುರ್ಚಿಯ ಮೇಲೆ ಕುಳಿತು ಮೇಜಿನ ಮೇಲೆ ಕಾಲುಗಳನ್ನು ಇರಿಸಿ ನಿದ್ದೆ ಮಾಡುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಆಘಾತಕಾರಿ ಘಟನೆ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಜಾಫ್ರಾಬಾದ್ ತಹಸಿಲ್‌ನ ಗಡೇಗಾವನ್ ಗ್ರಾಮದಲ್ಲಿ ನಡೆದಿತ್ತು.