ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ರೆಸ್ಯೂಮ್‌ ಬೇಡ, ವಾರ್ಷಿಕ 40 ಲಕ್ಷ ರೂ ಪ್ಯಾಕೇಜ್‌; ಉದ್ಯೋಗ ಆಫರ್‌ ನೀಡಿದ ಬೆಂಗಳೂರಿನ AI ಕಂಪನಿ

ಕೆಲಸದ ಸಂದರ್ಶನಕ್ಕೆ ರೆಸ್ಯೂಮ್‌ ತೆಗೆದುಕೊಂಡು, ಅದರ ಆಧಾರ ಮೇಲೆ ವ್ಯಕ್ತಿಗೆ ಜಾಬ್‌ ಕೊಡುವುದು ಸಾಮಾನ್ಯ ಸಂಗತಿ. ಆದರೆ ಬೆಂಗಳೂರು ಮೂಲದ ಕೃತಕ ಬುದ್ಧಿಮತ್ತೆ (AI) ಕಂಪನಿಯೊಂದು ತನ್ನ ಕಂಪನಿಗೆ ಕೆಲಸಕ್ಕೆ ಬರುವವರಿಗೆ ರೆಸ್ಯೂಮ್‌ ಇಲ್ಲದೆ ಕೆಲಸ ಕೊಡುವುದಾಗಿ ಘೋಷಿಸಿದೆ. ಸದ್ಯ ಇದು ಎಲ್ಲಡೆ ವೈರಲ್‌ ಆಗಿದೆ.

ಬೆಂಗಳೂರಿನ ಸ್ಟಾರ್ಟಪ್‌ ಕಂಪನಿಯಿಂದ ವಿಶೇಷ ಆಫರ್‌!

ವೈರಲ್‌ ನ್ಯೂಸ್‌

Profile Vishakha Bhat Feb 28, 2025 11:51 AM

ಬೆಂಗಳೂರು: ಕೆಲಸದ ಸಂದರ್ಶನಕ್ಕೆ ರೆಸ್ಯೂಮ್ ತೆಗೆದುಕೊಂಡು, ಅದರ ಆಧಾರ ಮೇಲೆ ವ್ಯಕ್ತಿಗೆ ಜಾಬ್‌ ಕೊಡುವುದು ಸಾಮಾನ್ಯ ಸಂಗತಿ. ಆದರೆ ಬೆಂಗಳೂರು ಮೂಲದ ಕೃತಕ ಬುದ್ಧಿಮತ್ತೆ (AI) ಕಂಪನಿಯೊಂದು ತನ್ನ ಕಂಪನಿಗೆ ಕೆಲಸಕ್ಕೆ ಬರುವವರಿಗೆ ರೆಸ್ಯೂಮ್‌ ಇಲ್ಲದೆ ಕೆಲಸ ಕೊಡುವುದಾಗಿ ಘೋಷಿಸಿದೆ. ಅಷ್ಟೇ ಅಲ್ಲದೆ ವಾರ್ಷಿಕ 40 ಲಕ್ಷ ರೂ. ಕೊಡುವುದಾಗಿ ಹೇಳಿದೆ. ಸ್ಮಾಲೆಸ್ಟ್ AI ನ ಸಂಸ್ಥಾಪಕ ಸುದರ್ಶನ್ ಕಾಮತ್ ಇತ್ತೀಚೆಗೆ ವಾರ್ಷಿಕ 40 ಲಕ್ಷ ರೂ. ಸಂಬಳದೊಂದಿಗೆ ಸಾಫ್ಟ್‌ವೇರ್ ಎಂಜಿನಿಯರ್ ಉದ್ಯೋಗಾವಕಾಶವನ್ನು ಘೋಷಿಸಿದ್ದಾರೆ. ಈ ಕೆಲಸಕ್ಕೆ ರೆಸ್ಯೂಮೆ ಸಲ್ಲಿಸುವ ಅಗತ್ಯವಿಲ್ಲ ಅಥವಾ ನಿರ್ದಿಷ್ಟ ಶೈಕ್ಷಣಿಕ ಹಿನ್ನೆಲೆಯನ್ನು (Viral News) ಹೊಂದಿರಬೇಕಾಗಿಲ್ಲ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅವರು "ನಾವು ಸ್ಮಾಲೆಸ್ಟ್ AI ನಲ್ಲಿ ಕ್ರ್ಯಾಕ್ಡ್ ಫುಲ್-ಸ್ಟ್ಯಾಕ್ ಎಂಜಿನಿಯರ್ ಅನ್ನು ನೇಮಿಸಿಕೊಳ್ಳಲು ನೋಡುತ್ತಿದ್ದೇವೆ. ನಿಮ್ಮನ್ನು ಪರಿಚಯಿಸುವ 100 ಪದಗಳ ಸಣ್ಣ ಬರಹದ ಜೊತೆಗೆ ಮ್ಮ ಅತ್ಯುತ್ತಮ ಕೆಲಸದ ಲಿಂಕ್‌ಗಳನ್ನು info@smallest.ai ಗೆ ಕಳುಹಿಸಿ" ಎಂದು ಕಾಮತ್ ಎಕ್ಸ್‌ನಲ್ಲಿ ತಿಳಿಸಿದ್ದಾರೆ. ನಿಮ್ಮ ಕೆಲಸಕ್ಕೆ ರೆಸ್ಯೂಮೆ ಸಲ್ಲಿಸುವ ಅಗತ್ಯವಿಲ್ಲ ಅಥವಾ ನಿರ್ದಿಷ್ಟ ಶೈಕ್ಷಣಿಕ ಹಿನ್ನೆಲೆಯನ್ನು ಹೊಂದಿರಬೇಕಾಗಿಲ್ಲ ಎಂದು ಅವರು ಹೇಳಿದ್ದಾರೆ.



