ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಈ ಬ್ರ್ಯಾಂಡ್‌ನ ಎಣ್ಣೆ ಮೇಲೆ ತಾತಪ್ಪನಿಗೆ ಹೆವೀ ಲವ್ವೋ ಲವ್‌! ವಿಡಿಯೊ ವೈರಲ್

ಇಟಲಿಯ ಸಿಸಿಲಿಯ ನೊನೊ ಮಾರಿಯೊ ಎಂಬ ಅಜ್ಜ ಜಾಗರ್ ಅಭಿಮಾನಿಯಾಗಿದ್ದು, ತನಗೆ ಜಾಗರ್ ವಿಸ್ಕಿ ಬಗ್ಗೆ ಇರುವ ಕ್ರೇಜ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸಿದ್ದಾನೆ. ಇದು ಈಗ ವೈರಲ್(Viral Video) ಆಗಿದೆ.ನೆಟ್ಟಿಗರು ಅಜ್ಜನ ಈ ಕ್ರೇಜ್‌ ನೋಡಿ ಸಖತ್‌ ಥ್ರಿಲ್‌ ಆಗಿದ್ದಾರೆ.

ಈ ಬ್ರ್ಯಾಂಡ್‌ನ ಎಣ್ಣೆ ಮೇಲೆ ತಾತಪ್ಪನಿಗೆ ಹೆವೀ ಲವ್‌- ವಿಡಿಯೊ ವೈರಲ್‌

Profile pavithra Apr 14, 2025 4:45 PM

ರೋಮ್‌: ಮಾರುಕಟ್ಟೆಯಲ್ಲಿ ಹಲವು ಬ್ರ್ಯಾಂಡ್‍ನ ಆಲ್ಕೋಹಾಲ್ ಸಿಗುತ್ತದೆ. ಅದರಲ್ಲಿ ಜಾಗರ್‌ಮಿಸ್ಟರ್‌ ಕೂಡ ಒಂದು. ಇದೀಗ ಅಜ್ಜನೊಬ್ಬ ತನಗೆ ಜಾಗರ್ ವಿಸ್ಕಿ ಬಗ್ಗೆ ಇರುವ ಕ್ರೇಜ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸಿದ್ದಾನೆ. ಇದು ಈಗ ವೈರಲ್(Viral Video)ಆಗಿದೆ. ಇದರಲ್ಲಿ ಅಜ್ಜ ತನ್ನ ದೇಹದ ತುಂಬಾ ಜಾಗರ್‌ ತುಂಬಿದೆ ಎಂದು ಹೇಳಿಕೊಂಡಿದ್ದಾನೆ. ನೆಟ್ಟಿಗರು ಕೂಡ ಅಜ್ಜನ ಈ ಜಾಗರ್‌ ಪ್ರೀತಿ ನೋಡಿ ಶಾಕ್‌ ಆಗಿದ್ದಾರೆ. ಇಟಲಿಯ ಸಿಸಿಲಿಯ ನೊನೊ ಮಾರಿಯೊ ಜಾಗರ್ ಅಭಿಮಾನಿಯಾಗಿದ್ದು, ಈಗ ವೈರಲ್ ಆಗಿರುವ ರೀಲ್‍ನಲ್ಲಿ ಜಾಗರ್‌ ಪಾನೀಯದ ಮೇಲಿನ ಒಲವನ್ನು ವ್ಯಕ್ತಪಡಿಸಿದ್ದಾನೆ.

ಇತ್ತೀಚಿನ ವಿಡಿಯೊದಲ್ಲಿ ಅವನು ಮದ್ಯವನ್ನು ಹೀರುತ್ತಾ ಸಂತೋಷದಿಂದ ನೃತ್ಯ ಮಾಡುತ್ತಾ, ತನ್ನ ದೇಹವು ಸಂಪೂರ್ಣವಾಗಿ ಜಾಗರ್‌ಮಿಸ್ಟರ್‌ನಿಂದ ಮಾಡಲ್ಪಟ್ಟಿದೆ ಎಂದು ತಮಾಷೆಯಾಗಿ ಉಲ್ಲೇಖಿಸಿದ್ದಾನೆ. ಮಾನವನ ದೇಹವು 70% ನೀರಿನಿಂದ ಮಾಡಲ್ಪಟ್ಟಿದೆ. ಆದರೆ ತನ್ನ ದೇಹವು "100% ಜಾಗರ್" ನಿಂದ ಮಾಡಲ್ಪಟ್ಟಿದೆ ಮತ್ತು ನೀರಿನಿಂದ ಅಲ್ಲ ಎಂದು ಆತ ಹೇಳಿದ್ದಾನೆ. ಜಾಗರ್‌ಮಿಸ್ಟರ್‌ ಬಗ್ಗೆ ಅಜ್ಜನ ಪ್ರೀತಿ ಸೋಶಿಯಲ್ ಮೀಡಿಯಾ ನೆಟ್ಟಿಗರ ಗಮನವನ್ನು ಸೆಳೆದಿದೆ.

ಇಟಾಲಿಯನ್ ವ್ಯಕ್ತಿಯ ಈ ವಿಡಿಯೊ ವೈರಲ್ ಆಗಿದ್ದು, 3 ಲಕ್ಷಕ್ಕೂ ಹೆಚ್ಚು ವ್ಯೂವ್ಸ್‌ ಗಳಿಸಿದೆ ಮತ್ತು ಇದು ವ್ಯಾಪಕವಾದ ಕಾಮೆಂಟ್‍ಗಳನ್ನು ಪಡೆದುಕೊಂಡಿದೆ. "ಕುಡಿಯುತ್ತಲೇ ಇರಿ ಅಜ್ಜ. ನೀವು ನಮಗೆ ಸ್ಫೂರ್ತಿಯಾಗಬೇಕು" ಎಂದು ನೆಟ್ಟಿಗರೊಬ್ಬರು ಬರೆದಿದ್ದಾರೆ. "ಇದರ ಮೇಲಿನ ನಿಮ್ಮ ಪ್ರೀತಿ ಬಹಳ ಅದ್ಭುತ" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ನೆಟ್ಟಿಗರು ಅವನನ್ನು "ಜಾಗರ್‌ನ ರಾಯಭಾರಿ" ಎಂದು ಕರೆದಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: 65 ವರ್ಷದ ವ್ಯಕ್ತಿಯ ಜೆನ್ ಝಡ್ ಫ್ಯಾಷನ್‍ಗೆ ನೆಟ್ಟಿಗರು ಫುಲ್‌ ಫಿದಾ; ವಿಡಿಯೊ ವೈರಲ್

ಜಾಗರ್‌ಮಿಸ್ಟರ್‌ ಕುಡಿಯುತ್ತಾ ಸಾವನ್ನಪ್ಪಿದ ವ್ಯಕ್ತಿ

ಈ ಹಿಂದೆ ವೈರಲ್ ಆಗಿರುವ ವಿಡಿಯೊದಲ್ಲಿ ಮದ್ಯಪಾನ ಸ್ಪರ್ಧೆಯಲ್ಲಿ ಭಾಗವಹಿಸಿದ ದಕ್ಷಿಣ ಆಫ್ರಿಕಾದ ವ್ಯಕ್ತಿಯೊಬ್ಬ ಎರಡು ನಿಮಿಷಗಳಲ್ಲಿ ಇಡೀ ಬಾಟಲಿ ಜಾಗರ್‌ಮಿಸ್ಟರ್‌ ಕುಡಿಯುತ್ತಾ ಸಾವನ್ನಪ್ಪಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಲಿಂಪೊಪೊದ ವಾಟರ್ವಾಲ್ ಪೊಲೀಸರು 25 ರಿಂದ 30 ವರ್ಷದೊಳಗಿನ ಈ ಅಪರಿಚಿತ ವ್ಯಕ್ತಿಯ ಸಾವಿನ ಬಗ್ಗೆ ತನಿಖೆಯನ್ನು ನಡೆಸಿದ್ದಾರೆ. ವಿಡಿಯೊದಲ್ಲಿ, ಜನರು ಚಪ್ಪಾಳೆ ತಟ್ಟಿ ಹುರಿದುಂಬಿಸುತ್ತಿರುವಾಗ ವ್ಯಕ್ತಿಯು ಎರಡು ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಜಾಗರ್‌ಮಿಸ್ಟರ್‌ನ ಇಡೀ ಬಾಟಲಿಯನ್ನು ಖಾಲಿ ಮಾಡಿದ್ದನು. ಆದರೆ ದುರಾದೃಷ್ಟವಶಾತ್ ಅವನು ತಕ್ಷಣ ಅಲ್ಲೇ ಕುಸಿದುಬಿದ್ದಿದ್ದಾನೆ ಮತ್ತು ಅವನನ್ನು ಆಸ್ಪತ್ರೆಗೆ ಸಾಗಿಸಿದ ನಂತರ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.