#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Viral News: ಎಣ್ಣೆ ನಮ್ದು... ಈ ಕಂಪೆನಿಯಲ್ಲಿ ಕೆಲ್ಸ ಮಾಡೋರಿಗೆ ಆಫೀಸ್ ಅವರ್‌ನಲ್ಲೇ ಮದ್ಯ ಫ್ರೀ!

ಪ್ರತಿಭಾವಂತ ಮತ್ತು ಕ್ರಿಯೇಟಿವ್ ಉದ್ಯೋಗಿಗಳನ್ನು ಸೆಳೆಯಲು ಕಂಪೆನಿಗಳು ಏನೇನೊ ಸರ್ಕಸ್ ಮಾಡುತ್ತವೆ. ಕಾರ್ಪೊರೇಟ್ ವಲಯದ ಕಾಂಪಿಟೇಟಿವ್ ವಾತಾವರಣದಲ್ಲಿ ಉತ್ತಮ ಉದ್ಯೋಗಿಗಳೇ ಆಸ್ತಿ. ಇಲ್ಲೊಂದು ಟೆಕ್ ಕಂಪೆನಿ ತನ್ನ ಉದ್ಯೋಗಿಗಳಿಗೆ ಆಫೀಸಿನಲ್ಲೇ ಡ್ರಿಂಕ್ಸ್ ಕೊಡೋ ಮೂಲಕ ಸಖತ್ ಸುದ್ದಿಯಾಗ್ತಿದೆ.

ಈ ಕಂಪೆನಿಯಲ್ಲಿ ಎಣ್ಣೆನೂ ಫ್ರೀ – ಹ್ಯಾಂಗೋವರ್ ಲೀವ್ ಕೂಡ ಇದೆ

ಸಾಂದರ್ಭಿಕ ಚಿತ್ರ.

Profile Sushmitha Jain Feb 13, 2025 8:03 PM

ಟೋಕಿಯೋ: ಇದು ಒಂಥರಾ ‘ʼಎಣ್ಣೆ ನಮ್ದು,, ಹ್ಯಾಂಗೋವರ್ ಲೀವೂ ನಮ್ದೇ...ʼ’ ಎನ್ನುವ ತರಹದ ಒಂದು ಕಂಪೆನಿಯ ಸುದ್ದಿ. ನಮ್ಮಲ್ಲಿ ಹೇಗೆ ಅಂದ್ರೆ ಕೆಲಸ ಮಾಡುವ ಜಾಗಕ್ಕೆ ಎಣ್ಣೆ ಹಾಕ್ಕೊಂಡು ಹೋದ್ರೆ ಅದು ಅಪರಾಧ. ಆದ್ರೆ ಇಲ್ಲಿ ಕೆಲ್ಸ ಮಾಡ್ಬೇಕಂದ್ರೆ ನೀವು ಎಣ್ಣೆ ಹಾಕೋರೇ ಆಗಿರ್ಬೇಕು! ಜಪಾನ್‌ನ (Japan) ಒಸಾಕದಲ್ಲಿರುವ (Osaka) ಟೆಕ್ ಕಂಪೆನಿಯೊಂದು (Tech Company) ತನ್ನ ಆಫೀಸ್‌ನಲ್ಲಿ ವಿಚಿತ್ರ ನಿಯಮವನ್ನು ತಂದಿದೆ. ಉದ್ಯೋಗಿಗಳನ್ನು ತೃಪ್ತಿಪಡಿಸಲು ಈ ಕಂಪೆನಿಯ ಆಡಳಿತ ಮಂಡಳಿ ವಿಚಿತ್ರ ನಿಯಮವೊಂದನ್ನು ಜಾರಿ ಮಾಡಿದೆ. ಟ್ರಸ್ಟ್ ರಿಂಗ್ ಕಂಪೆನಿ ಲಿಮಿಟೆಡ್ (Trust Ring Co. Ltd.) ಎಂಬ ಟೆಕ್ ಸಂಸ್ಥೆ ಆಲ್ಕೊಹಾಲ್ (Alcohol) ಡ್ರಿಂಕ್ಸ್ ಅನ್ನು ತನ್ನ ಉದ್ಯೋಗಿಗಳಿಗೆ ನೀಡುತ್ತಿದೆ. ಇಷ್ಟು ಮಾತ್ರವಲ್ಲದೇ ಕುಡ್ದು ಟೈಟ್ ಆದ್ಮೇಲೆ ಕೆಲ್ಸ ಮಾಡೋಕಾಗುತ್ತಾ? ಅದಕ್ಕೆಂದೇ ಈ ಕಂಪೆನಿ ತನ್ನ ಉದ್ಯೋಗಿಗಳಿಗೆ ಹ್ಯಾಂಗೋವರ್ ರಜೆಯನ್ನೂ (Hangover leaves) ಸಹ ನೀಡುತ್ತಿದೆ.