ಈ ಹುದ್ದೆಯು 0-2 ವರ್ಷಗಳ ಅನುಭವವನ್ನು ಹೊಂದಿರುವ ಅಭ್ಯರ್ಥಿಗಳಿಗೆ ಮುಕ್ತವಾಗಿದ್ದು, ಇವರ ಕಚೇರಿ ಇಂದಿರಾನಗರದಲ್ಲಿದೆ. ಕಚೇರಿಯಿಂದ ವಾರಕ್ಕೆ ಐದು ದಿನ ಕೆಲಸ ಮಾಡಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ. ಕಾಮತ್‌ ಈ ಪೋಸ್ಟ್‌ ಮಾಡುತ್ತಿದ್ದಂತೆ ಇದು ನೆಟ್ಟಿಗರ ಗಮನ ಸೆಳೆದಿದೆ. ಒಂದು ಗಂಟೆಯಲ್ಲಿಸುಮಾರು 3.5 ಲಕ್ಷ ವೀಕ್ಷಣೆಗಳನ್ನು ಗಳಿಸಿತು. ಅನೇಕ ಬಳಕೆದಾರರು ಕಾಮತ್‌ ಅವರನ್ನು ವಿಧಾನವನ್ನು ಶ್ಲಾಘಿಸಿದ್ದಾರೆ. ಕೆಲವರು ಕಮೆಂಟ್‌ ಮಾಡಿ, ನೀವು ಕಾಲೇಜು ಮತ್ತು ರೆಸ್ಯೂಮೆ ಬಿಟ್ಟು, ಕೌಶಲ್ಯವನ್ನು ಪರಿಗಣಿಸಿರುವುದು ತುಂಬಾ ಸ್ವಾಗತಾರ್ಹ ವಿಚಾರ ಎಂದು ಹೇಳಿದ್ದಾರೆ. ನಾನು ನಿಮಗೆ ಮೇಲ್ ಕಳುಹಿಸಿದ್ದೇನೆ" ಎಂದು ಕಾಮೆಂಟ್ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: Viral News: ಸಿಕ್ಕಾಪಟ್ಟೆ ವೈರಲ್‌ ಆಯ್ತು ತಂದೆ ಮಗನ ಅಗ್ರಿಮೆಂಟ್- ಅಂತಹದ್ದೇನಿದೆ ಇದ್ರಲ್ಲಿ?

ಇನ್ನು ಸಂಬಳದ ಬಗ್ಗೆ ಹಲವರು ಚರ್ಚಸಿದ್ದು, ಕಾಮತ್ ಅವರ ಕೌಶಲ್ಯದ ಆಧಾರದ ಮೇಲಿನ ನೇಮಕಾತಿ ವಿಧಾನವನ್ನು ಅನೇಕರು ಶ್ಲಾಘಿಸಿದರೆ, ಕೆಲವು ತಾಂತ್ರಿಕ ವೃತ್ತಿಪರರು ನೀಡಲಾಗುತ್ತಿರುವ ಸಂಬಳದ ಬಗ್ಗೆ ಸಂದೇಹ ವ್ಯಕ್ತಪಡಿಸಿದರು. ಒಬ್ಬ ಬಳಕೆದಾರರು, "ನಿಮಗೆ ಕ್ರ್ಯಾಕ್ಡ್ ಸಂಬಳವನ್ನು ಪಾವತಿಸಲು ಸಾಧ್ಯವಾಗದಿದ್ದರೆ 'ಕ್ರ್ಯಾಕ್ಡ್' ಎಂದು ಸೇರಿಸಬೇಡಿ ಎಂದು ಹೇಳಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್‌ ಮಾತ್ರ ಫುಲ್‌ ವೈರಲ್‌ ಆಗಿದೆ.