Viral Video: ಸೀರೆ ಪಲ್ಲು ಸರಿಮಾಡಿಕೊಳ್ಳಿ ಎಂದ ಮಹಿಳೆಗೆ ಬೈಕ್‌ನಲ್ಲಿದ್ದಾಕೆ ಹೀಗಾ ಹೇಳೋದು? ವಿಡಿಯೊ ನೋಡಿ
Viral Video: ಸ್ಕೂಟಿಯಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬಳು ತನ್ನ ಮುಂದೆ ಬೈಕಿನಲ್ಲಿ ಹೋಗುತ್ತಿದ್ದ ಮಧ‍್ಯ ವಯಸ್ಕ ಮಹಿಳೆಯೊಬ್ಬಳ ಸೀರೆಯ ಪಲ್ಲು ಬೈಕಿನ ಚಕ್ರಕ್ಕೆ ಸಿಕ್ಕಿ ಅಪಾಯವಾಗಬಹುದು ಎಂದು ʼʼಪಲ್ಲು ಪಲ್ಲುʼʼ ಎಂದು ಕೂಗಿದ್ದಾಳೆ. ಆದರೆ ಅದನ್ನು ತಪ್ಪಾಗಿ ಅರ್ಥೈಸಿಕೊಂಡ ಮಹಿಳೆ ತನ್ನ ಸೀರೆಯ ಬೆಲೆ ಬಹಿರಂಗಪಡಿಸಿದ್ದಾಳೆ. ಹಳೆಯ ವಿಡಿಯೊ ಇದೀಗ ಮತ್ತೊಮ್ಮೆ ವೈರಲ್ ಆಗಿ ನೆಟ್ಟಿಗರ ಮುಖದಲ್ಲಿ ನಗು ಮೂಡಿಸಿದೆ.


ಹೊಸದಿಲ್ಲಿ: ಮಹಿಳೆಯೊಬ್ಬಳು ತನ್ನ ಮುಂದೆ ಬೈಕಿನಲ್ಲಿ ಹೋಗುತ್ತಿದ್ದ ಮಧ‍್ಯ ವಯಸ್ಕ ಮಹಿಳೆಯೊಬ್ಬಳ ಸೀರೆ ಪಲ್ಲು ಬೈಕಿನ ಚಕ್ರಕ್ಕೆ ಸಿಕ್ಕಿ ಅಪಾಯವಾಗಬಹುದು ಎಂದು ಎಚ್ಚರಿಸಿದ್ದಾಳೆ. ಆದರೆ ಅದನ್ನು ತಪ್ಪಾಗಿ ಅರ್ಥ ಮಾಡಿಕೊಂಡ ಬೈಕಿನಲ್ಲಿದ್ದ ಮಹಿಳೆ ಸೀರೆಯ ಬೆಲೆಯನ್ನು ಹೇಳಿದ್ದಾಳೆ. ಈ ತಮಾಷೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ (Viral Video). ಒಂದು ವರ್ಷದ ಹಿಂದಿನ ಈ ವಿಡಿಯೊ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ನೆಟ್ಟಿಗರು ಈ ವಿಡಿಯೊ ನೋಡಿ ನಕ್ಕು ನಕ್ಕು ಸುಸ್ತಾಗಿದ್ದು, ಮಹಿಳೆಯ ಕಾಲೆಳೆದಿದ್ದಾರೆ.
ವೈರಲ್ ಆಗಿರುವ ವಿಡಿಯೊದಲ್ಲಿ ಸ್ಕೂಟಿಯಲ್ಲಿ ಬರುತ್ತಿದ್ದ ಮಹಿಳೆಯೊಬ್ಬಳು ಜೋರಾಗಿ ಕಿರುಚುತ್ತಾ ತನ್ನ ಎದುರಿಗೆ ಬೈಕಿನಲ್ಲಿ ಹೋಗುತ್ತಿದ್ದ ಮಧ‍್ಯ ವಯಸ್ಕ ಮಹಿಳೆಗೆ ಸೀರೆಯ ಪಲ್ಲುವನ್ನು ಸರಿ ಮಾಡಿಕೊಳ್ಳಿ ಎಂದು ಎಚ್ಚರಿಸಿದ್ದಾಳೆ. ಆದರೆ ಗಾಡಿಯಲ್ಲಿದ್ದ ಮಹಿಳೆ ಪಲ್ಲುವನ್ನು ಸರಿ ಮಾಡಿಕೊಳ್ಳುವ ಬದಲು ಸೀರೆಯನ್ನು ತೋರಿಸಿ ಅದರ ಬೆಲೆ 1,500 ರೂ. ಎಂದು ಹೇಳಿದ್ದಾಳೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಇದು ಮತ್ತೆ ವೈರಲ್ ಆಗಿದೆ.