ತನ್ನ ಸಂಸ್ಥೆಗೆ ಹೊಸ ಉದ್ಯೋಗಿಗಳನ್ನು ಸೆಳೆಯಲು ಟೆಕ್ ಕಂಪೆನಿ ಈ ಟ್ರಿಕ್ಸ್ ಫಾಲೋ ಮಾಡುತ್ತಿದೆ ಎಂದು ಒಡ್ಡಿಟಿ ಸೆಂಟ್ರಲ್ ಮಾಧ್ಯಮ ವರದಿ ಮಾಡಿದೆ. ದೊಡ್ಡ ದೊಡ್ಡ ಸಂಸ್ಥೆಗಳು ತಮ್ಮ ಕಂಪೆನಿಗಳಿಗೆ ಪ್ರತಿಭಾವಂತರನ್ನು ಸೆಳೆಯಲು ಉತ್ತಮ ಪ್ಯಾಕೇಜ್ ಮತ್ತು ಇನ್ನಿತರ ಭಾರೀ ಸವಲತ್ತುಗಳನ್ನು ನೀಡುತ್ತಿರುವುದು ಎಲ್ಲರಿಗೂ ಗೊತ್ತಿದೆ. ಇಂತಹ ದೊಡ್ಡ ಕಂಪೆನಿಗಳೊಂದಿಗೆ ಸ್ಪರ್ಧಿಸಲು ಚಿಕ್ಕ ಚಿಕ್ಕ ಕಂಪೆನಿಗಳು ಹೊಸ ಟ್ರಿಕ್ಸ್ ಫಾಲೋ ಮಾಡ್ತಿವೆ. ಈ ಟೆಕ್ ಕಂಪೆನಿ ತನ್ನ ಉದ್ಯೋಗಿಗಳಿಗೆ ಅವರ ಕೆಲಸದ ಅವಧಿಯಲ್ಲಿ ಆಲ್ಕೋಹಾಲ್ ನೀಡುವ ನಿರ್ಧಾರವನ್ನು ಮಾಡಿರುವುದು ಮತ್ತು ಅದು ಉಚಿತವಾಗಿ ಮಾಡಿರುವುದು ಇದಿಗ ಚರ್ಚೆಯ ವಿಚಾರ.

ಇದನ್ನೂ ಓದಿ: Viral News: ಪತ್ನಿಯ ಆತ್ಮಕ್ಕೆ ಹೆದರಿ 36 ವರ್ಷಗಳಿಂದ ಮಹಿಳೆಯಂತೆ ವೇಷ ಧರಿಸಿ ಬದುಕ್ತಿರೋ ಭೂಪಾ! ಏನಿದು ಘಟನೆ?

ಇಷ್ಟು ಮಾತ್ರವಲ್ಲದೇ ಈ ಕಂಪೆನಿಯ ಸಿಇಒ ತನ್ನ ಉದ್ಯೋಗಿಗಳೊಂದಿಗೆ ಕುಳಿತು ಡ್ರಿಂಕ್ಸ್ ಮಾಡೋದು ಇನ್ನೊಂದು ವಿಶೇಷ. ಕಂಪೆನಿಗೆ ಹೊಸದಾಗಿ ಸೇರಿದ ಹೊಸ ಉದ್ಯೋಗಿಗಳೊಂದಿಗೆ ಸಿಇಒ ತಾನೇ ಖುದ್ದಾಗಿ ಡ್ರಿಂಕ್ಸ್ ನೀಡುತ್ತಾರೆ. ಈ ಮೂಲಕ ತಮ್ಮ ಈ ಸಂಸ್ಥೆಯಲ್ಲಿ ಫ್ರೆಂಡ್ಲಿ ವಾತಾವರಣ ಇದೆ ಅನ್ನೋದನ್ನು ಹೊಸದಾಗಿ ಕೆಲಸಕ್ಕೆ ಸೇರಿದವರಿಗೆ ಮನವರಿಕೆ ಮಾಡಿಕೊಡುತ್ತಾರೆ. ಇದರೊಂದಿಗೆ ಸಂಸ್ಥೆಯ ಉತ್ಪಾದಕತೆಯೂ ಹೆಚ್ಚಾಗುತ್ತದೆ ಎಂಬುದು ಆಡಳಿತ ಮಂಡಳಿಯ ವಿಶ್ವಾಸ.

ಈ ಕಂಪೆನಿಯ ಇನ್ನೂ ಒಂದು ವಿಶೇಷವೆಂದರೆ, ಇಲ್ಲಿ ನೀವು ಡ್ರಿಂಕ್ಸ್ ಮಾಡಿದ ಮೇಲೆ ಮರುದಿನ ನಿಮಗೆ ಹ್ಯಾಂಗೋವರ್ ಜಾಸ್ತಿಯಾದ್ರೆ ನಿಮ್ಗೆ ರಿಕವರಿ ಆಗ್ಲಿಕ್ಕೆ 2-3 ಗಂಟೆಗಳ ಶಾರ್ಟ್ ಲೀವ್ ಸಹ ಕೊಡ್ತಾರೆ. ಯಾರಿಗುಂಟು ಯಾರಿಗಿಲ್ಲ ಈ ಸೌಭಾಗ್ಯ! ಈ ಹ್ಯಾಂಗೋವರ್ ರಜೆ ಉದ್ಯೋಗಿಗಳಿಗೆ ಹೆಚ್ಚಿನ ಸಂಬಳದ ಜತೆ ನೀಡಲಾಗುವ ಬೆಸ್ಟ್ ಆಫರ್ ಆಗಿದೆ.

ಒಟ್ಟಿನಲ್ಲಿ ತಮ್ಮ ಕಂಪೆನಿಗೆ ಟ್ಯಾಲೆಂಟೆಡ್ ಉದ್ಯೋಗಿಗಳನ್ನು ಸೆಳೆಯಲು ಏನೇನೋ ಸ್ಟ್ರಾಟಜಿ ಮಾಡ್ತಾರೆ, ಆದ್ರೆ ಜಪಾನಿನ ಈ ಟೆಕ್ ಸಂಸ್ಥೆ ಮಾತ್ರ ತನ್ನ ಉದ್ಯೋಗಿಗಳಿಗೆ ‘ಆಲ್ಕೋಹಾಲ್ ಆಫರ್’ ಮತ್ತು ‘ಹ್ಯಾಂಗೋವರ್ ಲೀವ್’ ನೀಡಿರುವುದು ಮಾತ್ರ ವಿಶೇಷವಾಗಿದೆ.