Viral Video: 65 ವರ್ಷದ ವ್ಯಕ್ತಿಯ ಜೆನ್ ಝಡ್ ಫ್ಯಾಷನ್‍ಗೆ ನೆಟ್ಟಿಗರು ಫುಲ್ ಫಿದಾ; ವಿಡಿಯೊ ವೈರಲ್
ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರೊಬ್ಬರ ಸವಾಲನ್ನು ಸ್ವೀಕರಿಸಿದ 65 ವರ್ಷದ ರಾಜಮಣಿಕಂ ಎಂಬ ವ್ಯಕ್ತಿ ಜೆನ್ ಝಡ್ ವ್ಯಕ್ತಿಯಂತೆ ಉಡುಪು ಧರಿಸಿದ್ದಾರೆ. ಇವರ ಫ್ಯಾಷನ್ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದ್ದು, ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.


ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರೊಬ್ಬರು 65 ವರ್ಷದ ವ್ಯಕ್ತಿಗೆ ಜೆನ್ ಝಡ್ ವ್ಯಕ್ತಿಯಂತೆ ಉಡುಪು ಧರಿಸಲು ಸವಾಲು ಹಾಕಿದ್ದಾರೆ. ಆ ಹಿರಿಯ ವ್ಯಕ್ತಿ ಈ ಸವಾಲನ್ನು ಕೇವಲ ಟಾಸ್ಕ್ ಆಗಿ ಸ್ವೀಕರಿಸಲಿಲ್ಲ, ಬದಲಾಗಿ ಅವನು ತನ್ನ ಫ್ಯಾಷನ್ ಪ್ರಜ್ಞೆಯಿಂದ ಅದನ್ನು ಸಾಧಿಸಿ ತೋರಿಸಿದ್ದಾರೆ. ರಾಜಮಣಿಕಂ ಎಂಬ ಈ ಹಿರಿಯರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಈ ವಿಡಿಯೊದಲ್ಲಿ ರಾಜಮಣಿಕಂ ಟ್ರೆಂಡಿ ಲುಕ್‌ನಲ್ಲಿ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ. ಅದು ಅಲ್ಲದೇ ಆತ ತನ್ನನ್ನು ಜೆನ್ ಝಡ್ 'ಅಂಕಲ್' ಎಂದು ಕರೆದುಕೊಂಡಿದ್ದಾರೆ. ದೇಸಿ ಉಡುಗೆ, ಲುಂಗಿ ಮತ್ತು ಟೀ ಶರ್ಟ್ ಬಿಟ್ಟು, ಅವರು ಪಾಶ್ಚಾತ್ಯ ಉಡುಪುಗಳನ್ನು ಧರಿಸಿ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ. ಇವನ ಈ ಹೊಸ ಲುಕ್ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.
ವೈರಲ್ ವಿಡಿಯೊದಲ್ಲಿ ಲುಂಗಿ ಧರಿಸಿದ್ದ ರಾಜಮಣಿಕಂ ನಂತರ ಡೆನಿಮ್ ಶಾಟ್ಸ್ ಹಾಕಿಕೊಂಡು ಅದರ ಜತೆಗೆ ಬಿಳಿ ಟಿ-ಶರ್ಟ್ ಮತ್ತು ಆಕರ್ಷಕ ಜಾಕೆಟ್ ಅನ್ನು ಧರಿಸಿದ್ದಾರೆ. ಕಳೆದ ಮೇಯಲ್ಲಿ ರಾಜಮಣಿಕಂ ತನ್ನ ವಯಸ್ಸನ್ನು ಬಹಿರಂಗಪಡಿಸಿದ್ದಾರೆ. ತನಗೆ 65 ವರ್ಷ ಎಂದು ಹೇಳಿಕೊಂಡು ನೆಟ್ಟಿಗರು ಶಾಕ್ ಆಗುವಂತೆ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಇವರ ಫ್ಯಾಷನ್ ಪ್ರಜ್ಞೆ ಮತ್ತು ಸ್ಟೈಲಿಶ್ ಲುಕ್ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.
ವಿಡಿಯೊ ಇಲ್ಲಿದೆ ನೋಡಿ...
ವಯಸ್ಸಾದಂತೆ ಕೆಲವರು ತಮ್ಮ ಜೀವನ ಮುಗಿಯಿತು ಎಂದುಕೊಳ್ಳುತ್ತಾರೆ. ಆದರೆ ಇವರ ಫ್ಯಾಷನ್ ಸೆನ್ಸ್, ಸವಾಲನ್ನು ಸ್ವೀಕರಿಸುವ ಮನೋಭಾವ ನೋಡಿ ನೆಟ್ಟಿಗರು ಥ್ರಿಲ್ ಆಗಿದ್ದಾರೆ. ಇವರ ಈ ಫ್ಯಾಶನ್ ರೀಲ್ಸ್‌ಗೆ ನೆಟ್ಟಿಗರು ಖುಷಿಯಿಂದ ಪ್ರತಿಕ್ರಿಯಿಸಿದ್ದಾರೆ. ಅವನ ಜೆನ್ ಝಡ್ ಲುಕ್ ಅನ್ನು ಮೆಚ್ಚಿಕೊಂಡಿದ್ದಾರೆ ಮತ್ತು ಅವನು ಕೆಲವು ನಿಜವಾದ ಜೆನ್ ಝಡ್ ವ್ಯಕ್ತಿಗಳಿಗಿಂತ ಉತ್ತಮವಾಗಿ ಉಡುಪು ಧರಿಸಿದ್ದಾನೆ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:Viral News: ಕುಡಿದ ಮತ್ತಿನಲ್ಲಿ ರೈಲ್ವೆ ಟ್ರ್ಯಾಕ್‌ಗೆ ಕಾರು ನುಗ್ಗಿಸಿದ ಭೂಪ! ತಪ್ಪಿದ ಭಾರೀ ಅನಾಹುತ
"ಅಂಕಲ್ ನನ್ನ ಮಾಜಿಗಿಂತ ಉತ್ತಮ ಡ್ರೆಸ್ಸಿಂಗ್ ಸೆನ್ಸ್ ಹೊಂದಿದ್ದಾರೆ" ಎಂದು ಒಬ್ಬರು ವಿಡಿಯೊಗೆ ಕಾಮೆಂಟ್ ಮಾಡಿದ್ದಾರೆ. "ಅವರು ನನ್ನ ಕಾಲೇಜಿನ ಹುಡುಗರಿಗಿಂತ ಸ್ಟೈಲಿಶ್ ಆಗಿದ್ದಾರೆ" ಎಂದು ಇನ್ನೊಬ್ಬರು ಹೇಳಿದ್ದಾರೆ. ಈ ವಿಡಿಯೊ ವೈರಲ್ ಆಗಿದ್ದು, 7.3 ಮಿಲಿಯನ್ ವ್ಯೂವ್ಸ್ ಪಡೆದಿದೆ.