ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನಿಜವಾದ ಮಹಿಳಾ ಸಬಲೀಕರಣ ಎಂದರೆ ಇದು: ಮಧ್ಯರಾತ್ರಿ ರೋಗಿಗಳಿಗೆ ಉಚಿತ ಆಟೋ ಸೇವೆ ನೀಡುವ ವಡೋದರಾದ ಚಾಲಕಿಗೆ ಬಿಗ್‌ ಸೆಲ್ಯೂಟ್‌

Viral Video: ಗುಜರಾತ್‌ನ ವಡೋದರಾದ ಮಹಿಳೆಯೊಬ್ಬರು ರಾತ್ರಿ ಉಚಿತವಾಗಿ ಆಟೋ ಸೇವೆ ನೀಡುವ ಮೂಲಕ ಮಾದರಿಯಾಗಿದ್ದಾರೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ತುರ್ತು ಅವಶ್ಯಕತೆ ಇರುವ ರೋಗಿಗಳಿಗೆ ಈ ಸೇವೆಯನ್ನು ನೀಡುತ್ತಿದ್ದಾರೆ. ಇವರ ಈ ಸಹಾಯ ಮನೋಭಾವಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮಧ್ಯರಾತ್ರಿ ಉಚಿತ ಆಟೋ ಸೇವೆ ನೀಡುವ ಮಹಿಳೆಯ ವಿಡಿಯೊ ವೈರಲ್‌

ಮಧ್ಯರಾತ್ರಿ ರೋಗಿಗಳಿಗೆ ಉಚಿತ ಆಟೋ ಸೇವೆ ನೀಡುವ ವಡೋದರಾದ ಮಹಿಳೆ -

Profile
Pushpa Kumari Aug 10, 2026 5:30 PM

ಗಾಂಧಿನಗರ, ಆ. 10: ತುರ್ತು ಸಂದರ್ಭದಲ್ಲಿ ಅಥವಾ ಮಧ್ಯರಾತ್ರಿ ವಾಹನಗಳು ಸಿಗುವುದು ಕಡಿಮೆ. ಇದನ್ನು ಗಮನಿಸಿ ಗುಜರಾತ್‌ನ ವಡೋದರಾದ ಮಹಿಳೆಯೊಬ್ಬರು ರಾತ್ರಿ ಉಚಿತವಾಗಿ ಆಟೋ ಸೇವೆ ನೀಡುವ ಮೂಲಕ ಮಾದರಿಯಾಗಿದ್ದಾರೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ತುರ್ತು ಅವಶ್ಯಕತೆ ಇರುವ ರೋಗಿಗಳಿಗೆ ಈ ಸೇವೆಯನ್ನು ಉಚಿತವಾಗಿ ನೀಡುತ್ತಿದ್ದಾರೆ. ಇವರ ಈ ಸಹಾಯ ಮನೋಭಾವಕ್ಕೆ ಸೋಷಿಯಲ್ ಮೀಡಿಯಾದಲ್ಲಿ (Viral News) ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕಂಟೆಂಟ್ ಕ್ರಿಯೇಟರ್‌ ಸನ್ಯಾಮ್ ಗರ್ಗ್ ಪೋಸ್ಟ್ ಮಾಡಿದ ಇನ್‌ಸ್ಟಾಗ್ರಾಮ್ ವಿಡಿಯೊದಲ್ಲಿ, ಅವರು ಪತಿಯಿಂದ ಡ್ರೈವಿಂಗ್ ಕಲಿತು ಹೇಗೆ ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡಿದ್ದಾರೆ ಎನ್ನುವುದನ್ನು ವಿವರಿಸಿದ್ದಾರೆ. ಅವರ ಪತಿ ಈ ಕೆಲಸಕ್ಕೆ ಸಂಪೂರ್ಣವಾಗಿ ಬೆಂಬಲ ನೀಡುತ್ತಿರುವುದಾಗಿಯೂ ತಿಳಿಸಿದ್ದಾರೆ.

ವಿಡಿಯೊ ನೋಡಿ:

ಕಂಟೆಂಟ್ ಕ್ರಿಯೇಟರ್ ಸನ್ಯಮ್ ಗಾರ್ಗ್ ಮುಂಜಾನೆ 4 ಗಂಟೆಗೆ ಈ ಮಹಿಳೆಯನ್ನು ಭೇಟಿಯಾಗಿದ್ದರು. ತಡರಾತ್ರಿ ಆಸ್ಪತ್ರೆಗೆ ತೆರಳುವ ಜನರನ್ನು ಉಚಿತವಾಗಿ ತಲುಪಿಸುತ್ತಿದ್ದಾರೆ. ಆರಂಭದಲ್ಲಿ ಅವರ ಪತಿ ಮಾತ್ರ ಆಟೋ ಓಡಿಸುತ್ತಿದ್ದರು. ನಂತರ ಪತ್ನಿಗೆ ಡ್ರೈವಿಂಗ್‌ ಹೇಳಿಕೊಟ್ಟಿದ್ದರು. ಇಷ್ಟು ಮಾತ್ರವಲ್ಲದೆ 50ಕ್ಕೂ ಹೆಚ್ಚು ಮಹಿಳೆಯರಿಗೆ ಆಟೋ ಚಾಲನೆಯ ತರಬೇತಿ ನೀಡಿದ್ದಾರೆ.

8 ಅಡಿ 10 ಇಂಚು ಉದ್ದ ಕೂದಲು ಬೆಳೆಸಿ ದಾಖಲೆ ಬರೆದ ಉತ್ತರಾಖಂಡದ ಮಹಿಳೆ

“ಮುಂಜಾನೆ 4 ಗಂಟೆಗೆ ಆಟೋ ಚಾಲಕಿಯನ್ನು ಭೇಟಿಯಾಗಿದ್ದೆ. ಅದು ನನಗೆ ಬಹಳಷ್ಟು ಸ್ಫೂರ್ತಿ ನೀಡಿತು. ಅವರು ಡ್ರೈವಿಂಗ್ ಇಷ್ಟ ಪಡುತ್ತಾರೆ. ಅವರ ಪತಿ ಜಗತ್ತು ಏನು ಹೇಳುತ್ತದೆ ಎಂಬುದನ್ನು ಲೆಕ್ಕಿಸುವುದಿಲ್ಲ. ಅವರು ಪತ್ನಿಉ ಸ್ವಾತಂತ್ರ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ. ನಮಗೆ ಈ ರೀತಿಯ ಹೆಚ್ಚಿನ ಕಥೆಗಳು ಬೇಕು" ಎಂದು ಸನ್ಯಮ್ ಗಾರ್ಗ್ ಬರೆದುಕೊಂಡಿದ್ದಾರೆ.

ರಾತ್ರಿ ಚಾಲಕರೇ ಬಾಡಿಗೆಗೆ ಬರಲು ನಿರಾಕರಿಸುತ್ತಾರೆ. ಆದರೆ ಈ ಮಹಿಳೆ ಉಚಿತ ಸೇವೆ ನೀಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ದಂಪತಿಯ ಕಾರ್ಯಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ನೆಟ್ಟಿಗರೊಬ್ಬರು, ʼʼಈ ಮಹಿಳೆ ನಿಜವಾಗಿಯೂ ತುಂಬಾ ಕರುಣಾಮಯಿʼʼ ಎಂದು ಹೇಳಿದ್ದಾರೆ. ಮತ್ತೊಬ್ಬರು, ʼʼಇವರು ಎಲ್ಲರಿಗೂ ಸ್ಫೂರ್ತಿದಾಯಕʼʼ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.