Viral Video: ಟಿಕೆಟ್ ತಗೊಂಡಿಲ್ಲಂತಾ ಹೀಗ್ ನಡೆಸ್ಕೊಳ್ಳೋದಾ? ರೈಲ್ವೆ TTEಯ ದರ್ಪವನ್ನೊಮ್ಮೆ ನೋಡಿ
ರೈಲು ನಿಲ್ದಾಣದಲ್ಲಿ ಟಿಕೆಟ್ ರಹಿತ ಪ್ರಯಾಣ ಮಾಡುತ್ತಿದ್ದ ಆರೋಪದ ಮೇಲೆ ಟಿಕೆಟ್ ಪರೀಕ್ಷಕ (ಟಿಟಿಇ) ವ್ಯಕ್ತಿಯೊಬ್ಬರನ್ನು ಬಲವಂತವಾಗಿ ಎಳೆದೊಯ್ಯುತ್ತಿರುವ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಈ ಮೂಲಕ ಸಿಬಂದಿಯ ನಡವಳಿಕೆ ಬಗ್ಗೆ ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಘಟನೆ ರೈಲ್ವೆ ಸಿಬ್ಬಂದಿ ನಡವಳಿಕೆ ಮತ್ತು ಪ್ರಯಾಣಿಕರ ಹಕ್ಕುಗಳ ಬಗ್ಗೆ ವ್ಯಾಪಕ ಚರ್ಚೆಗೆ ಉಂಟಾಗುವಂತೆ ಮಾಡಿದೆ.
ಪ್ರಯಾಣಿಕನಿಗೆ ಹಲ್ಲೆ ಮಾಡಿ ಬೆದರಿಕೆ ಹಾಕಿದ ಟಿಟಿಇ ಅಧಿಕಾರಿ -
ಮುಂಬೈ: ರೈಲು ನಿಲ್ದಾಣದಲ್ಲಿ ಟಿಕೆಟ್ ಇಲ್ಲದೆ ಓಡಾಟ ಮಾಡುವುದು, ಟಿಕೆಟ್ ಇಲ್ಲದೆ ಪ್ರಯಾಣ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಈ ನಿಯಮ ಗೊತ್ತಿದ್ದರೂ ಕೂಡ ಬಹುತೇಕರು ರೈಲಿನಲ್ಲಿ ಟಿಕೆಟ್ ಪಡೆಯದೆ ಪ್ರಯಾಣ ಮಾಡುತ್ತಾರೆ. ಹೀಗೆ ತೆರಳಿದ್ದ ಪ್ರಯಾಣಿಕರು ಬಳಿಕ ಚೆಕ್ಕಿಂಗ್ ವೇಳೆ ಸಿಕ್ಕಿಹಾಕಿಕೊಂಡಿದ್ದ ಅನೇಕ ಘಟನೆಯನ್ನು ಕಾಣಬಹುದು. ಅಂತೆಯೇ ರೈಲು ನಿಲ್ದಾಣದಲ್ಲಿ ಟಿಕೆಟ್ ರಹಿತ ಪ್ರಯಾಣ ಮಾಡುತ್ತಿದ್ದ ಆರೋಪದ ಮೇಲೆ ಟಿಕೆಟ್ ಪರೀಕ್ಷಕ (ಟಿಟಿಇ)ವ್ಯಕ್ತಿಯೊಬ್ಬರನ್ನು ಬಲವಂತವಾಗಿ ಎಳೆದೊಯ್ಯುತ್ತಿರುವ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗಿದೆ. ಈ ಮೂಲಕ ಸಿಬಂದಿಯ ನಡವಳಿಕೆ ಬಗ್ಗೆ ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಘಟನೆ ರೈಲ್ವೆ ಸಿಬ್ಬಂದಿ ನಡವಳಿಕೆ ಮತ್ತು ಪ್ರಯಾಣಿಕರ ಹಕ್ಕುಗಳ ಬಗ್ಗೆ ವ್ಯಾಪಕ ಚರ್ಚೆಗೆ ಉಂಟಾಗುವಂತೆ ಮಾಡಿದೆ.
ಜನದಟ್ಟಣೆಯಿದ್ದ ರೈಲು ನಿಲ್ದಾಣದಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ವ್ಯಕ್ತಿಯನ್ನು ಟಿಕೆಟ್ ಪರೀಕ್ಷಕ (ಟಿಟಿಇ) ಬೆದರಿಸುತ್ತಿರುವ ಮೊಬೈಲ್ ನಲ್ಲಿ ಸೆರೆಯಾದ ದೃಶ್ಯವನ್ನು ವೀಡಿಯೋದಲ್ಲಿ ಕಾಣಬಹುದು. ಇನ್ಸ್ಟಾಗ್ರಾಮ್ ನಲ್ಲಿ ಬಳಕೆದಾರರೊಬ್ಬರು ಈ ವಿಡಿಯೋ ಹಂಚಿಕೊಂಡಿದ್ದು ರೈಲ್ವೆ ಸಿಬ್ಬಂದಿ ಮತ್ತು ಪ್ರಯಾಣಿಕನ ನಡುವೆ ವಾಗ್ವಾದ ಆಗುವ ದೃಶ್ಯಗಳು ಗಮನಿಸಬಹುದು.
