Viral Video: ಫೋಟೋಗೆ ಪೋಸ್ ಕೊಡುತ್ತಿದ್ದ ಭಾರತೀಯ ಪ್ರವಾಸಿಗನ ಮೇಲೆ ಹುಲಿ ದಾಳಿ; ವಿಡಿಯೋ ವೈರಲ್
ಥೈಲ್ಯಾಂಡ್ನ (Thailand) ಫುಕೆಟ್ನ ಟೈಗರ್ ಕಿಂಗ್ಡಮ್ನಲ್ಲಿ (Tiger Kingdom) ರೋಮಾಂಚಕ ಸೆಲ್ಫಿ ತೆಗೆಯಲು ಹೋದ ಭಾರತೀಯ ಪ್ರವಾಸಿಯೊಬ್ಬನ ಮೇಲೆ ಹುಲಿಯೊಂದು ದಾಳಿ ಮಾಡಿರುವ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ (Viral Video) ಆಗಿದೆ.


ಫುಕೆಟ್: ಥೈಲ್ಯಾಂಡ್ನ (Thailand) ಫುಕೆಟ್ನ ಟೈಗರ್ ಕಿಂಗ್ಡಮ್ನಲ್ಲಿ (Tiger Kingdom) ರೋಮಾಂಚಕ ಸೆಲ್ಫಿ ತೆಗೆಯಲು ಹೋದ ಭಾರತೀಯ ಪ್ರವಾಸಿಯೊಬ್ಬನ ಮೇಲೆ ಹುಲಿಯೊಂದು ದಾಳಿ ಮಾಡಿರುವ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ (Viral Video) ಆಗಿದೆ. ಈ ಆತಂಕಕಾರಿ ಘಟನೆಯು ವನ್ಯಜೀವಿ ಪ್ರವಾಸೋದ್ಯಮದ ಚರ್ಚೆಗೆ ಕಾರಣವಾಗಿದೆ.ವೈರಲ್ ಆದ ವಿಡಿಯೋದಲ್ಲಿ, ವ್ಯಕ್ತಿಯು ಸರಪಳಿಯಿಂದ ಕಟ್ಟಲ್ಪಟ್ಟ ಹುಲಿಯ ಪಕ್ಕದಲ್ಲಿ ಕುಳಿತು ಸೆಲ್ಫಿ ತೆಗೆಯುತ್ತಿರುವುದು ಕಂಡುಬಂದಿದೆ.
ತರಬೇತುದಾರನೊಬ್ಬ ಕೋಲು ಹಿಡಿದಿದ್ದರೂ ಹುಲಿ ದಾಳಿ ಮಾಡಿದೆ. ಈ ಸಂದರ್ಭದಲ್ಲಿ ಸುತ್ತಲಿನವರ ಕಿರುಚಾಟ ಮತ್ತು ಗೊಂದಲವನ್ನು ಕ್ಯಾಮರಾ ಸೆರೆಹಿಡಿದಿದೆ. ವಿಡಿಯೋ ಇದ್ದಕ್ಕಿದ್ದಂತೆ ಕೊನೆಗೊಂಡಿದ್ದು, ಪ್ರವಾಸಿಗನ ಗುರುತು ಅಥವಾ ಆತನ ಸ್ಥಿತಿಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಫುಕೆಟ್ನ ಟೈಗರ್ ಕಿಂಗ್ಡಮ್, ಪ್ರವಾಸಿಗರಿಗೆ ಹುಲಿಗಳೊಂದಿಗೆ ಫೋಟೊ ತೆಗೆಯಲು, ಮುಟ್ಟಲು ಮತ್ತು ಆಹಾರ ನೀಡಲು ಅವಕಾಶ ನೀಡುವ ಜನಪ್ರಿಯ ಆಕರ್ಷಣೆಯಾಗಿದೆ. ಆದರೆ, ಈ ಸೌಲಭ್ಯವು ಪ್ರಾಣಿಗಳಿಗೆ ಶಾಂತವಾಗಿರುವಂತ ಔಷಧ ನೀಡುವುದು ಮತ್ತು ಸೋಷಿಯಲ್ ಮೀಡಿಯಾದಲ್ಲಿ ಆಕ್ಷಕವಾದ ವಿಡಿಯೋ ಮತ್ತು ಫೋಟೋಗಳಿಗಾಗಿ ಸುರಕ್ಷತೆ ಇಲ್ಲದೆ ನಡೆದುಕೊಳ್ಳುತ್ತಾರೆ ಎಂದು ಟೀಕಾಕಾರರು ಆರೋಪಿಸಿದ್ದಾರೆ. ಈ ಘಟನೆಯು ವನ್ಯಜೀವಿ ಪ್ರವಾಸೋದ್ಯಮದ ನೈತಿಕತೆಯ ಕುರಿತಾದ ಚರ್ಚೆಯನ್ನು ಮತ್ತೆ ತೀವ್ರಗೊಳಿಸಿದೆ.
ಈ ಸುದ್ದಿಯನ್ನೂ ಓದಿ: Viral Video: ಏರ್ಪೋರ್ಟ್ನಲ್ಲೇ ನೀರಿಲ್ಲ... ನೀರಿಲ್ಲ- ಪಾಕ್ ನಟಿಯ ವಿಡಿಯೊ ಫುಲ್ ವೈರಲ್!
ಬೆಕ್ಕಿನ ಜಾತಿಯ ಪ್ರಾಣಿಗಳಿಗೆ ಸಾಮಾನ್ಯವಾಗಿ ಕೆಳಭಾಗದ ದೇಹವನ್ನು, ವಿಶೇಷವಾಗಿ ಸೊಂಟದ ಬಳಿ ಮುಟ್ಟಿದರೆ ಇಷ್ಟವಾಗುವುದಿಲ್ಲ. ಈ ವ್ಯಕ್ತಿ ಹುಲಿಯ ಈ ಭಾಗವನ್ನು ಮುಟ್ಟುತ್ತಿದ್ದ, ಇದರಿಂದ ಹುಲಿಗೆ ಕಿರಿಕಿರಿಯಾಗಿರಬಹುದು ಎಂದು ಒಬ್ಬ ಬಳಕೆದಾರ ಬರೆದಿದ್ದಾರೆ. ಥೈಲ್ಯಾಂಡ್ನಲ್ಲಿ ಹುಲಿಗಳೊಂದಿಗೆ ಫೋಟೋ ತೆಗೆಯಲು ಭಾರತೀಯ ಪ್ರವಾಸಿಗರು ಸಾಮಾಜಿಕ ಒತ್ತಡದಿಂದ ಆಕರ್ಷಿತರಾಗುತ್ತಾರೆ. ಈ ವನ್ಯಪ್ರಾಣಿಗಳಿಗೆ ಶಾಂತಕಾವಾಗಿರುವಂತ ಔಷಧ ನೀಡಲಾಗುತ್ತದೆ, ಆದರೆ ಔಷಧದ ಪರಿಣಾಮ ಕಡಿಮೆಯಾದಾಗ ಹುಲಿಗಳು ದಾಳಿ ಮಾಡಬಹುದು, ಇದು ಗಂಭೀರ ಅಪಾಯವನ್ನುಂಟುಮಾಡುತ್ತದೆ ಎಂದು ಮತ್ತೊಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾನೆ.