ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಆನೆ ಮರಿಯ ರಕ್ಷಣೆ: ಮಾನವೀಯತೆಯ ಪಾಠ ಸಾರಿದ ಮೀನುಗಾರರ ವಿಡಿಯೊ ವೈರಲ್
Viral News: ಪಶ್ಚಿಮ ಬಂಗಾಳದ ತೀಸ್ತಾ ನದಿಯ ಪ್ರವಾಹವೊಂದರಲ್ಲಿ ನವಜಾತ ಆನೆ ಮರಿಯೊಂದು ಕೊಚ್ಚಿ ಹೋಗುತ್ತಿದ್ದಂತೆ ಸ್ಥಳೀಯ ಮೀನುಗಾರರು ಸಮಯ ಪ್ರಜ್ಞೆ ಮೆರೆದು ರಕ್ಷಿಸಿದ್ದಾರೆ. ವಿಶೇಷವಾಗಿ ಬೈಕುಂಠಪುರ ಅರಣ್ಯ ವಿಭಾಗದ ಅಧಿಕಾರಿಗಳು ಹಾಗೂ ಮೀನುಗಾರರು ತೋರಿದ ಧೈರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಪ್ರವಾಹದಲ್ಲಿ ಸಿಲುಕಿದ ಆನೆ ಮರಿ ರಕ್ಷಿಸಿದ ಮೀನುಗಾರರು -
ಕೋಲ್ಕತಾ, ಸೆ. 22: ಇತ್ತೀಚೆಗೆ ಕಾಡು ಪ್ರಾಣಿಗಳು ಆಹಾರ ಹುಡುಕುತ್ತ ಜನವಸತಿ ಪ್ರದೇಶಕ್ಕೂ ಭೇಟಿ ನೀಡುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಪಶ್ಚಿಮ ಬಂಗಾಳದ ತೀಸ್ತಾ ನದಿಯ ಪ್ರವಾಹದಲ್ಲಿ ನವಜಾತ ಆನೆ ಮರಿಯೊಂದು ಕೊಚ್ಚಿಕೊಂಡು ಹೋಗುತ್ತಿದ್ದಂತೆ ಸ್ಥಳೀಯ ಮೀನುಗಾರರು ಸಮಯ ಪ್ರಜ್ಞೆ ಮೆರೆದು ರಕ್ಷಿಸಿದ್ದಾರೆ. ವಿಶೇಷವಾಗಿ ಬೈಕುಂಠಪುರ ಅರಣ್ಯ ವಿಭಾಗದ ಅಧಿಕಾರಿಗಳು ಹಾಗೂ ಮೀನುಗಾರರು ತೋರಿದ ಧೈರ್ಯಕ್ಕೆ ನೆಟ್ಟಿಗರು ಮೆಚ್ಚುಗೆ (Viral News) ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ಮೀನುಗಾರರು ಮತ್ತು ವೈಕುಂಠಪುರ ಅರಣ್ಯ ವಿಭಾಗದ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಕಾರ್ಯಾಚರಣೆ ನಡೆಸಿ ಆನೆ ಮರಿಯನ್ನು ರಕ್ಷಿಸಿದ್ದಾರೆ. ಬಳಿಕ ಅದರ ತಾಯಿ ಆನೆಯೊಂದಿಗೆ ಯಶಸ್ವಿಯಾಗಿ ಸೇರಿಸಿದ್ದಾರೆ.
ವಿಡಿಯೊ ನೋಡಿ:
What an incredible rescue of a newborn elephant calf swept away by the Teesta River! The courage, compassion and quick thinking of local fishermen, combined with the swift response of the Baikunthapur Forest Division, deserve immense appreciation. Together, they successfully… pic.twitter.com/uEyqQKTRXp
— Supriya Sahu IAS (@supriyasahuias) September 22, 2026
ಆನೆ ಮರಿಯನ್ನು ಅದರ ತಾಯಿಯ ಬಳಿಗೆ ಸೇರಿದ ಕ್ಷಣವು ಎಲ್ಲರನ್ನು ಭಾವುಕರನ್ನಾಗಿಸಿತು. ಮರಿಯು ಅದರ ತಾಯಿಯೊಂದಿಗೆ ಇರುವುದು ನೋಡುವುದೇ ಸುಂದರ ಅನುಭೂತಿ ಎಂದು ನೆಟ್ಟಿಗರು ಗೊಗಳಿದ್ದಾರೆ.
ರೈಲು ಹಳಿಗೆ ಬಿದ್ದ ಮಕ್ಕಳನ್ನು ರಕ್ಷಿಸಲು ದೇಹವನ್ನೇ ರಕ್ಷಾ ಕವಚವಾಗಿಸಿದ ತಾಯಿ!
ತೀಸ್ತಾ ನದಿಯಲ್ಲಿ ಕೊಚ್ಚಿಹೋಗುತ್ತಿದ್ದ ನವಜಾತ ಆನೆ ಮರಿಯನ್ನು ರಕ್ಷಿಸಿದ ರೋಚಕ ಘಟನೆಯ ವಿಡಿಯೊವನ್ನು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಹಂಚಿಕೊಂಡಿದ್ದು "ಸಾಹಸ ಹಾಗೂ ಸಮಯಪ್ರಜ್ಞೆ ಮೆರೆದ ಮೀನುಗಾರರು, ಅರಣ್ಯ ಇಲಾಖೆಯ ಸಿಬ್ಬಂದಿಯ ಕಾರ್ಯ ನಿಜಕ್ಕೂ ಶ್ಲಾಘನೀಯ" ಎಂದು ಅವರು ಬರೆದುಕೊಂಡಿದ್ದಾರೆ.
ಈ ರಕ್ಷಣಾ ಕಾರ್ಯಾಚರಣೆಗೆ ಪ್ರತಿಕ್ರಿಯಿಸಿದ ಒಬ್ಬರು, "ಎಂತಹ ಸುಂದರ ರಕ್ಷಣಾ ಕಾರ್ಯ, ಮಾನವೀಯತೆ ಸಾರುವ ದೃಶ್ಯ" ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು, ಇದರಲ್ಲಿ ಭಾಗಿಯಾದ ಎಲ್ಲರನ್ನೂ ಶ್ಲಾಘಿಸುತ್ತಾ, "ಮೀನುಗಾರರು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಅಪಾರ ಗೌರವ ವ್ಯಕ್ತ ಪಡಿಸಲೇ ಬೇಕು" ಎಂದು ಹೇಳಿದ್ದಾರೆ.