ಟ್ರಾಫಿಕ್ ಕರ್ತವ್ಯದ ನಡುವೆ ಬೀದಿಬದಿ ಬಾಲಕನಿಗೆ ಪಾಠ! ಅಧಿಕಾರಿಯ ಮಾನವೀಯತೆಗೆ ಸೆಲ್ಯೂಟ್ ಹೊಡೆದ ನೆಟ್ಟಿಗರು
Viral News: ಪಶ್ಚಿಮ ಬಂಗಾಳದ ಕೊಲ್ಕತಾದ ಗಿಜಿಗುಡುವ ರಸ್ತೆಯಲ್ಲಿ ವಾಹನಗಳನ್ನು ನಿಯಂತ್ರಿಸುವ ಜತೆಗೆ ಪೊಲೀಸ್ ಸರ್ಜಂಟ್ ಪ್ರಕಾಶ್ ಘೋಷ್ ಫುಟ್‌ಪಾತ್‌ನಲ್ಲಿ ಬದುಕು ಸಾಗಿಸುತ್ತಿರುವ ಆಕಾಶ್ ರಾವತ್ ಎಂಬ ಬಾಲಕನಿಗೆ ರಸ್ತೆ ಬದಿಯಲ್ಲೇ ಪಾಠ ಹೇಳಿಕೊಡುತ್ತಿದ್ದಾರೆ. ಅಧಿಕಾರಿಯ ಈ ಹೃದಯವಂತಿಕೆ ಕೆಲಸಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.
ಕರ್ತವ್ಯದ ನಡುವೆಯೂ ಬಾಲಕನಿಗೆ ಅಕ್ಷರ ಪಾಠ ಕಲಿಸುವ ಅಧಿಕಾರಿ -
ಕೋಲ್ಕತಾ, ಸೆ. 22: ವಾಹನದಟ್ಟಣೆಯನ್ನು ನಿಯಂತ್ರಿಸುವ ಜತೆಗೆ ಬಾಲಕನೊಬ್ಬನಿಗೆ ಪಾಠ ಹೇಳಿಕೊಡುವ ಮೂಲಕ ಟ್ರಾಫಿಕ್ ಅಧಿಕಾರಿಯೊಬ್ಬರು ಎಲ್ಲರ ಮನ ಗೆದ್ದಿದ್ದಾರೆ. ಪಶ್ಚಿಮ ಬಂಗಾಳದ ಕೋಲ್ಕತಾದ ಗಿಜಿಗುಡುವ ರಸ್ತೆಯಲ್ಲಿ ವಾಹನಗಳನ್ನು ನಿಯಂತ್ರಿಸುವ ಜತೆಗೆ ಪೊಲೀಸ್ ಸರ್ಜಂಟ್ ಪ್ರಕಾಶ್ ಘೋಷ್ ಫುಟ್‌ಪಾತ್‌ನಲ್ಲಿ ಬದುಕು ಸಾಗಿಸುತ್ತಿರುವ ಆಕಾಶ್ ರಾವತ್ ಎಂಬ ಬಾಲಕನಿಗೆ ರಸ್ತೆಬದಿಯಲ್ಲೇ ಪಾಠ ಹೇಳಿಕೊಡುತ್ತಿದ್ದಾರೆ. ಅಧಿಕಾರಿಯ ಈ ಹೃದಯವಂತಿಕೆ ಕೆಲಸಕ್ಕೆ ನೆಟ್ಟಿಗರು ಮೆಚ್ಚುಗೆ (Viral News) ವ್ಯಕ್ತ ಪಡಿಸಿದ್ದಾರೆ.
ಸ್ನಾತಕೋತ್ತರ ಪದವಿ ಪಡೆದ ಹಾಗೂ ಹಿಂದೆ ಶಿಕ್ಷಕರಾಗಿದ್ದ ಘೋಷ್, ಶಿಕ್ಷಣದಿಂದ ವಂಚಿತನಾಗಿ ಉಳಿದಿದ್ದ ಆಕಾಶ್ ರಾವತ್ ಎಂಬ ಬಾಲಕನನ್ನು ಗಮನಿಸಿದರು. ಹೀಗಾಗಿ ಆತನಿಗೆ ಅಕ್ಷರ ಪಾಠ ಕಲಿಸಬೇಕೆಂದು ನಿರ್ದರಿಸಿ ನಿರ್ಧಿಷ್ಟ ಸಮಯ ನಿಗದಿಪಡಿಸಿ ಫುಟ್‌ಪಾತ್‌ನಲ್ಲಿ ಪಾಠ ಹೇಳಿಕೊಡುತ್ತಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ:
He is traffic police officer Prakash Ghosh, seen here teaching a child by the roadside. Kolkata Police shared this photo with the following caption:
— KV Iyyer - BHARAT 🇮🇳🇮🇱 (@BanCheneProduct) September 21, 2026
Whenever Officer Ghosh was on duty near the Ballygunge ITI, he would often see a young boy, around eight years old, playing on the… pic.twitter.com/GKGmt7m6mp
ಬಾಲಕ ಆಕಾಶ್‌ನ ತಂದೆ ಒಂದೂವರೆ ವರ್ಷದ ಹಿಂದೆ ಸಾವನ್ನಪ್ಪಿದ್ದು ತಾಯಿ ರಸ್ತೆಬದಿಯಲ್ಲಿ ಸಣ್ಣ ದಿನಸಿ ಅಂಗಡಿ ನಡೆಸಿ ಜೀವನ ನಡೆಸುತ್ತಿದ್ದಾರೆ. ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಆಕಾಶ್ ಓದು-ಬರಹದಿಂದ ವಂಚಿತನಾಗಿ, ಅಕ್ಷರಗಳನ್ನೇ ಮರೆತುಹೋಗಿದ್ದ. ಹೀಗಾಗಿ ಆಕಾಶ್‌ಗೆ ಕಲಿಕೆಯಲ್ಲಿ ಮತ್ತೆ ಆಸಕ್ತಿ ಮೂಡಲು ಘೋಷ್ ಸಹಾಯ ಮಾಡಿದ್ದಾರೆ.
ಪಂಡಾಲ್‌ಗೆ ತರುತ್ತಿದ್ದಾಗ ಕೆಳಗೆ ಬಿದ್ದ ಗಣೇಶನ ಮೂರ್ತಿ; ಅಡಿಯಲ್ಲಿ ಸಿಲುಕಿದ ಹಲವರು
ಕೋಲ್ಕತಾದ ಜನನಿಬಿಡ ರಸ್ತೆಗಳಲ್ಲಿ ವಾಹನಗಳು ಪ್ರಯಾಣಿಕರ ನಿರಂತರ ಓಡಾಟದ ನಡುವೆ, ಸಂಚಾರ ನಿಯಂತ್ರಣವನ್ನೂ ಮೀರಿಯೂ ಅವರು ಮಾನವೀಯ ಕಾರ್ಯವನ್ನು ಮಾಡುತ್ತಿದ್ದಾರೆ. ಬಾಲಕನ ಪರಸ್ಥಿತಿಯನ್ನು ಕಂಡು ಮಿಡಿದ ಘೋಷ್, ತಮ್ಮ ಕರ್ತವ್ಯದ ನಡುವೆ ಸಿಗುವ ಸಮಯದಲ್ಲಿಯೇ ರಸ್ತೆಬದಿಯಲ್ಲಿ ಕುಳ್ಳಿರಿಸಿಕೊಂಡು ತಾಳ್ಮೆಯಿಂದ ಅಕ್ಷರ ಪಾಠ ಕಲಿಸುತ್ತಿದ್ದಾರೆ.
ಘೋಷ್ ಪಾಠ ಹೇಳಿಕೊಡಲು ಪ್ರಾರಂಭಿಸಿದ ನಂತರ ಆಕಾಶ್ ಪುಸ್ತಕಗಳ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಲು ಆರಂಭಿಸಿದ್ದಾನೆ ಎಂದು ಬಾಲಕನ ತಾಯಿ ಹೇಳಿಕೊಂಡಿದ್ದಾರೆ. ತಮ್ಮ ಮಗ ಶಿಕ್ಷಣವನ್ನು ಮುಂದುವರಿಸಬೇಕು, ಒಳ್ಳೆಯ ವ್ಯಕ್ತಿಯಾಗಬೇಕೆಂದು ಮಗನಲ್ಲಾದ ಈ ಧನಾತ್ಮಕ ಬದಲಾವಣೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.