ವಿಡಿಯೊ ವೀಕ್ಷಿಸಿ:
ಟಿಟಿಇ ಅಧಿಕಾರಿ ಮೊದಲಿಗೆ ಟಿಕೆಟ್ ಇಲ್ಲದೆ ಪ್ರಯಾಣಿಸಿದ್ದ ವ್ಯಕ್ತಿಯನ್ನು ವಿಚಾರಿಸಿದ್ದಾರೆ. ಆದರೆ ಆ ಪ್ರಯಾಣಿಕ ಸರಿಯಾಗಿ ಪ್ರತಿಕ್ರಿಯೆ ನೀಡದೆ ದೂರ ಸರಿಯಲು ಪ್ರಯತ್ನಿಸುತ್ತಿದ್ದರು. ಹೀಗಾಗಿ ಕೋಪಗೊಂಡ ಟಿಟಿಇ ಪ್ರಯಾಣಿಕನ ಕಾಲರ್ ಹಿಡಿದು ಎಳೆಯುತ್ತಿರುವ ದೃಶ್ಯವನ್ನು ಕಾಣ ಬಹುದು. ಪ್ರಯಾಣಿಕನು ಟಿಟಿಇ ಬಿಡಿಸಿಕೊಳ್ಳಲು ಪದೇ ಪದೇ ಪ್ರಯತ್ನಿಸುತ್ತಿದ್ದರೂ, ಹಾಗಿದ್ದರೂ ಟಿಟಿಇ ಮಾತ್ರ ಪ್ರಯಾಣಿಕನನ್ನು ಪ್ಲಾಟ್‌ಫಾರ್ಮ್ ನಿಂದ ಎಳೆದು ತಳ್ಳುತ್ತಿರುವುದನ್ನು ಹಾಗೂ ಬೆದರಿಕೆ ಹಾಕುದನ್ನು ದೃಶ್ಯಗಳಲ್ಲಿ ಕಾಣಬಹುದು.
Viral Video: ಅಭ್ಯಾಸದ ವೇಳೆ ಬಾಸ್ಕೆಟ್‌ಬಾಲ್ ಪೋಲ್ ಕುಸಿದು ರಾಷ್ಟ್ರೀಯ ಆಟಗಾರ ಸಾವು
ಅದೇ ವೇಳೆಗೆ ಮಹಿಳಾ ಟಿಟಿಇ ಆ ವ್ಯಕ್ತಿಯ ಬ್ಯಾಗ್ ಅನ್ನು ಹಿಡಿದುಕೊಂಡಿರುವುದನ್ನು ಕಾಣ ಬಹುದು. ಈ ಘಟನೆ ನಡೆದ ಸ್ಥಳ ಹಾಗೂ ಈ ಬಗ್ಗೆ ಶಿಸ್ತು ಕ್ರಮ ಕೈಗೊಂಡಿದ್ದಾರೆ ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಕ್ಲಿಪ್‌ನಲ್ಲಿ ಕಂಡುಬರುವ ಟಿಟಿಇ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆಯ ಕುರಿತು ರೈಲ್ವೆ ಅಧಿಕಾರಿಗಳು ಯಾವುದೇ ಹೇಳಿಕೆಯನ್ನು ನೀಡಿಲ್ಲ.
ಹಾಗಿದ್ದರೂ ಈ ವಿಡಿಯೋ ಬಗ್ಗೆ ನಾನಾ ತರನಾಗಿ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕಿತ್ತು ಅದರ ಹೊರತು ಪ್ರಯಾಣಿಕರ ಜೊತೆ ಈ ರೀತಿ ನಡವಳಿಕೆ ಮೆರೆಯುವ ಅಗತ್ಯವಿರಲಿಲ್ಲ ಎಂದು ಬಳಕೆದಾರರೊಬ್ಬರು ಕಾಮೆಂಟ್ ಹಾಕಿದ್ದಾರೆ. ರೈಲು ಟಿಕೆಟ್ ಇಲ್ಲದೆ ಪ್ರಯಾಣಿಸುವುದು ಅಪರಾಧ. ತಪ್ಪಿತಸ್ಥರಿಗೆ ದಂಡ ವಿಧಿಸಬಹುದು. ಆದರೆ ಹಲ್ಲೆ ಮಾಡುವುದು ಸಾರ್ವಜನಿಕವಾಗಿ ಅವಮಾನ ಮಾಡುವ ಅಧಿಕಾರ ಯಾರಿಗೂ ಇಲ್ಲ ಎಂದು ಇನ್ನೊಬ್ಬ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ.