ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪ್ರಿಯತಮನ ವಿಚಾರಕ್ಕೆ ಜಡೆ ಜಗಳ; ನಡುರಸ್ತೆಯಲ್ಲೇ ಕಿತ್ತಾಡಿದ ಯುವತಿಯರ ವಿಡಿಯೊ ವೈರಲ್

Viral Video: ಪ್ರಿಯತಮನ ವಿಚಾರವಾಗಿ‌ ಇಬ್ಬರು ಯುವತಿಯರು ರಸ್ತೆ ಮಧ್ಯಯೆ ಕಿತ್ತಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಒಬ್ಬ ಯುವತಿ ಇನ್ನೊಬ್ಬ ಯುವತಿಯ ಕೂದಲನ್ನು ಹಿಡಿದು, ಗುದ್ದಾಡಿ, ಒದೆಯುತ್ತಿರುವ ದೃಶ್ಯ ಕಂಡು ಬಂದಿದೆ. ಬಾಯ್‌ಫ್ರೆಂಡ್ ವಿವಾದದ ಕುರಿತು ಇಬ್ಬರು ಮಹಿಳೆಯರು ಕಿತ್ತಾಡಿದ್ದಾರೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪ್ರಿಯತಮನ ವಿಚಾರಕ್ಕೆ ಇಬ್ಬರು ಯುವತಿಯರ ಬಿಗ್ ಫೈಟ್: ವಿಡಿಯೊ ವೈರಲ್

ಎಐ ಚಿತ್ರ. -

Profile
Pushpa Kumari Dec 30, 2025 8:05 PM

ಲಖನೌ, ಡಿ. 30: ಕೆಲವೊಮ್ಮೆ ಯುವಕ-ಯುವತಿಯರು ಸಾರ್ವಜನಿಕ ಸ್ಥಳಗಳಲ್ಲಿ ಯಾರನ್ನೂ ಲೆಕ್ಕಿಸದೆ ಜಗಳ ಮಾಡುವ ದೃಶ್ಯಗಳು ವೈರಲ್ ಆಗುತ್ತವೆ. ಅಂತೆಯೇ‌ ಪ್ರಿಯತಮನ ವಿಚಾರವಾಗಿ‌ ಇಬ್ಬರು ಯುವತಿಯರು ರಸ್ತೆ ಮಧ್ಯಯೆ ಕಿತ್ತಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಒಬ್ಬ ಯುವತಿ ಇನ್ನೊಬ್ಬ ಯುವತಿಯ ಕೂದಲನ್ನು ಹಿಡಿದು, ಗುದ್ದಾಡಿ, ಒದೆಯುತ್ತಿರುವ ದೃಶ್ಯ ಕಂಡು ಬಂದಿದೆ. ಬಾಯ್‌ಫ್ರೆಂಡ್ ವಿಚಾರದಲ್ಲಿ ಆರಂಭವಾದ ವಾಗ್ವಾದ ಜಗಳಕ್ಕೆ ತಿರುಗಿದೆ. ಮಾಜಿ ಪ್ರಿಯತಮನನ್ನು ಓರ್ವ ಯುವತಿ 'ಬಾಬು' ಎಂದು ಕರೆದದ್ದೇ ಈ ಭೀಕರ ಜಗಳಕ್ಕೆ ಕಾರಣ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಕಾನ್ಪುರದ ಯಶೋದಾ ನಗರದಲ್ಲಿ ಈ ಘಟನೆ ನಡೆದಿದೆ. ಪ್ರೀತಿಸಿದ ಹುಡುಗನ ವಿಚಾರವಾಗಿ ಬಿಳಿ ಬಟ್ಟೆ ಧರಿಸಿರುವ ಯುವತಿಯೊಬ್ಬಳು ಮತ್ತೊಬ್ಬ ಯುವತಿಯ ಮೇಲೆ ಮನಬಂದಂತೆ ಥಳಿಸುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಯುವತಿಯ ಕೂದಲನ್ನು ಎಳೆದು, ನಿಂದಿಸಿ ಹೊಡೆಯುವುದು, ಒದೆಯುವುದನ್ನು ವಿಡಿಯೊದಲ್ಲಿ ಕಾಣಬಹುದು.

ವಿಡಿಯೊ ನೋಡಿ:



ಹಲ್ಲೆ ಮಾಡುತ್ತಿರುವಾಗ ʼʼನೀನು ಅಭಿಷೇಕ್‌ನನ್ನು ಬಿಟ್ಟು ಹೋಗಿದ್ದೀಯಾ. ಈಗ ಅವನು ನನ್ನವನು. ಹಾಗಿರುವಾಗ ನೀನು ಅವನನ್ನು ಮತ್ತೆ 'ಬಾಬು' ಎಂದು‌ ಹೇಗೆ ಕರೆಯುತ್ತೀಯಾ?ʼʼ ಎಂದು ಹೇಳಿ ಮತ್ತೊಬ್ಬ ಯುವತಿ ಮೇಲೆ ಹಲ್ಲೆ ಮಾಡಿದ್ದಾಳೆ. ಜಗಳ ಹೆಚ್ಚಾದಾಗ ಯುವತಿಯು ಸಂತ್ರಸ್ತೆಯ ಕೂದಲು ಹಿಡಿದು ರಸ್ತೆಗೆ ತಳ್ಳಿದ್ದಾಳೆ. ಬಳಿಕ ಆಕೆಯ ಮುಖಕ್ಕೆ ಗುದ್ದಿ, ಕಾಲಿನಿಂದ ಒದ್ದಿದ್ದಾಳೆ. ಹಲ್ಲೆಗೊಳಗಾದ ಯುವತಿಯು ರಸ್ತೆ ನಡುವೆ ಬಿದ್ದು "ನನ್ನನ್ನು ಬಿಟ್ಟುಬಿಡು ಮತ್ತೆಂದೂ ಹೀಗೆ ಮಾಡುವುದಿಲ್ಲ" ಎಂದು ಕ್ಷಮೆ ಹೇಳುತ್ತ ಕೊನೆಗೆ ದಾರಿಹೋಕರ ಬಳಿ ಸಹಾಯಕ್ಕಾಗಿ ಬೇಡಿಕೊಂಡಿದ್ದಾಳೆ.

Gen-Zಗಳಿಗಾಗಿಯೇ ಬೆಂಗಳೂರಿನಲ್ಲಿ ತೆರೆಯಲಾಯ್ತು ಅಂಚೆ ಕಚೇರಿ

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು ಕಾನ್ಪುರ ಪೊಲೀಸರು ಪ್ರಕರಣದ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಯಾರೂ ಅಧಿಕೃತವಾಗಿ ದೂರು ನೀಡಿಲ್ಲ. ಆದರೂ ಸಾರ್ವಜನಿಕ ಸ್ಥಳದಲ್ಲಿ ಜಗಳ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ಇಬ್ಬರು ಯುವತಿಯರನ್ನು ಪತ್ತೆ ಹಚ್ಚುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.

ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ನೆಟ್ಟಿಗರೊಬ್ಬರು 'ಬಾಬು' ದೆಸೆಯಿಂದ ಜಗಳ ಇಲ್ಲಿ ತನಕ ಹೋಗಿದೆಯೇ? ಎಂದು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು 'ಬಾಬು' ಕರೆದು ಸರಿಯಾಗಿ ಒದೆ ತಿಂದಿದ್ದಾಳೆ ಎಂದಿದ್ದು ನಾನಾ ರೀತಿಯ ತಮಾಷೆಯ ಪ್ರತಿಕ್ರಿಯೆಗಳು ಬಂದಿವೆ.