Viral News: ಸಿಕ್ಕಾಪಟ್ಟೆ ವೈರಲ್ ಆಯ್ತು ತಂದೆ ಮಗನ ಅಗ್ರಿಮೆಂಟ್- ಅಂತಹದ್ದೇನಿದೆ ಇದ್ರಲ್ಲಿ?
ತಂದೆ-ಮಗನ ಒಪ್ಪಂದವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಅದೇನಪ್ಪಾ ಒಪ್ಪಂದ ಎಂಬ ಕುತೂಹಲ ನಿಮ್ಮನ್ನೂ ಕಾಡುತ್ತಿದೆಯಾ...? ವಿದ್ಯಾರ್ಥಿ ತನ್ನ ತಂದೆಯೊಂದಿಗೆ ಕಾಲೇಜು ಜೀವನ ಮತ್ತು ಸಂಬಳದ ಬಗ್ಗೆ ವಿಶಿಷ್ಟ ಒಪ್ಪಂದ ಮಾಡಿಕೊಂಡಿದ್ದು, ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral News) ಆಗಿದೆ.


ಅನೇಕ ವಿದ್ಯಾರ್ಥಿಗಳು ಐಐಟಿ ಅಥವಾ ಎನ್ಐಟಿಗಳಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಅಧ್ಯಯನ ಮಾಡುವ ಕನಸು ಕಾಣುತ್ತಾರೆ. ಆದರೆ ಈ ಸಮಯದಲ್ಲಿ ಅವರು ಅನೇಕ ರೀತಿಯ ಸವಾಲುಗಳನ್ನು ಎದುರಿಸುತ್ತಾರೆ. ಇಲ್ಲೊಬ್ಬ ಐಐಟಿ ಆಕಾಂಕ್ಷಿ ವಿದ್ಯಾರ್ಥಿ ತನ್ನ ತಂದೆಯೊಂದಿಗೆ ಕಾಲೇಜು ಜೀವನ ಮತ್ತು ಸಂಬಳದ ಬಗ್ಗೆ ವಿಶಿಷ್ಟ ಒಪ್ಪಂದ ಮಾಡಿಕೊಂಡಿದ್ದು, ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral News) ಆಗಿದೆ. ಇದು ಅನೇಕರ ಮುಖದಲ್ಲಿ ನಗುವನ್ನು ಹುಟ್ಟುಹಾಕಿದೆ. ತನ್ನ ತಂದೆ ಈ ಕೈಬರಹದ ಘೋಷಣೆಗೆ ಸಹಿ ಹಾಕಿದ್ದಾರೆ ಎಂದು ಮಗ ರೆಡ್ಡಿಟ್‌ನಲ್ಲಿ ಹೇಳಿದ್ದಾನೆ.
ಮಗ, ತಂದೆ ತನ್ನ ಸಂಬಳದ 40 ಪ್ರತಿಶತವನ್ನು ಮಗನಿಗೆ ನೀಡಬೇಕೆಂದು ನಿರ್ಧರಿಸುವ ಕಾಗದಕ್ಕೆ ಸಹಿ ಹಾಕಿದ್ದನ್ನು ಪೋಟೊ ತೆಗೆದು ರೆಡ್ಡಿಟ್‍ನಲ್ಲಿ ಪೋಸ್ಟ್ ಮಾಡಿದ್ದಾನೆ. ಹಾಗೂ "ನಾನು ಐಐಟಿ, ಎನ್ಐಟಿ, ಐಐಐಟಿ, ಬಿಐಟಿಎಸ್ಎಟಿಯಂತಹ ಪ್ರತಿಷ್ಠಿತ ಕಾಲೇಜಿಗೆ ಪ್ರವೇಶ ಪಡೆದರೆ, ಅವರು ನಿವೃತ್ತಿಯಾಗುವವರೆಗೆ ತಮ್ಮ ಸಂಬಳದ 40% ಅನ್ನು ನನಗೆ ನೀಡುತ್ತಾರೆ ಎಂದು ನನ್ನ ತಂದೆ ನನಗೆ ಲಿಖಿತವಾಗಿ ಬರೆದುಕೊಟ್ಟಿದ್ದಾರೆ. ಆದರೆ ಒಂದು ವೇಳೆ ನಾನು ಅವರ ಮಾತನ್ನು ಉಳಿಸಿಕೊಳ್ಳದಿದ್ದರೆ, ನನ್ನ ನಿವೃತ್ತಿಯವರೆಗೆ ನನ್ನ ಪೂರ್ತಿ ಸಂಬಳವನ್ನು ಅವರಿಗೆ ನೀಡಬೇಕಾಗುತ್ತದೆ" ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.
ಪೋಷಕರು ಮತ್ತು ಮಗನ ನಡುವಿನ ಈ ಪೋಸ್ಟ್ ವೈರಲ್ ಆಗಿದೆ. ನೆಟ್ಟಿಗರು ಪೋಸ್ಟ್‌ಗೆ ಗಂಭೀರವಾಗಿ ಪ್ರತಿಕ್ರಿಯಿಸಲಿಲ್ಲ, ಆದರೆ "ಈ ಕಾಗದ ಉಳಿದಿದ್ದರೆ, ಭವಿಷ್ಯದಲ್ಲಿ ನೀವಿಬ್ಬರೂ ಇದನ್ನು ಕಂಡು ನಗಬಹುದು" ಎಂದು ಬರೆದಿದ್ದಾರೆ. ಆದರೆ ಈ ರೀತಿ ಲಿಖಿತ ಭರವಸೆಗಳು ತಮ್ಮ ಕುಟುಂಬದಲ್ಲಿ ತಮಾಷೆಯಾಗಿ ನಡೆಯುತ್ತಿರುತ್ತದೆ ಎಂದು ವಿದ್ಯಾರ್ಥಿ ಹೇಳಿದ್ದಾನೆ. ಈ ಹಿಂದೆ, 10 ನೇ ತರಗತಿಯಲ್ಲಿ 90% ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸುವುದಾಗಿ ತನ್ನ ತಂದೆಗೆ ಲಿಖಿತ ಭರವಸೆ ನೀಡಿದ್ದೆ ಎಂದು ಹೇಳಿದ್ದಾನೆ.
ಈ ಸುದ್ದಿಯನ್ನೂ ಓದಿ:Murder Case: ಕುಡಿಯಬೇಡ ಎಂದು ಬುದ್ಧಿ ಹೇಳಿದ ತಂದೆಗೆ ಚಾಕುವಿನಿಂದ ಇರಿದು ಕೊಂದ ಮಗ
ಕುಡಿತದ ಚಟಕ್ಕೆ (Drinking) ದಾಸನಾದ ಮಗನಿಗೆ ಬುದ್ಧಿ ಹೇಳಿದ ತಂದೆಯೇ ಮಗನಿಂದ (son killed father) ಕೊಲೆಯಾಗಿದ್ದಾನೆ. ಕುಡಿಯಬೇಡ ಎಂದು ಬೈದು ಬುದ್ಧಿ ಹೇಳಿದ ತಂದೆಯ ಎದೆಗೆ ಮಗನೇ ಚಾಕುವಿನಿಂದ ಇರಿದು ಕೊಲೆ (Murder Case) ಮಾಡಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತಿಗಳರಪಾಳ್ಯದ ಕೆರೆ ಮುನೇಶ್ವರ ದೇವಸ್ಥಾನದ ಬಳಿ ಸೋಮವಾರ (Bengaluru Crime news) ಸಂಜೆ ನಡೆದಿದೆ.
ಹತ್ಯೆಯಾದ ವ್ಯಕ್ತಿ ನೈಸ್ ರಸ್ತೆಯಲ್ಲಿ ಸೆಕ್ಯೂರಿಟಿ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದ ಚನ್ನಬಸವಯ್ಯ (61) ಎಂದು ತಿಳಿದುಬಂದಿದೆ. ಕೊಲೆ ಮಾಡಿದ ಪಾಪಿ ಮಗನನ್ನು ಅಮಿತ್ (21) ಎಂದು ಗುರುತಿಸಲಾಗಿದೆ. ಪ್ರತಿ ದಿನ ಇದೇ ವಿಚಾರಕ್ಕೆ ಅಪ್ಪ – ಮಗನ ನಡುವೆ ಗಲಾಟೆ ನಡೆಯುತ್ತಿತ್ತು. ಸೋಮವಾರ ಸಹ ಇದೇ ವಿಚಾರಕ್ಕೆ ಗಲಾಟೆ ನಡೆದಿದೆ.ಮಗನಿಗೆ ಈ ಚಟದಿಂದ ಮುಕ್ತಿಹೊಂದಿ ಚೆನ್ನಾಗಿ ದುಡಿ ಎಂದು ಬುದ್ಧಿ ಹೇಳಿದ್ದಕ್ಕೆ ಕೋಪಗೊಂಡ ಮಗ ಅಮಿತ್ ತಂದೆ ಚನ್ನಬಸವಯ್ಯ ಎದೆಗೆ ಚಾಕುವಿನಿಂದ ಇರಿದಿದ್ದಾನೆ. ಕುಟುಂಬಸ್ಥರು ಕೂಡಲೇ ಆಸ್ಪತ್ರೆಗೆ ರವಾನಿಸುವ ಮಾರ್ಗ ಮಧ್ಯೆಯೇ ಚನ್ನಬಸವಯ್ಯ ಸಾವನ್ನಪ್ಪಿದ್ದಾರೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆ ಬ್ಯಾಡರಹಳ್ಳಿ ಪೊಲೀಸರು ಅಮಿತ್‌ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.