don't argue, just say 1500 Ka hai and move on 🫠 pic.twitter.com/mNt5dY0TR6
— SwatKat💃 (@swatic12) March 7, 2024
ಈ ವಿಡಿಯೊ ಅನ್ನು 'ಘರ್ ಕೆ ಕಾಲೇಶ್' ಎಂಬ ಎಕ್ಸ್ ಪುಟದಿಂದ ಮರು ಪೋಸ್ಟ್ ಮಾಡಲಾಗಿದೆ. ಈ ವಿಡಿಯೊ ಒಂದು ವರ್ಷದ ಹಿಂದೆ ವೈರಲ್ ಆಗಿತ್ತು. ಇದೀಗ ಮತ್ತೆ ವಿಡಿಯೊ ನೆಟ್ಟಿಗರನ್ನು ರಂಜಿಸುತ್ತಿದೆ.
ಈ ಸುದ್ದಿಯನ್ನೂ ಓದಿ:Viral Video: ಸೀರೆಯುಟ್ಟು ವಧುವಿನ ಅಲಂಕಾರದಲ್ಲಿ ಬಾಡಿಬಿಲ್ಡರ್ ಫುಲ್ ಮಿಂಚಿಂಗ್!
ಕರ್ನಾಟಕದ ಪ್ರಖ್ಯಾತ ಬಾಡಿಬಿಲ್ಡರ್ ಚಿತ್ರಾ ಪುರುಷೋತ್ತಮ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ವಿಶಿಷ್ಟ ವಧುವಿನ ಲುಕ್‌ನಲ್ಲಿ ಕಂಗೊಳಿಸಿದ್ದಾರೆ. ಮದುವೆ,ಗಾಗಿ ಕಾಂಚಿವರಂ ಸೀರೆ ಧರಿಸಿ ವಧುವಿನ ಗೆಟಪ್‌ನಲ್ಲಿ ರೆಡಿಯಾಗಿದ್ದಾರೆ. ಕ್ಲಾಸಿಕ್ ಕಾಂಜೀವರಂ ಸೀರೆಯಲ್ಲಿ ಮತ್ತು ಸಾಂಪ್ರದಾಯಿಕ ಆಭರಣಗಳಿಂದ ಅಲಂಕರಿಸಲ್ಪಟ್ಟು ಆತ್ಮವಿಶ್ವಾಸದಿಂದ ತನ್ನ ಬೈಸೆಪ್ಸ್ ಅನ್ನು ತೋರಿಸಿದ್ದಾರೆ.
ಬಾಡಿ ಬಿಲ್ಡಿಂಗ್ ಮೂಲಕ ತಮ್ಮ ಮೈ ಕಟ್ಟಿನ ಸೌಂದರ್ಯ ಪ್ರದರ್ಶಿಸಿದ್ದ ಚಿತ್ರಾ ಪುರುಷೋತ್ತಮ್ ವಧುವಿನ ಲುಕ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಇವರ ಸಾಂಪ್ರದಾಯಿಕ ಸೀರೆ ಲುಕ್ ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತನ್ನ ಬಾಡಿ ಬಿಲ್ಡಿಂಗ್ ಮೂಲಕ ದೇಹದಾರ್ಢ್ಯತೆ ಪ್ರದರ್ಶಿಸುತ್ತಿದ್ದ ಚಿತ್ರಾ ಇದೀಗ ಸುಂದರ ಹುಡುಗಿಯಂತೆ ಸಿಂಗರಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಬಾಡಿ ಬಿಲ್ಡರ್ ಎಂದಾಗ ಫಿಟ್ ಆಗಿರುವ ಮೈ ಕಟ್ಟು, ಮಸಲ್ಸ್ ಬಾಡಿ ಶೇಪ್ಸ್ ಗಳನ್ನು ಹೈ ಲೈಟ್ ಮಾಡುತ್ತಾರೆ. ಈ ಬಾಡಿ ಬಿಲ್ಡಿಂಗ್ ಮೈಕಟ್ಟಿಗೆ ಸಾಂಪ್ರದಾಯಿಕ ಉಡುಗೆ ತೊಟ್ಟು, ವಧುವಿನ ಗೆಟಪ್‌ನಲ್ಲಿ ತಯಾರಾದಾಗ ಹೇಗೆ ಕಾಣುತ್ತಾರೆ ಎನ್ನುವುದನ್ನು ಬಾಡಿಬಿಲ್ಡರ್ ಚಿತ್ರಾ ಪುರು ಷೋತ್ತಮ್ ತೋರಿಸಿಕೊಟ್ಟಿದ್ದಾರೆ.